ರಾಷ್ಟ್ರೀಯ ಪತ್ರಿಕಾ ದಿನದಂದು ಕೇಂದ್ರ ಗೃಹ ಮಂತ್ರಿ ಅಮಿತ್ ಷಾ, ಭಾರತದಲ್ಲಿ ಮಾಧ್ಯಮ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಬರುವಲ್ಲಿ ನರೇಂದ್ರ ಮೋದಿ ಸರ್ಕಾರ ಬದ್ಧವಾಗಿದೆ ಮತ್ತು ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕುವವರನ್ನು ವಿರೋಧಿಸುತ್ತದೆ ಎಂದು ಮಾಡಿದ್ದ ಟ್ವೀಟ್‌ಗೆ ನೆಟ್ಟಿಗರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ರಾಷ್ಟ್ರೀಯ ಪತ್ರಿಕಾ ಸ್ವಾತಂತ್ಯ್ರ ದಿನವಾದ ನಿನ್ನೆ, “ರಾಷ್ಟ್ರೀಯ ಪತ್ರಿಕಾ ಸ್ವಾತಂತ್ಯ್ರ ದಿನ ಶುಭಾಶಯಗಳು. ನಮ್ಮ ಮಾಧ್ಯಮ ಭ್ರಾತೃತ್ವ ಮಹಾನ್ ದೇಶದ ಅಡಿಪಾಯವನ್ನು ಬಲಪಡಿಸಲು ದಣಿವರಿಯಿಲ್ಲದೆ ಕೆಲಸಗಳನ್ನು ಮಾಡುತ್ತಿದೆ. ಮೋದಿ ಸರ್ಕಾರ ಭಾರತದಲ್ಲಿ ಮಾಧ್ಯಮ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಬರುವಲ್ಲಿ ಬದ್ಧವಾಗಿದೆ ಮತ್ತು ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕುವವರನ್ನು ವಿರೋಧಿಸುತ್ತದೆ. ಕೊರೊನಾ ಸಮಯದಲ್ಲಿ ಮಾಧ್ಯಮದ ಗಮನಾರ್ಹ ಪಾತ್ರವನ್ನು ನಾನು ಶ್ಲಾಘಿಸುತ್ತೇನೆ” ಎಂದು ಅಮಿತ್ ಷಾ ಟ್ವೀಟ್ ಮಾಡಿದ್ದರು.
Greetings on #NationalPressDay. Our media fraternity is working tirelessly towards strengthening the foundations of our great nation. Modi govt is committed towards the freedom of Press and strongly oppose those who throttle it.
I applaud Media’s remarkable role during COVID-19.— Amit Shah (@AmitShah) November 16, 2020
ಇದನ್ನೂ ಓದಿ: ಅರ್ನಬ್ ಪತ್ರಿಕೋದ್ಯಮ ಪೊಳ್ಳಾಗಿರುವ ಸಂದರ್ಭದಲ್ಲಿ ಪೊಲೀಸ್ ಅತಿರೇಕ ಸಮರ್ಥಿಸಬಾರದು, ದಿಟ ಮಾಧ್ಯಮ ಕಟ್ಟಬೇಕು
ಗೃಹಸಚಿವರ ಹೇಳಿಕೆಗೆ ನೆಟ್ಟಿಗರು ತೀಕ್ಷ್ಣವಾಗಿ ಪ್ರತಿಕ್ರಿಯಸಿದ್ದು, ಇನ್ನೂ ಪತ್ರಿಕಾ ಸ್ವಾತಂತ್ರವನ್ನು ಕೇಂದ್ರದ ಬಿಜೆಪಿ ಸರ್ಕಾರ ಧಮನಿಸುತ್ತಿದೆ. ಭಾರತವು ಪತ್ರಿಕಾ ಸ್ವಾತಂತ್ಯ್ರ ಸೂಚ್ಯಂಕದಲ್ಲಿ 180 ರಾಷ್ಟ್ರಗಳಲ್ಲಿ 142 ನೇ ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ.
