Homeಮುಖಪುಟನಾಳೆಯಿಂದ ಸಂಸ ಬಯಲು ರಂಗಮಂದಿರದಲ್ಲಿ ಶಂಕರ್‌ ನಾಗ್ ನಾಟಕೋತ್ಸವ!

ನಾಳೆಯಿಂದ ಸಂಸ ಬಯಲು ರಂಗಮಂದಿರದಲ್ಲಿ ಶಂಕರ್‌ ನಾಗ್ ನಾಟಕೋತ್ಸವ!

ನಾಟಕೋತ್ಸವದ ವಿಶೇಷ ಎಂದರೆ "ನಾಗರಕಟ್ಟೆ". ಈ ಕಾರ್ಯಕ್ರಮದಲ್ಲಿ ಶಂಕರ್‌ನಾಗ್‌ ಜತೆ ಕೆಲಸ ಮಾಡಿದವರು, ಸ್ನೇಹಿತರು ಶಂಕರ್‌ನಾಗ್‌ರ ಒಡನಾಟವನ್ನು ಜ್ಞಾಪಿಸಿಕೊಳ್ಳಲಿದ್ದಾರೆ.

- Advertisement -
- Advertisement -

2018ರಿಂದ ಖ್ಯಾತನಟ, ನಿರ್ದೇಶಕ ಶಂಕರ್‌ ನಾಗ್ ನೆನಪಲ್ಲಿ ಪ್ರತಿವರ್ಷದ ಪರಮ ಗುರಿ ಎಂದು ಶಂಕರ್‌ ನಾಗ್ ನಾಟಕೋತ್ಸವ ನಡೆಸುತ್ತಿರುವ ಸಾತ್ವಿಕ ಮತ್ತು ರಂಗಪಯಣ ತಂಡ ಮತ್ತೊಂದು ನಾಟಕೋತ್ಸವಕ್ಕೆ ಸಜ್ಜಾಗಿ, ಕಲಾ ಪ್ರೇಮಿಗಳನ್ನು ಸ್ವಾಗತಿಸುತ್ತಿದೆ.

ರಂಗಕರ್ಮಿಗಳಾದ ರಾಜ್‌ಗುರು ಮತ್ತು ನಯನ ಸೂಡ ಅವರ ಈ ತಂಡಗಳು 2018ರಿಂದ ವಿಶಿಷ್ಟವಾಗಿ ಶಂಕರ್‌ ನಾಗ್ ಅವರ ನೆನಪನ್ನು ಮತ್ತಷ್ಟು ಹಚ್ಚಹಸಿರುಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ನವೆಂಬರ್‌ 23 ರಿಂದ 26 ರವರೆಗೆ ನಾಲ್ಕು ದಿನಗಳು ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗಮಂದಿರದಲ್ಲಿ ನಾಟಕೋತ್ಸವ ನಡೆಯಲಿದೆ.

ಪ್ರತಿ ವರ್ಷದ ಏಪ್ರಿಲ್, ಮೇ ತಿಂಗಳಲ್ಲಿ ನಡೆಯುತ್ತಿದ್ದ ಕಾರ್ಯಕ್ರಮ ಈ ಬಾರಿ ಕೊರೊನಾ ಕಾರಣದಿಂದ ನವೆಂಬರ್‌ನಲ್ಲಿ ನಡೆಯುತ್ತಿದೆ.

ರಂಗಕರ್ಮಿಗಳಾದ ರಾಜ್‌ಗುರು ಮತ್ತು ನಯನ ಸೂಡ

ಈ ನಾಟಕೋತ್ಸವದಲ್ಲಿ ಬರೀ ನಾಟಕಗಳಷ್ಟೇ ಅಲ್ಲದೆ, ಸಾಹಿತ್ಯ, ಸಂಗೀತ, ಮಹಿಳೆ ಮತ್ತು ರಂಗಭೂಮಿ, ವಿಚಾರ ಸಂಕೀರ್ಣ, ನಿರ್ದೇಶಕರೊಂದಿಗೆ ಸಂವಾದಗಳು ಸೇರಿದಂತೆ ಹತ್ತಾರ ವಿಭಿನ್ನ ಕಾರ್ಯಕ್ರಮಗಳು ನಡೆಯಲಿವೆ.

