Homeಕರ್ನಾಟಕ’ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಉಪಯೋಜನೆ’ಯಲ್ಲಿನ ವಂಚನೆಗಳು!

’ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಉಪಯೋಜನೆ’ಯಲ್ಲಿನ ವಂಚನೆಗಳು!

ಶತಮಾನಗಳಿಂದ ಶೋಷಣೆ/ದಮನಕ್ಕೆ ಒಳಗಾದ ತಳ ಸಮುದಾಯಗಳಿಗೆ ಸಮಾಜೋ-ಆರ್ಥಿಕ ನ್ಯಾಯ ಒದಗಿಸಲು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳಿಗೆ ಸಮಾಜೋ-ಆರ್ಥಿಕ ನ್ಯಾಯ ಒದಗಿಸಲು ಈ ಯೋಜನೆಯನ್ನು ಜಾರಿಗೊಳಿಸಲಾಗಿತ್ತು

- Advertisement -
- Advertisement -

ಶತಮಾನಗಳಿಂದ ಶೋಷಣೆ/ದಮನಕ್ಕೆ ಒಳಗಾದ ತಳ ಸಮುದಾಯಗಳಿಗೆ ಸಮಾಜೋ-ಆರ್ಥಿಕ ನ್ಯಾಯ ಒದಗಿಸಲು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳಿಗೆ “ಎಸ್‌ಸಿಎಸ್‌ಪಿ/ಟಿಎಸ್‌ಪಿ” (ಪರಿಶಿಷ್ಟ ಜಾತಿ ಉಪಯೋಜನೆ/ ಪರಿಶಿಷ್ಟ ಪಂಗಡ ಉಪಯೋಜನೆ) ಯೋಜನೆಯನ್ನು ಜಾರಿಗೊಳಿಸಲಾಯಿತು. ಕರ‍್ನಾಟಕದಲ್ಲಿ ಅದನ್ನು ಪರಿಶ್ಕರಿಸಿ 2013ರಲ್ಲಿ “ಎಸ್‌ಸಿಎಸ್‌ಪಿ/ಟಿಎಸ್‌ಪಿ (ಯೋಜನೆ, ಹಂಚಿಕೆ, ಹಣಕಾಸು ಸಂಪನ್ಮೂಲದ ಬಳಕೆ) ಕಾಯಿದೆ” ಜಾರಿಗೊಳಿಸಲಾಯಿತು.

2011ರ ಜನಗಣತಿಯ ಆದಾರದಲ್ಲಿ “ಎಸ್‌ಸಿಎಸ್‌ಪಿ/ಟಿಎಸ್‌ಪಿ” ಯೋಜನೆಗೆ ಪ್ರತಿ ಇಲಾಖೆಯು ಶೇ.24.1 ಪ್ರಮಾಣದ ಆರ್ಥಿಕ ಅನುದಾನವನ್ನು ಮೀಸಲಿಡಬೇಕು. ಇದರ ಅನುಸಾರ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವ್ಯಕ್ತಿಗೆ/ಕುಟುಂಬಕ್ಕೆ ಈ ಯೋಜನೆಯ ಅನುದಾನವು ನೇರವಾಗಿ ತಲುಪಬೇಕು. ಯೋಜನೆಗಳನ್ನು ರೂಪಿಸುವುದಕ್ಕೂ ಮೊದಲು ರಾಜ್ಯ ಮಟ್ಟದ ನೋಡಲ್ ಏಜೆನ್ಸಿ ಸಂಬಂದಪಟ್ಟ ಸಮುದಾಯಗಳೊಂದಿಗೆ ಸಮಾಲೋಚಿಸಬೇಕು. ಖರ್ಚಿನ ವಿವರಗಳು ಪಾರದರ್ಶಕವಾಗಿರಬೇಕು, ಇದರ ಸಮರ್ಪಕ ಜಾರಿಯ ಕುರಿತು ನಿಗಾ ವಹಿಸಲು ಒಂದು ಅಂತರ್ಜಾಲ ತಾಣವನ್ನು ಆರಂಬಿಸಬೇಕು, ಈ ಯೋಜನೆಯ ಜಾರಿಯಾಗಿರುವುದರ ವಿವರಗಳನ್ನು ಕಾಲಕಾಲಕ್ಕೆ ಪ್ರಕಟಿಸಬೇಕು. ಮತ್ತು ಮುಖ್ಯವಾಗಿ ಈ ಯೋಜನೆಗೆ ಮೀಸಲಿಟ್ಟ ಹಣವನ್ನು ಸಾಮಾನ್ಯ ಯೋಜನೆಗಳಿಗೆ ಬಳಸಿಕೊಳ್ಳಬಾರದು.

