Homeಮುಖಪುಟದಿಲ್ಲಿಯಲ್ಲಿ ನಾನುಗೌರಿ: ಭಾರತದ ವೈವಿಧ್ಯತೆಯ ಸಾಕ್ಷಾತ್‌ ದರ್ಶನ ನೀಡಿದ ಶಹಜಾಹ್‌ಪುರ್ ಪ್ರತಿಭಟನಾ ಸ್ಥಳ..!

ದಿಲ್ಲಿಯಲ್ಲಿ ನಾನುಗೌರಿ: ಭಾರತದ ವೈವಿಧ್ಯತೆಯ ಸಾಕ್ಷಾತ್‌ ದರ್ಶನ ನೀಡಿದ ಶಹಜಾಹ್‌ಪುರ್ ಪ್ರತಿಭಟನಾ ಸ್ಥಳ..!

ರಾಜಸ್ಥಾನ ʼರಾಷ್ಟ್ರೀಯ ಮೂಲನಿವಾಸಿಗಳ ಸಂಘʼದ ಕಾರ್ಯಕರ್ತರು ಪ್ರತಿದಿನ 15 ಜನರಂತೆ 24 ಗಂಟೆಗಳ ಉಪವಾಸ ಆಚರಿಸುತ್ತಿದ್ದಾರೆ.

- Advertisement -
- Advertisement -

ರೈತ ಪ್ರತಿಭಟನೆಯಲ್ಲಿ ಕಳೆದ 7 ದಿನಗಳಿಂದ ತೊಡಗಿಸಿಕೊಂಡಿರುವ ನನಗೆ ಈ ಶಹಜಾಹ್‌ಪುರ್‌ ಎಂಬ ಪ್ರತಿಭಟನಾ ಸ್ಥಳ ನಾನು ಕಾಣದ ಭಾರತದ ಮುಕ್ಕಾಲು ರಾಜ್ಯಗಳ ದರ್ಶನ ಮಾಡಿಸಿದೆ. ಎಲ್ಲಾ ರೀತಿಯ ಎಲ್ಲಾ ಧರ್ಮಗಳ ಜನರು, ಅವರ ಆಹಾರ, ಸಂಸ್ಕೃತಿ, ವೈವಿದ್ಯ ಉಡುಪುಗಳು ಜೊತೆಗೆ ಹಲವು ಭಾಷೆಗಳಿಂದ ಕೂಡಿದ ಭಾರತದ ವೈವಿಧ್ಯತೆಯನ್ನು ಕಣ್ಣೆದುರಿಗೆ ತೆರೆಸಿತು.

ಒಕ್ಕೂಟ ಸರ್ಕಾರದ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ಕೇವಲ ಪಂಜಾಬ್‌ ಮತ್ತು ಹರಿಯಾಣ ರೈತರದ್ದು ಎಂದು ವದಂತಿ ಹಬ್ಬಿಸುವ ಜನರಿಗೆ ಕಪಾಳಮೋಕ್ಷ ಮಾಡುವಂತೆ ಈ ಶಹಜಾಹನ್‌ಪುರದ ಪ್ರತಿಭಟನಾ ಸ್ಥಳವಿದೆ.

ತಿಂಗಳ ಹಿಂದೆಯೇ ರಾಜಸ್ಥಾನ-ದೆಹಲಿ ಹೆದ್ದಾರಿಯಲ್ಲಿ ರೈತರು ದೆಹಲಿ ಚಲೋ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಬಂದಾಗ ಇಲ್ಲಿ ಪೊಲೀಸರು ಅವರನ್ನು ತಡೆದರು. ನಂತರ ಆ ರೈತರೆಲ್ಲ ಇಲ್ಲೇ ಟಿಕಾಣಿ ಹೂಡಿದ್ದಾರೆ. ರಾಜಸ್ಥಾನ, ಗುಜರಾತ್‌, ಹರಿಯಾಣ, ಮಧ್ಯಪ್ರದೇಶ, ಕೇರಳ, ಜಮ್ಮು ಕಾಶ್ಮೀರ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳ ರೈತರು ಇಲ್ಲಿ ಜಮೆಯಾಗಿದ್ದಾರೆ.

