Homeಮುಖಪುಟಅಂತರ್ಜಾತಿ ವಿವಾಹವಾಗಿದ್ದ ಶಾಸಕನ ಪುತ್ರಿಯ ಗಂಡನ ಮೇಲೆ ಕೋರ್ಟ್ ಹಾಲ್ ನಲ್ಲಿ ಹಲ್ಲೆ

ಅಂತರ್ಜಾತಿ ವಿವಾಹವಾಗಿದ್ದ ಶಾಸಕನ ಪುತ್ರಿಯ ಗಂಡನ ಮೇಲೆ ಕೋರ್ಟ್ ಹಾಲ್ ನಲ್ಲಿ ಹಲ್ಲೆ

- Advertisement -
- Advertisement -

ದಲಿತ ಯುವಕನನ್ನು ತಾನು ವಿವಾಹವಾಗಿದ್ದೇನೆಂಬ ಕಾರಣಕ್ಕೆ ತಮ್ಮ ತಂದೆ ತಮ್ಮ ಹಿಂದೆ ಗೂಂಡಾಗಳನ್ನು ಛೂ ಬಿಟ್ಟಿದ್ದಾರೆಂದು ಆರೋಪಿಸಿ ಪೊಲೀಸ್ ರಕ್ಷಣೆ ಕೋರಿ ಬರೇಲಿಯ ಬಿಜೆಪಿ ಶಾಸಕ ರಾಜೇಶ್ ಮಿಶ್ರಾ ಅವರ ಪುತ್ರಿ ಸಾಕ್ಷಿ ಮಿಶ್ರಾ ಈ ಹಿಂದೆ ವಿಡಿಯೋವೊಂದನ್ನು ಹರಿಯಬಿಟ್ಟಿದ್ದು ನಿಮಗೆಲ್ಲಾ ಗೊತ್ತಿದೆ. ಆ ಆರೋಪವನ್ನು ನಿಜಮಾಡುವಂತೆ ಇಂದು ವಿಚಾರಣಗೆ ಕೋರ್ಟಿಗೆ ಹಾಜರಾದ ವೇಳೆ ಸಾಕ್ಷಿ ಮಿಶ್ರಾರವರ ಪತಿ ಅಜಿತೇಶ್ ಕುಮಾರ್ ಮೇಲೆ ಕೋರ್ಟ್ ಆವರಣದಲ್ಲಿಯೇ ಅಪರಿಚಿತ ವ್ಯಕ್ತಿಯಿಂದ ಹಲ್ಲೆ ಮಾಡಲಾಗಿದೆ.

ಈ ವಿಚಾರವಾಗಿ ಆ ದಂಪತಿಗಳನ್ನು ಭದ್ರತೆಯ ಕಾರಣಕ್ಕಾಗಿ ರಹಸ್ಯ ಸ್ಥಳದಲ್ಲಿ ಇರಿಸಲಾಗಿತ್ತು. ಇಂದು ನೋಯ್ಡಾದಿಂದ ವಿಚಾರಣೆಗಾಗಿ ಪ್ರಯಾಗ್ ರಾಜ್ ಕೋರ್ಟಿಗೆ ಹಾಜರಾದಾಗ ಪೊಲೀಸರ ರಕ್ಷಣೆಯನ್ನು ಸಹ ಮೀರಿ ಒಬ್ಬ ವ್ಯಕ್ತಿ ಅಜಿತೇಶ್ ಕುಮಾರ್ ಕಪಾಳಕ್ಕೆ ಹೊಡೆದಿರುವುದಾಗಿ ಎನ್.ಡಿ.ಟಿ.ವಿ ವರದಿ ಮಾಡಿದೆ. ಹಲ್ಲೆ ಮಾಡಿದ ವ್ಯಕ್ತಿ ಯಾರೆಂದು ತಿಳಿದುಬಂದಿಲ್ಲ, ಆದರೆ ಈ ದಂಪತಿಗಳ ಜೀವಕ್ಕೆ ಅಪಾಯವಿದೆ ಅನ್ನುವುದು ಮಾತ್ರ ಇದರಿಂದ ಖಾತ್ರಿಯಾಗಿದೆ ಎಂದು ದಂಪತಿಗಳ ಪರ ವಕೀಲರು ಕೋರ್ಟಿನಲ್ಲಿ ನುಡಿದಿದ್ದಾರೆ.

ಹಲ್ಲೆಯ ನಂತರದ ವಿಚಾರಣೆಯಲ್ಲಿ, ದಂಪತಿಗಳ ವಿವಾಹದ ಸಿಂಧುತ್ವವನ್ನು ಹೈಕೋರ್ಟ್ ಎತ್ತಿಹಿಡಿದಿದ್ದು ನ್ಯಾಯಾಲಯವು ವಧುವಿನ ತಂದೆ ಶಾಸಕರಾದ ರಾಜೇಶ್ ಮಿಶ್ರಾ ಅವರ ಮೇಲೆ ಕೋಪ ವ್ಯಕ್ತಪಡಿಸಿದೆ. ಜೊತೆಗೆ ದಂಪತಿಗಳಿಗೆ ಅಗತ್ಯವಾದ ರಕ್ಷಣೆ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿತು.