PC: Mahima A Jain

ಇದನ್ನೂ ಓದಿ: ‘ಮಹಾಡ್ – ಮೊದಲ ದಲಿತ ಬಂಡಾಯ’ ಪುಸ್ತಕದ ಆಯ್ದ ಭಾಗಗಳು

ಆದರೆ ಈ ಎಲ್ಲಾ ನಿಯಾಮವಳಿಗಳು ಕೇವಲ ಕಾಗದದ ಮೇಲೆ ಮಾತ್ರ ಉಳಿದುಕೊಂಡಿವೆ. ಮೊದಲಿಗೆ ಜಿಲ್ಲಾ ಮಟ್ಟದ ಪರಿಶೀಲನ ಸಮಿತಿಗಳನ್ನು ಸೂಕ್ತವಾಗಿ ರಚಿಸಲ್ಪಟ್ಟಿರುವುದಿಲ್ಲ, ಮತ್ತು ರಚಿತಗೊಂಡ ಸಮಿತಿಗಳು ಕಾಲ ಕಾಲಕ್ಕೆ ಸಬೆಗಳನ್ನು ನಡೆಸುವುದಿಲ್ಲ. ಇನ್ನು ಇಲ್ಲಿನ ಬಹುತೇಕ ಅದಿಕಾರಿಗಳಿಗೆ ಈ ಯೋಜನೆ ಕುರಿತು ಯಾವುದೇ ತಿಳುವಳಿಕೆಯಿರುವುದಿಲ್ಲ ಮತ್ತು ಅವರಿಗೆ ತರಬೇತಿಯನ್ನು ಸಹ ಕೊಟ್ಟಿರುವುದಿಲ್ಲ.

ದಲಿತ ಸಂಘಟನೆಗಳು “ಎಸ್‌ಸಿಎಸ್‌ಪಿ/ಟಿಎಸ್‌ಪಿ ಹೆಸರಿನಲ್ಲಿ ಪ್ರತ್ಯೇಕವಾಗಿ ಎರಡು ಬ್ಯಾಂಕ್ ಖಾತೆ ತೆರೆಯಬೇಕು ಮತ್ತು ಈ ಖಾತೆಯನ್ನು ನೋಡಲ್ ಇಲಾಖೆಗಳು ನಿರ್ವಹಿಸಬೇಕು. ಈ ಯೋಜನೆಯ ನಿಗಾ ವಹಿಸಲು ಲೋಕಪಾಲರನ್ನು ನೇಮಿಸಬೇಕು” ಎಂದು ಆಗ್ರಹಪಡಿಸಿದ್ದರು. ಈ ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆಯನ್ನು ವಿಶ್ಲೇಷಿಸಿದಾಗ ಮೇಲಿನ ಎಲ್ಲಾ ನಿಯಮಾವಳಿಗಳನ್ನು ಉಲ್ಲಂಘಿಸಲಾಗಿದೆ ಮತ್ತು ತಮಾಶೆಯೆಂದರೆ ಸಬಂದಪಟ್ಟ ಅದಿಕಾರಿಗಳಿಗೆ ಯಾವುದೇ ವಿಚಾರಣೆ ನಡಸಿಲ್ಲ

2020-21ರ ಹಣಕಾಸು ವರ್ಶವನ್ನು ಪರಿಶೀಲನೆ ಮಾಡೋಣ. ಈ ವರ್ಶಕ್ಕೆ ಎಸ್‌ಸಿಎಸ್‌ಪಿ/ಟಿಎಸ್‌ಪಿಗೆ 27,699.52 ಕೋಟಿ ಮೊತ್ತವನ್ನು ಹಂಚಿಕೆ ಮಾಡಲಾಯಿತು. ಆದರೆ ನಂತರ 1,084 ಕೋಟಿಯನ್ನು ಕಡಿತಗೊಳಿಸಲಾಯಿತು. ನಂತರ ಉಳಿದ ಅನುದಾನ 26,614.69 ಕೋಟಿ. ಇದಕ್ಕೆ ಯಾವುದೇ ಕಾರಣವನ್ನು ಕೊಟ್ಟಲ್ಲ.

