Homeಮುಖಪುಟಆಕಾಶ ವೀಕ್ಷಣೆ: ದಿಗುವಳಯದಲಿ ಧೂಮಕೇತುಗಳೊಗೆದವೆನಲುತ್ಪಾತ ಕೋಟಿ...

ಆಕಾಶ ವೀಕ್ಷಣೆ: ದಿಗುವಳಯದಲಿ ಧೂಮಕೇತುಗಳೊಗೆದವೆನಲುತ್ಪಾತ ಕೋಟಿ…

ಜಮಿನಾಯ್ಡ್ಸ್ ಈ ತಿಂಗಳ 20ರವರೆಗೂ ಪ್ರತಿರಾತ್ರಿ ಕಾಣಿಸುತ್ತಿದ್ದರೂ, ಹೆಚ್ಚು ತೀವ್ರವಾಗುವುದು ಡಿಸೆಂಬರ್ 13 ಮತ್ತು 14ರ ರಾತ್ರಿಯಂದು. ಅದರಲ್ಲೂ, ಬೆಳಗಿನ ಜಾವದ 2 ಗಂಟೆಯ ಆಸುಪಾಸಿಗೆ.

- Advertisement -
- Advertisement -

(ಆಕಾಶ ವೀಕ್ಷಣೆ: ಡಿಸೆಂಬರ್ 09-16)

ಸೈಕ್ಲೋನ್ ಇಲ್ಲದ ಸಮಯದಲ್ಲಿ ಆಕಾಶ ಸ್ಪಷ್ಟವಾಗಿ ಕಾಣುತ್ತದೆ ಎಂಬುದು ಡಿಸೆಂಬರ್ ತಿಂಗಳು ಆಕಾಶ ವೀಕ್ಷಣೆಗೆ ಪ್ರಶಸ್ತ ಕಾಲ ಎಂಬುದು ಒಂದು ಕಾರಣವಾದರೆ, ಈ ತಿಂಗಳ ರಾತ್ರಿಯ ಆಕಾಶದಲ್ಲಿ ವರ್ಷದ ಹೆಚ್ಚು ಪ್ರಕಾಶಮಾನವಾದ ಉಲ್ಕಾಪಾತವನ್ನು (Meteor Shower) ಕಣ್ತುಂಬಿಕೊಳ್ಳುವ ಸದವಕಾಶವಿರುವುದು ಮತ್ತೊಂದು ಕಾರಣ. ಈ ಉಲ್ಕಾಪಾತವನ್ನು ನೋಡುವುದಕ್ಕೆ ಯಾವ ಉಪಕರಣವು ಬೇಡ, ಬರಿಗಣ್ಣಿನಿಂದಲೇ ನೋಡಬಹುದು. ಆಕಾಶ ವೀಕ್ಷಣೆಯಲ್ಲಿ ಉಲ್ಕಾಪಾತದ ವೀಕ್ಷಣೆಯು ಬಹಳ ಉಲ್ಲಾಸದ ಮತ್ತು ಎಲ್ಲರೂ ಒಟ್ಟುಗೂಡಿ ನೋಡುವ ಒಂದು ವಿದ್ಯಮಾನ.

ಉಲ್ಕೆಗಳು, ಉಲ್ಕಾಪಾತ ಎಂದರೇನು?

