Homeಚಳವಳಿಶ್ರದ್ಧಾಂಜಲಿ : ಕರ್ನಾಟಕದ ಮಕ್ಕಳಿಗೂ ಪ್ರೇರಣೆಯಾಗಿದ್ದ ಸಂತ ಸುಂದರಲಾಲ್ ಬಹುಗುಣ

ಶ್ರದ್ಧಾಂಜಲಿ : ಕರ್ನಾಟಕದ ಮಕ್ಕಳಿಗೂ ಪ್ರೇರಣೆಯಾಗಿದ್ದ ಸಂತ ಸುಂದರಲಾಲ್ ಬಹುಗುಣ

- Advertisement -
- Advertisement -

ಋಷಿಯಂತೆ ಬದುಕಿ, ಪರಿಸರ ಜಾಗೃತಿ ಮೂಡಿಸಿ, ಅದಕ್ಕಾಗಿ ಪಾದಯಾತ್ರೆ ನಡೆಸಿ ಹೋರಾಟ ಮಾಡಿ ಹಿಮಾಲಯದ ತಪ್ಪಲು ಹಸಿರಾಗಿರುವಂತೆ ನೋಡಿಕೊಂಡ ಸುಂದರಲಾಲ್ ಬಹುಗುಣ ಅವರನ್ನು ಮೇ 21ರಂದು ಕಳೆದುಕೊಂಡೆವು.

ಎಂಟನೆಯ ತರಗತಿಯ ಇಂಗ್ಲಿಷ್ ಪಠ್ಯದಲ್ಲಿ ’ಚಿಪ್ಕೊ ಚಳವಳಿ’ಯ ಬಗ್ಗೆ ಪಾಠವಿತ್ತು. ಆ ಪಾಠವನ್ನು ಓದಿದ ನನ್ನ ಹಲವಾರು ವಿದ್ಯಾರ್ಥಿಗಳು ಆಡುಕುರಿಗಳಿಗಾಗಿ ಮತ್ತು ಉರುವಲಿಗಾಗಿ ಗಿಡ ಕಡಿಯುವವರೊಂದಿಗೆ ಜಗಳಕ್ಕಿಳಿದು ಪೊಲೀಸ್ ಸ್ಟೇಷನ್ನಿಗೆ ಸುದ್ದಿ ಮುಟ್ಟಿಸಿ ಹಲವಾರು ಗಿಡಗಳ ರಕ್ಷಣೆ ಮಾಡಿದರು. ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೂಟಿಯ ದಿನಗಳಂದು ಶಿಕ್ಷಕರ ಮಾರ್ಗದರ್ಶನದಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಸುತ್ತಿದ್ದರು. ಹೊಲ ಮನೆ ಇಲ್ಲದ ನೌಕರರ ಮಕ್ಕಳು ತಮ್ಮ ಸ್ನೇಹಿತರ ಹೊಲಗಳಲ್ಲಿ ಹಣ್ಣಿನ ಗಿಡ ನೆಟ್ಟರು. ಇಂತಹ ಎಲ್ಲ ಪರಿಸರ ರಕ್ಷಣಾ ಚಟುವಟಿಕೆಗೆ ಮೂಲಕಾರಣ ಸುಂದರಲಾಲ್ ಬಹುಗುಣರು. ಗಢವಾಲದ ಈ ಸಂತ ಕರ್ನಾಟಕದ ಮಕ್ಕಳನ್ನು ಈ ರೀತಿ ಗಿಡ ನೆಡಲು ಪ್ರೇರೆಪಿಸಿದ್ದರು.

ಕೆಲವರ್ಷಗಳ ಹಿಂದೆ ’ಪಶ್ಚಿಮ ಘಟ್ಟ ಉಳಿಸಿ’ ಅಭಿಯಾನದಲ್ಲಿ ಅವರು ಗೋವೆಗೆ ಬಂದಿದ್ದರು. ಅಲ್ಲಿ ಅವರಾಡಿದ ಮಾತುಗಳು ಇನ್ನೂ ನೆನಪಿನಲ್ಲಿ ಹಸಿರಾಗಿ ಉಳಿದಿವೆ.

