Homeಮುಖಪುಟಕಾಂಗ್ರೆಸ್‌ನೊಡನೆ ಶಿವಸೇನೆ ಮೈತ್ರಿಗೆ ಬೇಸೆತ್ತು ರಾಜಿನಾಮೆ ನೀಡಿದ ಕಾರ್ಯಕರ್ತ...

ಕಾಂಗ್ರೆಸ್‌ನೊಡನೆ ಶಿವಸೇನೆ ಮೈತ್ರಿಗೆ ಬೇಸೆತ್ತು ರಾಜಿನಾಮೆ ನೀಡಿದ ಕಾರ್ಯಕರ್ತ…

- Advertisement -
- Advertisement -

ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆ ಕೈಜೋಡಿಸಿದ್ದಕ್ಕೆ ಬೇಸರಗೊಂಡ ಕಾರ್ಯಕರ್ತನೊಬ್ಬ ರಾಜಿನಾಮೆ ನೀಡಿದ ವಿದ್ಯಾಮಾನ ಮಂಗಳವಾರ ರಾತ್ರಿ ಜರುಗಿದೆ.

ಶಿವಸೇನೆಯ ರಮೇಶ್ ಸೋಲಂಕಿ ತಮ್ಮ ರಾಜೀನಾಮೆಯನ್ನು ಟ್ವಿಟ್ಟರ್‌ನಲ್ಲಿ ಘೋಷಿಸಿದ್ದಾರೆ. “ನಾನು ಬಿವಿಎಸ್ /ಯುವಸೇನಾ ಮತ್ತು ಶಿವಸೇನಾದ ನನ್ನ ಗೌರವಾನ್ವಿತ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ. ಮುಂಬೈ, ಮಹಾರಾಷ್ಟ್ರ ಮತ್ತು ಹಿಂದೂಸ್ತಾನದ ಜನರಿಗೆ ಕೆಲಸ ಮಾಡಲು ಮತ್ತು ಸೇವೆ ಮಾಡಲು ನನಗೆ ಅವಕಾಶ ನೀಡಿದ್ದಕ್ಕಾಗಿ ನಾನು ಉದ್ಧವ್‌ ಠಾಕ್ರೆ ಮತ್ತು ಆದಿತ್ಯಾ ಠಾಕ್ರೆಯವರಿಗೆ ಧನ್ಯವಾದ ಅರ್ಪಿಸುತ್ತೇನೆ” ಎಂದು ಅವರು ಬರೆದುಕೊಂಡಿದ್ದಾರೆ.

“ನನ್ನ ಪ್ರಜ್ಞೆ ಮತ್ತು ಸಿದ್ಧಾಂತವು ಕಾಂಗ್ರೆಸ್ ಜೊತೆ ಕೆಲಸ ಮಾಡಲು ನನಗೆ ಅವಕಾಶ ನೀಡುವುದಿಲ್ಲ. ನಾನು ಅರೆಮನಸ್ಸಿನಿಂದ ಕೆಲಸ ಮಾಡಲು ಸಾಧ್ಯವಿಲ್ಲ” ಎಂದು ಅವರು ಮತ್ತೊಂದು ಟ್ವೀಟ್ ಮಾಡಿದ್ದಾರೆ.

ಬಹಳ ಹೆಮ್ಮೆಯ ಹಿಂದೂ ಭಾರತೀಯ ರಾಷ್ಟ್ರೀಯವಾದಿ ಎಂದು ತನ್ನನ್ನು ಟ್ವಿಟ್ಟರ್‌ನಲ್ಲಿ ಪರಿಚಯಿಸಿಕೊಂಡಿರುವ ಅವರು ಯುವ ಶಿವಸೇನೆಯಲ್ಲಿ  ತೊಡಗಿಸಿಕೊಂಡಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾದ ವಿರೋಧ ಪಕ್ಷಗಳು: ವರದಿ

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ವಿರುದ್ಧ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ವಿಪಕ್ಷ ಸಂಸದರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ 'ಅನಿರೀಕ್ಷಿತ ಕೃತ್ಯ' ಎಸಗಲು ಸಂಚು...