ಸೂರ್ಯನ ಸುತ್ತ ಗ್ರಹಗಳು ಹೇಗೆ ಸುತ್ತುತ್ತಿವೆಯೋ, ಹಾಗೆಯೇ ಅನೇಕ ಧೂಮಕೇತುಗಳು ಮತ್ತು ಗಾತ್ರದಲ್ಲಿ ಚಿಕ್ಕದಾಗಿರುವ ಆಕಾಶಕಾಯಗಳು ಕೂಡ ಸುತ್ತುತ್ತಿವೆ. ಇವುಗಳಲ್ಲಿ ಧೂಮಕೇತುಗಳು ವಿಶೇಷವಾದವು. ಧೂಮಕೇತುಗಳು ದೀರ್ಘ ಅಂಡಾಕಾರದ ವೃತ್ತದಲ್ಲಿ, ಸೌರಮಂಡಲದ ಹೊರಭಾಗದಿಂದ ಸೂರ್ಯನ ಬಳಿ ಬಂದುಹೋಗುತ್ತವೆ. ಹೀಗೆ ಧೂಮಕೇತುಗಳು ಸೂರ್ಯನ ಬಳಿ ಬಂದಾಗ, ಸೂರ್ಯನ ಶಾಖದಿಂದ ಅವುಗಳಲ್ಲಿ ಇರುವ ವಸ್ತುಗಳು ಆವಿಯಾಗಿ ಸೂರ್ಯ ಇರುವ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತವೆ. ಇದು, ಧೂಮಕೇತುವಿಗೆ ಬಾಲವಾಗುತ್ತದೆ. ಧೂಮಕೇತು ಹೆಚ್ಚು ಹೆಚ್ಚು ಸೂರ್ಯನ ಹತ್ತಿರ ಸಮೀಪಿಸಿದಂತೆ, ಅದರ ಬಾಲವು ದೊಡ್ಡದಾಗುತ್ತಾ ಹೋಗುತ್ತದೆ. ಭೂಮಿಯಿಂದ ಆಕಾಶದಲ್ಲಿ ಈ ಬಾಲಾಂಕೃತ ಅತಿಥಿಗಳನ್ನು ಬರಿಗಣ್ಣಿನಿಂದ ಕಾಣಬಹುದಾಗಿರುತ್ತದೆ. ಹೀಗೆ ಸೂರ್ಯನ ಬಳಿ ಬಂದು ಹೋದ ಧೂಮಕೇತುಗಳು, ಅದರ ಕಕ್ಷೆಯಲ್ಲಿ ಚಿಕ್ಕಚಿಕ್ಕ ಶಿಲೆಗಳನ್ನು (ಹೆಚ್ಚಾಗಿ ಧೂಮಕೇತುವಿನ ಧೂಳಿನ ಕಣಗಳು, icy bodies, ಕ್ಷುದ್ರ ಗ್ರಹಗಳ ಸಣ್ಣಸಣ್ಣ ಕಲ್ಲು) ಚದುರಿಸಿ ಹೋಗಿರುತ್ತವೆ. ಇವನ್ನು ಉಲ್ಕೆಗಳು(Metor) ಎಂದು ಕರೆಯುತ್ತೇವೆ.

ಭೂಮಿಯು ಸೂರ್ಯನ ಸುತ್ತ ಸುತ್ತುವ ಪಥದಲ್ಲಿ ಇಂತಹ ಚದುರಿದ ಉಲ್ಕೆಗಳಿರುವ ಪ್ರದೇಶದ ಮೋಡದೊಳಗೆ ಹಾದುಹೋದಾಗ, ಈ ಉಲ್ಕೆಗಳು ಭೂಮಿಯ ವಾತಾವರಣಕ್ಕೆ ಪ್ರವೇಶಿಸಿ, ವಾತಾವರಣದ ಘರ್ಷಣೆಯ ಕಾರಣದಿಂದ ಉರಿದು ಬೂದಿಯಾಗುತ್ತವೆ. ಈ ಪ್ರಕ್ರಿಯೆ, ಭೂಮಿಯ ಆಕಾಶದಲ್ಲಿ, ನಕ್ಷತ್ರವು ಕೆಳಗೆ ಬಿದ್ದಿತೇನೋ ಎಂಬಂತೆ, ಮಿಂಚಿನ ಒಂದು ಸಣ್ಣ ಬೆಂಕಿಯಗೆರೆಯಂತೆ ಗೋಚರಿಸುತ್ತದೆ. ಇಂತಹ ಹಲವು ಬೆಂಕಿಯ ಗೆರೆಗಳು ಆಕಾಶದಲ್ಲಿ ಗೋಚರಿಸಿದರೆ ಅದನ್ನು ಉಲ್ಕಾಪಾತ (Metor Shower) ಎಂದು ಕರೆಯುತ್ತೇವೆ. ಇಂಗ್ಲಿಷ್‌ನಲ್ಲಿ ಶೂಟಿಂಗ್ ಸ್ಟಾರ್ ಎಂದೂ ಹೆಸರಿದೆ. ಆದರೆ, ನಕ್ಷತ್ರಗಳಿಗೂ ಇವಕ್ಕೂ ಯಾವುದೇ ಸಂಬಂಧವಿಲ್ಲ.

