ತಮಿಳುನಾಡು ವಿಧಾನಸಭಾ ಚುನಾವಣೆ ದಿನ ದಿನಕ್ಕೂ ರಂಗೇರುತ್ತಿದ್ದು, ಪ್ರತಿದಿನ ಒಂದಲ್ಲ ಒಂದು ಬದಲಾವಣೆಗಳಾಗುತ್ತಿವೆ. ಚುನಾವಣಾ ಸೀಟು ಹಂಚಿಕೆಯಿಂದ ಹಲವು ಬಿರುಕುಗಳು ಕಾಣಿಸಿಕೊಂಡಿವೆ. ಹಾಗಾಗಿ AIADMK-BJP ಮೈತ್ರಿಯಿಂದ ನಟ ವಿಜಯಕಾಂತ್ ಅವರ DMDK ಹೊರಬಂದಿದೆ.
ನಟ, ರಾಜಕಾರಣಿ ವಿಜಯಕಾಂತ್ ಅವರ ದೇಸಿಯಾ ಮುರ್ಪೊಕ್ಕು ದ್ರಾವಿಡ ಕಜಗಂ (DMDK) ವಿಧಾನಸಭಾ ಚುನಾವಣೆಗೆ ಇನ್ನೊಂದು ತಿಂಗಳು ಇರುವಾಗ ಎಐಎಡಿಎಂಕೆ-ಬಿಜೆಪಿ ಮೈತ್ರಿ ತ್ಯಜಿಸಿದ್ದಾರೆ. ಆಡಳಿತಾರೂಢ AIADMK ಯೊಂದಿಗೆ ಸ್ಥಾನ ಹಂಚಿಕೆ ಮಾತುಕತೆ ವಿಫಲವಾದ ನಂತರ ಡಿಎಂಡಿಕೆ ಹಠಾತ್ ನಿರ್ಧಾರ ತೆಗೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಚುನಾವಣೆಗಾಗಿ ಎಐಎಡಿಎಂಕೆ ಮತ್ತು ಬಿಜೆಪಿ ತಮ್ಮ ಸ್ಥಾನ ಹಂಚಿಕೆ ಒಪ್ಪಂದವನ್ನು ಕಳೆದ ವಾರ ಪ್ರಕಟಿಸಿತ್ತು. ಡಿಎಂಡಿಕೆಗೆ ನಿರೀಕ್ಷಿತ ಕ್ಷೇತ್ರಗಳನ್ನು ಹಂಚಿಕೆ ಮಾಡದಿರುವುದು ಅವರು ಮೈತ್ರಿ ತೊರೆಯಲು ಕಾರಣವೆಂದು ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ತಮಿಳುನಾಡು ಚುನಾವಣೆ: BJPಗೆ 20 ಮತ್ತು PMKಗೆ 23 ಸೀಟು ನೀಡಿದ AIADMK
Actor-turned-politician Vijayakanth led Desiya Murpokku Dravida Kazhagam quits AIADMK-BJP alliance. Party cites the non-allocation of expected seats or constituencies as the reason behind their leaving the alliance.
— ANI (@ANI) March 9, 2021
ಸದ್ಯಕ್ಕೆ, ಡಿಎಂಡಿಕೆ ಪಕ್ಷಕ್ಕೆ ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಮೈತ್ರಿ ಮಾಡಿಕೊಳ್ಳಲು ಎಎಂಎಂಕೆ ಅಥವಾ ಎಂಎನ್‌ಎಂ ಮಾತ್ರ ಇವೆ. ಆದರೆ, ಈಗಾಗಲೇ ಕಮಲ್ ಹಾಸನ್ ಅವರ ಮಕ್ಕಳ್ ನೀಧಿ ಮಯ್ಯಂ (ಎಂಎನ್‌ಎಂ) ತನ್ನ ಮಿತ್ರಪಕ್ಷಗಳೊಂದಿಗೆ ಸೀಟು ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸಿದೆ.
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಕಮಲ್ ಹಾಸನ್ ಅವರ ಮಕ್ಕಳ್ ನೀಧಿ ಮಯ್ಯಂ 154 ಸ್ಥಾನಗಳಿಗೆ ಸ್ಪರ್ಧಿಸಲಿದ್ದರೆ, ಉಳಿದ 80 ಸ್ಥಾನಗಳನ್ನು ಎಂಎನ್‌ಎಂನ ಮೈತ್ರಿ ಪಾಲುದಾರರಾದ ಅಖಿಲ ಭಾರತ ಸಮತುವಾ ಮಕ್ಕಳ್ ಕಚ್ಚಿ (ಎಐಎಸ್‌ಎಂಕೆ) ಮತ್ತು ಇಂಡಿಯಾ ಜನನಾಯಕ ಕಚ್ಚಿ (ಐಜೆಕೆ)ಗೆ ನೀಡಲಾಗಿದೆ.
ಇದನ್ನೂ ಓದಿ: ತಮಿಳುನಾಡು: DMK 180 ಸ್ಥಾನಗಳಲ್ಲಿ ಸ್ಪರ್ಧಿಸಲು ಹಠ ಹಿಡಿದಿರುವುದೇಕೆ?