ಉತ್ತರ ಪ್ರದೇಶದ ಬರೇಲಿಯ ಶಾಸಕರಾದ ರಾಜೇಶ್ ಮಿಶ್ರಾ ಅವರ ಪುತ್ರಿ ಸಾಕ್ಷಿ ಮಿಶ್ರಾ (23) ಜುಲೈ 4 ರಂದು ಪ್ರಯಾಗರಾಜ್‌ನ ದೇವಸ್ಥಾನವೊಂದರಲ್ಲಿ 29 ವರ್ಷದ ಅಜಿತೇಶ್ ಕುಮಾರ್ ಅವರನ್ನು ವಿವಾಹವಾಗಿದ್ದರು. ನಂತರ ಅವರು ಜಾತಿಯ ಹೊರಗೆ ಮದುವೆಯಾಗಿದ್ದಕ್ಕಾಗಿ ತನಗೆ ಮತ್ತು ತನ್ನ ಗಂಡನಿಗೆ ಜೀವ ಭಯವಿದ್ದು, ನ್ಯಾಯಾಲಯದಿಂದ ರಕ್ಷಣೆ ಕೋರಿ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು.

ಆ ವಿಡಿಯೋದಲ್ಲಿ ತಮ್ಮ ತಂದೆ ಹಾಗೂ ಸೋದರನ ಅಡ್ಡ ಹೆಸರುಗಳಾದ ಪಪ್ಪು ಭರ್ತೌಲ್ ಹಾಗೂ ವಿಕ್ಕಿ ಭರ್ತೌಲ್ ಇವುಗಳನ್ನು ಸಾಕ್ಷಿ ಉಲ್ಲೇಖಿಸಿದ್ದಾರೆ. ‘ಮಾನ್ಯ ಶಾಸಕ ಪಪ್ಪು ಭರ್ತೌಲ್ ಜಿ ಹಾಗೂ ವಿಕ್ಕಿ ಭರ್ತೌಲ್ ಜಿ, ದಯವಿಟ್ಟು ನೀವೂ ಬದುಕಿ ನಮ್ಮನ್ನು ಶಾಂತಿಯಿಂದ ಬದುಕಲು ಬಿಡಿ. ನನಗೆ ನಿಜವಾಗಿಯೂ ಮದುವೆಯಾಗಿದೆ, ನಾನು ಫ್ಯಾಶನ್‍ಗಾಗಿ ಸಿಂಧೂರ ಧರಿಸಿಲ್ಲ’ ಎಂದು ಹೇಳಿದ್ದರು.

‘ಪಾಪಾ, ನೀವು ರಾಜೀವ್ ರಾಣಾ ಅವರಂತೆಯೇ ನಮ್ಮ ಹಿಂದೆ ಗೂಂಡಾಗಳನ್ನು ಕಳುಹಿಸಿದ್ದೀರಿ. ನನಗೆ ಸಾಕಾಗಿ ಹೋಗಿದೆ…. ಅಡಗಿ ಕುಳಿತು ಸಾಕಾಗಿ ಹೋಗಿದೆ, ನಮ್ಮ ಜೀವ ಅಪಾಯದಲ್ಲಿದೆ ಅಭಿ ಮತ್ತಾತನ ಸಂಬಂಧಿಗಳಿಗೆ ತೊಂದರೆ ಕೊಡುವುದನ್ನು ನಿಲ್ಲಿಸಿ ನನಗೆ ಸಂತೋಷದಿಂದ ಸ್ವತಂತ್ರವಾಗಿರಬೇಕಿದೆ. ಭವಿಷ್ಯದಲ್ಲಿ ನನಗೆ, ಅಭಿ ಅಥವಾ ಆತನ ಕುಟುಂಬಕ್ಕೇನಾದರೂ ಅಪಾಯವಾದರೆ ಅದಕ್ಕೆ ವಿಕ್ಕಿ ಭರ್ತೌಲ್ ಹಾಗೂ ರಾಜೀವ್ ರಾಣಾ ಜವಾಬ್ದಾರರಾಗುತ್ತಾರೆ. ನನ್ನ ತಂದೆಗೆ ಸಹಾಯ ಮಾಡುತ್ತಿರುವವರು ಅವರಿಗೆ ಸಹಾಯ ಮಾಡುವುದನ್ನು ನಿಲ್ಲಿಸಿ, ನಮ್ಮ ಜೀವಗಳು ಅಪಾಯದಲ್ಲಿವೆ,” ಎಂದು ವೀಡಿಯೋದಲ್ಲಿ ಸಾಕ್ಷಿ ಮನವಿ ಮಾಡಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...