Homeಮುಖಪುಟಪೌರತ್ವ ತಿದ್ದುಪಡಿ ಮಸೂದೆ ಬಿಜೆಪಿಯ ವೋಟ್‌ ಬ್ಯಾಂಕ್‌ ಗಿಮಿಕ್‌ ಅಷ್ಟೇ: ಶಿವಸೇನೆ

ಪೌರತ್ವ ತಿದ್ದುಪಡಿ ಮಸೂದೆ ಬಿಜೆಪಿಯ ವೋಟ್‌ ಬ್ಯಾಂಕ್‌ ಗಿಮಿಕ್‌ ಅಷ್ಟೇ: ಶಿವಸೇನೆ

ಹಿಂದೂ - ಮುಸ್ಲಿಮರ ಅದೃಶ್ಯ ವಿಭಜನೆಗೆ ಪೌರತ್ವ ತಿದ್ದುಪಡಿ ಮಸೂದೆ ದಾರಿ ಮಾಡಿಕೊಡಲಿದೆ ಎಂದು ಶಿವಸೇನೆ ಆರೋಪಿಸಿದೆ.

- Advertisement -
- Advertisement -

ಗೃಹ ಸಚಿವ ಅಮಿತ್ ಶಾ ಅವರು ಇಂದು ಸಂಸತ್ತಿನಲ್ಲಿ ಪೌರತ್ವ ತಿದ್ದುಪಡಿ ಮಸೂದೆಯನ್ನು ಮಂಡಿಸುವ ಮುನ್ನ, ಮಾಜಿ ಮಿತ್ರ ಪಕ್ಷವಾದ ಶಿವಸೇನೆ ಹಿಂದೂಗಳು ಮತ್ತು ಮುಸ್ಲಿಮರ “ಅದೃಶ್ಯ ವಿಭಜನೆಯನ್ನು” ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ.

ಆಯ್ದ ಕೆಲವರಿಗೆ ಮಾತ್ರ ಪೌರತ್ವ ನೀಡುವುದು ದೇಶದಲ್ಲಿ ಧಾರ್ಮಿಕ ಯುದ್ಧಕ್ಕೆ ಪ್ರಚೋದಕವಾಗಿ ಕಾರ್ಯನಿರ್ವಹಿಸುತ್ತದೆಯೇ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ತೀಕ್ಷ್ಣವಾಗಿ ಪ್ರಶ್ನಿಸಿದೆ.

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಮುಸ್ಲಿಮೇತರ ನಿರಾಶ್ರಿತರಿಗೆ ಭಾರತೀಯ ಪ್ರಜೆಗಳಾಗಲು ಸುಲಭವಾಗುವಂತೆ ಆರು ದಶಕಗಳಷ್ಟು ಹಳೆಯದಾದ ಕಾನೂನನ್ನು ಪೌರತ್ವ ತಿದ್ದುಪಡಿ ಮಸೂದೆ ಯತ್ನಿಸಿದೆ. ಅನೇಕ ವಿರೋಧ ಪಕ್ಷಗಳು ಪ್ರಸ್ತಾವಿತ ಕಾನೂನನ್ನು ತಾರತಮ್ಯವೆಂದು ಕರೆಯುತ್ತವೆ ಮತ್ತು ಇದು ಭಾರತದ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಜಾತ್ಯತೀತತೆಯ ಮೂಲ ಸಿದ್ಧಾಂತಕ್ಕೆ ವಿರುದ್ಧವಾಗಿದೆ ಎಂದು ಆರೋಪಿಸಿವೆ.

ಮಹಾರಾಷ್ಟ್ರದಲ್ಲಿ ಅಧಿಕಾರ ಹಂಚಿಕೆಯ ವಿಷಯದಲ್ಲಿನ ವಿರೋಧದಿಂದಾಗಿ ನಾಲ್ಕು ದಶಕಗಳ ಮಿತ್ರಪಕ್ಷವಾದ ಬಿಜೆಪಿಯೊಂದಿಗೆ ಮೈತ್ರಿ ಕೈಬಿಟ್ಟ ಶಿವಸೇನೆ ಮತ್ತು ಅಂತಿಮವಾಗಿ ಎನ್‌ಸಿಪಿ ಮತ್ತು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದೆ. ಈಗ ವಿರೋಧ ಪಕ್ಷಗಳ ಪೌರತ್ವ ತಿದ್ದುಪಡಿಯ ವಿರೋಧಕ್ಕೆ ಅದು ಕೂಡ ಕೋರಸ್‌ ನೀಡುತ್ತಿದೆ.

ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯೂ ಈ ಮಸೂದೆಯನ್ನು ತರುತ್ತಿರುವುದು “ಮತ ಬ್ಯಾಂಕ್ ರಾಜಕೀಯ” ಉದ್ದೇಶದಿಂದಲೇ ಹೊರತು ದೇಶದ ಹಿತದೃಷ್ಟಿಯಿಂದಲ್ಲ ಎಂದು ಅವರು ಹೇಳಿದ್ದಾರೆ.

“ಭಾರತದಲ್ಲಿ ಈಗ ಸಮಸ್ಯೆಗಳ ಕೊರತೆಯಿಲ್ಲ. ಆದರೆ ಇಂತಹ ಸಮಯದಲ್ಲಿ ಪೌರತ್ವ ತಿದ್ದುಪಡಿಯಂತಹ ಹೊಸದನ್ನು ಆಹ್ವಾನಿಸುತ್ತಿದ್ದೇವೆ. ಮಸೂದೆಯೂ ಕೇಂದ್ರವು ಹಿಂದೂ ಮತ್ತು ಮುಸ್ಲಿಮರ ಅದೃಶ್ಯ ವಿಭಜನೆಯನ್ನು ಮಾಡುತ್ತದೆ ಎಂದು ಶಿವಸೇನೆ ಆರೋಪಿಸಿದೆ.

“ಹಿಂದೂಗಳನ್ನು ಹೊರತುಪಡಿಸಿ ಹಿಂದೂಗಳಿಗೆ ಬೇರೆ ದೇಶವಿಲ್ಲ ಎಂಬುದು ನಿಜ. ಆದರೆ ಅಕ್ರಮ ವಲಸಿಗರಲ್ಲಿ ಹಿಂದೂಗಳನ್ನು ಮಾತ್ರ ಸ್ವೀಕರಿಸುವ ಮೂಲಕ ಅದು ದೇಶದಲ್ಲಿ ಧಾರ್ಮಿಕ ಯುದ್ಧದ ಪ್ರಚೋದನೆಯಾಗಬಹುದೇ?” ಎಂದು ಶಿವಸೇನೆ ಪ್ರಶ್ನಿಸಿದೆ.

ಲೋಕಸಭೆಯಲ್ಲಿ 18 ಸಂಸದರನ್ನು ಹೊಂದಿರುವ ಶಿವಸೇನೆ, ಈಶಾನ್ಯ ಪ್ರದೇಶದ ಹೆಚ್ಚಿನ ರಾಜ್ಯಗಳು, ಬಿಹಾರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಈ ಮಸೂದೆಯನ್ನು ದೀರ್ಘಕಾಲ ವಿರೋಧಿಸಿವೆ ಎಂಬ ಉಹಾಹರಣೆಯನ್ನು ನೀಡಿದೆ.

ಅದೇ ಸಮಯದಲ್ಲಿ, ಪಾಕಿಸ್ತಾನದಲ್ಲಿ ಹಿಂದೂಗಳಿಗೆ ತೊಂದರೆ ಕೊಡುವಂತೆ, ಹಿಂದೂಗಳಿಗೆ ಹಿಂಸೆ ನೀಡುವ ಕೆಲವು ನೆರೆಯ ರಾಷ್ಟ್ರಗಳ ವಿರುದ್ಧ ಬಲವಾದ ಕ್ರಮ ತೆಗೆದುಕೊಳ್ಳುವಂತೆ ಶಿವಸೇನೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್ ಜೊತೆಗಿನ ಮಾತುಕತೆಗಳು ಫಲಪ್ರದವಾಗಿವೆ, ಐದು ದಿನಗಳ ಕಾಲ ದಾಳಿ ಮಾಡದಂತೆ ಸೂಚಿಸಿದ್ದೇನೆ : ಟ್ರಂಪ್

ಕಳೆದ ಎರಡು ದಿನಗಳಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ನಡೆದ ಮಾತುಕತೆಗಳು ಫಲಪ್ರದವಾಗಿವೆ. ಆದ್ದರಿಂದ ಇರಾನ್‌ನ ಇಂಧನ ಕೇಂದ್ರಗಳ ಮೇಲಿನ ಅಮೆರಿಕದ ದಾಳಿಯನ್ನು ಐದು ದಿನಗಳವರೆಗೆ ಮುಂದೂಡಲು ಸೂಚಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್...