ಉಲ್ಕಾಪಾತವನ್ನು ಹೇಗೆ ನೋಡುವುದು?

ಆಕಾಶ ವೀಕ್ಷಕರಿಗೆ ಉಲ್ಕಾಪಾತ ನೋಡುವುದು ಒಂದು ವಿಶೇಷ ಅನುಭವ. ಉಲ್ಕಾಪಾತ ನೋಡಲು ಯಾವ ಉಪಕರಣದ (ಟೆಲಿಸ್ಕೋಪ್, ಬೈನಾಕ್ಯೂಲರ್) ಅಗತ್ಯವು ಇರುವುದಿಲ್ಲ. ಇದು ಬರಿಗಣ್ಣಿನಲ್ಲಿ ನೋಡಬಹುದಾದ ವಿದ್ಯಮಾನ. ನಗರ ಪ್ರದೇಶದಲ್ಲಿದ್ದರೆ, ಕಟ್ಟಡದ ತಾರಸಿಯ ಮೇಲೋ ಅಥವಾ ಯಾವುದೇ ಅಡೆತಡೆಯಿಲ್ಲದೆ ಆಕಾಶ ಕಾಣುವ ಜಾಗದಲ್ಲಿ ಆಕಾಶಕ್ಕೆ ಮುಖ ಮಾಡಿ ಮಲಗಿ ನೋಡುತ್ತಿದ್ದರೆ, ಉಲ್ಕಾಪಾತವನ್ನು ಸವಿಯಬಹುದು ಮತ್ತು ಎಷ್ಟು ಬೆಂಕಿಯ ಗೆರೆಗಳನ್ನು ನೋಡಿದಿರಿ ಎಂದು ಎಣಿಸಲೂಬಹುದು. ಉಲ್ಕಾಪಾತ ರಾತ್ರಿ ಪೂರ್ತಿ ಕಾಣುವ ವಿದ್ಯಮಾನ. ಅಲ್ಲದೆ, ಉಲ್ಕಾಪಾತವನ್ನು ಅಳೆಯಲು ಒಂದು ಮಾಪನವಿದೆ. ಇದೇನೆಂದರೆ, ಒಂದು ಗಂಟೆಗೆ ಸರಿಸುಮಾರು ಎಷ್ಟು ಉಲ್ಕೆಗಳು ಬೀಳುವುದನ್ನು ನೋಡಬಹುದಾಗಿದೆ ಎಂಬುದು. ಕೆಲವು ಉಲ್ಕಾಪಾತದಲ್ಲಿ ಈ ಸಂಖ್ಯೆ ಬಹಳ ಕಡಿಮೆ ಇರುತ್ತದೆ- 10ರಿಂದ 20. 100ರಿಂದ 150 ಇದ್ದರೆ, ಅದು ಪ್ರಕಾಶಮಾನವಾದ ಉಲ್ಕಾಪಾತ. ರಾತ್ರಿಯ ಆಕಾಶದಲ್ಲಿ ಉಲ್ಕಾಪಾತವನ್ನು ನೋಡುವ ಅವಕಾಶ ಹೆಚ್ಚಿರುತ್ತದೆ. ಪ್ರತಿ ವರ್ಷ ಡಿಸೆಂಬರ್‌ನಲ್ಲಿ ಸಂಭವಿಸುವಂತಾದ್ದು ಅಂತಹದ್ದೇ ಪ್ರಕಾಶಮಾನವಾದ ಉಲ್ಕಾಪಾತ, ಗಂಟೆಗೆ 100ರಿಂದ 150 ಉಲ್ಕೆಗಳನ್ನು ನೋಡಬಹುದು!

