Homeಮುಖಪುಟಪತ್ರಿಕಾ ಸ್ವಾತಂತ್ಯ್ರ ಕುರಿತ ಅಮಿತ್‌ ಷಾ ಹೇಳಿಕೆ - ’ಒಳ್ಳೆಯ ಜೋಕ್’ ಎಂದ ನೆಟ್ಟಿಗರು!

ಪತ್ರಿಕಾ ಸ್ವಾತಂತ್ಯ್ರ ಕುರಿತ ಅಮಿತ್‌ ಷಾ ಹೇಳಿಕೆ – ’ಒಳ್ಳೆಯ ಜೋಕ್’ ಎಂದ ನೆಟ್ಟಿಗರು!

ಪತ್ರಿಕಾ ಸ್ವಾತಂತ್ಯ್ರ ಉಳಿಸಲು ಮೋದಿ ಸರ್ಕಾರ ಬದ್ಧವಾಗಿದ್ದು, ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕುವವರನ್ನು ವಿರೋಧಿಸುತ್ತದೆ ಎಂದು ಹೇಳಿದ್ದರು.

- Advertisement -
- Advertisement -

ರಾಷ್ಟ್ರೀಯ ಪತ್ರಿಕಾ ದಿನದಂದು ಕೇಂದ್ರ ಗೃಹ ಮಂತ್ರಿ ಅಮಿತ್‌ ಷಾ, ಭಾರತದಲ್ಲಿ ಮಾಧ್ಯಮ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಬರುವಲ್ಲಿ ನರೇಂದ್ರ ಮೋದಿ ಸರ್ಕಾರ ಬದ್ಧವಾಗಿದೆ ಮತ್ತು ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕುವವರನ್ನು ವಿರೋಧಿಸುತ್ತದೆ ಎಂದು ಮಾಡಿದ್ದ ಟ್ವೀಟ್‌ಗೆ ನೆಟ್ಟಿಗರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ರಾಷ್ಟ್ರೀಯ ಪತ್ರಿಕಾ ಸ್ವಾತಂತ್ಯ್ರ ದಿನವಾದ ನಿನ್ನೆ, “ರಾಷ್ಟ್ರೀಯ ಪತ್ರಿಕಾ ಸ್ವಾತಂತ್ಯ್ರ ದಿನ ಶುಭಾಶಯಗಳು. ನಮ್ಮ ಮಾಧ್ಯಮ ಭ್ರಾತೃತ್ವ ಮಹಾನ್ ದೇಶದ ಅಡಿಪಾಯವನ್ನು ಬಲಪಡಿಸಲು ದಣಿವರಿಯಿಲ್ಲದೆ ಕೆಲಸಗಳನ್ನು ಮಾಡುತ್ತಿದೆ. ಮೋದಿ ಸರ್ಕಾರ ಭಾರತದಲ್ಲಿ ಮಾಧ್ಯಮ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಬರುವಲ್ಲಿ ಬದ್ಧವಾಗಿದೆ ಮತ್ತು ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕುವವರನ್ನು ವಿರೋಧಿಸುತ್ತದೆ. ಕೊರೊನಾ ಸಮಯದಲ್ಲಿ ಮಾಧ್ಯಮದ ಗಮನಾರ್ಹ ಪಾತ್ರವನ್ನು ನಾನು ಶ್ಲಾಘಿಸುತ್ತೇನೆ” ಎಂದು ಅಮಿತ್‌ ಷಾ ಟ್ವೀಟ್ ಮಾಡಿದ್ದರು.

ಇದನ್ನೂ ಓದಿ: ಅರ್ನಬ್ ಪತ್ರಿಕೋದ್ಯಮ ಪೊಳ್ಳಾಗಿರುವ ಸಂದರ್ಭದಲ್ಲಿ ಪೊಲೀಸ್ ಅತಿರೇಕ ಸಮರ್ಥಿಸಬಾರದು, ದಿಟ ಮಾಧ್ಯಮ ಕಟ್ಟಬೇಕು

ಗೃಹಸಚಿವರ ಹೇಳಿಕೆಗೆ ನೆಟ್ಟಿಗರು ತೀಕ್ಷ್ಣವಾಗಿ ಪ್ರತಿಕ್ರಿಯಸಿದ್ದು, ಇನ್ನೂ ಪತ್ರಿಕಾ ಸ್ವಾತಂತ್ರವನ್ನು ಕೇಂದ್ರದ ಬಿಜೆಪಿ ಸರ್ಕಾರ ಧಮನಿಸುತ್ತಿದೆ. ಭಾರತವು ಪತ್ರಿಕಾ ಸ್ವಾತಂತ್ಯ್ರ ಸೂಚ್ಯಂಕದಲ್ಲಿ 180 ರಾಷ್ಟ್ರಗಳಲ್ಲಿ 142 ನೇ ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ.