ಇದನ್ನೂ ಓದಿ: ’ಆಟೋರಾಜ’ನ ನೆನಪಲ್ಲಿ… ಶಂಕರ್ ‌ನಾಗ್‌ ನಮ್ಮನ್ನಗಲಿ ಇಂದಿಗೆ 30 ವರ್ಷ!

ಹೆಚ್ಚು ಪ್ರಯೋಗಾತ್ಮಕ ಮತ್ತು ಮಹಿಳಾ ಪ್ರಧಾನ ನಾಟಕಗಳನ್ನು ಈ ತಂಡಗಳು ಪ್ರಸ್ತುತ ಪಡಿಸಿವೆ. ಈ ಬಾರಿಯ ಶಂಕರ್ ನಾಗ್ ನಾಟಕೋತ್ಸವದ ಉದ್ಘಾಟನೆಯನ್ನು ಮಹಿಳಾ ನಿರ್ದೇಶಕಿಯರು ಮಾಡಲಿದ್ದಾರೆ. ಪ್ರತಿ ದಿನ ಸಂಜೆ 5.30 ರಿಂದ ಕಾರ್ಯಕ್ರಮಗಳು ಆರಂಭವಾಗಲಿವೆ.

ನವೆಂಬರ್ 23 ರಂದು ಸಂಜೆ ಜಾನ್ ದೇವರಾಜು ಅವರಿಂದ ’ಬ್ಲ್ಯಾಕ್ &ವೈಟ್’, ಬಾಲು ಜಂಬೆ ತಂಡದಿಂದ ’ರಿದಂ’ ಸಾತ್ವಿಕ ರಂಗತಂಡದಿಂದ ’ಸೂಫಿ ನಡಿಗೆ ತತ್ವಪದದೆಡೆಗೆ’ ಎಂಬ ಕಾರ್ಯಕ್ರಮಗಳು ನಡೆಯಲಿವೆ.

ನವೆಂಬರ್‌ 24 ರಂದು ಸಂಜೆ 5.30ಕ್ಕೆ ಲಂಕೇಶ್ ಅವರ ವಿಚಾರಗಳು ಮತ್ತು ನಾವು ಎಂಬ ವಿಚಾರಗೋಷ್ಠಿ ನಡೆಯಲಿದೆ. ನಾಗರಕಟ್ಟೆ ಮತ್ತು ಸಂಜೆ 7.45ಕ್ಕೆ ಶ್ರದ್ಧಾ ನಾಟಕ ಆರಂಭವಾಗಲಿದೆ.

ನಾಳೆಯಿಂದ ಸಂಸ ಬಯಲು ರಂಗಮಂದಿರದಲ್ಲಿ ಶಂಕರ್‌ ನಾಗ್ ನಾಟಕೋತ್ಸವ!
PC:Nayana sooda

ನವೆಂಬರ್‌ 25 ರಂದು ’ಬದುಕು ಕಲಿಸಿದ ಬೇಂದ್ರೆ’ ವಿಚಾರಗೋಷ್ಠಿ, ನಾಗರಕಟ್ಟೆ ಮತ್ತು ’ಸೋಮಾಲಿಯಾ ಕಡಲ್ಗಳ್ಳರು’ ಎಂಬ ನಾಟಕ ನಡೆಯಲಿದೆ.

ನವೆಂಬರ್‌ 26 ರಂದು ಶಂಕರ್‌ ನಾಗ್ ಅಭಿನಯಿಸಿದ್ದ ನಾಟಕಗಳ ರಂಗಗೀತೆಗಳನ್ನು ಪ್ರಸ್ತುತಪಡಿಸಲಾಗುತ್ತದೆ. ಜೊತೆಗೆ ಶಂಕರ್‌ ನಾಗ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಇವುಗಳ ನಂತರ 8 ಗಂಟೆಗೆ ಬಿದ್ದರೂರಿನ ಬಿಗ್‌ಬೆನ್ ನಾಟಕ ಪ್ರದರ್ಶನ ನಡೆಯಲಿದೆ.

ಇದನ್ನೂ ಓದಿ: ಕರ್ನಾಟಕದ ಕಾರ್ಮಿಕರು ಮತ್ತು ಜಪಾನಿ ಆಡಳಿತದ ನಡುವಿನ ತಿಕ್ಕಾಟ: ಟೊಯೋಟಾದಲ್ಲಿ ನಡೆಯುತ್ತಿರುವುದೇನು?

