Homeಅಂತರಾಷ್ಟ್ರೀಯಅಮೆರಿಕಾದಲ್ಲಿ ಅಂಬೇಡ್ಕರ್‌ ಅವರ ಅತಿ ಎತ್ತರದ ಪ್ರತಿಮೆ ಅನಾವರಣ

ಅಮೆರಿಕಾದಲ್ಲಿ ಅಂಬೇಡ್ಕರ್‌ ಅವರ ಅತಿ ಎತ್ತರದ ಪ್ರತಿಮೆ ಅನಾವರಣ

- Advertisement -
- Advertisement -

ಭಾರತದ ಸಂವಿಧಾನ ಶಿಲ್ಪಿ ಡಾ. ಬಿಆರ್‌ ಅಂಬೇಡ್ಕರ್‌ ಅವರ ಅತಿ ಎತ್ತರದ ಪ್ರತಿಮೆ ಅಮೆರಿಕಾದ ಮೇರಿಲ್ಯಾಂಡ್‌ನಲ್ಲಿ ಅ.14ರಂದು ಅನಾವರಣಗೊಳ್ಳಲಿದೆ.

ಮೇರಿಲ್ಯಾಂಡ್‌ನಲ್ಲಿ  19 ಅಡಿ ಎತ್ತರದ ಡಾ. ಬಿ.ಆರ್‌ ಅಂಬೇಡ್ಕರ್‌ರವರ ಸಮಾನತೆಯ ಪ್ರತಿಮೆಯು ಅನಾವರಣಗೊಳ್ಳಲಿದೆ. ಇದು ಹೊರ ರಾಷ್ಟ್ರಗಳಲ್ಲಿ ಸ್ಥಾಪಿಸಲ್ಪಟ್ಟ ಭಾರತದ ಸಂವಿಧಾನ ಶಿಲ್ಪಿ ಡಾ. ಬಿಆರ್‌ ಅಂಬೇಡ್ಕರ್‌ ಅವರ ಅತಿ ದೊಡ್ಡ ಪ್ರತಿಮೆಯಾಗಿದೆ.

ಅಮೆರಿಕಾದ ಮೇರಿಲ್ಯಾಂಡ್‌ನ ಅಕೋಕೀಕ್ ನಗರದಲ್ಲಿ 13 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ಪ್ರತಿಮೆಯನ್ನು ಸ್ಥಾಪಿಸಲಾಗಿದ್ದು, ಈ ಸ್ಥಳವು ಶ್ವೇತ ಭವನಕ್ಕೆ 21 ಕಿ.ಮೀ ದೂರದಲ್ಲಿದೆ.

ಇತ್ತೀಚಿಗೆ ಹೈದಾರಬಾದ್‌ನಲ್ಲಿ ಅನಾವರಣಗೊಂಡ 125 ಅಡಿ ಎತ್ತರದ ಅಂಬೇಡ್ಕರ್‌ ಪ್ರತಿಮೆಯು ವಿಶ್ವದಲ್ಲಿಯೇ ಅತಿ ಎತ್ತರದ್ದಾಗಿದೆ. ಸಂವಿಧಾನ ಕರ್ತೃ ಅಂಬೇಡ್ಕರ್‌ ಅವರ ಜೀವನ ಸಂದೇಶವನ್ನು ಸಾರಲು ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ ಎಂದು ಸಂಘಟಕರು ಮಾದ್ಯಮಗಳಿಗೆ ತಿಳಿಸಿದ್ದಾರೆ.

1891ರ ಏ.14ರಂದು ಜನಿಸಿದ ಡಾ.ಭೀಮ್ ರಾವ್ ಅಂಬೇಡ್ಕರ್ ಅವರು ಬಾಬಾಸಾಹೇಬ್ ಎಂದು ಜನಪ್ರಿಯರಾಗಿದ್ದರು. ಸಂವಿಧಾನದ ಶಿಲ್ಪಿಯಾಗಿರುವ ಅವರು, ಸ್ವಾತಂತ್ರ್ಯದ ನಂತರ ಜವಾಹರಲಾಲ್ ನೆಹರು ಅವರ ಮೊದಲ ಕ್ಯಾಬಿನೆಟ್‌ನಲ್ಲಿ ಕಾನೂನು ಸಚಿವರಾಗಿದ್ದರು. ದಲಿತರು ಮತ್ತು ಅಸ್ಪೃಶ್ಯರ ಹಕ್ಕುಗಳಿಗಾಗಿ ಅವರು ನಿರಂತರವಾಗಿ ಹೋರಾಡಿದ್ದರು.

ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಅಮೆರಿಕ ಮತ್ತು ಪ್ರಪಂಚದ ಇತರ ಭಾಗಗಳಿಂದ ಅಂಬೇಡ್ಕರ್‌ ಅವರ ಅನುಯಾಯಿಗಳು ಮತ್ತು ವಿವಿಧ ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

AIC ಪ್ರಕಾರ, ಈ ಸ್ಮಾರಕವು ಬಾಬಾಸಾಹೇಬರ ಸಂದೇಶಗಳು ಮತ್ತು ಬೋಧನೆಗಳನ್ನು ಪ್ರಚಾರ ಮಾಡಲು ಮತ್ತು ಸಮಾನತೆ ಮತ್ತು ಮಾನವ ಹಕ್ಕುಗಳ ಸಂಕೇತವನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಇದನ್ನು ಓದಿ: ಬಿಜೆಪಿ ಸರ್ಕಾರ ಪ್ರಚಾರಕ್ಕೆ ಕೋಟ್ಯಂತರ ಖರ್ಚು ಮಾಡುತ್ತದೆ, ಆದರೆ ಮಕ್ಕಳಿಗೆ ಔಷಧಕ್ಕೆ ಹಣವಿಲ್ಲ: ರಾಹುಲ್ ಗಾಂಧಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...