Homeಮುಖಪುಟಅವಳ ಹಸಿವನ್ನು ಹಂಗಿಸಿದ ನಿಮಗೆ ನನ್ನ ಧಿಕ್ಕಾರ....!!

ಅವಳ ಹಸಿವನ್ನು ಹಂಗಿಸಿದ ನಿಮಗೆ ನನ್ನ ಧಿಕ್ಕಾರ….!!

ನೀವು ವ್ಯಂಗ್ಯ ಮಾಡಿದ್ದು ಅವಳನ್ನಲ್ಲ.. ಅವಳು ಪ್ರತಿನಿಧಿಸಿದ ಅಸಹಾಯಕ ದುಡಿವ ವರ್ಗವನ್ನು, ಅವಳ ಮಾತುಗಳು ಪ್ರತಿನಿಧಿಸಿದ ಹಸಿವಿನ ಬಲಿಪಶುಗಳನ್ನು...

- Advertisement -
- Advertisement -

ಏನಿಲ್ಲ ಸಾರ್…
ಬರೀ Dolo 650.. ಕೊರೋನಾದವರಿಗೆ ಅದೇ ಸಾರ್….. ಹೀಗೆಂದು ತಿಂಗಳಿಂದೆ ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲಿ ಮಾಧ್ಯಮದ ಮುಂದೆ ಬೋಲ್ಡ್ ಆಗಿ ಮಾತನಾಡಿದ ಆ ಹದಿ ಹರೆಯದ ಸಹೋದರಿಯ ಮಾತುಗಳು ಇಂದು ಸಾಮಾಜಿಕ ಜಾಲತಾಣಗಳಲ್ಲಿ ಗೇಲಿಗೊಳಗಾಗುತ್ತಿವೆ.. ಆಕೆಯ ಮಾತುಗಳಿಗೆ ಮ್ಯೂಸಿಕ್ ಹಾಕಿ ರಿಮಿಕ್ಸ್ ಸಂಗೀತದಂತೆ ಮತ್ತೆ ವೈರಲ್ ಮಾಡಲಾಗುತ್ತಿದೆ..

ದುಡಿವ ಕೈಗಳಿಗೆ ಉದ್ಯೋಗವಿಲ್ಲದ್ದರ ಬಗ್ಗೆ, ಹಸಿದ ಹೊಟ್ಟೆಗಳಿಗೆ ಅನ್ನವಿಲ್ಲದ್ದರ ಬಗ್ಗೆ, ನಾಡ ಜನತೆಯ ಬೇನೆಗೆ ಸೂಕ್ತ ಔಷಧಿ ನೀಡಲಾಗದ ಷಂಡ ಪ್ರಭುತ್ವದ ವಿರುದ್ಧ ಆಕೆ ಮಾತನಾಡಿದ್ದಾಳೆ. ಆಕೆಗೆ ನಿಮ್ಮಂತಹ ಟಾಕು, ಟೀಕಿನ ಇಂಗ್ಲಿಷ್ ಮಿಶ್ರಿತ ಕನ್ನಡವನ್ನು ವಯ್ಯಾರದಿಂದ ಮಾತನಾಡಲು ಬಾರದಿರಬಹುದು. ಆಕೆ ತನ್ನ ಆಡುಭಾಷೆಯಲ್ಲೇ ಪ್ರಭುತ್ವದ ಕ್ರೌರ್ಯವನ್ನು ಪ್ರಶ್ನೆ ಮಾಡಿದ್ದಾಳೆ. ಆ ಮೂಲಕ ಆಕೆ ಸಮಸ್ತ ಅಸಹಾಯಕ ಕನ್ನಡಿಗರ ನೋವಿಗೆ ಧ್ವನಿಯಾಗಿದ್ದಾಳೆ.

ಆಕೆ ಆ ರೀತಿ ತನ್ನದೇ ದಾಟಿಯಲ್ಲಿ ತನ್ನ ಸಿಟ್ಟನ್ನು, ತನ್ನ ಅಸಹಾಯಕತೆಯನ್ನು ಮಾಧ್ಯಮಗಳ ಮುಂದೆ ಹೊರಗೆಡಹಿದ್ದಾಳೆ.. ನೀವು ಗೇಲಿ ಮಾಡಬೇಕಿದ್ದು ನನ್ನ ಆ ಸಹೋದರಿಯ ಗ್ರಾಮ್ಯ ಭಾಷೆಯನ್ನಲ್ಲ, ಅವಳ ಆಂಗಿಕ ಚಲನೆಯನ್ನಲ್ಲ… ಯಾವ ಪ್ರಭುತ್ವ, ಯಾವ ವ್ಯವಸ್ಥೆ ಆಕೆಯನ್ನು ಅಂತಹ ಮಾತುಗಳನ್ನಾಡಲು ಅಸಹಾಯಕಳಾಗಿಸಿತೋ ಆ ಪ್ರಭುತ್ವ , ಆ ವ್ಯವಸ್ಥೆಯನ್ನು ನೀವು ಗೇಲಿ ಮಾಡಬೇಕಿತ್ತು.