ಇದನ್ನೂ ಓದಿ: ದೇಶದಲ್ಲಿ ಹಚ್ಚಿರುವ ಕಿಚ್ಚು ಮುಸಲ್ಮಾನರನ್ನು ಮುಕ್ಕತೊಡಗಿದೆ. ಮುಂದಿನ ಸರದಿ ದಲಿತರದು, ಕ್ರೈಸ್ತರದು ಇದ್ದೀತು

ಎಸ್‌ಸಿಎಸ್‌ಪಿ ಯೋಜನೆ:

ಹಂಚಿಕೆ : 19,432.22 ಕೋಟಿ.
ಕಡಿತಗೊಳಿಸಿದ ನಂತರದ ಮೊತ್ತ : 18,659.65 ಕೋಟಿ.
ವೆಚ್ಚ : 5,856.84 ಕೋಟಿ (ಶೇಕಡ. 31%)
ಬಳಕೆಯಾಗದೆ ಉಳಿದ ಮೊತ್ತ : 12,802.81 ಕೋಟಿ.

ಟಿಎಸ್‌ಪಿ ಯೋಜನೆ:

ಹಂಚಿಕೆ : 8,267.30 ಕೋಟಿ.
ಕಡಿತಗೊಳಿಸಿದ ನಂತರದ ಮೊತ್ತ : 7,955.69 ಕೋಟಿ.
ವೆಚ್ಚ : 2307.25 ಕೋಟಿ (ಶೇಕಡ. 32%)
ಬಳಕೆಯಾಗದೆ ಉಳಿದ ಮೊತ್ತ : 5648.44 ಕೋಟಿ.

ಒಟ್ಟಾಗಿ 2020-21ರ ಎಸ್‌ಸಿಎಸ್‌ಪಿ/ಟಿಎಸ್‌ಪಿ ಗೆ ಕೇವಲ 8164 ಕೋಟಿ ವೆಚ್ಚವಾಗಿದ್ದರೆ, 18,451.25 ಕೋಟಿ ಬಳಕೆಯಾಗದೆ ಉಳಿದುಕೊಂಡಿದೆ

  • ಮೊದಲಿಗೆ ಅಗತ್ಯವಾದ ಹಣಕಾಸು ಮೊತ್ತವನ್ನು ಹಂಚಿಕೆ ಮಾಡಿಲ್ಲ.
  • ಎರಡನೆಯದಾಗಿ ಹಂಚಿಕೆಯಾದ ಮೊತ್ತವನ್ನು ಕಡಿತಗೊಳಿಸಲಾಗಿದೆ.
  • ಮೂರನೆಯದಾಗಿ ಕಡಿತಗೊಳಿಸದ ಮೊತ್ತದಲ್ಲಿ ಶೇಕಡಾ 31ರಶ್ಟನ್ನು ಮಾತ್ರ ವೆಚ್ಚ ಮಾಡಲಾಗಿದೆ ಮತ್ತು ಶೇಕಡಾ 69ರಶ್ಟನ್ನು ಬಳಸಿಕೊಂಡಿಲ್ಲ.
  • ನಾಲ್ಕನೆಯದಾಗಿ ವೆಚ್ಚ ಮಾಡಿದ ಮೊತ್ತವನ್ನು ಈ ಯೋಜನೆಗೆ ಬಳಸಿಕೊಂಡಿಲ್ಲ, ಇತರೆ ಸಾಮಾನ್ಯ ಕೆಲಸಗಳಿಗೆ ವೆಚ್ಚ ಮಾಡಿದ್ದಾರೆ.