ಎಸ್‌ಐಆರ್ ದೂರಾಲೋಚನೆ ಅಲ್ಲ, ಸಿಎಎ-ಎನ್‌ಆರ್‌ಸಿ ಜಾರಿಗೊಳಿಸುವ ದುರಾಲೋಚನೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುವುದು 'ದೂರಾಲೋಚನೆ'ಯಲ್ಲ, ಬದಲಿಗೆ ಅದು ಸಿಎಎ-ಎನ್‌ಅರ್‌ಸಿಯನ್ನು ಜಾರಿಗೊಳಿಸುವ 'ದುರಾಲೋಚನೆ'ಯನ್ನು ತನ್ನ ಒಡಲಲ್ಲಿಟ್ಟಿಕೊಂಡಿದೆ. ಮೊಕದ್ದಮೆಗಳ ವಿಚಾರಣೆಯು ಸುಪ್ರೀಂ ಕೋರ್ಟಿನಲ್ಲಿರುವಾಗ ಕರ್ನಾಟಕದಲ್ಲಿ ತರಾರುರಿಯಲ್ಲಿ ಎಸ್‌ಐಆರ್ ಪ್ರಕ್ರಿಯೆಯನ್ನು ನಡೆಸಬಾರದು...

ಸ್ವಘೋಷಿತ ದೇವಮಾನವನ ಖರಾತ್ ವಿರುದ್ಧ ಮತ್ತೆರಡು ಎಫ್‌ಐಆರ್ : ಗರ್ಭಿಣಿ ಮೇಲೆ ಅತ್ಯಾಚಾರವೆಸಗಿದ ಆರೋಪ

ಅತ್ಯಾಚಾರ ಸೇರಿದಂತೆ ಹಲವು ಕ್ರಿಮಿನಲ್ ಆರೋಪಗಳ ಮೇಲೆ ಈಗಾಗಲೇ ಬಂಧಿತನಾಗಿರುವ ಸ್ವಘೋಷಿತ ದೇವಮಾನವ ಹಾಗೂ ಜ್ಯೋತಿಷಿ ಅಶೋಕ್ ಖರಾತ್ ವಿರುದ್ಧ ಮಹಾರಾಷ್ಟ್ರದ ನಾಸಿಕ್‌ನ ಸರ್ಕಾರವಾಡಾ ಪೊಲೀಸರು ಶನಿವಾರ (ಮಾ.21) ಎರಡು ಹೊಸ ಅತ್ಯಾಚಾರ...

ದಲಿತ ಮಹಿಳೆ ಮೇಲೆ ಸಾರ್ವಜನಿಕವಾಗಿ ಹಲ್ಲೆ; ಹಾಡಗಲೇ ಕೂದಲಿಡಿದು ಎಳೆದಾಡಿದ ಪಂಜಾಬ್ ಪೊಲೀಸರು

ಪಂಜಾಬ್‌ನ ಜಲಂಧರ್‌ನಲ್ಲಿ ಕಳೆದ ಶುಕ್ರವಾರ (ಮಾ.20), ಪೊಲೀಸ್ ಅಧಿಕಾರಿಯೊಬ್ಬರು ದಲಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಹಲ್ಲೆ ನಡೆಸಿ ಕೂದಲು ಹಿಡಿದು ಎಳೆದಾಡಿದ್ದಾರೆ ಎಂದು 'ಸಿಯಾಸಾಟ್.ಕಾಮ್' ವರದಿ ಮಾಡಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ...

ನ್ಯೂಯಾರ್ಕ್‌ನ ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಏರ್ ಕೆನಡಾ ಎಕ್ಸ್‌ಪ್ರೆಸ್ ವಿಮಾನ; ಇಬ್ಬರು ಸಾವು

ಭಾನುವಾರ ತಡರಾತ್ರಿ ನ್ಯೂಯಾರ್ಕ್‌ನ ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಸುಮಾರು 76 ಜನರನ್ನು ಹೊತ್ತೊಯ್ಯುತ್ತಿದ್ದ ಏರ್ ಕೆನಡಾ ಎಕ್ಸ್‌ಪ್ರೆಸ್ ವಿಮಾನವು ನೆಲದ ಮೇಲೆ ಚಲಿಸುತ್ತಿದ್ದ ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪೈಲಟ್ ಮತ್ತು...

