Homeಮುಖಪುಟಕತ್ತಲ ಕಾಲದಲ್ಲಿ ಒಂದಿಷ್ಟು ಬೆಳಕಿನ ಕಥೆಗಳು

ಕತ್ತಲ ಕಾಲದಲ್ಲಿ ಒಂದಿಷ್ಟು ಬೆಳಕಿನ ಕಥೆಗಳು

- Advertisement -
- Advertisement -

1. ಕಾಳಿ ಗುಡಿಯನ್ನು ಮತ್ತೆ ಕಟ್ಟಿದ ಮುಸ್ಲಿಮರು

ಪಶ್ಚಿಮ ಬಂಗಾಳದ ಬಸಪಾರ ಹಳ್ಳಿಯಲ್ಲಿ ರಸ್ತೆ ಅಗಲೀಕರಣಕ್ಕೆಂದು ಕಾಳಿ ಗುಡಿಯನ್ನು ನೆಲಸಮಗೊಳಿಸಲಾಗಿತ್ತು. ಹಳ್ಳಿಯವರೆಲ್ಲ ಕಾಳಿ ಗುಡಿಯನ್ನು ಮತ್ತೆ ಕಟ್ಟಲು ತೀರ್ಮಾನಿಸಿದರು. ಗುಡಿ ಕಟ್ಟಲು ಹೇಗೋ ಹಣ ಹೊಂದಿಸಿ ತುಂಡು ಭೂಮಿ ಕೊಳ್ಳಲಾಯಿತು. ಆದರೆ ಗುಡಿ ಕಟ್ಟಲು ಸುಮಾರು 10 ಲಕ್ಷ ಬೇಕೆಂದು ಅಂದಾಜಿಸಲಾಯಿತು. ಅದೊಂದು ಪುಟ್ಟ ಹಳ್ಳಿಯಾದ್ದರಿಂದ ಹೊರಗಿನವರ ಸಹಾಯ ಅಗತ್ಯವಾಗಿತ್ತು. ಆಗ ಅದೇ ಹಳ್ಳಿಯ ಮುಸ್ಲಿಮರು ಕೈ ಜೋಡಿಸುತ್ತೇವೆಂದು ಭರವಸೆ ನೀಡಿದರು. ಸುತ್ತಮುತ್ತಲಿನ ಹಳ್ಳಿಯಲ್ಲಿರುವ ತಮ್ಮ ಸಂಬಂಧಿಕರನ್ನು ಸಂಪರ್ಕಿಸಿ 7 ಲಕ್ಷ ದೇಣಿಗೆ ನೀಡಿಯೇ ಬಿಟ್ಟರು. ಕಾಳಿ ಗುಡಿ ಕಟ್ಟಲಾಯಿತು. ಈ ಕಾಳಿ ಗುಡಿಯನ್ನು ಅಲ್ಲಿನ ಹಿಂದೂಗಳು ಮುಸ್ಲಿಂ ಮುಖಂಡ ’ನಾಸಿರುದ್ದೀನ್ ಮಂಡಲ್’ ಅವರಿಂದ ಉದ್ಘಾಟಿಸಿದರು. ಈಗ ಅಲ್ಲಿ ನಿತ್ಯ ಕಾಳಿ ಪೂಜೆ.

ತ್ರಿಪುರಾ ರಾಜ್ಯದ ದುರ್ಗಾಪುರ ಹಳ್ಳಿಯಲ್ಲಿ ಹಿಂದೂ ಒಬ್ಬ ಮುಸ್ಲಿಮನಿಗೆ ತನ್ನ ಜಮೀನನ್ನು ಮಾರಾಟ ಮಾಡಿ ಹೊರಟುಹೋದನಂತೆ. ಆ ಜಮೀನಿನಲ್ಲಿ ಕಾಳಿ ಗುಡಿ ಇತ್ತಂತೆ. ಹಾಗಾಗಿ ಇಂದಿಗೂ ಸಹ ಪ್ರತಿವರ್ಷ ಆ ಮುಸ್ಲಿಂ ಮಾಲೀಕ ಕಾಳಿ ಪೂಜೆಯನ್ನು ಮಾಡಿಸುತ್ತಿದ್ದಾನೆ.