ಸಂಯುಕ್ತ ಕಿಸಾನ್‌ ಮೋರ್ಚಾ ಅಡಿಯಲ್ಲಿ ಇಲ್ಲಿ ಪ್ರತಿಭಟನೆ ನಡೆಸಲಾಗುತ್ತಿದ್ದರೂ ಹಲವಾರು ಸಂಘಟನೆಗಳು ಇದರಲ್ಲಿ ಭಾಗವಹಿಸಿವೆ. ಎಡ ಸಂಘಟನೆಗಳು ಪ್ರಮುಖ ಪಾತ್ರ ವಹಿಸಿರುವ ಈ ಶಹಜಾಹ್‌ಪುರ್‌ ಪ್ರತಿಭಟನೆಯಲ್ಲಿ, ಹರಿಯಾಣ, ರಾಜಸ್ಥಾನದ ಕಾರ್ಮಿಕ ಸಂಘಟನೆಗಳು, ಆದಿವಾಸಿ ಸಂಘಟನೆಗಳು, ದಲಿತ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು ಭಾಗವಹಿಸಿ ಬೆಂಬಲ ನೀಡಿವೆ.

ಜಮ್ಮು ಕಾಶ್ಮಿರದಿಂದ ಬಂದಿರುವ ಆಲ್‌ ಇಂಡಿಯಾ ಕಿಸಾನ್‌ ಸಭಾದ ರೈತ ನಾಯಕರು ಪ್ರತಿಭಟನೆಯಲ್ಲಿ ರ್ಯಾಲಿಗಳನ್ನು ನಡೆಸಿ, ಪ್ರತಿ ದಿನ ಮೂರರಿಂದ ನಾಲ್ಕು ಬಾರಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನಾ ನಿರತ ರೈತರಲ್ಲಿ ಹುಮ್ಮಸ್ಸು ತುಂಬುತ್ತಿವೆ. ಜಮ್ಮ ಕಾಶ್ಮೀರದ ರೈತರು ಹೋರಾಟದಲ್ಲಿ ಭಾಗವಹಿಸಿರುವ ಕಾರಣ ಕೇಂದ್ರ ಸರ್ಕಾರ ಇಲ್ಲಿ ಅತೀ ಹೆಚ್ಚಿನ ಭದ್ರತೆಗೆ ಒತ್ತು ನೀಡಿದೆ. ಪ್ರತಿಭಟನಾ ಸ್ಥಳದಲ್ಲಿ ಬ್ಲಾಕ್‌ ಕಮಾಂಡೋ ಪಡೆಯನ್ನು ನಿಯೋಜಿಸಿದೆ.

ಇತ್ತ ಬಿಹಾರ ಮತ್ತು ರಾಜಸ್ಥಾನ ಗಡಿಯಲ್ಲಿರುವ ಡಂಗರ್‌ಪುರ್ ಗ್ರಾಮದ ಆದಿವಾಸಿ ಜನಾಂಗ ಇಡೀ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ರೈತರಿದ್ದರೇ ನಾವು ಎನ್ನುವ ಇವರು, ನಾವು ರೈತರೆ ಇದು ಒಬ್ಬರ ಪ್ರತಿಭಟನೆಯಲ್ಲ, ದೇಶದ ಎಲ್ಲಾ ಜನರ ಪ್ರತಿಭಟನೆ ಎಂದು ಹೇಳಿದ್ದಾರೆ.

ರಾಜಸ್ಥಾನ ʼರಾಷ್ಟ್ರೀಯ ಮೂಲನಿವಾಸಿಗಳ ಸಂಘʼ ಈ ಪ್ರತಿಭಟನೆಯಲ್ಲಿ ಉಪವಾಸ ಕೂರುವ ಮೂಲಕ ರೈತರಿಗೆ ತಮ್ಮ ಬೆಂಬಲ ನೀಡಿದೆ. ಸಂಘಟನೆಯ ಕಾರ್ಯಕರ್ತರು ಪ್ರತಿದಿನ 15 ಜನರಂತೆ 24 ಗಂಟೆಗಳ ಉಪವಾಸ ಆಚರಿಸುತ್ತಿದ್ದಾರೆ. ದಲಿತ ಹಕ್ಕುಗಳಿಗಾಗಿ ಈ ಭಾಗದಲ್ಲಿ ಹೋರಾಡುವ ಈ ಸಂಘಟನೆ ಈಗ ರೈತರ ಜೊತೆ ನಿಂತು ನಾವು ರೈತರ ಮಕ್ಕಳು ಎಂದಿದೆ. ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.

