Homeಅಂಕಣಗಳುಹಾಸನ ಪ್ರಥಮ ಸ್ಥಾನಕ್ಕೆ ಭವಾನಿ ಕಾರಣ ಕಂಡ್ರೀ

ಹಾಸನ ಪ್ರಥಮ ಸ್ಥಾನಕ್ಕೆ ಭವಾನಿ ಕಾರಣ ಕಂಡ್ರೀ

- Advertisement -
- Advertisement -

ಯಾಹೂ |

ಅದೊಂದು ಕಾಲದಲ್ಲಿ ಎಸ್ಸೆಸೆಲ್ಸಿಯಲ್ಲಿ ಪೇಲಾಗುವುದು ಅವಮಾನವೇ ಅಲ್ಲ. ಆದರು ಪಾಸದವರು ಸರಸ್ವತಿ ಪುತ್ರನಂತೆ ಬೀಗುತ್ತಿದ್ದರು. ಕಾಲ ಮಾಗಿದ ಬದಲಾವಣೆಯಲ್ಲಿ ಬದುಕೇ ಮುಖ್ಯವಾಗಿ, ಡಿಗ್ರಿಗಳು ಸರ್ಟಿಪಿಕೇಟುಗಳಾಗುತ್ತಿರುವ ಸಮಯದಲ್ಲಿ ಫಲಿತಾಂಶಗಳೂ ಮಹತ್ವ ಕಳೆದುಕೊಂಡಿರುವಾಗ ಮಾನ್ಯ ರೇವಣ್ಣನವರ ಜಿಲ್ಲೆ ಎಸ್ಸೆಸ್ಸೆಲ್ಸಿಯಲ್ಲಿ ಟಾಪ್ ಒನ್ ನಂಬರಿಗೆ ಬಂದಿದೆಯಂತಲ್ಲಾ. ಈ ಅಚ್ಚರಿ ಸುದ್ದಿಯನ್ನು ರೇವಣ್ಣನವರ ಜೊತೆಯಲ್ಲದೆ ಇನ್ನಾರ ಜೊತೆ ಹಂಚಿಕೊಳ್ಳಬೇಕು ಅನ್ನಿಸಿ ಫೋನ್ ಮಾಡಿದಾಗ ರಿಂಗಾಯ್ತು.
ರಿಂಗ್‍ಠೋನ್: ಶಾರದೆ ದಯತೋರು ನೀ………. ಶಾರದೆ “ಹಲೋ ಯಾರ್ರೀ”
“ನಾನು ಸರ್ ಯಾಹು”
“ಯಾವೂ ಅಂದ್ರ್ಯಾರ್ರೀ”
“ಪತ್ರಕರ್ತ ಸರ್”
“ಏನಾಗಬೇಕು”
“ಏನೂ ಆಗಬೇಕಾಗಿಲ್ಲ ಸಾರ್, ಅಭಿನಂದನೆ ಹೇಳನ ಅಂತ ಮಾಡಿದೆ”
“ರಿಜಲ್ಟು ಬಂದ ಮ್ಯಾಲೆ ಹೇಳಿ”
“ಯಲಕ್ಷನ್ ವಿಷಯ ಅಲ್ಲ ಸಾ, ಹಾಸನ ಜಿಲ್ಲೇಲಿ ಈಸಾರಿ ಎಸೆಸೆಲ್ಸಿ ಎಕ್ಸಾಮಲ್ಲಿ ಮಕ್ಕಳು ಪ್ರಥಮ ಸ್ಥಾನಗಳಿಸಿವೆ”
“ಅದ್ಕೆ ಭವಾನಿಗೆ ಅಭಿನಂದನೆ ಹೇಳ್ರಿ”
“ಭವಾನಿ ಏನು ಮಾಡಿದ್ರು ಸಾರ್”
“ಇದೇನ್ರಿ ಹಿಂಕೇಳ್ತಿರಿ, ಭವಾನಿ ಏನು ವಸಿ ಕಷ್ಟ ಪಟ್ಳೇನ್ರಿ, ಅವುಳು ಕಷ್ಟಪಡದ ನಾನೇ ನೋಡಕ್ಕಾಗಲಿಲ್ಲ”
“ಆಶ್ಚರ್ಯ ಸಾರ್, ನಮಿಗೆ ಗೊತ್ತೇ ಇರಲಿಲ್ಲ.”