2. ಬನಾರಸ್ಸಿನಲ್ಲಿ ಒಟ್ಟಿಗೆ ’ಮಂತ್ರ ಮತ್ತು ಆಜಾನ್’

ಉತ್ತರ ಪ್ರದೇಶದ ಬನಾರಸ್‌ನಲ್ಲಿ ಭೈರವ ಮಂದಿರ ಹಾಗೂ ಮಸೀದಿ ಇದೆ. ಇವೆರಡರ ವಿಶಿಷ್ಟತೆ ಏನೆಂದರೆ ಅವು ಅಕ್ಕಪಕ್ಕದಲ್ಲಿಯೇ ಸ್ಥಾಪನೆಗೊಂಡಿವೆ. ದಿನನಿತ್ಯ ಸಾಯಂಕಾಲ ಭೈರವನಿಗೆ ಸಲ್ಲಿಸುವ ರಾಮಚರಿತಮಾನಸದ ಶ್ಲೋಕವನ್ನು ಹಾಗೂ ಆಜಾನ್‌ನ ಪ್ರಾರ್ಥನೆಯನ್ನು ಒಟ್ಟಿಗೆ ಕೇಳಬಹುದಾಗಿದೆ. ಈ ಕ್ಷಣವನ್ನು ಆಲಿಸಿ ಸಂತೋಷಗೊಳ್ಳಲೆಂದೇ ಹಲವಾರು ಪ್ರವಾಸಿಗರು ಇಲ್ಲಿ ದಿನನಿತ್ಯ ಸೇರುತ್ತಾರೆ. ಈ ಆಚರಣೆಯನ್ನು ಸುಮಾರು 350 ವರ್ಷಗಳಿಂದಲೂ ನೆರವೇರಿಸಿಕೊಂಡು ಬರಲಾಗಿದೆ.

3. ಮುಸ್ಲಿಂ ಹೆಣ್ಣುಮಗಳ ’ಕುಮಾರಿ ಪೂಜೆ’

ಉತ್ತರ ಭಾರತದ ಪ್ರಸಿದ್ಧ ಹಬ್ಬ ದುರ್ಗಾ ಪೂಜೆ. ಎಂಟನೇ ದಿನದ ಪೂಜೆಯಂತ ಬಹಳ ಪವಿತ್ರವಾದದ್ದೆಂದು ಪಶ್ಚಿಮಬಂಗಾಳದ ಜನತೆ ಭಾವಿಸುತ್ತಾರೆ. ಈ ದಿನವನ್ನು ’ಮಹಾಅಷ್ಟಮಿ’ ಎಂದು ಕರೆಯುತ್ತಾರೆ. ಈ ದಿನದಂದು ಹೆಣ್ಣುಮಕ್ಕಳಿಗೆ ದುರ್ಗೆಯ ವೇಷ ತೊಡಿಸಿ ಪೂಜೆ ಮಾಡುವುದು ವಿಶೇಷ. ಇದನ್ನೇ ’ಕುಮಾರಿ ಪೂಜೆ’ ಎನ್ನಲಾಗುತ್ತದೆ. 2013ರಿಂದಲೂ ಕೋಲ್ಕತ್ತಾದ ಕಮಲ್ ದತ್ತಾ ಮತ್ತವರ ಹೆಂಡತಿ ಮೌಶುಮಿ ತಮ್ಮ ಮನೆಯಲ್ಲಿ ಕುಮಾರಿ ಪೂಜೆ ಮಾಡುತ್ತಾ ಬಂದಿದ್ದಾರೆ. ಮೊದಲ ವರ್ಷ ಬ್ರಾಹ್ಮಣ ಹೆಣ್ಣುಮಗಳನ್ನು ಪೂಜಿಸಲಾಗಿತ್ತು ನಂತರದ ವರ್ಷಗಳಲ್ಲಿ ದಲಿತ ಹೆಣ್ಣುಮಕ್ಕಳು ಸೇರಿದಂತೆ ಇತರೆ ಜಾತಿಯ ಹೆಣ್ಣುಮಕ್ಕಳಿಗೂ ಕುಮಾರಿ ಪೂಜೆ ಮಾಡಿದ್ದಾರೆ. 2019ರಲ್ಲಿ ಕುಮಾರಿ ಪೂಜೆಗೆ ಅವರು ಆಹ್ವಾನಿಸಿದ್ದು ಆಗ್ರಾದ ಕಿರಾಣಿ ಅಂಗಡಿಯೊಂದರ ಮಾಲೀಕ ಮಹಮ್ಮದ್ ತಾಹಿರ್ ಮತ್ತು ಬುಶ್ರಾ ಬೀಬಿಯವರ ಮಗಳು ’ಫಾತಿಮಾ’ಳನ್ನು. ಯಾವ ಅಡೆತಡೆಗಳಿಲ್ಲದೆ ಆ ವರ್ಷದ ಕುಮಾರಿ ಪೂಜೆ ನೆರವೇರಿದೆ.

