Homeಸಾಮಾಜಿಕವಿಜ್ಞಾನ ನಾಚುವಂತಹ ಪೂಜಾ, ಜ್ಯೋತಿಷ್ಯ ಆವಿಷ್ಕಾರಗಳು!

ವಿಜ್ಞಾನ ನಾಚುವಂತಹ ಪೂಜಾ, ಜ್ಯೋತಿಷ್ಯ ಆವಿಷ್ಕಾರಗಳು!

- Advertisement -
- Advertisement -

ಪ್ಪತ್ತನೆಯ ಶತಮಾನದ ಅದಿಭಾಗದಿಂದ ಹಿಡಿದು ಇತ್ತೀಚಿನವರೆಗೆ ವಿಶ್ವದಲ್ಲಿ ಸಾವಿರಾರು ಆವಿಷ್ಕಾರಗಳಾಗಿವೆ. ಇಂದು ಮಧ್ಯವಯಸ್ಸಿನಲ್ಲಿರುವವರು ಅದೃಷ್ಟಶಾಲಿಗಳೆಂದು ಹೇಳಬಹುದು!
ಚಿಮಣಿ ದೀಪಗಳಿದ್ದ ಮನೆಗಳಿಗೆ ವಿದ್ಯುತ್ ದೀಪಗಳು ಬಂದಿವೆ. ಟೆಂಟು ಬಂದರೆ ಮಾತ್ರ ನೋಡಲು ಸಾಧ್ಯವಾಗುತ್ತಿದ್ಧ ಸಿನಿಮಾ ಮನೆಯಲ್ಲೇ ಕುಳಿತು ನೋಡಬಹುದು. ಸಿನಿಮಾ, ಧಾರಾವಾಹಿಗಳೇ ಜೀವನ ಎಂದು ತಿಳಿದುಕೊಂಡವರೂ ನಮ್ಮ ನಡುವೆ ಇದ್ದಾರೆ.
ಸಂಪರ್ಕದ ಕೊಂಡಿಯಾಗಿದ್ದ ಅಂಚೆ ಇಂದು ಇತಿಹಾಸವಾಗುತ್ತಿದೆ. ಯಾರಾದರೂ ಸತ್ತರೆ ದೂರದ ಊರುಗಳಲ್ಲಿ ಇರುವ ಬಂಧುಗಳಿಗೆ “ಮದರ್ ಸೀರಿಯಸ್. ಸ್ಟಾರ್ಟ್ ಇಮ್ಮಿಡಿಯೆಟ್ಲಿ” ಎಂದು ‘ವಯರ್’ ಕಳಿಸುತ್ತಿದ್ದ- ಅಂದರೆ ಟೆಲಿಗ್ರಾಂ ಕಳಿಸುತ್ತಿದ್ದ ಕಾಲದಿಂದ ವಯರ್ ಇಲ್ಲದೇ ಹೆಣದ ಫೋಟೊ ತೆಗೆದು ಲೈವಾಗಿ ಸಂಬಂಧಿಕರಿಗೆ ತಿಳಿಸುವ ಯುಗವನ್ನು ಮುಟ್ಟಿದ್ದೇವೆ! ಕಂಪ್ಯೂಟರ್ ಬಂದಿದೆ! ಕ್ಯಾಷ್‍ಲೆಸ್ ಆಗಿದ್ದೇವೆ! ವಿಜ್ಞಾನದ ಆವಿಷ್ಕಾರಗಳ ಫಲವನ್ನು ಉಣ್ಣುತ್ತಾ ಬಂದಿದ್ದೇವೆ. ಮೂಷಿಕ, ಗರುಡ, ಸಿಂಹ, ನಂದಿ ವಾಹನರಾಗಿದ್ದ ನಾವು- ಬೈಕ್, ಸ್ಕೂಟರ್, ಕಾರು, ಬಸ್ಸು, ರೈಲು ವಿಮಾನ ವಾಹನರಾಗಿದ್ದೇವೆ! ಚಪ್ಪಡೆ ಭೂಮಿಯನ್ನು ದುಂಡಗೆ ಮಾಡಿದ್ದೇವೆ! ಸಾಮೂಹಿಕ ವಿನಾಶದ ಅಸ್ತ್ರಗಳನ್ನು ದಾಸ್ತಾನು ಇಟ್ಟಿದ್ದೇವೆ! … ವಿಷಗಳನ್ನು, ವಿಷಯಗಳನ್ನು ಉತ್ಪಾದಿಸುತ್ತಿದ್ದೇವೆ!