ಮೆಟಾ-ವಾಟ್ಸಾಪ್ ಗೌಪ್ಯತೆ ನೀತಿ ಪ್ರಕರಣ: ಸುಪ್ರೀಂ ಕೋರ್ಟ್ ವಿಚಾರಣೆ ಫೆಬ್ರವರಿ 23ಕ್ಕೆ ಮುಂದೂಡಿಕೆ 

ನವದೆಹಲಿ: ಗೌಪ್ಯತೆ ನೀತಿಯ ಮೇಲೆ 213.14 ಕೋಟಿ ರೂ. ದಂಡ ವಿಧಿಸಿದ ಭಾರತೀಯ ಸ್ಪರ್ಧಾ ಆಯೋಗದ (ಸಿಸಿಐ) ಆದೇಶದ ವಿರುದ್ಧ ಮೆಟಾ ಪ್ಲಾಟ್‌ಫಾರ್ಮ್ಸ್ ಇಂಕ್ ಮತ್ತು ವಾಟ್ಸಾಪ್ ಸಲ್ಲಿಸಿದ ಅರ್ಜಿಗಳನ್ನು ಸುಪ್ರೀಂ ಕೋರ್ಟ್...

ಪ್ರಬಲಜಾತಿ ಯುವತಿಯೊಂದಿಗೆ ಗ್ರಾಮ ತೊರೆದ ದಲಿತ ಯುವಕ; ಕುಟುಂಬದ ಮೇಲೆ ದಾಳಿ ಮಾಡಿದ ಹದಿಮೂರು ಜನರ ಬಂಧನ

ಸೂರತ್ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ಮಹಿಳೆ ಮತ್ತು ಆಕೆಯ ಇಬ್ಬರು ವಯಸ್ಕ ಮಕ್ಕಳ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಗುಜರಾತ್ ಪೊಲೀಸರು ಶನಿವಾರ ಒಂದೇ ಕುಟುಂಬದ 13 ಸದಸ್ಯರನ್ನು ಬಂಧಿಸಿದ್ದಾರೆ. ಆಕೆಯ...

‘ದೆಹಲಿ ಖಾಲಿಸ್ತಾನವಾಗಲಿದೆ’: 10 ಶಾಲೆಗಳು, ಸಂಸತ್ತಿಗೆ ಬಾಂಬ್ ಬೆದರಿಕೆ ಇಮೇಲ್ ಬಂದ ನಂತರ ವಿದ್ಯಾರ್ಥಿಗಳ ಸ್ಥಳಾಂತರ

ಸೋಮವಾರ ರಾಷ್ಟ್ರ ರಾಜಧಾನಿ ಮತ್ತು ಸಂಸತ್ತಿನ ಕನಿಷ್ಠ 10 ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿದ್ದು, ಭಾರಿ ಭದ್ರತಾ ಪ್ರತಿಕ್ರಿಯೆ ನೀಡಲಾಗಿದೆ ಎಂದು ದೆಹಲಿ ಅಗ್ನಿಶಾಮಕ ಸೇವೆಗಳು (ಡಿಎಫ್‌ಎಸ್) ತಿಳಿಸಿವೆ. ಡಿಎಫ್‌ಎಸ್ ಪ್ರಕಾರ, ಬೆಳಿಗ್ಗೆ...

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ರೈತರ ಪಾಲಿಗೆ ಮರಣಶಾಸನ: ಸಿಎಂ ಸಿದ್ದರಾಮಯ್ಯ

ಭಾರತ ಮತ್ತು ಅಮೆರಿಕ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದವನ್ನು ಒಪ್ಪಿಕೊಂಡು ಸ್ವಾಗತಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಸಂಪೂರ್ಣ ಶರಣಾಗಿದ್ದಾರೆ. ಮುಂದಿನ ದಿನಗಳಲ್ಲಿ ಈ ಒಪ್ಪಂದ 140 ಕೋಟಿ ಭಾರತೀಯರಿಗೆ, ಅದರಲ್ಲಿಯೂ...

ಉತ್ತರ ಪ್ರದೇಶ| ಜಾತಿ ನಿಂದನೆ-ಹಲ್ಲೆ; ದೃಷ್ಟಿ ಕಳೆದುಕೊಂಡ ದಲಿತ ಯುವಕ

ಕಾಲುವೆ ಬಳಿ ಮಲವಿಸರ್ಜನೆ ಮಾಡುತ್ತಿದ್ದ ದಲಿತ ಯುವಕನ ಜೊತೆಗೆ ನಡೆದ ಜಗಳ ತೀವ್ರಗೊಂಡು, ದಾಳಿಕೋರನೊಬ್ಬ ಮೋಟಾರ್ ಸೈಕಲ್ ಕೀಲಿಯಿಂದ ಚುಚ್ಚಿದ ಪರಿಣಾಮ ಆತ ಒಂದು ಕಣ್ಣಿನ ದೃಷ್ಠಿ ಕಳೆದುಕೊಂಡಿದ್ದಾರೆ. 20 ರ ಹರೆಯದ...