“ಅವುಳು ನನ್ನ ಮದುವೆಯಾದಾಗ ನನಿಗೇನು ಗೊತ್ತಿತ್ರಿ ಪ್ರತಿಯೊಂದನ್ನು ಕಲಿಸಿದ್ಲು.”
“ಪ್ರತಿಯೊಂದನ್ನು ಅಂದ್ರೆ ಸಾ”
“ಪೇಪರ್ ಓದದ ಕಲಿಸಿದ್ಲು, ಯಾರತ್ರ ಯಂಗೆ ಮಾತಾಡಬೇಕು ಅನ್ನದ್ರಿಂದ ಹಿಡುದು ಏನುತ್ತರ ಕೊಡಬೇಕು ಅನ್ನೋವರಿಗು ಪ್ರತಿಯೊಂದನ್ನು ಕಲಿಸಿದ್ಲು ಕಂಡ್ರಿ”
“ರಿಯಲಿ ದೇವೇಗೌಡ್ರು ಗ್ರೇಟ್ ಸಾರ್.”
“ಯಾಕ್ರೀ.”
“ತಮ್ಮ ಮಗನನ್ನ ಗ್ರಹಿಸಿ, ಅವನನ್ನ ತಿದ್ದಿ ವಿದ್ಯೆ ಬುದ್ದಿ ಕಲಸೊ ಹೆಣ್ಣು ತಂದು ಮದುವೆ ಮಾಡಿದ್ರಲ್ಲ ಅದ್ಕೆ.”
“ನಿಜವಾಗ್ಲು ಭವಾನಿ ನನ್ನ ಭಾಗಕ್ಕೆ ಕಾಳಿಕಂಡ್ರಿ.”
“ಅಷ್ಟು ವಳ್ಳೆ ಹೆಣ್ಣುಮಗಳ ಕಾಳಿ ಅಂತೀರಲಾ ಸಾರ್.”
“ನಾನೇಳದ ಸಲುಪ ತಿಳಕಳ್ರಿ, ಕವಿರತ್ನ ಸುಮ್ಮಸುಮ್ಮನೆ ಆದನೇನ್ರಿ, ಕಾಳಿ ಅವುನಿಗೆ ವಿದ್ಯೆ ಬುದ್ದಿ ಕೊಟ್ಟಮ್ಯಾಲವುನು ಕತೆ ಕವನ ಬರದ ಅಲವೇನ್ರಿ.”
“ರಿಯಲಿ ಗ್ರೇಟ್ ಸಾರ್, ಭವಾನಿ ನಿಮ್ಮ ಭಾಗದ ಸರಸ್ವತಿ; ರೇವಣ್ಣನಿಗೆ ವಿದ್ಯಾಬುದ್ದಿ ಕಲಿಸಿ, ಎಮ್ಮೆಲ್ಲೆ ಮಾಡಿ, ಮಂತ್ರಿ ಮಾಡಿ, ಇವತ್ತು ಕರ್ನಾಟಕಕ್ಕೆ ಒಬ್ಬ ಸಮರ್ಥ ಮಂತ್ರಿ ಕೊಟ್ಟಿರೋದ್ರ ಕ್ರೆಡಿಟ್ಟು ಭವಾನಿಗೇ ಸೇರಬೇಕು ಸಾ. ಅಂಥ ರೇವಣ್ಣನಿಗೇ ವಿದ್ಯೆ ಹೇಳಿದ್ಕೆ ಇಡೀ ಹಾಸನಕ್ಕೆ ಹೇಳೊ ಶಕ್ತಿ ಬಂತು.”
“ಅದೇ ಕಂಡ್ರಿ ನಾನೇಳದು. ಭವಾನಿ ಬರಿ ಜಿಲ್ಲಾ ಪಂಚಾಯ್ತಿ ಮೆಂಬ್ರಾಗಿ ಕುಂತಿರಲಿಲ್ಲ. ಜಿಲ್ಲೆ ಪ್ರತಿ ಶಾಲೆಗೂ ಹೋಗಿ ದಡ್ಡುಡುಗುರನ್ನೆಲ್ಲ ಪತ್ತೆ ಮಾಡೀ, ಕಡೆಗೆ ಅವುರಪ್ಪ ಅವ್ವನ್ನು ಭೇಟಿ ಮಾಡಿ ನಿಮ್ಮುಡಗರಿಗೆ ಯಂಗೆ ಪಾಠ ಮಾಡಬೇಕು ಯಂಗೆ ಪಾಸಾಗಂಗೆ ಮಾಡಬೇಕು ಅನ್ನದ ಹೇಳತಿದ್ಲು. ಅದ ನಾನೇ ನೋಡಿದೀನಿ.”