ಅರ್ಪಿತಾ ಬಾತ್ರ, “ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ನಾವು 180 ರಾಷ್ಟ್ರಗಳಲ್ಲಿ 142 ನೇ ಸ್ಥಾನವನ್ನು ತಲುಪಿದ್ದೇವೆ. ನಾವು ಇನ್ನೂ ದಣಿವರಿಯಿಲ್ಲದೆ ಕೆಲಸ ಮಾಡುತ್ತಿದ್ದರೆ, ಮ್ಯಾಜಿಕ್ ಸ್ಥಾನಕ್ಕೆ ಹೋಗಲು ಕೇವಲ 38 ಸ್ಥಾನಗಳ ದೂರದಲ್ಲಿದ್ದೇವೆ” ಎಂದು ವ್ಯಂಗ್ಯವಾಡಿ ದಿ ಹಿಂದೂ ಪತ್ರಿಕೆಯ ವರದಿಯೊಂದನ್ನು ಹಾಕಿದ್ದಾರೆ.
We have reached 142nd out of 180 nations in Freedom of Press Index. If we keep working so tirelessly, we are just 38 places away from the magical mark.
Source https://t.co/VaMF6zejqd— arpit batra (@ArpitBatra2) November 16, 2020
ಸಜ್ಜನ್ ಎಂ. ಎಸ್., “ಪತ್ರಿಕಾ ಸ್ವಾತಂತ್ಯ್ರ ಹರಣದ ವಿರುದ್ದದ ನಿಮ್ಮ ವಿರೋಧವು ಕೇವಲ ಅರ್ನಬ್‌ಗೆ ಮಾತ್ರ ಸೀಮಿತವಾಗದಿರಲಿ ಕೆಳಗಿನವರಿಗೂ ಅನ್ವಯಿಸಲಿ” ಎಂದು ಬಂಧನಕ್ಕೊಳಗಾದ ಹಲವಾರು ಪತ್ರಕರ್ತರ ಹೆಸರನ್ನು ಬರೆದಿದ್ದಾರೆ.
Hope this oppose for throttle is not limited to one Goswami and is applicable to the below as well
Siddique Kappan
Kishorechandra Wangkhem
Prashant Kanojia
Rajib Sarma
Dhaval Patel
Naresh Khohal
Rahul Kulkarni
Rajeev Sharma
Tsewang Rigzin— Sajin M S (@ComradeSajin) November 16, 2020
ಇದನ್ನೂ ಓದಿ: ಪತ್ರಿಕಾ ಸ್ವಾತಂತ್ರ್ಯ ಎಂದರೆ ಪತ್ರಕರ್ತನನ್ನು ಪ್ರಶ್ನೆ ಕೇಳಬಾರದು ಎಂದರ್ಥವಲ್ಲ: ಸುಪ್ರೀಂಕೋರ್ಟ್
ಹರ್ಷ ಶರ್ಮ, “ಹೌದು ನಮ್ಮ ಸಮುದಾಯ, ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ನಾಶಮಾಡಲು ದಣಿವರಿಯಿಲ್ಲದೆ ಕೆಲಸ ಮಾಡುತ್ತಿದ್ದಾರೆ” ಎಂದು ಟ್ವೀಟ್ ಮಾಡಿ, ಭಾರತದ ಪತ್ರಿಕಾ ಸ್ವಾತಂತ್ಯ್ರದ ಸೂಚ್ಯಾಂಕ ಬಗೆಗಿನ ವರದಿಯೊಂದನ್ನು ಹಾಕಿದ್ದಾರೆ.
Hmmmmm working tirelessly to destroy our community, peace and harmony in our society. pic.twitter.com/I8jB1dgYct
— HARSH SHARMA (@sharmahar1) November 16, 2020
ಪಂಕಜ್ ಸರಪ್, “ಕೊರೊನಾ ಮತ್ತು ಆರ್ಥಿಕ ಸಂಬಂಧಿತ ಸಮಸ್ಯೆಗಳನ್ನು ವರದಿ ಮಾಡದೆ, ಮಧ್ಯಮ ವರ್ಗದ ಜನರ ನಡುವೆ ದ್ವೇಷ ಹರಡಿ ಉತ್ತಮವಾಗಿ ಟೈಮ್‌ಪಾಸ್‌ಗೆ ತೊಡಗಿಸಿಕೊಂಡದ್ದಕ್ಕೆ ಈ ಶುಭಾಶಯವೆ” ಎಂದು ಪ್ರಶ್ನಿಸಿದ್ದಾರೆ.