ಶಹಾಜಾನ್‌ಪುರ್‌ದಲ್ಲಿ ಎರಡು ವಿಭಾಗಗಳಾಗಿ ರೈತ ತಂಡಗಳು ವಿಭಜನೆಗೊಂಡಿವೆ. ದೆಹಲಿಗೆ ತಲುಪುವ ನಿಟ್ಟಿನಲ್ಲಿ ಹೊರಟ ಮೊದಲ ತಂಡ ದೆಹಲಿ – ಹರಿಯಾಣ ಮಾರ್ಗದ ದಾರುಹೇರಾದಲ್ಲಿ ಪೊಲೀಸರಿಂದ ತಡೆಗೆ ಒಳಗಾಗಿ ಅಲ್ಲಿ ಸುಮಾರು 50 ಟ್ರ್ಯಾಕ್ಟರ್‌ಗಳನ್ನು ನಿಲ್ಲಿಸಿಕೊಂಡು ಧರಣಿ ನಡೆಸುತ್ತಿದ್ದಾರೆ.
ಇನ್ನೊಂದು ವಿಭಾಗ ರಾಜಸ್ಥಾನ-ಹರಿಯಾಣ-ದೆಹಲಿ ಮಾರ್ಗದ ಶಹಾಜಾನ್‌ಪುರದಲ್ಲಿ ಉಳಿದುಕೊಂಡಿದೆ.

ಹಿಂದೂ, ಮುಸ್ಲಿಂ, ಸಿಖ್‌, ಕ್ರಿಶ್ಚಿಯನ್‌ ಎನ್ನದೇ ಎಲ್ಲಾ ಧರ್ಮದ ರೈತರು ಇಲ್ಲಿ ನೆಲೆಸಿದ್ದಾರೆ. ಜನವರಿ 26ರ ಟ್ರ್ಯಾಕ್ಟರ್‌ ಮಾರ್ಚ್‌ಗೆ ಇಲ್ಲಿನ ಪ್ರತಿಭಟನಾ ನಿರತ ರೈತರು ಸಕಲ ಸಿದ್ಧತೆ ನಡೆಸುತ್ತಿದ್ದು, ಅಂದು ರಾಜಸ್ಥಾನದಿಂದ ಸುಮಾರು 500 ಹೊಸ ಟ್ರ್ಯಾಕ್ಟರ್‌ಗಳು ರ್ಯಾಲಿಯಲ್ಲಿ ಪಾಲ್ಗೊಳ್ಳಲಿವೆ ಎಂದು ರೈತ ಹೋರಾಟಗಾರರು ತಿಳಿಸಿದ್ದಾರೆ.

  • ಮಮತ ಎಂ.

ಇದನ್ನೂ ಓದಿ: ಕೃಷಿ ಕಾಯ್ದೆಗಳು & ರೈತ ಹೋರಾಟದ ಕುರಿತು ಇಂದು ಸುಪ್ರೀಂ ಕೋರ್ಟ್‌‌ನಲ್ಲಿನ ವಾದ-ವಿವಾದ ಹೀಗಿತ್ತು..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮೊದಲು ಜಾತಿಗಣತಿ ಮಾಡುತ್ತೇವೆ: ರಾಹುಲ್‌ ಗಾಂಧಿ

0
ಜಾತಿ ಗಣತಿ ನನ್ನ ಜೀವನದ ಪ್ರಮುಖ ಗುರಿಯಾಗಿದೆ. ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದರೆ ಮೊದಲು ಜಾತಿಗಣತಿಯನ್ನು ಮಾಡುತ್ತೇವೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ. ಸಂಪತ್ತು ಮರುಹಂಚಿಕೆ ವಿವಾದದ ಬಗ್ಗೆ ಪ್ರಧಾನಿ ನರೇಂದ್ರ...