“ಮತ್ತೆ ಪ್ರಥಮ ಸ್ಥಾನಕ್ಕೆ ಜಿಲ್ಲಾಧಿಕಾರಿ ರೋಹಿಣಿ ಕಾರಣ ಅಂತರಲ್ಲ ಸಾ.”
“ನನಿಗೆಲ್ಲಿ ನಗಬೇಕೊ ಗೊತ್ತಾಯ್ತಾಯಿಲ್ಲ ಕಂಡ್ರಿ, ಈ ಮಾತ ಕೇಳಿ. ಅಲ್ರೀ ರೋಹಿಣಿ ಏನು ಜಿಲ್ಲೆ ಇಸುಗೂಲಿಗೆಲ್ಲಾ ಹೆಡ್ಮೇಷ್ಟ್ರಾಗಿದ್ಲ, ಹೋಗ್ಲಿ ಪ್ರಿನ್ಸಿಪಾಲಾಗಿದ್ಲಾ? ಪಾಪ ಅವುಳಿಗೆ ಜಿಲ್ಲಾಧಿಕಾರಿ ಕ್ಯಲಸನೆ ರಾಶಿ ಬಿದ್ದಿತ್ತು. ಆ ಕ್ಯಲಸನೆ ಒಂದು ಖಂಡಗ ಇದ್ದಾಗ ಇನ್ನ ಮಕ್ಕಳ ಮಾತಾಡಿಸೋದಕ್ಕೆ ಪುರುಸೊತ್ತೆಲ್ಲೀ?””
“ಅದು ನಿಜವೆ, ಆದ್ರು ಆ ಹೆಣಮಗಳು ತಾನು ಹ್ಯಾಂಗೆ ಓದಿ ಮುಂದಕ್ಕೆ ಬಂದೆ ಅನ್ನೋ ಮೆತಡ್ಡ ಇಡೀ ಜಿಲ್ಲೆ ಮೇಷ್ಟ್ರಿಗೆ ಹೇಳಿದ್ದರಂತೆ. ಅವುರು ವಿದ್ಯಾರ್ಥಿಗಳಿಗೆ ಹೇಳಿದ್ರಂತೆ, ಅಂಗಾಗಿ ಎಸ್ಸೆಲ್ಸಿ ರಿಜಲ್ಟಲ್ಲಿ ಜಿಲ್ಲೆ ಪ್ರಥಮ ಬಂದದೆ ಅಂತ ಪತ್ರಕರ್ತರೆ ಬರದವುರೆ ಸಾ.”
“ನೀವು, ಪತ್ರಕರ್ತರಿಗೇನು ಬರೀತೀರಿ ಕಂಡ್ರಿ, ಈಗ ಅಂಗ್ಯಲ್ಲ ಬರಿಯೋರು ಈಟು ದಿನ ಎಲ್ಲೋಗಿದ್ರಪ್ಪ, ರೋಹಿಣಿ ಎಲ್ಲೆಲ್ಲಿ ಪಾಠ ಮಾಡಿದ್ರು ಅಂತ ಆಗ್ಲೇ ಬರೀಬೇಕಾಗಿತ್ತು. ಅವುರೇನೋ ಮಾಡಿದ್ರು ಅಂತ ಬರೀತಾ ಇರೊ ಈ ಪತ್ರಕರ್ತರು. ಅದೇ ಭವಾನಿ ಬಗ್ಗೆ ಒಂದು ಮಾತ ಬರೀಲಿಲ್ಲ. ನಾನೇ ಹೇಳಬೇಕಾಯ್ತು.”
“ಪತ್ರಕರ್ತರು ಬುಡಿ ಸಾ ನಿಮ್ಮ ಪ್ಯಾಮಿಲಿ ಕಂಡ್ರೆಸಾಕು ಏನೇನೊ ಬರೀತಾರೆ, ಆದ್ರು ಬಹಳ ಹಿಂದೆನೆ ನೀವು ನಿಮ್ಮ ಭವಾನಿ ಮೇಡಂನ ಸರಿಯಾಗಿ ಬಳಸಿಕಂಡಿದ್ದ್ರೆ, ಯಲ್ರೂ ಎಸ್ಸೆಲ್ಸೀಲಿ ಪಸ್ಟ್ ಕ್ಲಾಸಲ್ಲಿ ಪಾಸಾಗಬಹುದಿತ್ತು.”