ಉಲ್ಕಾಪಾತಕ್ಕೆ ಹೆಸರುಗಳಿವೆಯೇ?

ಭೂಮಿಯು, ಸೂರ್ಯನ ಸುತ್ತ ಸುತ್ತುವ ಕಕ್ಷೆಯಲ್ಲಿ, ಧೂಮಕೇತುಗಳು ಬಿಟ್ಟುಹೋದ ಹಲವು ಚದರಿದ ಮೋಡವಿರುವ ಪ್ರದೇಶದ ಮೂಲಕ ಹಾದುಹೋಗುತ್ತದೆ. ವರ್ಷಕ್ಕೆ ಸರಿಸುಮಾರು ಆರರಿಂದ ಏಳು ಉಲ್ಕಾಪಾತಗಳನ್ನು ನೋಡಬಹುದು. ಈ ಉಲ್ಕಾಪಾತಗಳ ವಿಶೇಷವೆಂದರೆ, ಉಲ್ಕಾಪಾತದ ಸಂದರ್ಭದಲ್ಲಿ ಕಾಣುವ ಬೆಂಕಿಗೆರೆಗಳ ಬಾಲವನ್ನು ಕಲ್ಪಿಸಿಕೊಂಡು, ಹಿಮ್ಮುಖವಾಗಿ ಚಲಿಸಿಕೊಂಡು ಅವು ಎಲ್ಲಿಂದ ಬರುತ್ತಿವೆಯೆಂದು ಗಮನಿಸಿದರೆ, ಪ್ರತಿಯೊಂದು ಬೆಂಕಿಗೆರೆಯು ಒಂದೇ ಪ್ರದೇಶದಿಂದ ಪ್ರಾರಂಭಿಸುತ್ತಿರುವಂತೆ ಕಾಣುತ್ತದೆ. ಈ ಪ್ರದೇಶ ಯಾವ ನಕ್ಷತ್ರಪುಂಜದಲ್ಲಿದೆಯೋ ಆ ನಕ್ಷತ್ರ ಪುಂಜದ ಹೆಸರನ್ನೆ ಉಲ್ಕಾಪಾತಕ್ಕೆ ಹೆಸರಿಸಲಾಗಿದೆ. ಉದಾಹರಣೆಗೆ, ನಾವು ಒರಿಯಾನ್ ನಕ್ಷತ್ರಪುಂಜವನ್ನು ಗುರುತಿಸುವುದನ್ನು ಈಗಾಗಲೇ ತಿಳಿದಿದ್ದೇವೆ. ಉಲ್ಕಾಪಾತದ ಬೆಂಕಿಯ ಗೆರೆಗಳ ಬಾಲಗಳನ್ನು ಹಿಮ್ಮುಖವಾಗಿ ಚಲಿಸಿದಾಗ, ಎಲ್ಲಾ ಬೆಂಕಿಯ ಗೆರೆಗಳು ಒರಿಯಾನ್ ನಕ್ಷತ್ರಪುಂಜದಿಂದ ಪ್ರಾರಂಭಿಸಿದಂತೆ ಗೋಚರಿಸಿದರೆ, ಅದನ್ನು ಒರಿಯಾನೈಡ್ ಉಲ್ಕಾಪಾತ ಎಂದು ಕರೆಯುತ್ತಾರೆ. ಪ್ರಸ್ತುತ ಡಿಸೆಂಬರ್‌ನ ಉಲ್ಕಾಪಾತದ ಹೆಸರು, ಜಮಿನಾಯ್ಡ್ಸ್ ಎಂದು ಕರೆಯುತ್ತಾರೆ. ಅಂದರೆ, ಈ ತಿಂಗಳ ಆಗಸದಲ್ಲಿ ಕಾಣುವ ಎಲ್ಲಾ ಉಲ್ಕೆಗಳ ಬೆಂಕಿಗೆರೆಯ ಬಾಲಗಳು ಜಮಿನಿ ನಕ್ಷತ್ರಪುಂಜದಿಂದ ಪ್ರಾರಂಭವಾಗುವಂತೆ ಗೋಚರಿಸುತ್ತವೆ. ಅಲ್ಲದೆ ಈ ಜಮಿನಾಯ್ಡ್ಸ್ ಉಂಟಾಗಲು ಕಾರಣ ಫ್ಯಾತನ್ 3200 ಎಂಬ ಕ್ಷುದ್ರಗ್ರಹ ಎಂದು ಕೂಡ ತಿಳಿಯಲಾಗಿದೆ.