ಮಣಿಪುರದ ಉಖ್ರುಲ್‌ನಲ್ಲಿ ಬುಡಕಟ್ಟು ಸಮುದಾಯಗಳ ನಡುವೆ ಉದ್ವಿಗ್ನತೆ: ಸಶಸ್ತ್ರ ಗುಂಪುಗಳಿಂದ ನಾಗಾ, ಕುಕಿ ಮನೆಗಳಿಗೆ ಬೆಂಕಿ

ಮಣಿಪುರದ ತಂಗ್ಖುಲ್ ನಾಗಾ ಮತ್ತು ಕುಕಿ ಸಮುದಾಯಗಳ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ, ಸೋಮವಾರ ಉಖ್ರುಲ್ ಜಿಲ್ಲೆಯಲ್ಲಿ ಹಲವಾರು ಸಶಸ್ತ್ರ ಉಗ್ರಗಾಮಿಗಳು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಮಧ್ಯರಾತ್ರಿಯ ಸುಮಾರಿಗೆ ಲಿಟಾನ್ ಸರೈಖಾಂಗ್ ಗ್ರಾಮದಲ್ಲಿ ಎರಡೂ...

ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ಹೈಕೋರ್ಟ್ ನೋಟಿಸ್ : ಏನಿದು ಹೊಸ ಬೆಳವಣಿಗೆ?

ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ವಿಶೇಷ ಸಿಬಿಐ ನ್ಯಾಯಾಲಯ ಹೊರಡಿಸಿದ ನಿರ್ದೇಶನಗಳನ್ನು ಜಾರಿಗೆ ತರುವಂತೆ ಕೋರಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ, ಕರ್ನಾಟಕ ಹೈಕೋರ್ಟ್ ಕೇಂದ್ರ ತನಿಖಾ ದಳ (ಸಿಬಿಐ)...

‘ಭಾರತ-ಅಮೆರಿಕ ವ್ಯಾಪಾರ ಒಪ್ಪಂದವು ದೇಶದ ಸಾರ್ವಭೌಮತ್ವದ ಮೇಲಿನ ದಾಳಿ’: ಸಿಪಿಎಂ

ಭಾರತ-ಅಮೆರಿಕ ವ್ಯಾಪಾರ ಒಪ್ಪಂದವು ದೇಶದ ಸಾರ್ವಭೌಮತ್ವದ ಮೇಲಿನ ದಾಳಿಯಾಗಿದೆ ಎಂದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸಿಸ್ಟ್ (ಸಿಪಿಎಂ) ಭಾನುವಾರ ಹೇಳಿದೆ. ಕೇಂದ್ರವನ್ನು ಟೀಕಿಸಿದ ಪಕ್ಷವು, ಅಮೆರಿಕದೊಂದಿಗಿನ ಒಪ್ಪಂದವು "ಬಿಜೆಪಿ ನೇತೃತ್ವದ ಸರ್ಕಾರದ ನಾಚಿಕೆಗೇಡಿನ ಶರಣಾಗತಿ"...

ತೆಲಂಗಾಣ ಎಫ್‌ಎಸ್‌ಎಲ್‌ನಲ್ಲಿ ಬೆಂಕಿ : ಸಾಕ್ಷ್ಯ ನಾಶದ ಶಂಕೆ ವ್ಯಕ್ತಪಡಿಸಿದ ಬಿಆರ್‌ಎಸ್‌

ಹೈದರಾಬಾದ್‌ನ ನಾಂಪಲ್ಲಿಯಲ್ಲಿರುವ ತೆಲಂಗಾಣ ರಾಜ್ಯ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ (ಟಿಎಸ್‌ಎಫ್‌ಎಸ್‌ಎಲ್‌) ಶನಿವಾರ (ಫೆ.7) ಬೆಂಕಿ ಅವಘಡ ಸಂಭವಿಸಿದ್ದು, ಪ್ರತಿಪಕ್ಷ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಪ್ರಮುಖ ಪ್ರಕರಣಗಳ ಸಾಕ್ಷ್ಯ ನಾಶದ ಶಂಕೆ ವ್ಯಕ್ತಪಡಿಸಿದೆ....