ತಮಿಳುನಾಡಿನಲ್ಲಿ ರಾಷ್ಟ್ರೀಯ ಪಕ್ಷಗಳಿಗಿಂತ ಪ್ರಾದೇಶಿಕ ಪಕ್ಷಗಳಿಗೆ ಮನ್ನಣೆ ಹೆಚ್ಚು. ಪ್ರಾದೇಶಿಕ ಪಕ್ಷಗಳ ನಾಯಕರುಗಳಿಗೆ ಇರುವ ಬೆಲೆ ಗೌರವ, ಅವರ ಬಗ್ಗೆ ಇರುವ ನಂಬಿಕೆ, ರಾಷ್ಟ್ರೀಯ ಪಕ್ಷ ಬಿಜೆಪಿ ನಾಯಕರುಗಳಿಗೆ ಇಲ್ಲಿ ದೊರೆಯುವುದು ಅಸಾಧ್ಯ. ಇದಕ್ಕೆ ತಮಿಳುನಾಡಿನಲ್ಲಿ ರಾರಾಜಿಸುತ್ತಿರುವ ಬಿಜೆಪಿ ಅಭ್ಯರ್ಥಿಗಳ ಪೋಸ್ಟರ್‌ಗಳೇ ಸಾಕ್ಷಿಯಾಗಿವೆ. ಸದ್ಯ ನಡೆಯುತ್ತಿರುವ ತಮಿಳುನಾಡು ಚುನಾವಣೆಯಲ್ಲಿ ಬಿಜೆಪಿ ನಾಯಕರ ಚಿತ್ರಗಳನ್ನು, ಅದರಲ್ಲಿಯೂ ಪ್ರಧಾನಿ ಮೋದಿ ಚಿತ್ರವನ್ನು ಪ್ರಚಾರದಲ್ಲಿ ಬಳಸಲು ಬಿಜೆಪಿ ಅಭ್ಯರ್ಥಿಯೊಬ್ಬರು ಹಿಂದೇಟು ಹಾಕುತ್ತಿದ್ದಾರೆ.
ಕೊಯಮತ್ತೂರು ದಕ್ಷಿಣ ಕ್ಷೇತ್ರದಿಂದ ಕಣಕ್ಕಿಳಿದಿರುವ ಬಿಜೆಪಿ ಅಭ್ಯರ್ಥಿ 50 ವರ್ಷದ ವನತಿ ಶ್ರೀನಿವಾಸನ್‌ರವರ ಚುನಾವಣಾ ಪ್ರಚಾರಗಳ ಬ್ಯಾನರ್‌ಗಳಲ್ಲಿ ಮತ್ತು ಕರಪತ್ರದಲ್ಲಿ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರು ಯಾರು ಕಾಣಿಸಿಕೊಳ್ಳದಿರುವುದು ಚರ್ಚೆಗೆ ಗ್ರಾಸವಾಗಿದೆ.
ಆದರೆ ಅವರ ಬ್ಯಾನರ್‌ಗಳಲ್ಲಿ ತಮ್ಮ ಮಿತ್ರ ಪಕ್ಷ ಎಐಎಡಿಎಂಕೆಯ ಮುಖ್ಯಮಂತ್ರಿ ಎಡಪಡ್ಡಿ ಕೆ ಪಳನಿಸ್ವಾಮಿ ,ಉಪ ಮುಖ್ಯಮಂತ್ರಿ ಓ ಪನ್ನಿರ ಸೆಲ್ವಂ, ದಿವಂಗತ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಚಿತ್ರಗಳು ಕಾಣಿಸಿಕೊಂಡಿವೆ!
BJP which makes fun of freebies but in TN:
– 1500₹ monthly for housewives
– yearly 6 cylinder free
– free washing machine and solar gas for all
– cable connection for everyone
– one member of family to get gov jobNO MODI PICTURE in campaigning pic.twitter.com/X26rs1VjvW
— پربھا ਪ੍ਰਬਾ #VoteForDMKAlliance (@deepsealioness) March 24, 2021
ತಮ್ಮ ಪ್ರಣಾಳಿಕೆಯ ಮುಖ್ಯಾಂಶಗಳಿರುವ ಈ ಪೋಸ್ಟರ್‌ನಲ್ಲಿ ಬಿಜೆಪಿ ನಾಯಕರಾದ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ ಸೇರಿದಂತೆ ತಮಿಳುನಾಡು ಚುನಾವಣಾ ಉಸ್ತುವಾರಿ ಸಿ.ಟಿ.ರವಿ ಚಿತ್ರಗಳು ಕಾಣಿಸಿಕೊಂಡಿಲ್ಲ. ಇವರ ಚಿತ್ರಗಳನ್ನು ಎಲ್ಲೂ ಬಳಸಿಕೊಂಡಿಲ್ಲ.
