ಬಹುಭಾಷಾ ನಟಿ ತಾಪ್ಸಿ ಪನ್ನು 34 ನೇ ವರ್ಷದ (ಆಗಸ್ಟ್ 1) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಬಾರಿ ಉತ್ತರಾಖಂಡದ ನೈನಿತಾಲ್‌ನಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ತಾಪ್ಸಿ ಪನ್ನು ಅವರ ಮುಂದಿನ ಚಿತ್ರ ಬ್ಲೂರ್ ನೈನಿತಾಲ್‌ನಲ್ಲಿ ಚಿತ್ರೀಕರಣಗೊಳ್ಳುತ್ತಿದೆ.
ನಟಿ ತಾಪ್ಸಿ ತನ್ನ ನಿರ್ಮಾಣ ಸಂಸ್ಥೆಯಿಂದ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಅವರ ಸಂಸ್ಥೆಯ ಮೊದಲ ಸಿನಿಮಾ ಬ್ಲೂರ್ ಆಗಿದೆ. ನಿರ್ಮಾಪಕಿಯಾಗಿರುವ ತಾಪ್ಸಿ, ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಭಾನುವಾರ ಮುಂಜಾನೆಯೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಚಿತ್ರವನ್ನು ಪೋಸ್ಟ್ ಮಾಡುವ ಮೂಲಕ ತಾವು ನೈನಿತಾಲ್‌ನಲ್ಲಿ ಹುಟ್ಟುಹಬ್ಬ ಆಚರಿಸುತ್ತಿರುವ ಸುಳಿವು ನೀಡಿದ್ದಾರೆ.
ಇದನ್ನೂ ಓದಿ: ’ಒಂದು ಟ್ವೀಟ್‌ನಿಂದ ನಿಮ್ಮ ಐಕ್ಯತೆ ಧಕ್ಕೆ ಆಗುವುದಾದರೆ…’ ಭಾರತೀಯ ಸಲೆಬ್ರಿಟಿಗಳ ಕಪಾಳಕ್ಕೆ ಬಾರಿಸಿದ ತಾಪ್ಸಿ ಪನ್ನು!
View this post on Instagram
ನಟನೆಯ ಜೊತೆಗೆ ಕೇಂದ್ರದ ಬಿಜೆಪಿ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ದ ನಿರಂತರವಾಗಿ ಧ್ವನಿ ಎತ್ತುತ್ತಿದ್ದ ಖ್ಯಾತ ಬಾಲಿವುಡ್ ನಟಿ ತಾಪ್ಸಿ ಪನ್ನು ಅವರ ಆಸ್ತಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು.

ಪಿತೃಪ್ರಧಾನತೆಯ ಕರಾಳತೆಯನ್ನು ಹೇಳುವ ತಾಪ್ಸಿ ಪನ್ನು ನಟನೆಯ ‘ತಪ್ಪಡ್’ ಚಿತ್ರ ತಪ್ಪಡ್ 66ನೇ ಫಿಲ್ಮ್ ಫೇರ್‌ನಲ್ಲಿ 7 ಪ್ರಶಸ್ತಿಗಳನ್ನು ಗೆದ್ದುಕೊಂಡಿತ್ತು. ‘ತಪ್ಪಡ್’ ಚಿತ್ರ ಅತ್ಯುತ್ತಮ ಚಿತ್ರ, ತಾಪ್ಸಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಬಾಚಿಕೊಂಡಿದ್ದರು.

ಪಿಂಕ್ ಸಿನಿಮಾ ಬಾಲಿವುಡ್‌ನಲ್ಲಿ ತಾಪ್ಸಿಗೆ ಭದ್ರ ಬುನಾದಿ ಹಾಕಿಕೊಟ್ಟಿತು.

ತಾಪ್ಸಿ ಪನ್ನು ಮಹಿಳಾ ಪ್ರದಾನ ಚಿತ್ರಗಳಲ್ಲಿ ಛಾಪು ಮೂಡಿಸಿದ್ದಾರೆ.

ಇದನ್ನೂ ಓದಿ: 66ನೇ ಫಿಲ್ಮ್ ಫೇರ್ ಅವಾರ್ಡ್ ಪ್ರಕಟ: 7 ಪ್ರಶಸ್ತಿ ಗೆದ್ದ ತಾಪ್ಸಿ ಪನ್ನು ನಟನೆಯ ‘ತಪ್ಪಡ್’ ಚಿತ್ರ


