ತಮಿಳುನಾಡಿನ ಎಐಎಡಿಎಂಕೆ ಶಾಸಕ ಅಂತರ್ಜಾತಿ ವಿವಾಹ ಮಾಡಿಕೊಂಡಿದ್ದು, ಈ ಸುದ್ಧಿ ರಾಜ್ಯದಾದ್ಯಂತ ಶರವೇಗದಲ್ಲಿ ವೈರಲ್ ಆಗಿತ್ತು. ಆದರೆ, ಯುವತಿಯ ತಂದೆ, “ತನ್ನ ಮಗಳನ್ನು ಅಪಹರಿಸಿ, ತಮ್ಮ ನಂಬಿಕೆಯನ್ನು ಹಾಳುಮಾಡಿದ್ದಾರೆ ಎಂದು ಆರೋಪಿಸಿ, ಆತ್ಮಹತ್ಯೆಗೆ ಯತ್ನಿಸಿದ್ದು, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಳ್ಳುವ ಮೊದಲೇ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಅಂತರ್ಜಾತಿ ವಿವಾಹದಿಂದ ಹತ್ಯೆಯಾದ ಪ್ರಣಯ್ ಹೆಂಡತಿ ಅಮೃತಗೆ ತಂದೆಯಿಂದ ಮತ್ತೆ ಬೆದರಿಕೆ: ದೂರು ದಾಖಲು
ದಲಿತ ಸಮುದಾಯಕ್ಕೆ ಸೇರಿದ 36 ವರ್ಷದ ಶಾಸಕ ಪ್ರಭು ಸೋಮವಾರ ಬೆಳಿಗ್ಗೆ ತಮ್ಮ ನಿವಾಸದಲ್ಲಿ ಸೌಂದರ್ಯ ಎಂಬ ಬ್ರಾಹ್ಮಣ ಯುವತಿಯನ್ನು ವಿವಾಹವಾಗಿದ್ದರು. ಇದನ್ನು ಒಪ್ಪದ ಯುವತಿಯ ತಂದೆ ಎಸ್.ಸ್ವಾಮಿನಾಥನ್ ಅಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿದ್ದರು.
ಇದನ್ನೂ ಓದಿ: 19 ದಿನಗಳಲ್ಲಿ ಮುರಿದು ಬಿದ್ದ ಅಂತರ್ಜಾತಿ ವಿವಾಹ : ಹುಡುಗ ಆಸ್ಪತ್ರೆಯಲ್ಲಿ, ಹುಡುಗಿಗೆ ಮತ್ತೊಂದು ಮದುವೆಗೆ ಸಿದ್ಧತೆ
“ಪ್ರಭು ನಮಗೆ ಹಲವು ವರ್ಷಗಳಿಂದ ಪರಿಚಯವಿದ್ದು, ನನ್ನ ಮಗನಂತೆ ಇದ್ದ. ಈಗ ಆ ನಂಬಿಕೆಯನ್ನು ಹಾಳುಮಾಡಿದ್ದಾನೆ. ನನ್ನ ಮಗಳಿಗೆ ಆಮಿಷವೊಡ್ಡಿದ್ದಾನೆ. ಆಕೆಗೆ ಬೆದರಿಕೆ ಒಡ್ಡಿ ವಿವಾಹವಾಗಿದ್ದಾನೆ. ನನಗೆ ಜಾತಿ ಸಮಸ್ಯೆಯಲ್ಲ. ಆದರೆ ಅವರಿಬ್ಬರ ನಡುವೆ 17 ವರ್ಷಗಳ ವಯಸ್ಸಿನ ಅಂತರವಿದೆ. ಅಕ್ಟೋಬರ್ 1 ರಂದು 4 ಗಂಟೆಯ ಸುಮಾರಿಗೆ ತನ್ನ ಮಗಳನ್ನು ಅಪರಿಹಿಸಿದ್ದಾನೆ” ಎಂದು ಯುವತಿಯ ಪೋಷಕರು ಆರೋಪಿಸಿದ್ದಾರೆ.
ಆದರೆ ಪ್ರಭು ಅಪಹರಣದ ಆರೋಪವನ್ನು ತಿರಸ್ಕರಿಸಿ, ಇದನ್ನು ಸ್ಪಷ್ಟಪಡಿಸಲು ಸೌಂದರ್ಯ ಅವರೊಂದಿಗಿನ ವೀಡಿಯೋವೊಂದನ್ನು ಬಿಡುಗಡೆ ಮಾಡಿದ್ದರು. ಇದು ಈಗ ವೈರಲ್ ಆಗುತ್ತಿದೆ. ಯುವತಿಯ ಪೋಷಕರ ಆರೋಪಗಳನ್ನು ತಿರಸ್ಕರಿಸಿದ ಪ್ರಭು, “ಈ ವಿವಾಹಕ್ಕೆ ಅವರ ಅನುಮತಿ ಕೋರಿದ್ದೆ. ಆದರೆ ಅವರು ಒಪ್ಪಲಿಲ್ಲ. ನಾವಿಬ್ಬರೂ ಪರಸ್ಪರ ಪ್ರೀತಿಸಿದ್ದೇವೆ. ನನ್ನ ತಂದೆ ತಾಯಿಯ ಒಪ್ಪಿಗೆಯೊಂದಿಗೆ ಈಗ ವಿವಾಹವಾಗಿದ್ದೇವೆ. ಯುವತಿಯ ಪೋಷಕರು ಆರೋಪಿಸುವಂತೆ ಯಾವುದೇ ಕೊಲೆ ಬೆದರಿಕೆಯನ್ನೂ ನಾನು ಹಾಕಿಲ್ಲ” ಎಂದು ವೀಡಿಯೋದಲ್ಲಿ ಹೆಳಿದ್ದಾರೆ.
ಇದನ್ನೂ ಓದಿ: ಅಂತರ್ಜಾತಿ ವಿವಾಹವಾಗಿದ್ದ ಶಾಸಕನ ಪುತ್ರಿಯ ಗಂಡನ ಮೇಲೆ ಕೋರ್ಟ್ ಹಾಲ್ ನಲ್ಲಿ ಹಲ್ಲೆ
36-yr-old Kallakurichi MLA Prabhu clarifies that neither did he kidnap nor force 19-yr-old Soundarya into marrying him. His inter-caste wedding with her, a brahmin woman, has created a storm in TN @thenewsminute pic.twitter.com/84TfyYamZd
— Anjana Shekar (@AnjanaShekar) October 6, 2020
ವಿವಾಹ ಸ್ಥಳದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿಯ ತಂದೆಯ ಮೇಲೆ ಐಪಿಸಿ ಸೆಕ್ಷನ್ 309ರ ಅಡಿಯಲ್ಲಿ ಆತ್ಮಹತ್ಯೆ ಪ್ರಯತ್ನದ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಜಾತಿಯಾಧಾರಿತ ಮ್ಯಾಟ್ರಿಮೋನಿಗೆ ಪರ್ಯಾಯ; “ಚೇಂಜ್ ಮೇಕರ್ಸ್ ಮ್ಯಾಟ್ರಿಮೋನಿ”