4. ಹಿಂದೂ ದೇಗುಲ ರಕ್ಷಕ ಮೋತಿಬಾರ್ ರಹಮಾನ್

ಅಸ್ಸಾಂ ರಾಜ್ಯದ ಗುವಾಹಟಿಯ ರಂಗಮಹಲ್ ಎಂಬ ಹಳ್ಳಿಯಲ್ಲಿ ಶಿವನ ದೇಗುಲವೊಂದಿದೆ. ಈ ದೇಗುಲಕ್ಕೆ 500 ವರ್ಷಗಳ ಇತಿಹಾಸವಿದೆ ಹಾಗೂ ಸ್ಥಳಪುರಾಣವೂ ಇದೆ. ಸ್ಥಳಪುರಾಣದ ಪ್ರಕಾರ 500 ವರ್ಷಗಳ ಹಿಂದೆ ಈ ಹಳ್ಳಿ ವಾಸಿಯಾಗಿದ್ದ ’ಬೊರ್ಹಾಸ’ ಎಂಬ ಮುಸಲ್ಮಾನನ ಕನಸಲ್ಲಿ ಶಿವ ಪ್ರತ್ಯಕ್ಷನಾದನಂತೆ. ’ನಾನು ಈ ಸ್ಥಳದಲ್ಲಿ ನೆಲೆಸಬೇಕು. ಇಂದಿನಿಂದ ನಿನ್ನ ಕುಟುಂಬವೇ ನನ್ನನ್ನು ಸಲಹಬೇಕೆಂದು’ ಹೇಳಿದನಂತೆ. ಅಂದಿನಿಂದ ಇಂದಿನವರೆಗೂ ಬೊರ್ಹಾಸನ ವಂಶಸ್ಥರು ಶಿವನ ದೇಗುಲದ ನಿರ್ವಹಣೆಯನ್ನು ಮಾಡುತ್ತಿದ್ದಾರೆ. ಈಗ ’ಮೋತಿಬಾರ್ ರಹಮಾನ್’ ಎಂಬ ಬೊರ್ಹಾಸನ ವಂಶಸ್ಥ ಈ ದೇಗುಲದ ನಿರ್ವಹಣೆ ಮಾಡುತ್ತಿದ್ದಾನೆ. ಈ ದೇಗುಲಕ್ಕೆ ಹಿಂದೂ-ಮುಸ್ಲೀಂ ಭಕ್ತರು ಭೇಟಿಕೊಡುತ್ತಾರೆ. ಮರಕ್ಕೆ ಕೆಂಪು ಮತ್ತು ಅರಿಶಿನದ ದಾರ ಕಟ್ಟಿ ಬೇಡಿಕೊಳ್ಳುತ್ತಾರೆ.