“ಅಂಗಾಗದಿಲ್ಲ ಕಂಡ್ರೀ, ನಮ್ಮ ಮನೆ ಹುಡುಗರಿಗೆ ನಾವು ಪಾಠ ಹೇಳಕ್ಕಾಗತ್ತೇ, ವಡದುಬುಡ್ತಿವಿ ಕಂಡ್ರಿ, ಅದ್ಕೆ ಅಲವ ಬ್ಯಾರೆ ಮೇಸ್ಟ್ರುತಕ್ಕೆ ಕಳಸದು. ಆಗ ಭವಾನಿ ನನಿಗೊಬ್ಬನಿಗೆ ವಿದ್ಯೆ ಬುದ್ದಿ ಕಲಸಕ್ಕೆ ಸಾಕಾಗೋಯ್ತಿತ್ತು. ಇನ್ನ ಉಳದೋರಿಗೆ ಎಲ್ಲಿಂದ ಹೇಳಿಕೊಡದ್ರಿ.”
“ಆಗದಿಲ್ಲ ಸಾ, ನಿಜಕ್ಕೂ ನಿಮ್ಮ ಕಥೆ ಕೇಳಿದ್ರೆ ಮಲ್ಲಮ್ಮನ ಪವಾಡ ಸಿನುಮ ಕತೆ ಕೇಳಿದಂಗಾಯ್ತು ಸಾ.”
“ನಾನು ಕವಿರತ್ನ ಕಾಳಿದಾಸ ಅಂದ್ರೆ, ನೀವು ಮಲ್ಲಮ್ಮನ ಪವಾಡ ಅಂತೀರಲ್ರೀ.”
“ಸಾರಿ ಸಾ. ಸರಿಯಾದ ಹೋಲಿಕೆನೂ ಬರಲ್ಲ ನಂಗೆ. ಆದ್ರು ಒಂದು ಡವುಟು ಸಾ.”
“ಏನ್ರಿ ಡವುಟು”
“2016-17ನೇ ಸಾಲಲ್ಲಿ 7ನೇ ಸ್ಥಾನದಲ್ಲಿದ್ದ ಜಿಲ್ಲೆ, 2019ಕ್ಕೆ ಪ್ರಥಮ ಸ್ಥಾನಕ್ಕೆ ಯಂಗೆ ಬಂತು ಅಂತ”
“ಅದೆ ಹೇಳ್ಳಿಲ್ಲವೇನ್ರಿ, ಭವಾನಿ ಮನಸು ಮಾಡಿದ್ಕೆ ಅಂತ”
“ನನಗಿರೊ ಡವುಟು ಪ್ರಕಾರ, ಇಂತ ಪವಾಡ ನ್ಯಡಿಬೇಕಾದ್ರೆ ಸಾಮೂಹಿಕ ಕಾಫಿ ನ್ಯಡಿದಿರಬೇಕು ಸಾ”
“ಅದ್ಯಂಗ್ರಿ ಇಡೀ ಜಿಲ್ಲೇನೆ ಕಾಫಿ ಮಾಡ್ತದೆ”
“ಒಂದು ಸತಿ ಪೋಲೀಸ್‍ನೋರ್ಯಲ್ಲ ಅಕೌಂಟ್ ಹೈಯರ್, ಲೋಯರ್, ಜನರಲ್ ಲಾ, ಎಕ್ಸಾಂ ತಗಂಡಿದ್ರು ಸಾ, ಎಸ್ಸಿ ಕೆಂಪಯ್ಯನೋರು ಮನಸು ಮಾಡಿದ್ರಿಂದ ಯಲ್ಲ ಪೋಲೀಸ್ರು ಕಾಫಿ ಮಾಡಿ ಯಲ್ಲ ಪಾಸಾಗಿದ್ರು. ಅಂಗೇನಾರ ಭವಾನಿ ಮಾಡಿದ್ರ ಅಂತ”
“ಯಾವನ್ರಿ ನಿಮಗೇಳಿದೋನು? ಹೊಟ್ಟಿಗೆ ಅನ್ನ ತಿಂತಿರೊ ಇಲ್ಲ ಮಣ್ಣು ತಿಂತಿರೊ”
“ಬರಿ ಮುದ್ದೆ ಸಾ”
“ಅದ್ಕೆ ಹಿಂಗೆ ಮಾತಾಡದು ನೀವು”
“ದೇವೇಗೌಡ್ರು ಅದ್ನೆ ಅಲವ ಸಾ ತಿನ್ನದು”
“ಥೂತ್ತೇರಿ”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...