2023ರ ಭೌತಶಾಸ್ತ್ರದ ನೊಬೆಲ್ ಬಹುಮಾನವನ್ನು ಘೋಷಣೆ ಮಾಡಲಾಗಿದ್ದು, ವಿಜ್ಞಾನಿಗಳಾದ ಪಿಯರೆ ಅಗೊಸ್ಟಿನಿ, ಫೆರೆಂಕ್ ಕ್ರೌಸ್ಜ್ ಮತ್ತು ಆನ್ನೆ ಎಲ್ ಹುಲ್ಲಿಯರ್ ಅವರು ಭೌತಶಾಸ್ತ್ರದ ನೊಬೆಲ್ ಬಹುಮಾನಕ್ಕೆ ಪಾತ್ರರಾಗಿದ್ದಾರೆ.
ಭೌತ ಶಾಸ್ತ್ರದಲ್ಲಿ ಅಗ್ರ ಸಾಧನೆ ಮಾಡಿದವರಿಗೆ ಈ ಬಹುಮಾನ ನೀಡಲಾಗುತ್ತದೆ. 2023ರ ನೊಬೆಲ್ ಪ್ರಶಸ್ತಿಯನ್ನು ವಸ್ತುಗಳಲ್ಲಿನ ಎಲೆಕ್ಟ್ರಾನ್ ಡೈನಾಮಿಕ್ಸ್ ಅಧ್ಯಯನಕ್ಕಾಗಿ ಬೆಳಕಿನ ಅಟೊಸೆಕೆಂಡ್ ನಾಡಿಗಳನ್ನು ಉತ್ಪಾದಿಸುವ ಪ್ರಾಯೋಗಿಕ ವಿಧಾನಗಳಿಗಾಗಿ ನೀಡಲಾಗಿದೆ ಎಂದು ಹೇಳಲಾಗಿದೆ.
ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಈ ಬಹುಮಾನವನ್ನು ನೀಡಲಿದೆ. ಇದು ಈ ವಾರದಲ್ಲಿ ಘೋಷಣೆಯಾದ ಎರಡನೇ ನೋಬೆಲ್ ಬಹುಮಾನವಾಗಿದೆ.
ನಿನ್ನೆಯಷ್ಟೇ ಕೋವಿಡ್ -19 ವಿರುದ್ಧ ಹೋರಾಡಲು ಮೊದಲು ಲಸಿಕೆ ಅಭಿವೃದ್ಧಿಪಡಿಸಿದ ವಿಜ್ಞಾನಿಗಳಾದ ಕ್ಯಾಟಲಿನ್ ಕಾರಿಕೊ ಹಾಗೂ ಡ್ರ್ಯೂ ವೈಸ್‌ಮನ್ ಅವರಿಗೆ 2023ನೇ ಸಾಲಿನ ವೈದ್ಯಕೀಯ ವಿಭಾಗದ ನೋಬೆಲ್ ಪುರಸ್ಕಾರ ದೊರೆತಿದೆ.
ವಿಜ್ಞಾನ ಲೋಕದಲ್ಲಿ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಎಂದೇ ಕರೆಯಲಾಗುವ ಈ ಪ್ರಶಸ್ತಿಯ ಆಯ್ಕೆಯನ್ನು ಸ್ವೀಡನ್‌ನಲ್ಲಿರುವ ಕ್ಯಾರೊಲಿನ್ ವೈದ್ಯಕೀಯ ವಿಶ್ವವಿದ್ಯಾಲಯದ ನೊಬೆಲ್ ಅಸೆಂಬ್ಲಿ ಆಯ್ಕೆ ಮಾಡಿದೆ. ಬಹುಮಾನ ವಿಜೇತರಿಗೆ 18.31 ಕೋಟಿ ನಗದು ಬಹುಮಾನ ರೂಪದಲ್ಲಿ ಸಿಗಲಿದೆ.
ಇದನ್ನು ಓದಿ: ಬಿಜೆಪಿ ಸರ್ಕಾರ ಪ್ರಚಾರಕ್ಕೆ ಕೋಟ್ಯಂತರ ಖರ್ಚು ಮಾಡುತ್ತದೆ, ಆದರೆ ಮಕ್ಕಳಿಗೆ ಔಷಧಕ್ಕೆ ಹಣವಿಲ್ಲ: ರಾಹುಲ್ ಗಾಂಧಿ