‘ತೀರ್ಮಾನಿಸಲು ಏನೂ ಉಳಿದಿಲ್ಲ’ : ಸೋನಮ್ ವಾಂಗ್ಚುಕ್ ಬಂಧನ ಪ್ರಶ್ನಿಸಿದ್ದ ಅರ್ಜಿ ವಿಲೇವಾರಿ ಮಾಡಿದ ಸುಪ್ರೀಂ ಕೋರ್ಟ್

ಲಡಾಖ್‌ನ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯಲ್ಲಿ ಬಂಧಿಸಿರುವುದನ್ನು ಪ್ರಶ್ನಿಸಿ ಅವರ ಪತ್ನಿ ಗೀತಾಂಜಲಿ ಅಂಗ್ಮೋ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ (ಮಾ.23)...

ಡೋನಾಲ್ಡ್‌ ಟ್ರಂಪ್ ಕಠಿಣ ವೀಸಾ ನೀತಿಗಳಿಂದ ಸಂಕಷ್ಟಕ್ಕೆ ಸಿಲುಕಿದ ಭಾರತ-ಚೀನಾ

ಡೊನಾಲ್ಡ್‌ ಟ್ರಂಪ್ ಆಡಳಿತವು ಅನಾವರಣಗೊಳಿಸಿದ ಕಠಿಣ ವಲಸೆ ನೀತಿಯ ಗರಿಷ್ಠ ಹೊರೆಯು ಭಾರತ ಮತ್ತು ಚೀನಾ ದೇಶಗಳ ಮೇಲೆ ಬಿದ್ದಿದೆ. 2024 ರ ಅದೇ ಅವಧಿಗೆ ಹೋಲಿಸಿದರೆ 2025 ರ ಮೊದಲ ಎಂಟು...

ಉತ್ತರಾಖಂಡ| ಪೌರಿಯಲ್ಲಿ ಅಂಬೇಡ್ಕರ್ ಪ್ರತಿಮೆ ವಿರೂಪ; ದೂರು ದಾಖಲು

ಉತ್ತರಾಖಂಡದ ಪೌರಿ ಜಿಲ್ಲೆಯಲ್ಲಿ ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯನ್ನು ವಿರೂಪಗೊಳಿಸಿದ ನಂತರ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು (ಮಾ.22) ತಿಳಿಸಿದ್ದಾರೆ. ಮಾರ್ಚ್ 21 ರ ಶನಿವಾರ ಸಂಜೆ 4 ಗಂಟೆ ಸುಮಾರಿಗೆ ಅಲಕನಂದಾ...

ಅಸ್ಸಾಂ : ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಸಚಿವೆ ನಂದಿತಾ ಗರ್ಲೋಸಾ

ಅಸ್ಸಾಂನ ಬಿಜೆಪಿ ಸರ್ಕಾರದಲ್ಲಿ ಸಚಿವೆಯಾಗಿದ್ದ ನಂದಿತಾ ಗರ್ಲೋಸಾ ಅವರು ಭಾನುವಾರ (ಮಾ.22) ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ವಿಧಾನಸಭೆ ಚುನಾವಣೆಗೆ ಟಿಕೆಟ್ ನಿರಾಕರಿಸಿದ ಹಿನ್ನೆಲೆ ನಂದಿತಾ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ನಂದಿತಾ ಅವರು ಪ್ರತಿನಿಧಿಸುತ್ತಿದ್ದ...

ಉತ್ತರ ಪ್ರದೇಶ| ವಾಲ್ಮೀಕಿ ಸಮುದಾಯದ ವಿರುದ್ಧ ಹೇಳಿಕೆ; ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಬಂಧನ

ವಾಲ್ಮೀಕಿ ಸಮುದಾಯದ ವಿರುದ್ಧ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ನೀಡಿದ ಆಕ್ಷೇಪಾರ್ಹ ಹೇಳಿಕೆ ಆಕ್ರೋಶ ವ್ಯಕ್ತವಾಗಿದ್ದು, ಸಮುದಾಯದಿಂದ ಪ್ರತಿಭಟನೆ ಮತ್ತು ರಸ್ತೆ ತಡೆಗೆ ಕಾರಣವಾದ ನಂತರ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನೌಗವಾನ್ ಪಕ್ಡಿಯಾ...