Homeಮುಖಪುಟರತ್ನಗಿರಿ: ಭಯೋತ್ಪಾದಕ ದಾವೂದ್ ಇಬ್ರಾಹಿಂಗೆ ಸೇರಿದ 6 ಸ್ವತ್ತುಗಳು ಹರಾಜು

ರತ್ನಗಿರಿ: ಭಯೋತ್ಪಾದಕ ದಾವೂದ್ ಇಬ್ರಾಹಿಂಗೆ ಸೇರಿದ 6 ಸ್ವತ್ತುಗಳು ಹರಾಜು

- Advertisement -
- Advertisement -

ಭೂಗತ ಜಗತ್ತಿನ ದೊರೆ ಮತ್ತು ಹುಡುಕಲ್ಪಡುತ್ತಿರುವ ಭಯೋತ್ಪಾದಕ ದಾವೂದ್ ಇಬ್ರಾಹಿಂನ ಮೂಲ ಸ್ಥಳ ರತ್ನಗಿರಿಯಲ್ಲಿರುವ 6 ಸ್ವತ್ತುಗಳನ್ನು SAFEMA (Smugglers and Foreign Exchange Manipulators (Forfeiture of Property) Authority) ಇಂದು ಹರಾಜು ಹಾಕಿದೆ.

ಇಂದು ನಡೆದ ವರ್ಚುವಲ್ ಹರಾಜಿನಲ್ಲಿ ನಾಲ್ಕು ಸ್ವತ್ತುಗಳನ್ನು ದೆಹಲಿ ಮೂಲದ ವಕೀಲ ಭೂಪೇಂದ್ರ ಭರದ್ವಾಜ್ ಅವರು ಬಿಡ್ ಮಾಡಿದ್ದರೆ, ಉಳಿದ ಎರಡು ಬಿಡ್‌ಗಳನ್ನು ವಕೀಲ ಅಜಯ್ ಶ್ರೀವಾಸ್ತವ ಅವರು ಗೆದ್ದುಕೊಂಡಿದ್ದಾರೆ.

“ಹರಾಜಿನಲ್ಲಿ ಅತ್ಯುತ್ತಮ ಪ್ರತಿಕ್ರಿಯೆ ಬಂದಿದೆ. ರತ್ನಗಿರಿ ಮತ್ತು ಗೋರೆಗಾಂವ್‌ನಲ್ಲಿರುವ ಆರು ಸ್ವತ್ತುಗಳನ್ನು ಮಾರಾಟ ಮಾಡಲಾಗಿದೆ. ನಾಲ್ಕು ಬಿಡ್‌ಗಳನ್ನು ಭೂಪೇಂದ್ರ ಭಾರದ್ವಾಜ್ ಗೆದ್ದಿದ್ದರೆ, ಎರಡು ಅಜಯ್ ಶ್ರೀವಾಸ್ತವ ಗೆದ್ದಿದ್ದಾರೆ” ಎಂದು SAFEMA ಹೆಚ್ಚುವರಿ ಆಯುಕ್ತ ಆರ್.ಎನ್.ಡಿಸೋಜಾ ಸುದ್ದಿಗಾರರಿಗೆ ತಿಳಿಸಿದರು.

ಇದನ್ನೂ ಓದಿ: ದೆಹಲಿ ಗಲಭೆ: ಬಿಜೆಪಿ ನಾಯಕರ ವಿರುದ್ಧದ ದೂರುಗಳಿಗೆ ಕ್ರಮವಿಲ್ಲ- ಎನ್‌ಡಿಟಿವಿ ತನಿಖಾ ವರದಿ

ಕೆಲವು ತಾಂತ್ರಿಕ ಕಾರಣಗಳಿಂದಾಗಿ ಭಯೋತ್ಪಾದಕ ದಾವೂದ್ ಇಬ್ರಾಹಿಂಗೆ ಸೇರಿದ ಇನ್ನೊಂದು ಸ್ವತ್ತನ್ನು ಅಧಿಕಾರಿಗಳು ಹರಾಜಿನಿಂದ ಹಿಂತೆಗೆದುಕೊಂಡಿದ್ದಾರೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.

“ನಾವು ಮೂರು ವಿಧಾನಗಳಲ್ಲಿ ಹರಾಜು ಮಾಡುತ್ತೇವೆ. ಸಾರ್ವಜನಿಕ ಹರಾಜು, ಇ-ಹರಾಜು ಮತ್ತು ರೇಷ್ಮೆ ಟೆಂಡರ್. ಆದರೆ, ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಇದು ಬಹಳ ವಿಚಿತ್ರವಾದ ಪರಿಸ್ಥಿತಿ. ಆದ್ದರಿಂದ, ನಾವು ಸ್ವಲ್ಪ ಸುಧಾರಿಸಬೇಕಾಗಿತ್ತು. ಸಾರ್ವಜನಿಕ ಹರಾಜನ್ನು ನಡೆಸುವ ಬದಲು, ವರ್ಚುವಲ್ ಸಾರ್ವಜನಿಕ ಹರಾಜನ್ನು ನಡೆಸಿದ್ದೇವೆ” ಎಂದು ಡಿಸೋಜಾ ಹೇಳಿದರು.


ಇದನ್ನೂ ಓದಿ: ವಿದ್ಯಾರ್ಥಿ ಮಾರ್ಗದರ್ಶಿ: ಪಿಯುಸಿ ನಂತರ ಮುಂದೇನು?: ಆಯ್ಕೆಗಳ ಬಗ್ಗೆ ಸ್ಪಷ್ಟತೆ ಇರಲಿ; ಗೊಂದಲ ಬೇಡ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read