5. ಮುಸ್ಲಿಮರಿಂದ ಬ್ರಾಹ್ಮಣನ ಅಂತ್ಯಸಂಸ್ಕಾರ

ಅಬು, ನಾಸಿರ್ ಮತ್ತು ಜುಬೇರ್ ಖುರೇಶಿ ಈ ಮೂವರು ಗುಜರಾತಿನ ಸಹೋದರರು. ದಿನಗೂಲಿ ನೌಕರರಾದ ಇವರು ದಿನಕ್ಕೆ ಐದು ಬಾರಿ ನಮಾಜ್ ಹಾಗೂ ರಂಜಾನ್ ಉಪವಾಸವನ್ನು ಅಪ್ಪಿತಪ್ಪಿಯೂ ತಪ್ಪಿಸದಷ್ಟು ಧಾರ್ಮಿಕರು. ಇವರ ತಂದೆ ’ಭಿಕು ಖುರೇಶಿ’ಯವರ ಆತ್ಮೀಯ ಸ್ನೇಹಿತ ಬ್ರಾಹ್ಮಣ ’ಭಾನುಶಂಕರ್ ಪಾಂಡ್ಯ’ ಎಂದರೆ ಇವರಿಗೆ ಬಹಳಷ್ಟು ಪ್ರೀತಿ. ಭಿಕು ಖುರೇಶಿ ಹಾಗೂ ಭಾನುಶಂಕರ್ ಇಬ್ಬರದ್ದು ಬರೋಬ್ಬರಿ 40 ವರ್ಷಗಳ ಸ್ನೇಹ. ಭಾನುಪ್ರಕಾಶ್ ಸಂಬಂಧಿಕರೆಲ್ಲರನ್ನೂ ಕಳೆದುಕೊಂಡಿದ್ದರು. ಅವರ ಕಾಲು ಮುರಿದ ಮೇಲೆ ತಮ್ಮ ಮುಸ್ಲಿಂ ಸ್ನೇಹಿತನ ಮನೆಯಲ್ಲೆ ಬಂದು ನೆಲೆಸಿದರು. ಖುರೇಶಿ ತಮಗಿಂತ ಮೊದಲೇ ಇಹಲೋಕ ತ್ಯಜಿಸಿದ್ದಕ್ಕೆ ಕಣ್ಣೀರಾಗಿದ್ದರು. ಮೂರು ವರ್ಷಗಳ ನಂತರ ಭಾನುಶಂಕರ್ ಸಹ ಕಣ್ಮುಚ್ಚಿದರು. ಮೂವರು ಮುಸ್ಲಿಂ ಸಹೋದರರು ತಂದಿದ್ದ ಗಂಗಾ ನದಿಯ ನೀರನ್ನು ಗುಟುಕೇರಿಸುತ್ತಲೇ ಭಾನುಶಂಕರ್ ಪ್ರಾಣಬಿಟ್ಟರು. ಊರಿನ ಹಿಂದೂಗಳಲ್ಲಿ ಈ ಮುಸ್ಲೀಂ ಸಹೋದರರು ತಾವೇ ಅಂತ್ಯಸಂಸ್ಕಾರ ಮಾಡುತ್ತೇವೆಂದು ಕೇಳಿಕೊಂಡಾಗ ’ಬ್ರಾಹ್ಮಣರ ವಿಧಿವಿಧಾನದಲ್ಲಿಯೇ ನೆರವೇರಬೇಕು’ ಎಂದು ಹೇಳಿದರು. ’ಜನಿವಾರ ಧರಿಸಲೇಬೇಕೆಂದು’ ತಿಳಿಸಿದರು. ಮುಸ್ಲಿಂ ಸಹೋದರರು ಸ್ವಲ್ಪವೂ ಯೋಚಿಸದೆ ತಲೆಯಾಡಿಸಿ ಜನಿವಾರ ಹಾಕಿಸಿಕೊಂಡರು. ನಾಸಿರ್ ಮಗ ’ಅರ್ಮಾನ್’ ಚಿತೆಗೆ ಬೆಂಕಿ ಹಚ್ಚಿದನು. 12 ದಿನದ ನಂತರ ಅರ್ಮಾನ್‌ನ ಕೇಶಮುಂಡನ ಮಾಡಿಸಲಾಯಿತು. ಗಂಗಾನದಿಯಲ್ಲಿ ಅಸ್ಥಿಯನ್ನು ತೇಲಿಬಿಡಲಾಯಿತು. ನಾಸಿರ್, ಭಾನುಶಂಕರ್ ಅವರನ್ನು ನೆನೆಯುತ್ತ ’ದೊಡ್ಡಪ್ಪ ನಮ್ಮೊಂದಿಗೆ ಬೆರೆತುಹೋಗಿದ್ದರು. ನಮ್ಮ ತಂದೆ ಅವರಿಗಾಗಿ ಸ್ವತಃ ಶುದ್ಧ ಸಸ್ಯಾಹಾರವನ್ನು ಮಾಡಿ ಹಾಕುತ್ತಿದ್ದರು. ದೊಡ್ಡಪ್ಪ ನಮ್ಮೊಂದಿಗೆ ಈದ್ ಆಚರಿಸುತ್ತಿದ್ದರು. ನಮ್ಮ ಮನೆಯ ಸೊಸೆಯಂದಿರು ಅವರ ಕಾಲಿಗೆ ಬಿದ್ದು ನಮಸ್ಕರಿಸಿದಾಗ ಆಶೀರ್ವದಿಸುತ್ತಿದ್ದರು’ ಎಂದು ಹೇಳುತ್ತಾರೆ.