ಡಿಸೆಂಬಂರ್ ತಿಂಗಳ ಜಮಿನಾಯ್ಡ್ಸ್ ವಿಶೇಷ

ಜಮಿನಾಯ್ಡ್ಸ್‌ಉಲ್ಕಾಪಾತ | ಚಿತ್ರ ಕೃಪೆ: ಜೆಫ್‌ಡೈ/ ಅರಿಜ಼ೋನಾ ಸ್ಟೇಟ್‌ಯುನಿವರ್ಸಿಟಿ

ವರ್ಷದಲ್ಲಿ ಕಾಣುವ ಉಳಿದೆಲ್ಲಾ ಉಲ್ಕಾಪಾತುಗಳಿಗೆ ಹೋಲಿಸಿದರೆ, ಜಮಿನಾಯ್ಡ್ಸ್ ಅತ್ಯಂತ ಪ್ರಕಾಶಮಾನವಾದದು ಮತ್ತು ಗಂಟೆಗೆ 100ರಿಂದ 150 ಬೆಂಕಿಯ ಗೆರೆಗಳನ್ನು ನೋಡುವ ಅವಕಾಶವಿರುತ್ತದೆ. ಜಮಿನಾಯ್ಡ್ಸ್ ಈ ತಿಂಗಳ 20ರವರೆಗೂ ಪ್ರತಿರಾತ್ರಿ ಕಾಣಿಸುತ್ತಿದ್ದರೂ, ಹೆಚ್ಚು ತೀವ್ರವಾಗುವುದು ಡಿಸೆಂಬರ್ 13 ಮತ್ತು 14ರ ರಾತ್ರಿಯಂದು. ಅದರಲ್ಲೂ, ಬೆಳಗಿನ ಜಾವದ 2 ಗಂಟೆಯ ಆಸುಪಾಸಿಗೆ. ಡಿಸೆಂಬರ್ 14ರಂದು ಅಮಾವಾಸ್ಯೆಯೂ ಇರುವುದರಿಂದ, ಚಂದ್ರನಿಲ್ಲದ ರಾತ್ರಿಯಲ್ಲಿ, ಈ ಉಲ್ಕಾಪಾತ ಹೆಚ್ಚು ಪ್ರಕಾಶಮಾನವಾಗಿ ಕಾಣುತ್ತದೆ. ಉಲ್ಕಾಪಾತವನ್ನು, ಬರಿಗಣ್ಣಿನಲ್ಲಿ ನೋಡುವ ಜೊತೆಗೆ, ಕ್ಯಾಮರಾದಲ್ಲೂ ಸೆರೆಹಿಡಿಯಬಹುದು. ನಿಮ್ಮ ಬಳಿ ಹೆಚ್ಚು ಎಕ್ಸ್‌ಪೋಶರ್ ಸೆಟ್ಟಿಂಗ್ ಬದಲಿಸುವ ಕ್ಯಾಮರಾ ಇದ್ದರೆ, ಆಗಸದ ದಿಕ್ಕಿಗೆ ವೈಡ್‌ಅಂಗಲ್‌ನಲ್ಲಿ ಇಟ್ಟು ರೆಕಾರ್ಡ್ ಮಾಡಿ. ಉಲ್ಕಾಪಾತವನ್ನು ನೋಡುವಾಗ ರಾತ್ರಿಯ ಚಳಿಗೆ ರಕ್ಷಣೆ ಪಡೆಯಲು ಮರೆಯದಿರಿ.

