ಇಂದಿನಿಂದ (ಜುಲೈ 19) ಸಂಸತ್ತಿನ ಮಾನ್ಸೂನ್ ಅಧಿವೇಶ ಆರಂಭವಾಗಿದ್ದು, ಮೊದಲ ದಿನವೇ ಗದ್ದಲ, ಕೋಲಾಹಲಗಳಿಗೆ ಕಾರಣವಾಗಿದೆ. ಪ್ರತಿಪಕ್ಷಗಳ ಕೋಲಾಹಲದ ನಡುವೆ ಪ್ರಧಾನಿ ನರೇಂದ್ರ ಮೋದಿಯವರಿಗೆ ತಮ್ಮ ಹೊಸ ಮಂತ್ರಿಗಳನ್ನು ಸದಸನಕ್ಕೆ ಪರಿಚಯಿಸಲು ಸಾಧ್ಯವಾಗಿಲ್ಲ. ಗದ್ದಲದಿಂದಾಗಿ ಲೋಕಸಭೆ ಅಧಿವೇಶನವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಕಠಿಣ ಪ್ರಶ್ನೆಗಳನ್ನು ಕೇಳಬೇಕೆಂದು ಪ್ರತಿಪಕ್ಷಗಳಿಗೆ ಒತ್ತಾಯಿಸಿದ್ದಾರೆ ಜೊತೆಗೆ ಸದನದಲ್ಲಿ ಉತ್ತರಿಸಲು ಸರ್ಕಾರಕ್ಕೆ ಅವಕಾಶ ನೀಡಬೇಕು ಎಂದಿದ್ದರು.
ಹೊಸದಾಗಿ ಸಂಪುಟಕ್ಕೆ ಸೇರ್ಪಡೆಗೊಂಡಿರುವ ಸಚಿವರನ್ನು ಮನೆಗೆ ಪರಿಚಯಿಸಲು ಹೊರಟ ಪ್ರಧಾನಿ ನರೇಂದ್ರ ಮೋದಿಯವರು, ಪ್ರತಿಪಕ್ಷಗಳ ಕೂಗಾಟದ ಮಧ್ಯೆ ಸುಮ್ಮನಿರಬೇಕಾಯಿತು. “ದೇಶದ ಮಹಿಳೆಯರು, ಒಬಿಸಿಗಳು, ರೈತರ ಪುತ್ರರು ಮಂತ್ರಿಗಳಾಗಿದ್ದರೆ ಬಹುಶಃ ಕೆಲವರು ಸಂತೋಷವಾಗಿರುವುದಿಲ್ಲ. ಅದಕ್ಕಾಗಿಯೇ ಅವರು ಇವರುಗಳನ್ನು ಪರಿಚಯಿಸಲು ಸಹ ಅನುಮತಿ ನೀಡುವುದಿಲ್ಲ” ಎಂದು ಪ್ರಧಾನಿ ಕಿಡಿಕಾರಿದ್ದಾರೆ.
ಇದನ್ನೂ ಓದಿ: ಜುಲೈ 19 ರಿಂದ ಮಾನ್ಸುನ್ ಅಧಿವೇಶನ; ಸಂಸತ್ ಬಳಿ ಪ್ರತಿಭಟನೆಗೆ ರೈತರು ಸಜ್ಜು!
Lok Sabha adjourned till 2 pm amid uproar by Opposition MPs.
Defence Minister Rajnath Singh raised an objection against the uproar while Prime Minister Narendra Modi was introducing his Council of Ministers in the House. pic.twitter.com/FQIEf4QQE4
— ANI (@ANI) July 19, 2021
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರತಿಪಕ್ಷಗಳ ಗದ್ದಲಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದರು. “ಲೋಕಸಭೆಯಲ್ಲಿ ಕಾಂಗ್ರೆಸ್ ನಡವಳಿಕೆ ದುಃಖಕರ, ದುರದೃಷ್ಟಕರ, ಅನಾರೋಗ್ಯಕರವಾಗಿದೆ” ಎಂದಿದ್ದಾರೆ.
ಬಳಿಕ ಲೋಕಸಭೆಯನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.
ಮಾನ್ಸೂನ್ ಅಧವೇಶನ ಆರಂಭಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ್ದ ಪ್ರಧಾನಿ, ಸಾಂಕ್ರಾಮಿಕ ರೋಗವನ್ನು ಆದ್ಯತೆ ಎಂದು ಪರಿಗಣಿಸಿ ಅದರ ಬಗ್ಗೆ ಚರ್ಚಿಸಬೇಕೆಂದು ಸರ್ಕಾರ ಬಯಸಿದೆ ಎಂದಿದ್ದರು. ಕೋವಿಡ್ ಲಸಿಕೆ ತೆಗೆದುಕೊಳ್ಳುವ ಜನರು ರೋಗದ ವಿರುದ್ಧದ ಹೋರಾಟದಲ್ಲಿ ‘ಬಾಹುಬಲಿ’ ಆಗುತ್ತಾರೆ. ಲಸಿಕೆಯನ್ನು ಬಾಹು (ತೋಳುಗಳು) ಗೆ ನೀಡಲಾಗಿದೆ, ಲಸಿಕೆ ತೆಗೆದುಕೊಳ್ಳುವವರು ಬಾಹುಬಲಿ ಆಗುತ್ತಾರೆ ಎಂದು ಪ್ರಧಾನಿ ಹೇಳಿದ್ದರು.
ಪ್ರತಿಪಕ್ಷಗಳ ಗದ್ದಲದಿಂದಾಗಿ ರಾಜ್ಯಸಭೆ ಅಧಿವೇಶನವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿದೆ.
ಇದನ್ನೂ ಓದಿ: ಇಂಧನ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ: ಸೈಕಲ್‌ನಲ್ಲಿ ಸಂಸತ್ ಅಧಿವೇಶನಕ್ಕೆ ಬಂದ ಟಿಎಂಸಿ ಸಂಸದರು