6. ಶಹೀನ್ ಪರ್ವೇಜ್ ಬಾಯಲ್ಲಿ ಹನುಮಾನ್ ಚಾಲಿಸಾ, ಅಯ್ಯಪ್ಪಸ್ವಾಮಿಯ ಮುಸ್ಲಿಂ ಸ್ನೇಹಿತ ವಾವರ್

ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಒರಿಸ್ಸಾದಿಂದ ಅಯ್ಯಪ್ಪಸ್ವಾಮಿ ಮಾಲೆ ಹಾಕಿಕೊಂಡು ಶಬರಿಮಲೆಗೆ ಅಯ್ಯಪ್ಪನ ದರ್ಶನಕ್ಕೆ ಹೋಗಿರುವವರಿಗೆ ’ವಾವರಸ್ವಾಮಿ’ ಹೆಸರಲ್ಲಿ ನಿರ್ಮಿಸಿರುವ ಮಸೀದಿ ಚಿರಪರಿಚಿತ. ಪುರಾಣ ಕಥೆ ಹೇಳುವಂತೆ ಮಹಿಶಿಯೊಡನೆ ಯುದ್ಧ ಮಾಡುವಾಗ ’ವಾವರ್’ ಎಂಬ ಮುಸ್ಲಿಂ ಅಯ್ಯಪ್ಪನಿಗೆ ಸಹಾಯ ಮಾಡಿದ್ದನಂತೆ. ಅಂದಿನಿಂದ ವಾವರ್ ಅಯ್ಯಪ್ಪನಿಗೆ ಸ್ನೇಹಿತನಾದನು. ಅಯ್ಯಪ್ಪ ಮಹಿಶಿಯನ್ನು ಎರುಮೆಲಿಯಲ್ಲಿ ಕೊಂದು ಶಬರಿಮಲೆಗೆ ಹೋಗುವ ಮುನ್ನ ವಾವರ್‌ನಿಗೆ ಅಲ್ಲಿಯೇ ನೆಲೆನಿಲ್ಲಲು ಹೇಳಿದನಂತೆ. ಜೊತೆಗೆ ತನ್ನನ್ನು ನೋಡಲು ಬರುವ ಭಕ್ತಾದಿಗಳು ನನಗೂ ಮುಂಚೆ ವಾವರ್‌ನ ದರ್ಶನ ಪಡೆಯಬೇಕೆಂದು ಹೇಳಿದನಂತೆ. ಅಂದಿನಿಂದ ಶಬರಿಮಲೆಗೆ ಹೋಗುವ ಭಕ್ತರು ಮೊದಲು ವಾವರಸ್ವಾಮಿ ಮಸೀದಿಗೆ ಭೇಟಿ ಕೊಟ್ಟು ತೆಂಗಿನಕಾಯಿ ಹೊಡೆದು ಪ್ರದಕ್ಷಿಣೆ ಹಾಕುತ್ತಾರೆ. ಮುಸ್ಲಿಮರು ದಿನಕ್ಕೆ ಐದು ಬಾರಿ ನಮಾಜ್ ಮಾಡುತ್ತಾರೆ. ಶಬರಿಮಲೆಯಲ್ಲಿ ನಡೆಯುವ ಮಕರಸಂಕ್ರಾಂತಿಯಂದು ಇಲ್ಲಿಯೂ ಉತ್ಸವವನ್ನು ಹಾಗೂ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗುತ್ತದೆ.