For not reporting Covid and economy related issues, instead engaging in to good timepass for middle class people and spreading Hate:
Tabligi
Police beating people on lockdown
Tali-Thali
Diya
Sushant Singh
Riya
KangnaEtc etc.
— Pankaj Saraf ✋ (@saraf_pankaj) November 16, 2020
ಪಿ. ಬಾಲಸುಂದರಂ, ಗೃಹಮಂತ್ರಿಗಳ ಶುಭಾಶಯ ಹಾಗೂ ಪತ್ರಿಕಾ ಸ್ವಾತಂತ್ಯ್ರದ ಬಗೆಗಿನ ಮಾತುಗಳ ಹೊರತಾಗಿಯೂ, ನಮ್ಮ ಪ್ರಧಾನ ಮಂತ್ರಿ ಪತ್ರಿಕೆಯವರನ್ನು ಯಾಕೆ ಇನ್ನೂ ಭೇಟಿಯಾಗಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಪ್ರಧಾನಿಯಾಗಿ ಆಡಳಿತವನ್ನು ವಹಿಸಿಕೊಂಡ ನಂತರ ಪೂರ್ಣ ಪ್ರಮಾಣದ ಪತ್ರಿಕಾಗೋಷ್ಠಿಯನ್ನಾಗಲಿ ಪತ್ರಕರ್ತರ ಪ್ರಶ್ನೆಗಳನ್ನಾಗಿ ಇದುವರೆಗೂ ಎದುರಿಸಲಿಲ್ಲ.
Then why our p.m.has not met the press since date of assuming the office of https://t.co/x8nYZkhKqM.?
— P.Balasundaram (@PBalasundaram7) November 16, 2020
ಇದನ್ನೂ ಓದಿ: ಭಾರತದಲ್ಲಿ ಪತ್ರಕರ್ತರಿಗೆ ಕಿರುಕುಳ: ಮೋದಿಗೆ ಪತ್ರ ಬರೆದ ಅಂತರಾಷ್ಟ್ರೀಯ ಪತ್ರಿಕಾ ಸಂಘಗಳು!
ರೆಡ್ ಇಂಡಿಯನ್ ಎಂಬ ಟ್ವಿಟ್ಟರ್ ಹ್ಯಾಂಡಲ್, ಉತ್ತರ ಪ್ರದೇಶ ಸರ್ಕಾರದಿಂದ ಬಂಧಿತರಾಗಿರುವ ಕೇರಳ ಮೂಲದ ಪತ್ರಕರ್ತ ಸಿದ್ದೀಕ್ ಕಪ್ಪನ್ ಬಗ್ಗೆ ಪ್ರಶ್ನಿಸಿದ್ದು, “ಸಿದ್ದೀಕ್ ಕಪ್ಪನ್ ಇನ್ನೂ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಮಾತನಾಡಿ, ಇದು ಒಳ್ಳೆಯ ಕೆಲಸ” ಎಂದು ಹೇಳಿದ್ದಾರೆ.
Siddiq Kappan is still rotting in jail. Talk about freedom of press. Nice job.https://t.co/mOoYjlI6GR pic.twitter.com/fzJDTHIzBU
— Red Indian (@roteIndischer) November 16, 2020
ರಾಜೇಶ್ ಸ್ರೀವಾತ್ಸವ, “ಭಾರತದಲ್ಲಿ ಇಂದು ಬಿಜೆಪಿಯ ಸಾಕು ಪ್ರಾಣಿಗಳ ದಿನ, ಶುಭಾಶಯಗಳು ಅರ್ನಬ್, ಅಂಜನಾ, ಸುಧೀರ್ ಚೌಧರಿ, ದೀಪಕ್ ಚುರಾಸಿಯಾ, ನಾವಿಕಾ ಕುಮಾರ್, ಶಿವ ಶಂಕರ್, ಅಮಿಶ್ ದೇವಗನ್, ರುಬಿಕಾ ಲಿಕಾಯತ್ ಮತ್ತು ಈ ಪಟ್ಟಿಗೆ ಕೊನೆಯಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.