ಈ ವರ್ಷದ ಕೊನೆಯ ಗ್ರಹಣ: ಸಂಪೂರ್ಣ ಸೂರ್ಯಗ್ರಹಣ

ಡಿಸೆಂಬರ್ 14ರಂದು ಸಂಪೂರ್ಣ ಸೂರ್ಯಗ್ರಹಣವಿದ್ದು, ಇದು ಈ ವರ್ಷದ ಕೊನೆಯ ಗ್ರಹಣವಾಗಿದೆ. ಈ ಗ್ರಹಣವನ್ನು ದಕ್ಷಿಣ ಅಮೆರಿಕ, ಚಿಲಿ, ಅರ್ಜೆಂಟೀನಾ ಮತ್ತು ಆಫ್ರಿಕಾದ ಕೆಲವು ಭಾಗಗಳಲ್ಲಿ ಕಾಣಬಹುದು. ಈ ಗ್ರಹಣವನ್ನು ಭಾರತದ ಯಾವ ಭಾಗದಿಂದಲೂ ನೋಡಲು ಸಾಧ್ಯವಿರುವುದಿಲ್ಲ. ಸಂಪೂರ್ಣ ಸೂರ್ಯಗ್ರಹಣದ ಸಂದರ್ಭದಲ್ಲಿ ಸೂರ್ಯನನ್ನು ಚಂದ್ರ ಪೂರ್ಣವಾಗಿ ಮರೆಮಾಚಿರುತ್ತಾನೆ. ನಿರ್ದಿಷ್ಟ ಸ್ಥಳಗಳಲ್ಲಿ, ಸೂರ್ಯ ಕೆಲವು ಸಮಯಗಳ ಕಾಲ (ನಿಮಿಷಗಳಲ್ಲಿ) ಆಗಸದಲ್ಲಿ ಕಾಣುವುದಿಲ್ಲ. ಅಂದಹಾಗೆ, ಏಕೆ ಸೂರ್ಯಗ್ರಹಣ ಅಮಾವಾಸ್ಯೆಯಂದೇ ಮತ್ತು ಚಂದ್ರಗ್ರಹಣ ಹುಣ್ಣಿಮೆಯಂದೇ ಘಟಿಸುತ್ತವೆ ಎನ್ನುವ ಪ್ರಶ್ನೆಯನ್ನು ಕೇಳಿಕೊಂಡು ಯೋಚಿಸಿ, ಮುಂದಿನ ದಿನಗಳಲ್ಲಿ ಇವನ್ನು ಚರ್ಚಿಸೋಣ.

  • ವಿಶ್ವ ಕೀರ್ತಿ ಎಸ್

ವಿಜ್ಞಾನ ಮತ್ತು ಖಗೋಳ ವಿಜ್ಞಾನದಲ್ಲಿ ಆಸಕ್ತಿ, ಹವ್ಯಾಸಿ ಆಕಾಶ ವೀಕ್ಷಣೆಗಾರ. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಭೌತ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಸಂಸ್ಥೆಯಲ್ಲಿ ವೈಜ್ಞಾನಿಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.


ಇದನ್ನೂ ಓದಿ: ರಿಗಲ್ ಮತ್ತು ಬೀಟಲ್ ಜ್ಯೂಸ್ ನಕ್ಷತ್ರಗಳನ್ನು ನೀವು ಕಾಣಿರಿ, ನೀವು ಕಾಣಿರಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...