ಇಷ್ಟೇ ಅಲ್ಲದೆ ವನತಿ ಶ್ರೀನಿವಾಸನ್ ತಮಿಳುನಾಡಿನಲ್ಲಿ ಉತ್ತಮ ಹೆಸರು ಪಡೆದಿದ್ದಾರೆ. 2016ರ ಚುನಾವಣೆಯಲ್ಲಿ ಕಾಫಿ ವಿತ್ ವನತಿ, ವನತಿಯನ್ನು ಕೇಳಿ ಎಂಬ ವಿಭಿನ್ನ ಚುನಾವಣಾ ಐಡಿಯಾಗಳಿಂದ ಈಕೆ ತಮಿಳುನಾಡಿನಲ್ಲಿ ಒಳ್ಳೆಯ ಹೆಸರು ಗಳಿಸಿದ್ದಾರೆ.
ಕೊಯಮತ್ತೂರು ದಕ್ಷಿಣ ಕ್ಷೇತ್ರದಿಂದ ಮಕ್ಕಳ್ ನೀಧಿ ಮಯ್ಯಂ ಪಕ್ಷದಿಮದ ನಟ, ರಾಜಕಾರಣಿ ಕಮಲ್ ಹಾಸನ್ ಕಣ್ಕಕೆ ಇಳಿಯುತ್ತಿದ್ದು, ಈ ಹಿನ್ನೆಲೆಯಲ್ಲಿ ವನತಿ ಶ್ರೀನಿವಾಸನ್ ಪ್ರಚಾರವನ್ನು ಚುರುಕುಗೊಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿದ್ದರೂ ಕೂಡ ಮಿತ್ರ ಪಕ್ಷ ಎಐಎಡಿಎಂಕೆ ನಾಯಕರುಗಳ ಮುಖಗಳೊಂದಿಗೆ ಚುನಾವಣೆಯನ್ನು ಎದುರಿಸಲು ರೆಡಿಯಾಗಿದ್ದಾರೆ.
ಒಟ್ಟಾರೆ, ಪ್ರಾದೇಶಿಕ ಪಕ್ಷಗಳೇ ಮೇಲುಗೈ ಸಾಧಿಸುವ ತಮಿಳುನಾಡಿನಲ್ಲಿ ಬಿಜೆಪಿಗೆ ಯಾವುದೇ ಮನ್ನಣೆ ಇಲ್ಲ. ಸಮಾವೇಶಗಳಲ್ಲಿ ಭಾರಿ ಸಂಖ್ಯೆಯಲ್ಲಿ ಸೇರುವ ಜನರು ಬಿಜೆಪಿಯ ಮತಗಳಾಗಿ ಮಾರ್ಪಾಡಾಗುವುದು ಕಷ್ಟ ಎಂಬುದು ನಾಯಕುಗಳಿಗೆ ತಿಳಿದಿರುವಂತಿದೆ. ಇದೆ ಕಾರಣಕ್ಕೆ ತಮ್ಮ ಪಕ್ಷದ ಅಭ್ಯರ್ಥಿಗಳ ಪೋಸ್ಟರ್, ಬ್ಯಾನರ್‌ಗಳಲ್ಲೂ ಮಿತ್ರಪಕ್ಷದ ನಾಯಕರುಗಳ ಚಿತ್ರಗಳನ್ನೇ ಹಾಕಿ ಮತಯಾಚನೆ ಮಾಡಲಾಗುತ್ತಿದೆ. ಬಿಜೆಪಿ ನಾಯಕರ ಚಿತ್ರಗಳನ್ನು ಬಳಸಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ‘ಸೀರೆ ಧರಿಸಿ ಕಾಲು ಪ್ರದರ್ಶಿಸುವುದು ಬಂಗಾಳಿ ಸಂಸ್ಕೃತಿಯಲ್ಲ’- ‘ಬರ್ಮುಡಾ’ ಹೇಳಿಕೆ ಸಮರ್ಥಿಸಿದ ಬಿಜೆಪಿ ಅಧ್ಯಕ್ಷ