ಬರೆಯುತ್ತಾ ಹೋದರೆ ಸಾವಿರಾರಿವೆ! ನಮ್ಮ ಸುತ್ತಲೂ ಬೇಕೆಂದೋ ಬೇಡವೆಂದೋ ರಾಶಿಬಿದ್ದಿರುವ ಸಲಕರಣೆಗಳು ತಂತ್ರಜ್ಞಾನಗಳನ್ನು ಒಮ್ಮೆ ನೋಡಿದರೆ, ಇದನ್ನು ಕಂಡುಹಿಡಿದವರ ನೆನಪಾದರೂ ನಮಗಿದೆಯೆ?
ಅದರೆ, ನಮಗೆ ಕೋಟ್ಯಾಂತರ ದೇವರು, ದೈವಗಳ, ಅಂತರ, ಬೆಂತರ, ಕುಲೆ, ಪಿಶಾಚಿಗಳ ನೆನಪಿದೆ! ಯಾಕೆಂದರೆ ನಮಗೆ ಭಯವಿದೆ! ಅದನ್ನೇ ನಾವು ನಂಬಿಕೆ ಎಂದು ಕರೆಯುತ್ತೇವೆ!
ಇದೇ ಭಯವನ್ನು ಬಂಡವಾಳ ಮಾಡಿಕೊಂಡು ಸಾವಿರದ ಒಂದು, ಹನ್ನೊಂದು ಸಾವಿರದ ಒಂದು… ಹೀಗೆ ಜ್ಯೋತಿಷ್ಯ ಮತ್ತು ಪೂಜಾ ಕ್ಷೇತ್ರಗಳಲ್ಲಿ ಅವಿಷ್ಕಾರಗಳಾಗಿವೆ! ಹಿಂದೆ ಮನೆಯ ಒಂದು ಕೋಣೆಯೊಳಗಿನ ಅಥವಾ ಗೋಡೆಗಂಟಿದ ಹಲವಾರು ದೇವರುಗಳಿಗೆ ಊದುಬತ್ತಿ ಹಚ್ಚಿ, ಕೈಮುಗಿದು ಬೇಡಿಕೊಂಡರೆ ಸಾಕಿತ್ತು. ಹೆಚ್ಚು ಭಯವಾದರೆ ಮುಡಿಪು ಇಟ್ಟರೆ ಸಾಕಿತ್ತು! ಅದರೆ, ಈ ಕೋಮುವಾದಿ ವಿಷ ಧರ್ಮದಲ್ಲಿ ಇರಲಿಲ್ಲ! ಈಗ ಹೇಗೆ ಧರ್ಮವನ್ನು ಕೋಮುವಾದಿ ಬಿಸಿನೆಸ್ ಮಾಡುವಲ್ಲಿ ಎಷ್ಟೆಲ್ಲಾ ಅವಿಷ್ಕಾರಗಳನ್ನು ಮಾಡಲಾಗಿದೆ ಎಂಬುದನ್ನು ನೀವೇ ನೋಡಬಹುದು.