In India today is BJPs Pets Day. Mubarak to Arnab @republic @anjanaomkashyap @sudhirchaudhary @DChaurasia2312 @navikakumar @RShivshankar @AMISHDEVGAN @RubikaLiyaquat and the list is endless
— Rajesh Srivastava (@srivrajesh) November 16, 2020
ಗುಡ್ ಮ್ಯಾನ್ ಎಂಬ ಟ್ವಿಟ್ಟರ್ ಹ್ಯಾಂಡಲ್, “ಎಲ್ಲವನ್ನೂ ಖರೀದಿ ಮಾಡಲಾಗಿದೆ ಮೋಟಾ ಭಾಯ್” ಎಂದು ಹೇಳಿದ್ದಾರೆ.
Sab to kharid chuke ho mota bhai
— Good man (@Goodman03668126) November 16, 2020
ಆರ್. ಥಾನ್‌ಕಪ್ಪನ್, ಬಿಜೆಪಿ ಸರ್ಕರ ಬಂಧಿಸಿದ ಎಲ್ಲಾ ಪತ್ರಕರ್ತರಿಗೆ ಅನುಕಂಪವಿದೆ ಎಂದು ಟ್ವೀಟ್ ಮಾಡಿದ್ದಾರೆ.
Sympathy with all Journalists arrested by BJP government
— R Thankappan (@thankappan_r) November 16, 2020
ಶರಣು ಎನ್. ಒಳ್ಳೆಯ ಹಾಸ್ಯ ಎಂದು ಬರೆದಿದ್ದಾರೆ.
good joke ???
— Sharanu.N (@sharanu_ja) November 16, 2020
ಇದನ್ನೂ ಓದಿ: ಪತ್ರಿಕಾ ನೀತಿ ಧಿಕ್ಕರಿಸಿ ಮೃತದೇಹದ ಚಿತ್ರ ಪ್ರಕಟಣೆ ಸಮರ್ಥಿಸಿಕೊಂಡ ’ಗುಜರಾತ್ ಸಮಾಚಾರ್’
ಅಮಿತ್ ಅಣ್ಣಾ ನಿಮಗೆ ಒಳ್ಳೆಯ ಹಾಸ್ಯ ಗುಣವಿದೆ ಎಂದು ನಂದು ಬರೆದಿದ್ದಾರೆ.
You have a sense of humor Amit bhai..
— நந்து | नंदु | Nandu (@nanduperfint) November 16, 2020
“ಗೃಹ ಸಚಿವರು ತಮ್ಮ ಸಂದೇಶದ ನಂತರ ನಗುತ್ತಿರುವ ಸ್ಟಿಕ್ಕರ್ ಹಾಕಲು ಮರೆತಿದ್ದಾರೆ ಎಂಬ ವ್ಯಂಗ್ಯ”
?????????
Ok done.
He forgot to put the smilies below his text.— Bird'sEyeView (@MM09021996) November 16, 2020
ಸುನಿಲ್ ಕುಮಾರ್, ವಿಶೇಷವಾಗಿ ಅರ್ನಬ್‌ಗೆ ಈ ಸಂದೇಶ ಎಂದು ವ್ಯಂಗ್ಯವಾಡಿದ್ದಾರೆ.
Especially that of arnob ?
— Sunilkumar (@Sunilku72022541) November 16, 2020
ಐಶಿ, “ವ್ಯಂಗ್ಯ ಸತ್ತೇ ಹೋಗಿದೆ” ಎಂದಿದ್ದಾರೆ.
Irony died a million deaths.
— Ishi ☭ (@Ishi_Winchester) November 16, 2020
Can't stop ??
— Manoj Pathak (@manojpathak380) November 16, 2020
The irony lol???
— Andher Nagri Chaupat Raja? (@biki_media) November 16, 2020
ಇದನ್ನೂ ಓದಿ: ಪತ್ರಿಕಾ ಧರ್ಮ ಹಳ್ಳ ಹಿಡಿಸಿರುವ ಯುದ್ಧೋನ್ಮಾದಿ ಸಂಪಾದಕರು: ಮದ್ದೆರೆಯಬೇಕಾದ ಸಾಂಸ್ಕೃತಿಕ ಲೋಕ