ಓರ್ವ ದುಷ್ಟ ರಾಜಕಾರಣಿಯನ್ನು ಗೇಲಿ ಮಾಡುವಂತೆ ನೀವು ಆ ಅಸಹಾಯಕ ಹೆಣ್ಮಗಳನ್ನು ಗೇಲಿ ಮಾಡುತ್ತಿದ್ದೀರಿ.. ಅದನ್ನು ಪ್ರಶ್ನಿಸಿದರೆ ಆಕೆಗೆ ಒಳ್ಳೆಯ ಪ್ರಚಾರ ಸಿಕ್ಕಿತಲ್ಲಾ ಎಂದು ಮತ್ತೆ ವ್ಯಂಗ್ಯವಾಡುತ್ತಿದ್ದೀರಿ.. ಆಕೆಯ ಪರವಾಗಿ ಧ್ವನಿಯೆತ್ತಲು ನ್ಯಾಯಾಂಗದಲ್ಲೋ, ಕಾರ್ಯಾಂಗದಲ್ಲೋ, ಶಾಸಕಾಂಗದಲ್ಲೋ ಯಾರೂ ಇಲ್ಲ ಎಂಬುವುದು ನಿಮ್ಮ ಈ ಧೈರ್ಯಕ್ಕೆ ಕಾರಣವಾಗಿದ್ದರೆ ಅವಳ ಪರವಾಗಿ ಧ್ವನಿಯೆತ್ತಲು ಮಾನವೀಯ ಸಂವೇದನೆಯಿರುವ ನಾವಿದ್ದೇವೆ.

ನೀವು ವ್ಯಂಗ್ಯ ಮಾಡಿದ್ದು ಅವಳನ್ನಲ್ಲ.. ನೀವು ವ್ಯಂಗ್ಯ ಮಾಡಿದ್ದು ಅವಳು ಪ್ರತಿನಿಧಿಸಿದ ಅಸಹಾಯಕ ದುಡಿವ ವರ್ಗವನ್ನು, ಅವಳ ಮಾತುಗಳು ಪ್ರತಿನಿಧಿಸಿದ ಹಸಿವಿನ ಬಲಿಪಶುಗಳನ್ನು…

ಹೃದಯ ಸತ್ತ ನಿಮ್ಮಂತವರ ದಾರ್ಷ್ಟ್ಯಕ್ಕೆ ನನ್ನದೊಂದು ಧಿಕ್ಕಾರ…

ಇಸ್ಮತ್ ಪಜೀರ್


ಇದನ್ನೂ ಓದಿ; ಹೋರಾಟಗಾರನ ಫೇಸ್‌ಬುಕ್ ಪೋಸ್ಟ್‌ಗೆ NSA ಪ್ರಕರಣ: ಸಂಜೆಯೊಳಗೆ ಬಿಡುಗಡೆಗೊಳಿಸಿ ಎಂದ ಸುಪ್ರೀಂ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಯಾರಪ್ಪ ಹಂಗಿಸಿದ್ದು. ಅದು ಮೈಸೂರು ಭಾಗದ ಭಾಷೆ, ಉತ್ತರ ಕರ್ನಾಟಕದ್ದಲ್ಲ. ವೈರಲ್ ಆಗಿರುವುದು ಆ ಹುಡುಗಿಯ ಮಾತಿನ ಲಾಲಿತ್ಯದಿಂದ, ವೈರಲ್ ಮಾಡಿದವರಾರೂ ಅವರನ್ನು ಆಡಿಕೊಂಡಿಲ್ಲ. ಮೆಚ್ಚುಗೆಯಿಂದ ವಿವಿಧ ರೀತಿಯಲ್ಲಿ ತೋರಿಸಿದ್ದಾರೆ. ಕೊಳಕು ಮನಸ್ಸಿನ, ನಕಾರಾತ್ಮಕ‌ ಧೋರಣೆಯ, ಜನರ ಕಷ್ಟವನ್ನೆ ಬಂಡವಾಳ ಮಾಡಿಕೊಂಡು ಹೊಟ್ಟೆ ಹೊರೆಯುವ ನಿಮ್ಮಂತವರಷ್ಟೆ ಅವರ ವಿಡಿಯೊಗಳನ್ನು ಸಹ ಹೊಟ್ಟೆಪಾಡಿಗೆ ಬಳಸಿಕೊಂಡು ಈ ರೀತಿ ಪೋಸ್ಟ್ ಮಾಡಿರುವುದು

  2. ಆಹಾ… ಇವನ ಪ್ರೀತಿ ನೋಡ…
    ಹಸಿವಿನ ಕಾಠಿಣ್ಯವರಿಯದ ನಿನ್ನಂತವರಿಗೆ ಭಾಷೆಯ ಲಾಲಿತ್ಯವನ್ನು ಕೊಂಡಾಡಿದಂತೆ ಕಾಣುತ್ತೆ ಬಿಡು..

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...