ಇದನ್ನೂ ಓದಿ: ದಲಿತ ಸಮರ್ಥನೆಯ ಆದ್ಯಪ್ರವರ್ತಕನ ಪಾತ್ರವಹಿಸಿದ್ದ ಮೂಕನಾಯಕ

ಇದು ದ್ರೋಹದ ಕೆಲಸ. ಇದು ಒಂದು ಮಹಾವಂಚನೆ. ಉದಾಹರಣೆಗೆ ಎಸ್‌ಸಿಎಸ್‌ಪಿ/ಟಿಎಸ್‌ಪಿ ಗೆ ಮೀಸಲಿಟ್ಟ ಹಣವನ್ನು ಮೆಟ್ರೋ ರೈಲು ಕಾಮಗಾರಿಗೆ ಬಳಸಿಕೊಳ್ಳಲಾಗಿದೆ. ಬಸ್ ನಿಲ್ದಾಣಗಳ ನಿರ್ಮಾಣಕ್ಕೆ ವೆಚ್ಚ ಮಾಡಲಾಗಿದೆ. ಹೆದ್ದಾರಿಗಳ ಕಾಮಗಾರಿಗೆ ಬಳಸಿಕೊಳ್ಳಲಾಗಿದೆ. ಅಂದರೆ ಬ್ರಶ್ಟಾಚಾರಕ್ಕೆ ಭರಪೂರು ಅವಕಾಶವಿರುವ ‘ಕಾಮಗಾರಿ’ ಯೋಜನೆಗಳಿಗೆ ಈ ಆರ್ಥಿಕ ಅನುದಾನವನ್ನು ಬಳಸಿಕೊಳ್ಳಲಾಗಿದೆ. ಇದು ಶಿಕ್ಷಾರ್ಹ ಅಪರಾದವಾಗಿದೆ. ಆದರೆ ಇಲ್ಲಿ ಪ್ರಬುತ್ವವೇ ಈ ಬ್ರಶ್ಟಾಚಾರದಲ್ಲಿ ತೊಡಗಿಕೊಂಡಿರುವುದರಿಂದ ಇದರ ವಿರುದ್ದದ ಕೂಗು ಅರಣ್ಯರೋದನವಾಗಿದೆ.

ದಲಿತ ಬಹುಜನ ಸಂಘಟನೆಯು (ದಬಸ) ಈ ಹಿಂದೆ ರಾಜ್ಯದ ಅಬಿವೃದ್ದಿಗೂ ಮತ್ತು ಪ.ಜಾತಿ/ಪ.ಪಂಗಡದ ಅಬಿವೃದ್ದಿ ಸೂಚಕಗಳಿಗೂ ನಡುವಿನ ವ್ಯತ್ಯಾಸವನ್ನು ‘ಅಬಿವೃದ್ದಿಗಳ ಅಂತರ’ದ ಮೂಲಕ ವಿಶ್ಲೇಷಣೆ ಮಾಡಿದೆ.

‘ದಬಸ’ ಮುಂದಿಟ್ಟ ಮುಖ್ಯ ಪ್ರಶ್ನೆಗಳು:

  • ಬಡತನ ರೇಖೆಗಿಂತ ಮೇಲಿರುವ ಪ.ಜಾತಿ/ಪ.ಪಂಗಡದ ಜನಸಂಖ್ಯೆಯ ಪ್ರಮಾಣವೇನು?
  • ಆರ್ಥಿಕವಾಗಿ ಸಬಲೀಕರಣಗೊಂಡವರೆಶ್ಟು?
  • ಇದಕ್ಕೂ ಮತ್ತು ಕರ‍್ನಾಟಕದ ಸೂಚ್ಯಕಂಗಳಿಗೂ ದಲಿತ ಸಮುದಾಯದ ಅಬಿವೃದ್ದಿ ಸೂಚ್ಯಂಕಗಳ ನಡುವಿನ ವ್ಯತ್ಯಾಸವೇನು?
  • ಕರ‍್ನಾಟಕ ರಾಜ್ಯದ/ ಜಿಲ್ಲೆಗಳ ಮುನ್ನೋಟ ಮತ್ತು ಅದಕ್ಕೆ ಪ್ರತಿಯಾಗಿ ಪ.ಜಾತಿ/ಪ.ಪಂಗಡದ ಮಾನವ ಅಬಿವೃದ್ದಿ ಸೂಚ್ಯಂಕದ ಕುರಿತು ದತ್ತಾಂಶವಿದೆಯೇ?
  • ಮಾನವ ಅಬಿವೃದ್ದಿ ಆದಾಯದ ಅಂತರದ ಕುರಿತು ದತ್ತಾಂಶ ಸಂಚಯವಿದೆಯೇ?
  • ಉದಾಹರಣೆಗೆ ಇತರ ಜಾತಿಗಳಿಗೆ ಹೋಲಿಸಿದರೆ ಪ.ಜಾತಿ/ಪ.ಪಂಗಡದ 100 ಮಕ್ಕಳ ಪೈಕೆ ಎಶ್ಟು ಮಕ್ಕಳು ಒಂದನೆ ತರಗತಿಗೆ ದಾಖಲಾಗಿದ್ದಾರೆ?