ಅರ್ಪಿತಾ ಬಾತ್ರ, “ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ನಾವು 180 ರಾಷ್ಟ್ರಗಳಲ್ಲಿ 142 ನೇ ಸ್ಥಾನವನ್ನು ತಲುಪಿದ್ದೇವೆ. ನಾವು ಇನ್ನೂ ದಣಿವರಿಯಿಲ್ಲದೆ ಕೆಲಸ ಮಾಡುತ್ತಿದ್ದರೆ, ಮ್ಯಾಜಿಕ್ ಸ್ಥಾನಕ್ಕೆ ಹೋಗಲು ಕೇವಲ 38 ಸ್ಥಾನಗಳ ದೂರದಲ್ಲಿದ್ದೇವೆ” ಎಂದು ವ್ಯಂಗ್ಯವಾಡಿ ದಿ ಹಿಂದೂ ಪತ್ರಿಕೆಯ ವರದಿಯೊಂದನ್ನು ಹಾಕಿದ್ದಾರೆ.

ಸಜ್ಜನ್ ಎಂ. ಎಸ್., “ಪತ್ರಿಕಾ ಸ್ವಾತಂತ್ಯ್ರ ಹರಣದ ವಿರುದ್ದದ ನಿಮ್ಮ ವಿರೋಧವು ಕೇವಲ ಅರ್ನಬ್‌ಗೆ ಮಾತ್ರ ಸೀಮಿತವಾಗದಿರಲಿ ಕೆಳಗಿನವರಿಗೂ ಅನ್ವಯಿಸಲಿ” ಎಂದು ಬಂಧನಕ್ಕೊಳಗಾದ ಹಲವಾರು ಪತ್ರಕರ್ತರ ಹೆಸರನ್ನು ಬರೆದಿದ್ದಾರೆ.

ಇದನ್ನೂ ಓದಿ: ಪತ್ರಿಕಾ ಸ್ವಾತಂತ್ರ್ಯ ಎಂದರೆ ಪತ್ರಕರ್ತನನ್ನು ಪ್ರಶ್ನೆ ಕೇಳಬಾರದು ಎಂದರ್ಥವಲ್ಲ: ಸುಪ್ರೀಂಕೋರ್ಟ್

ಹರ್ಷ ಶರ್ಮ, “ಹೌದು ನಮ್ಮ ಸಮುದಾಯ, ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ನಾಶಮಾಡಲು ದಣಿವರಿಯಿಲ್ಲದೆ ಕೆಲಸ ಮಾಡುತ್ತಿದ್ದಾರೆ” ಎಂದು ಟ್ವೀಟ್ ಮಾಡಿ, ಭಾರತದ ಪತ್ರಿಕಾ ಸ್ವಾತಂತ್ಯ್ರದ ಸೂಚ್ಯಾಂಕ ಬಗೆಗಿನ ವರದಿಯೊಂದನ್ನು ಹಾಕಿದ್ದಾರೆ.

ಪಂಕಜ್ ಸರಪ್, “ಕೊರೊನಾ ಮತ್ತು ಆರ್ಥಿಕ ಸಂಬಂಧಿತ ಸಮಸ್ಯೆಗಳನ್ನು ವರದಿ ಮಾಡದೆ, ಮಧ್ಯಮ ವರ್ಗದ ಜನರ ನಡುವೆ ದ್ವೇಷ ಹರಡಿ ಉತ್ತಮವಾಗಿ ಟೈಮ್‌ಪಾಸ್‌ಗೆ ತೊಡಗಿಸಿಕೊಂಡದ್ದಕ್ಕೆ ಈ ಶುಭಾಶಯವೆ” ಎಂದು ಪ್ರಶ್ನಿಸಿದ್ದಾರೆ.

ಪಿ. ಬಾಲಸುಂದರಂ, ಗೃಹಮಂತ್ರಿಗಳ ಶುಭಾಶಯ ಹಾಗೂ ಪತ್ರಿಕಾ ಸ್ವಾತಂತ್ಯ್ರದ ಬಗೆಗಿನ ಮಾತುಗಳ ಹೊರತಾಗಿಯೂ, ನಮ್ಮ ಪ್ರಧಾನ ಮಂತ್ರಿ ಪತ್ರಿಕೆಯವರನ್ನು ಯಾಕೆ ಇನ್ನೂ ಭೇಟಿಯಾಗಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಪ್ರಧಾನಿಯಾಗಿ ಆಡಳಿತವನ್ನು ವಹಿಸಿಕೊಂಡ ನಂತರ ಪೂರ್ಣ ಪ್ರಮಾಣದ ಪತ್ರಿಕಾಗೋಷ್ಠಿಯನ್ನಾಗಲಿ ಪತ್ರಕರ್ತರ ಪ್ರಶ್ನೆಗಳನ್ನಾಗಿ ಇದುವರೆಗೂ ಎದುರಿಸಲಿಲ್ಲ.

ಇದನ್ನೂ ಓದಿ: ಭಾರತದಲ್ಲಿ ಪತ್ರಕರ್ತರಿಗೆ ಕಿರುಕುಳ: ಮೋದಿಗೆ ಪತ್ರ ಬರೆದ ಅಂತರಾಷ್ಟ್ರೀಯ ಪತ್ರಿಕಾ ಸಂಘಗಳು!