7. ಇಲ್ಲಿ ಮುಸ್ಲಿಮರಿಲ್ಲ ಆದರೆ ಮಸೀದಿ ಇದೆ.

ಪಂಜಾಬಿನಲ್ಲಿ ಲೂಧಿಯಾನ ಎಂಬ ಹಳ್ಳಿ ಇದೆ. ಈ ಹಳ್ಳಿಯಲ್ಲಿನ ಸಿಖ್ಖರು ಭಾರತದ ವಿಭಜನೆಯ ಕಥೆಯನ್ನು ನೆನೆದು ಕಣ್ಣೀರಾಗುತ್ತಾರೆ. ಭಾರತ ವಿಭಜನೆ ಆಗುವ ಮೊದಲು ಇಲ್ಲಿದ್ದ 50 ಮುಸ್ಲಿಂ ಕುಟುಂಬ ಪ್ರಾರ್ಥನೆಗಾಗಿ 1920ರಲ್ಲಿ ಮಸೀದಿ ನಿರ್ಮಿಸಿದ್ದವು. 1947ರ ನಂತರ ಭಾರತದ ವಿಭಜನೆಯ ಫಲವಾಗಿ ಮುಸ್ಲಿಮರೆಲ್ಲರೂ ಪಾಕಿಸ್ತಾನಕ್ಕೆ ಹೋಗಬೇಕಾಗಿ ಬಂದಿತು. ಈಗ ಈ ಹಳ್ಳಿಯಲ್ಲಿ ಒಬ್ಬರೂ ಮುಸ್ಲಿಮರಿಲ್ಲ. ಆದರೆ ಅವರು ಕಟ್ಟಿದ್ದ ಮಸೀದಿ ಇಂದಿಗೂ ತಲೆಎತ್ತಿ ನಿಂತಿದೆ. ಹಳ್ಳಿಯ ಹಿರಿಯ ಸಿಖ್ಖರು ಪಾಳಿಯ ಪ್ರಕಾರ ಮಸೀದಿಯನ್ನು ಸ್ವಚ್ಛಗೊಳಿಸಲು ಯುವಕರನ್ನು ನೇಮಿಸಿದ್ದಾರೆ. ಮಸೀದಿಯಲ್ಲಿ ’ಕುರಾನ್’ ಪವಿತ್ರ ಗ್ರಂಥವನ್ನು ಇಡಲಾಗಿದೆ. ದೀಪ ಹಚ್ಚಲಾಗುತ್ತದೆ. ಇದುವರೆಗೂ ಲೂಧಿಯಾನದ ಒಬ್ಬರೂ ಸಹ ಅದನ್ನು ತೆರವುಗೊಳಿಸುವ ಒಂದು ಮಾತನ್ನೂ ಆಡಿಲ್ಲ.

8. ಅಯೋಧ್ಯೆಯ ದೇಗುಲದಲ್ಲಿ ಇಫ್ತಾರ್ ಊಟ

ಅಯೋಧ್ಯೆಯ ತುಂಬಾ ಹಲವಾರು ಸೀತಾರಾಮ ದೇಗುಲಗಳಿವೆ. ಬಾಬರಿ ಮಸೀದಿ ಧ್ವಂಸ ಪ್ರಕರಣದ ನಂತರ ಅಲ್ಲಿನ ಸೀತಾರಾಮ ದೇಗುಲವೊಂದರ ಭಕ್ತರು ಸೌಹಾದತೆಯ ಕಾರ್ಯವೊಂದನ್ನು ಮಾಡಲು ತೀರ್ಮಾನಿಸಿದರು. ಅದೇನೆಂದರೆ ರಂಜಾನ್ ತಿಂಗಳಲ್ಲಿ ಮುಸ್ಲಿಂ ಬಾಂಧವರಿಗೆ ದೇಗುಲದ ಆವರಣದಲ್ಲಿ ಇಫ್ತಾರ್ ಊಟ ಆಯೋಜಿಸುವುದು. ಹಿಂದೂ ಮುಸ್ಲಿಂ ಒಟ್ಟಿಗೆ ಕುಳಿತು ಊಟ ಮಾಡುವುದು. ಇಂದಿಗೂ ಅದು ನಡೆದುಕೊಂಡು ಬರುತ್ತಲೇ ಇದೆ. ದೇಗುಲದ ಪೂಜಾರಿ ಯುಗಲ್ ಕಿಶೋರ್ ’ಈ ಇಫ್ತಾರ್ ಊಟವನ್ನು ನಾವು ಮುಂದುವರೆಸುತ್ತೇವೆ’ ಎಂದೂ ಮುಜಮಿಲ್ ಫಿಜಾ ’ನಾನು ನವರಾತ್ರಿಯನ್ನು ನನ್ನ ಹಿಂದೂ ಸ್ನೇಹಿತರೊಂದಿಗೆ ಆಚರಿಸುತ್ತೇನೆ’ ಎಂದೂ ಹೇಳುತ್ತಾರೆ.

