ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ದಿನದಂದು ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೇಳಿದ್ದ ಹೇಳಿಕೆ ಈಗ ಬಿಹಾರ ಚುನಾವಣೆಯಲ್ಲಿ ಸಾಕಷ್ಟು ಸದ್ದು ಮಾಡಿದೆ. ತಾನು ಸೋಲುತ್ತಿರುವುದು ಖಚಿತವಾದಂತೆ ಮತದಾನ ನಿಲ್ಲಿಸಿ ಎಂದಿದ್ದ ಟ್ರಂಪ್ ಹೇಳಿದ್ದಂತೆ ಬಿಹಾರದಲ್ಲಿಯೂ ಎನ್‌ಡಿಎ ಮುನ್ನಡೆ ಕುಸಿಯುತ್ತಿದ್ದಾರೆ ಹಲವರು ‘ಸ್ಟಾಪ್ ಕೌಟಿಂಗ್’ ಎಂಬ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಬಗೆಯ ಮೀಮ್‌ಗಳಿಗೆ ಕಾರಣವಾಗಿದ್ದು, ಸಕತ್ ಟ್ರೋಲ್‌ಗೆ ಒಳಗಾಗಿದೆ.
ಬಿಹಾರ ಚುನಾವಣೆ ಫಲಿತಾಂಶ ಕುತೂಹಲಕಾರಿಘಟ್ಟದಲ್ಲಿದೆ. ಬೆಳಗ್ಗೆಯಿಂದ ಮಹಾಘಟಬಂಧನ್ ಮುನ್ನಡೆ ಸಾಧಿಸಿತ್ತು, ಮಧ್ಯಾಹ್ನದ ಹೊತ್ತಿಗೆ ಎನ್‌ಡಿಎ ಮುನ್ನಡೆಯಲ್ಲಿತ್ತು. ಆದರೆ ಸಂಜೆ ಹೊತ್ತಿಗೆ ನೆಕ್ ಟು ನೆಕ್ ಫೈಟ್ ಶುರುವಾಗಿದೆ.
ಇದರ ಜೊತೆಗೆ ಟ್ವಿಟರ್‌ನಲ್ಲಿ ಹೊಸ ಹೊಸ ಮೀಮ್‌ಗಳು ಪೋಸ್ಟ್ ಆಗುತ್ತಿವೆ. ಕೆಲವರು ಇವಿಎಂ ಬಗ್ಗೆ ಪ್ರಶ್ನೆ ಮಾಡಿದರೇ, ಮತ್ತೆ ಕೆಲವರು ಕಮಲಾ ಹ್ಯಾರಿಸ್ ರೀತಿಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಚಿತ್ರಿಸಿ ಕೀಟಲೆ ಮಾಡಿದ್ದಾರೆ. ಇನ್ನೂ ಕೆಲವರು ಎನ್‌ಡಿಎ ಮುನ್ನಡೆ ಕುಸಿಯುತ್ತಿದ್ದಂತೆ ‘ಮತ ಎಣಿಕೆ ನಿಲ್ಲಿಸಿ’ ಎಂಬ ಟ್ರಂಪ್ ಹೇಳಿಕೆಯನ್ನು ತಾವು ಪೋಸ್ಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ಚಿಲ್ ಡೊನಾಲ್ಡ್ ಚಿಲ್!: ಟ್ರಂಪ್ ಟ್ರೋಲ್ ಮಾಡಿ ಸೇಡು ತೀರಿಸಿಕೊಂಡ ಗ್ರೇಟಾ ಥನ್ಬರ್ಗ್!
ಮುಖ್ಯಮಂತ್ರಿ ನಿತೀಶ್ ಕುಮಾರ್ ಹೆಸರಲ್ಲಿ ನಕಲಿ ಖಾತೆಗಳನ್ನು ತೆಗೆದು ಪೋಸ್ಟ್‌ಗಳನ್ನು ಹಾಕಿದ್ದಾರೆ.

ಮತ್ತೊಬ್ಬ ಟ್ವಿಟರ್ ಬಳಕೆದಾರ, ಕಮಲಾ ಹ್ಯಾರಿಸ್ ಚುನಾವಣೆಯಲ್ಲಿ ಗೆಲುವು ಕಂಡ ಬಳಿಕ ಜೋ ಬೈಡನ್‌ಗೆ ಕರೆ ಮಾಡಿ ಮಾತನಾಡಿದ ರೀತಿಯಲ್ಲಿ, ನಿತೀಶ್ ಕುಮಾರ್ ಪ್ರಧಾನಿ ಮೋದಿಗೆ ಕರೆ ಮಾಡಿ ಗೆಲುವಿನ ಬಗ್ಗೆ ಸಂತಸ ಹಂಚಿಕೊಂಡ ಬಗ್ಗೆ ಮೀಮ್ ಮಾಡಲಾಗಿದೆ.
#Nitishkumar right now to @narendramodi ji..#BiharElectionResults#BiharElection2020#BiharElectionResults2020 pic.twitter.com/C43lUrEUkz
— Crime Master Gogo (@vipul2777) November 10, 2020
ಬಾಬು ರಾವಲ್ ಎಂಬುವವರು ‘ನಾನು ದೊಡ್ಡ ಅಂತರದಿಂದ ಗೆದ್ದಾಗಿದೆ. ಮತ ಎಣಿಕೆ ನಿಲ್ಲಿಸಿ’ ತಮಾಷೆ ಮಾಡಿದ್ದಾರೆ.
I WON THIS ELECTION. BY A LOT!
STOP THE COUNT.
— Babu Raowl (@RaowlGandhi) November 10, 2020