ರೆಡ್ ಇಂಡಿಯನ್ ಎಂಬ ಟ್ವಿಟ್ಟರ್‌ ಹ್ಯಾಂಡಲ್, ಉತ್ತರ ಪ್ರದೇಶ ಸರ್ಕಾರದಿಂದ ಬಂಧಿತರಾಗಿರುವ ಕೇರಳ ಮೂಲದ ಪತ್ರಕರ್ತ ಸಿದ್ದೀಕ್ ಕಪ್ಪನ್ ಬಗ್ಗೆ ಪ್ರಶ್ನಿಸಿದ್ದು, “ಸಿದ್ದೀಕ್ ಕಪ್ಪನ್ ಇನ್ನೂ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಮಾತನಾಡಿ, ಇದು ಒಳ್ಳೆಯ ಕೆಲಸ” ಎಂದು ಹೇಳಿದ್ದಾರೆ.

ರಾಜೇಶ್ ಸ್ರೀವಾತ್ಸವ, “ಭಾರತದಲ್ಲಿ ಇಂದು ಬಿಜೆಪಿಯ ಸಾಕು ಪ್ರಾಣಿಗಳ ದಿನ, ಶುಭಾಶಯಗಳು ಅರ್ನಬ್, ಅಂಜನಾ, ಸುಧೀರ್‌ ಚೌಧರಿ, ದೀಪಕ್‌ ಚುರಾಸಿಯಾ, ನಾವಿಕಾ ಕುಮಾರ್‌, ಶಿವ ಶಂಕರ್‌, ಅಮಿಶ್ ದೇವಗನ್, ರುಬಿಕಾ ಲಿಕಾಯತ್ ಮತ್ತು ಈ ಪಟ್ಟಿಗೆ ಕೊನೆಯಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.

ಗುಡ್ ಮ್ಯಾನ್ ಎಂಬ ಟ್ವಿಟ್ಟರ್‌ ಹ್ಯಾಂಡಲ್, “ಎಲ್ಲವನ್ನೂ ಖರೀದಿ ಮಾಡಲಾಗಿದೆ ಮೋಟಾ ಭಾಯ್” ಎಂದು ಹೇಳಿದ್ದಾರೆ.

ಆರ್‌‌. ಥಾನ್‌ಕಪ್ಪನ್, ಬಿಜೆಪಿ ಸರ್ಕರ ಬಂಧಿಸಿದ ಎಲ್ಲಾ ಪತ್ರಕರ್ತರಿಗೆ ಅನುಕಂಪವಿದೆ ಎಂದು ಟ್ವೀಟ್ ಮಾಡಿದ್ದಾರೆ.

ಶರಣು ಎನ್. ಒಳ್ಳೆಯ ಹಾಸ್ಯ ಎಂದು ಬರೆದಿದ್ದಾರೆ.

ಇದನ್ನೂ ಓದಿ: ಪತ್ರಿಕಾ ನೀತಿ ಧಿಕ್ಕರಿಸಿ ಮೃತದೇಹದ ಚಿತ್ರ ಪ್ರಕಟಣೆ ಸಮರ್ಥಿಸಿಕೊಂಡ ’ಗುಜರಾತ್ ಸಮಾಚಾರ್‌’

ಅಮಿತ್‌ ಅಣ್ಣಾ ನಿಮಗೆ ಒಳ್ಳೆಯ ಹಾಸ್ಯ ಗುಣವಿದೆ ಎಂದು ನಂದು ಬರೆದಿದ್ದಾರೆ.

“ಗೃಹ ಸಚಿವರು ತಮ್ಮ ಸಂದೇಶದ ನಂತರ ನಗುತ್ತಿರುವ ಸ್ಟಿಕ್ಕರ್‌ ಹಾಕಲು ಮರೆತಿದ್ದಾರೆ ಎಂಬ ವ್ಯಂಗ್ಯ”

ಸುನಿಲ್ ಕುಮಾರ್‌, ವಿಶೇಷವಾಗಿ ಅರ್ನಬ್‌ಗೆ ಈ ಸಂದೇಶ ಎಂದು ವ್ಯಂಗ್ಯವಾಡಿದ್ದಾರೆ.

ಐಶಿ, “ವ್ಯಂಗ್ಯ ಸತ್ತೇ ಹೋಗಿದೆ” ಎಂದಿದ್ದಾರೆ.

ಇದನ್ನೂ ಓದಿ: ಪತ್ರಿಕಾ ಧರ್ಮ ಹಳ್ಳ ಹಿಡಿಸಿರುವ ಯುದ್ಧೋನ್ಮಾದಿ ಸಂಪಾದಕರು: ಮದ್ದೆರೆಯಬೇಕಾದ ಸಾಂಸ್ಕೃತಿಕ ಲೋಕ

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...