9. ಪುತ್ತೂರಿನ ಸರ್ವೆ ಹಳ್ಳಿಯಲ್ಲಿ ದೇಗುಲ ನಿರ್ಮಿಸುತ್ತಿರುವ ಹಿಂದೂ-ಮುಸ್ಲಿಂ

ಮಂಗಳೂರಿನ ಸರ್ವೆ ಹಳ್ಳಿಯಲ್ಲಿ 800 ವರ್ಷಗಳಷ್ಟು ಹಳೆಯದಾದ ಶ್ರೀ ವಿಷ್ಣುಮೂರ್ತಿ ದೇಗುಲವಿದೆ. ಈ ಹಳ್ಳಿಯ ಮುಸ್ಲಿಮರು ದೇಗುಲದ ಜೀರ್ಣೋದ್ಧಾರ ಮಾಡಬೇಕಾಗಿ ಪದೇ ಪದೇ ಕೇಳಿಕೊಂಡದ್ದರಿಂದ ಈಗ ದೇಗುಲವನ್ನು ನವೀಕರಣಗೊಳಿಸಲು ಸಮಿತಿಯೊಂದನ್ನು ರಚಿಸಲಾಗಿದೆ. ಇದರ ಕಾರ್ಯಕ್ಕೆ ಹಿಂದೂಗಳೊಂದಿಗೆ ಮುಸ್ಲಿಮರೂ ಸಹ ಹಣಸಹಾಯ ಮಾಡಿದ್ದಾರೆ. ಸಮಿತಿಯ ಖಜಾಂಚಿ ಪ್ರಸನ್ನ ರೈ ಹೇಳುವಂತೆ ’ಸಂಪೂರ್ಣ ಹಳ್ಳಿ ಸೌಹಾರ್ದತೆಯಿಂದ ಕೂಡಿದೆ. ನಾವು ಉರುಸ್‌ನಲ್ಲಿ ಭಾಗವಹಿಸುತ್ತೇವೆ. ಮುಸ್ಲಿಮರು ದೇಗುಲದ ಉತ್ಸವಗಳಲ್ಲಿ ಪಾಲ್ಗೊಳ್ಳುತ್ತಾರೆ’ ಎನ್ನುತ್ತಾರೆ.

10. ಇಲ್ಲಿ ಮಠ ಮತ್ತು ದರ್ಗಾ ಎರಡೂ ಒಂದೆಡೆ.