ಇದನ್ನೂ ಓದಿ: ಮೊದಲ ದಲಿತ ರಾಷ್ಟ್ರಪತಿ ಕೆ.ಆರ್ ನಾರಾಯಣನ್ ಸ್ಮರಣೆ: ಡಾ.ಬಿ.ಪಿ.ಮಹೇಶ ಚಂದ್ರ ಗುರು

ಆದರೆ ‘ದಬಸ’ ಪ್ರಕಾರ ‘ಅಬಿವೃದ್ದಿಯಲ್ಲಿನ ಅಂತರ’ದ ಕುರಿತು ಯಾವುದೇ ದಾಖಲೆಗಳಿಲ್ಲ, ದತ್ತಾಂಶ ಸಂಚಯಗಳಿಲ್ಲ. ಅಂದರೆ ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆಗೆ ಹಣಕಾಸು ಹಂಚಿಕೆ ಮಾಡುವಾಗ ಆ ಸಮುದಾಯಗಳ ಜನಸಂಖ್ಯೆಯ ಪ್ರಮಾಣವೆಶ್ಟು? ಅದರಲ್ಲಿ ಅಗತ್ಯವಿರುವ ಪ್ರಮಾಣವೆಶ್ಟು? ಮುಂತಾದ ಸಂಗತಿಗಳ ಕುರಿತು ಸರಕಾರಕ್ಕೆ ಯಾವುದೇ ಮಾಹಿತಿಯಿಲ್ಲ. ಸಂಶೋದನೆ ನೆರವು, ಪ.ಜಾತಿ/ಪ.ಪಂಗಡಗಳಿಗೆ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು, ಪ.ಜಾತಿ/ಪ.ಪಂಗಡ ಪಂಚಾಯತ್‌ಗೆ ಅನುದಾನ, ಪುಸ್ತಕ ಅನುದಾನ, ಕೌಶಲ್ಯ ಅಬಿವೃದ್ದಿ ಮುಂತಾದ ಹೊಸ ಬಗೆಯ ಕಾರ್ಯಯೋಜನೆಗಳಿಗೆ ಎಸ್‌ಸಿಎಸ್‌ಪಿ/ಟಿಎಸ್‌ಪಿ ಆದ್ಯತೆಯ ಮೇರೆಗೆ ಕೆಲಸ ಮಾಡಬೇಕಿತ್ತು. ಆದರೆ ಪ್ರಬುತ್ವಕ್ಕೆ ಇದರ ಖಬರೂ ಸಹ ಇಲ್ಲ.

ಮುಂದೇನು?

ದಲಿತ ಸಂಘಟನೆಗಳು, ಎಡ ಸಂಘಟನೆಗಳು, ಪ್ರಗತಿಪರ ವಿದ್ಯಾರ್ಥಿ ಸಂಘಟನೆಗಳು ಒಗ್ಗಟ್ಟಾಗಿ ಈ ಕುರಿತು ತುರ್ತಾಗಿ ಸಮಾಲೋಚನೆ ಸಬೆ ನಡೆಸಬೇಕು ಮತ್ತು ಪ್ರಬುತ್ವದ ಈ ತಾರತಮ್ಯ ಮತ್ತು ವಂಚನೆಯ ವಿರುದ್ದ ಜನಾಂದೋಲನ ರೂಪಿಸಬೇಕು, ಇದನ್ನು ಹೊರತುಪಡಿಸಿ ಮತ್ಯಾವುದೇ ಮಾರ್ಗಗಳಿಲ್ಲ.

ಇದನ್ನೂ ಓದಿ: ಕೇರಳ: ದಲಿತ ವ್ಯಕ್ತಿಯನ್ನು ಅರ್ಚಕರಾಗಿ ನೇಮಿಸುತ್ತಿರುವ ದೇವಸ್ವಂ ಬೋರ್ಡ್!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...