ಮಗುವಿಗೆ ಹೆಸರು ಇಡುವುದರಿಂದ ಹಿಡಿದು, ಹುಟ್ಟಿದ ಜಾತಕ, ತಗಲಿಕೊಂಡಿರುವ ರೋಗಗಳು, ಪೂರ್ವಜಾತ ದೋಷಗಳು, ನಕ್ಷತ್ರಗಳು, ಅವುಗಳ ಫಲಗಳು, ಯಮಗಂಡ, ರಾಹುಗಂಡ, ಕೇತುಗಂಡ, ನಾಗದೋಷ, ಶನಿಪ್ರಭಾವ ಮತ್ತು ಶಾಪ, ಹಿರಿಯರ ಶಾಪ, ಅಶಾಂತಿ… ಮತ್ತದಕ್ಕೆ ಪರಿಹಾರಗಳು! ಎಲ್ಲವಕ್ಕೂ ಮಹಾ ಸಂಶೋಧನೆಗಳು ಅಗಿವೆ- ವಿಜ್ಞಾನವನ್ನು ನಾಚಿಸುವಷ್ಟು! ನೀವೇ ಯೋಚಿಸಿದರೆ ಲೆಕ್ಕ ಹಾಕಬಹುದು! ಆದರೂ ಮುಂದಕ್ಕೆ ಎಲ್ಲಾ ಸಂಶೋಧನೆಗಳನ್ನೂ ಸಂಶೋಧಕರನ್ನು ವಿವರವಾಗಿ ನೋಡಿ! ಸಂಶೋಧನೆಯ ವಿವರಗಳು ಅನಂತವಾಗಿವೆ!
ಇಂದು ಬೆಳಗಾಗುತ್ತ ಎದ್ದಾಗ ನಾವು ನೋಡುವುದೇನು?! ಟಿವಿ, ಇಂಟರ್ನೆಟ್! ವಿಜ್ಞಾನದ ಉತ್ಪತ್ತಿಗಳಲ್ಲಿ ರಾರಾಜಿಸುವುದೇನು ಬ್ರಹ್ಮಾಂಡ ಜ್ಯೋತಿಷ್ಯದ ಮಹಾನ್ ಆವಿಷ್ಕಾರಗಳು! ಆ ಮಹಾನ್ ಸಂಶೋಧನೆಗಳು!
ಮಗು ಹುಟ್ಟಿದಾಗ ಏನು ಮಾಡಬೇಕು? ಬಾಲ ಕರ್ಮಗಳೇನು? ಜಾತದೋಷಗಳೇನು? ಭವಿಷ್ಯ ಏನು? ಗಂಡಗಳೇನು? ದೋಷಗಳೇನು? ಪರಿಹಾರಗಳೇನು?
ಹಾವು ಸತ್ತರೆ ಏನು ಮಾಡಬೇಕು? ಎಷ್ಟು ಜನ ಬ್ರಾಹ್ಮಣರಿಗೆ ಊಟ ಹಾಕಬೇಕು? ಗೋದಾನ, ಭೂದಾನ, ಸುವರ್ಣ ದಾನ ಇತ್ಯಾದಿಗಳ ಪುಣ್ಯ ಫಲವೇನು? ಗೋವು, ಸುವರ್ಣ ಇಲ್ಲದಿದ್ದಲ್ಲಿ ಪರಿಹಾರವೇನು? ಇಂಟರ್‍ನೆಟ್‍ನಿಂದ ಹೇಗೆ ಪೂಜೆ ಮಾಡಿಸಬಹುದು? ಪ್ರಸಾದ ಪಡೆಯಬಹುದು? ಇವೆಲ್ಲವುಗಳ ಬಗ್ಗೆ ಸಾವಿರಾರು ಸಂಶೋಧನೆಗಳು ಲಭ್ಯವಿವೆ! ಪೇಟೆಂಟ್ ಮಾಡಿಕೊಂಡಿರುವ ವಿಜ್ಞಾನಿಗಳೂ ಲಭ್ಯವಿದ್ದಾರೆ! ಅವರನ್ನೆಲ್ಲಾ ಮುಂದಿನ ವಾರ ಭೇಟಿಯಾಗೋಣ!

– ನಿಖಿಲ್ ಕೋಲ್ಪೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...