ಕಲಬುರ್ಗಿಯ ಸುರಪುರದ ಬಳಿ ಕೃಷ್ಣಾ ನದಿಯ ದಂಡೆಯಲ್ಲಿ ತಿಂತಿಣಿ ಎಂಬ ಹಳ್ಳಿಯಿದೆ. ಇಲ್ಲಿ ಮೌನೇಶ್ವರ ದೇವಸ್ಥಾನ ಮತ್ತು ದರ್ಗಾ ಇದೆ. ಈ ಕಟ್ಟಡವನ್ನು ನೀವೊಮ್ಮೆ ನೋಡಿದರೆ ಮಂದಿರ-ಮಸೀದಿ ಕಂಡಂತಾಗುತ್ತದೆ. ಹಿಂದೂ ಹಾಗೂ ಮುಸ್ಲಿಂ ವಾಸ್ತುಶಿಲ್ಪ ಎರಡನ್ನೂ ಬೆರೆಸಿ ನಿರ್ಮಿಸಲಾಗಿದೆ. ಇದರೊಳಗೆ ಹೋದರೆ ಎದುರಿಗೆ ಮೌನೇಶ್ವರ ಸ್ವಾಮಿ ಸಾಧು ರೀತಿಯಲ್ಲಿ ಕುಳಿತಿರುವ ಮೂರ್ತಿ ಕಾಣುತ್ತದೆ. ಅದರ ಹಿಂಭಾಗದಲ್ಲಿ ಒಂದು ಬಾಗಿಲಿದೆ. ಆ ಬಾಗಿಲನ್ನು ತೆರೆದರೆ ಹಸಿರು ಚಾದರ ಹೊದ್ದಿರುವ ಸಮಾಧಿ ಕಾಣುತ್ತದೆ. ಈ ಮಠ ಮತ್ತು ದರ್ಗಾಕ್ಕೆ ಹಿಂದೂ ಮುಸ್ಲಿಂ ಇಬ್ಬರೂ ನಡೆದುಕೊಳ್ಳುತ್ತಾರೆ. ಫೆಬ್ರವರಿ ತಿಂಗಳಲ್ಲಿ ಇಲ್ಲಿ ತಿಂತಿಣಿ ಜಾತ್ರೆ ನಡೆಯುತ್ತದೆ. ಭರತ ಹುಣ್ಣಿಮೆಯನ್ನು ಐದು ದಿನಗಳ ಕಾಲ ಇಲ್ಲಿ ಆಚರಿಸಲಾಗುತ್ತದೆ. ಮೊಹರಂ ಆಚರಿಸಲಾಗುತ್ತದೆ. ಹಿಂದೂ-ಮುಸ್ಲಿಂ ಭಕ್ತರೆಲ್ಲರೂ ಪ್ರಸಿದ್ಧ ’ಅಲಿ ಪೀರ್’ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾರೆ. ಹಿಂದೂಗಳು ’ಇದನ್ನು ಪೀರಲ ಹಬ್ಬ’ ಎಂದು ಕರೆಯುತ್ತಾರೆ. ಉತ್ತರ ಕರ್ನಾಟಕದ ನೂರಾರು ಕಡೆಗಳಲ್ಲಿ ಹಿಂದೂ-ಮುಸ್ಲೀಂ ಇಬ್ಬರೂ ಮೊಹರಂ-ಪೀರಲ ಹಬ್ಬವನ್ನು ಆಚರಿಸುತ್ತಾರೆ.

* ಸಂಗ್ರಹ ಮತ್ತು ನಿರೂಪಣೆ:

ವಿಕಾಸ್ ಆರ್ ಮೌರ್‍ಯ

ವಿಕಾಸ್ ಆರ್ ಮೌರ್‍ಯ
ಕನ್ನಡದಲ್ಲಿ ದಲಿತ ಸೈದ್ಧಾಂತಿಕ ಪ್ರಜ್ಞೆಯನ್ನು ತನ್ನ ಬರಹ ಮತ್ತು ಹೋರಾಟದ ಮೂಲಕ ವಿಸ್ತರಿಸುತ್ತಿರುವ ಹೊಸ ತಲೆಮಾರಿನ ಬರಹಗಾರ ಮತ್ತು ಹೋರಾಟಗಾರ ವಿಕಾಸ್ ಆರ್ ಮೌರ್ಯ. ಗಣಿತ ಸ್ನಾತಕೋತ್ತರ ಪದವಿ ಮುಗಿಸಿರುವ ವಿಕಾಸ್ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಚಮ್ಮಟಿಕೆ’ ಪ್ರಕಟಿತ ಕೃತಿ


ಇದನ್ನೂ ಓದಿ: ಹಿಜಾಬ್ ವಿವಾದ ವಿಶೇಷ ವರದಿ: ಬಹುತ್ವ ಸಂಸ್ಕೃತಿಯ ಭಾರತದಲ್ಲಿ ಮತೀಯ ರಾಜಕಾರಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...