’ನಾವು ಶಿವನ ಜಟೆಯಲ್ಲಿ ಗಂಗೆ ವಾಸಿಸಿದ್ದಾಳೆಂದು ನಂಬಿದ್ದೇವೆ. ಶಿವ ಹಿಮಾಲಯವಾಸಿ. ಅವನ ಜಟೆಯೆಂದರೆ ಹಿಮಾಲಯದ ತಪ್ಪಲಿನ ದಟ್ಟ ಅರಣ್ಯದಲ್ಲಿಯ ವೃಕ್ಷರಾಶಿ. ತಮ್ಮ ಬೇರುಗಳ ಮೂಲಕ ನೀರನ್ನು ಭೂಮಿಯ ಅಂತರಾಳಕ್ಕೆ ಇಳಿಸುತ್ತವೆ. ಹೀಗಾಗಿ ಅಂತರ್ಜಲ ಹೆಚ್ಚಾಗಿ ವರ್ಷವಿಡೀ ನಾವು ನೀರು ಪಡೆಯುತ್ತೇವೆ. ನಾವು ಅರಣ್ಯನಾಶದಿಂದ ಶಿವನ ಜಟೆಯನ್ನು ಕತ್ತರಿಸಿದರೆ ಗಂಗೆಯ ವಾಸಸ್ಥಾನವನ್ನು ಹಾಳುಮಾಡಿದಂತಾಗುತ್ತದೆ. ಅರಣ್ಯ ಉಳಿದರೆ ಗಂಗೆ, ಗಂಗೆ ಉಳಿದರೆ ನೀರು’ ಎಂದಿದ್ದರು.

ಹಲವು ದಶಕಗಳ ಹಿಂದೆಯೇ ಸುಂದರಲಾಲ್ ಬಹುಗುಣರು ಪ್ರವಾಹಗಳ ಪರಿಣಾಮವನ್ನು ಊಹಿಸಿದ್ದರು. ಹಿಮಾಲಯದ ದೇವಧಾರು ಮತ್ತು ಇತ್ಯಾದಿ ಮರಗಳ ನಾಶದಿಂದ ಭೂಮಿಯ ಮೇಲ್ಮೈ ಸಡಿಲಗೊಂಡು ಮಣ್ಣೆಲ್ಲ ಹಳ್ಳ ತೊರೆಗಳ ಮೂಲಕ ನದಿಯನ್ನು ಸೇರುತ್ತದೆ. ನದಿಯ ಆಳ ಕಡಿಮೆಯಾಗಿ ಅಗಲ ಹೆಚ್ಚಾಗುವುದು. ನದಿ ತನ್ನ ಒಡಲನ್ನು ಬಿಟ್ಟು ಸುತ್ತೆಲ್ಲ ಪಸರಿಸಿ ಹರಿಯುತ್ತದೆ. ಊರುಗಳು ಮತ್ತು ಹೊಲಗಳಲ್ಲೆಲ್ಲ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗುತ್ತದೆ. ಭೂಮಿಯ ಮೇಲ್ಮೈ ಮಣ್ಣು ನಾಶವಾಗಿ ಭೂಮಿ ಬರಡಾಗುತ್ತದೆ. ಜನರ ಆಹಾರ ಮೂಲವಾದ ಹೊಲಗಳನ್ನು ಕಳೆದುಕೊಳ್ಳುತ್ತಾರೆ. ಗಿಡ ಕಡಿಯುವುದನ್ನು ನಿಲ್ಲಿಸಿ ಪ್ರವಾಹಗಳನ್ನು ತಡೆಯಬೇಕೆಂದು ಆಗಲೇ ಹೇಳಿದ್ದರು. ಸರಕಾರಗಳು ಟಿಂಬರ್ ಮಾಫಿಯಾಗಳ ಪ್ರಭಾವಕ್ಕೆ ಮಣಿನು ಅವರ ಮಾತನ್ನು ನಿರ್ಲಕ್ಷಿಸಿದವು. ಪ್ರತಿಫಲ ಎಲ್ಲರೂ ಅನುಭವಿಸಬೇಕಾಯಿತು.