ನಾಟಕೋತ್ಸವದ ವಿಶೇಷ ಎಂದರೆ “ನಾಗರಕಟ್ಟೆ”. ಈ ಕಾರ್ಯಕ್ರಮದಲ್ಲಿ ಶಂಕರ್‌ ನಾಗ್ ಅವರ ನೆನಪುಗಳು ನಿಮ್ಮನ್ನು ಕಾಡುತ್ತವೆ. ಕಾರ್ಯಕ್ರದಲ್ಲಿ ಶಂಕರ್‌ನಾಗ್‌ ಜತೆ ಕೆಲಸ ಮಾಡಿದವರು, ಸ್ನೇಹಿತರು, ಒಡನಾಡಿಗಳು, ಅವರ ಪರಿಚಿತರು ಶಂಕರ್‌ನಾಗ್‌ರ ಒಡನಾಟವನ್ನು ಜ್ಞಾಪಿಸಿಕೊಳ್ಳಲಿದ್ದಾರೆ.

“ಕಾಲೇಜಿನ ದಿನಗಳಲ್ಲಿ ರಂಗಶಂಕರದ ವೇದಿಕೆಯಲ್ಲಿ ನಾನು ಅಭಿನಯಿಸುವಾಗ ಮುಂದಿನ ಸಾಲಿನಲ್ಲಿ ಕೂತಿದ್ದ ಅರುಂಧತಿ ಅಮ್ಮ “ನೀನು ಶಂಕ್ರನ ಥರಾ ಬಿಹೇವ್ ಮಾಡ್ತಿಯಾ ಕಣೋ” ಅಂದಿದ್ರು, ಈಗದು ಅವರಿಗೆ ನೆನಪಿನಲ್ಲಿರುತ್ತದೊ ಇಲ್ಲವೋ ಗೊತ್ತಿಲ್ಲಾ. ಆದರೆ, ಸತತ 15 ವರ್ಷಗಳಿಂದ ಶಂಕ್ರಣ್ಣ ನನ್ನ ಸಾತ್ವಿಕ ಮತ್ತು ರಂಗಪಯಣ ತಂಡಗಳನ್ನು ಹೇಗೆ ಆವರಿಸಿದ್ದಾರೆ ಎಂದರೆ… ಸಾತ್ವಿಕದಲ್ಲಿ “S” ಮೊದಲಕ್ಷರ, ರಂಗಪಯಣದಲ್ಲಿ “NA” ಕೊನೆ ಅಕ್ಷರ ಎರಡು ತಂಡದ ಪ್ರಾರಂಭದಿಂದ ಅಂತ್ಯದವರೆಗೂ ಅವರಿದ್ದಾರೆ” –  ರಾಜ್‌ಗುರು, ರಂಗಕರ್ಮಿ

ನಾಟಕೋತ್ಸವದ ಸಿದ್ಧತೆಯಲ್ಲಿ ರಂಗತಂಡದ ಸದಸ್ಯರು

“ನಾಟಕೋತ್ಸವದಲ್ಲಿ ಕೊರೊನಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಕಾರ್ಯಕ್ರಮ ನಡೆಸಲಾಗುತ್ತಿದೆ. ಈಗಾಗಲೇ ನಾಟಕೋತ್ಸವಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಾಟಕೋತ್ಸವಕ್ಕೆ ಪ್ರವೇಶ ಉಚಿತವಾಗಿದ್ದು, ಮೊದಲು ಬಂದವರಿಗೆ ಆದ್ಯತೆ, ಹಾಗಾಗಿಯೇ ಪಾಸ್‌ಗಳನ್ನು ವಿತರಿಸಲಾಗಿದೆ. ಮಾಸ್ಕ್, ದೈಹಿಕ ಅಂತರ ಕಡ್ಡಾಯ” ಎಂದು ನಾಟಕೋತ್ಸವದ ನಿರ್ವಹಣೆ ನೋಡಿಕೊಳ್ಳುತ್ತಿರುವ ರಂಗಕರ್ಮಿ ನಯನ ಸೂಡ ತಿಳಿಸಿದ್ದಾರೆ.


ಇದನ್ನೂ ಓದಿ: ಪುಸ್ತಕ ವಿಮರ್ಶೆ: ಜಾತಿ ಬಂತು ಹೇಗೆ? ಕರ್ನಾಟಕದಲ್ಲಿ ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆಯ ಉಗಮ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...