PC : Sakshi

ಅವರು ದೊಡ್ಡ ದೊಡ್ಡ ಅಣೆಕಟ್ಟುಗಳನ್ನು ವಿರೋಧಿಸಿದರು. ನಮ್ಮ ಅರಣ್ಯಗಳೇ ನಮ್ಮ ಅಣೆಕಟ್ಟುಗಳು. ಅರಣ್ಯ ಉಳಿಸಿದರೆ ಅಲ್ಲಿಯ ಗಿಡಮರಗಳು ಅಂತರ್ಜಲ ಹೆಚ್ಚಿಸಿ ವರ್ಷವಿಡಿ ನೀರನ್ನು ಹಿಡಿದಿಡುತ್ತವೆ. ನದಿಗಳು ಹನ್ನೆರಡು ತಿಂಗಳು ಹರಿಯುತ್ತವೆ. ಜೀವ ವೈವಿಧ್ಯ ರಕ್ಷಣೆಯಾಗುತ್ತದೆ. ಮಾನವನ ಅವಶ್ಯಕತೆಗಳಾದ Food, Fodder, Fibre, Fertilizer, Furniture ಇತ್ಯಾದಿಗಳು ಸುಲಭವಾಗಿ ದೊರಕುತ್ತವೆ. ಇಂತಹ ದಟ್ಟ ಅರಣ್ಯ ನಾಶಮಾಡಿ ಅಣೆಕಟ್ಟು ಕಟ್ಟಿ ನೀರನ್ನು ಉಳಿಸುವ ಪ್ರಯತ್ನವೆಂದರೆ ಜಲಸಂಪನ್ಮೂಲವನ್ನು ನಾಶ ಮಾಡಿ ಜಲ ಉಳಿಸುವ ಯತ್ನ. ಈ ಜಲಾಶಯಗಳು ಅರ್ಥಹೀನ, ಹಿಮಾಲಯದ ತಪ್ಪಲಿನಲ್ಲಿ ಈ ಜಲಾಶಯಗಳು ಟೈಂಬಾಂಬ್ ಇಟ್ಟಂತೆ ಎಂದು ಹೇಳುತ್ತಿದ್ದರು. ದೊಡ್ಡ ದೊಡ್ಡ ಅಣೆಕಟ್ಟುಗಳು ನಿರ್ಮಾಣದ ವಿರುದ್ಧ ಹೋರಾಟ ಮಾಡಿದರು.

ಗೋಧಿ, ಅಕ್ಕಿಯನ್ನು ಬೆಳೆಯಲು ಬಹಳ ನೀರು ಬೇಕು. ಅದರ ಬದಲಿಗೆ ಕಡಿಮೆ ನೀರು ಬೇಡುವ ತೃಣಧಾನ್ಯಗಳನ್ನು ಬೆಳೆಯಲು ಪ್ರೋತ್ಸಾಹಿಸಿದರು. ತಾವು ಗೋಧಿ ಮತ್ತು ಅಕ್ಕಿಯನ್ನು ಉಣ್ಣುವುದನ್ನೇ ಬಿಟ್ಟರು.

ಅವರು ಕರ್ನಾಟಕದ ಲಕ್ಷವೃಕ್ಷ ಆಂದೋಲನ, ಅಪ್ಪಿಕೊ ಚಳವಳಿ ಇತ್ಯಾದಿಗಳಲ್ಲಿ ಭಾಗವಹಿಸಿದ್ದರು. ಇಲ್ಲಿಯ ಬಹಳಷ್ಟು ಶಾಲಾಮಕ್ಕಳನ್ನು ಭೇಟಿಯಾಗಿ ಅವರೊಂದಿಗೆ ಮಾತನಾಡಿದರು. ಗಿಡಮರ ನೆಡಲು ಪ್ರೇರೇಪಿಸಿದರು.

ಆ ಹಿರಿಯ ಜೀವ ತನ್ನ ಮುಂದಿನ ಜನಾಂಗಗಳ ಬಗೆಗೆ ಹೊಂದಿದ್ದ ಕಾಳಜಿಯನ್ನು ನಾವು ಅರ್ಥಮಾಡಿಕೊಳ್ಳಬೇಕು. ಭೂಮಿಯ ಮೇಲಿನ ಹಸಿರು ಹೊದಿಕೆ ಉಳಿಸಿಕೊಳ್ಳಬೇಕು. ಈ ಮುಖಾಂತರ ಸುಂದರಲಾಲ್ ಬಹುಗುಣರಿಗೆ ಶ್ರದ್ಧಾಂಜಲಿ ಅರ್ಪಿಸಬೇಕು.

ಆರ್ ಜಿ ತಿಮ್ಮಾಪುರ
ನಿವೃತ್ತ ಶಿಕ್ಷಕರು, ಪರಿಸರಾಸಕ್ತರು ಮತ್ತು ಪ್ರಸ್ತುತ ಸಾವಯವ ಕೃಷಿಕರು


ಇದನ್ನೂ ಓದಿ: ‘ಏನಪ್ಪ, ದೇವರು ಇದಾನೆ ಅನಿಸುತ್ತಾ, ಇಲ್ಲಾ ಅನಿಸುತ್ತಾ?’ ದೊರೆಸ್ವಾಮಿ ಜೊತೆಗಿನ ನೆನಪು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...