Homeಮುಖಪುಟಮತ್ತೊಬ್ಬರೊಂದಿಗೆ ಮಾತಾಡುವಾಗ ನಿಮ್ಮ 'ಬಾಡಿ ಲಾಂಗ್ವೇಜ್' ಹೇಗಿರಬೇಕು ಗೊತ್ತೆ?

ಮತ್ತೊಬ್ಬರೊಂದಿಗೆ ಮಾತಾಡುವಾಗ ನಿಮ್ಮ ‘ಬಾಡಿ ಲಾಂಗ್ವೇಜ್’ ಹೇಗಿರಬೇಕು ಗೊತ್ತೆ?

- Advertisement -
- Advertisement -

ಜೀವನ ಕಲೆಗಳು: ಅಂಕಣ -14

ಸಂವಹನ ಕಲೆ –2 ಶಬ್ದಾತೀತ ಭಾಷೆ (ಬಾಡಿ ಲಾಂಗ್ವೇಜ್ – ನಾನ್ ವರ್ಬಲ್ ಕಮ್ಯುನಿಕೇಷನ್)

ಸಂವಹನ ಕಲೆಯಲ್ಲಿ ಅತಿ ಹೆಚ್ಚು ಬಳಕೆಯಾಗುವ ಮಾಧ್ಯಮ ಶಬ್ದಾತೀತ ದೈಹಿಕ ಭಾಷೆ ಅಥವಾ ಬಾಡಿ ಲಾಂಗ್ವೇಜ್ (ನಾನ್-ವರ್ಬಲ್ ಕಮ್ಯುನಿಕೇಷನ್) ಎಂದು ಕರೆಯಲ್ಪಡುತ್ತದೆ. ಇದು ಶಬ್ದ ಅಥವಾ ಭಾಷೆಗಿಂತಲೂ ಹೆಚ್ಚು ಪ್ರಭಾವಶಾಲಿಯಾದ ಮಾಧ್ಯಮ. ಶಬ್ದ ಮತ್ತು ಭಾಷೆಯ ಜೊತೆ ಸೇರಿದಾಗ ಇದು ಸಂಪೂರ್ಣ ಶಕ್ತಿಶಾಲಿ ವಾಕ್-ದೃಶ್ಯ ಮಾಧ್ಯಮವಾಗುತ್ತದೆ. ನಮ್ಮ ದಿನನಿತ್ಯದ ಸಂವಹನದಲ್ಲಿ ಸುಮಾರು 60-70% ಸಮಯ ಬಳಕೆಯಾಗುವ ಮಾಧ್ಯಮ. ಸಾಮಾಜಿಕ ಮಾಧ್ಯಮಗಳಾದ ಫೇಸ್ಬುಕ್, ವಾಟ್ಸಾಪ್, ಟೆಲಿಗ್ರಾಮ್, ಇ-ಮೇಲ್ ಮುಂತಾದವುಗಳಲ್ಲಿ ಇದರ ಬಳಕೆ ದಿನದಿನಕ್ಕೆ ಹೆಚ್ಚಾಗುತ್ತಿದೆ. ಭಾವನೆಗಳನ್ನು ಸ್ಥಬ್ದ ಅಥವಾ ಚಲಿಸುವ ಚಿತ್ರಗಳ ಮೂಲಕ ಬಿಂಬಿಸುವ ಇವನ್ನು ಎಮೋಟಿಕಾನ್ ಅಥವಾ ಎಮೋಜಿ ಎನ್ನುತ್ತಾರೆ.

ದೈಹಿಕ ಭಾಷೆ ನಾವು ಆಡುವ ಭಾಷೆಗಿಂತ 10-15 ಪಟ್ಟು ಹೆಚ್ಚು ಬಲಶಾಲಿಯಾಗಿರುತ್ತದೆ. ಇದರ ಬಳಕೆಯಿಂದ ಸಂವಹನ ಸುಲಭವಾಗುತ್ತದೆ, ಆದರೆ ದೈಹಿಕ ಭಾಷೆ ಅಸಮರ್ಪಕವಾಗಿದ್ದಾಗ ಸಂದೇಶ ತನ್ನ ಅರ್ಥ ಕಳೆದುಕೊಳ್ಳುವುದಷ್ಟೇ ಅಲ್ಲ, ಅಪಾರ್ಥಕ್ಕೂ ಎಡೆ ಮಾಡಿಕೊಡುತ್ತದೆ. ಶಬ್ದಾತೀತ ದೈಹಿಕ ಭಾಷೆಯಲ್ಲಿ ಬಳಕೆಯಾಗುವ ಅಂಶಗಳು:

·         ದೃಷ್ಟಿ ಸಂಪರ್ಕ (ಐ ಕಾಂಟ್ಯಾಕ್ಟ್)

·         ಮುಖ ತಿರುಚುವಿಕೆ

·         ಕಣ್ಣು ಮಿಟುಕಿಸುವುದು

·         ಮೈ-ಕೈ ಹಾವಭಾವ

·         ದೇಹದ ನಿಲುವು (ಪಾಷ್ಚರ್)

·         ಸಾಮೀಪ್ಯ (ಅಥವಾ ದೂರ)

·         ಸ್ಪರ್ಶ

·         ವಿನೋದ/ಅಣಕು

·         ಮೌನ

·         ಸಂಕೇತಗಳು

·         ಕಣ್ಣಿಗೆ ಕಾಣುವಂತಹ ಇತರ ಚಿನ್ಹೆಗಳು

ಇವೆಲ್ಲವನ್ನೂ ಸಮರ್ಪಕವಾಗಿ ಬಳಸಿದಲ್ಲಿ ಸಂವಹನ ಪ್ರಭಾವಶಾಲಿಯಾಗಿರುತ್ತದೆ. ದೈಹಿಕ ಸಂದೇಶಗಳು ಮಾತಿನ ಅರ್ಥಕ್ಕೆ ಪೂರಕವಾಗಿರಬೇಕು, ಅದರ ಮೌಲ್ಯವನ್ನು ವೃದ್ಧಿಸುವಂತಿರಬೇಕು, ಹಾಗಿಲ್ಲದಿದ್ದಾಗ  ಅನರ್ಥಕ್ಕೂ ಆಸ್ಪದವಿರುತ್ತದೆ. ಕೆಳಕಂಡ ಚಿತ್ರದಲ್ಲಿ ದೈಹಿಕ ಭಾಷೆಗೂ ಹೇಳಿರುವ ಮಾತಿಗೂ ತಾಳೆ ಇಲ್ಲದಿರುವುದನ್ನು ಕಾಣಬಹುದು.

ದೈಹಿಕ ಭಾಷೆಯನ್ನು ಬಳಸಿಕೊಳ್ಳುವುದು ಹೇಗೆ?

ದೃಷ್ಟಿ-ಸಂಪರ್ಕ: ನೀವು ಮಾತನಾಡುತ್ತಿರುವವರ ಜೊತೆ ದೃಷ್ಟಿ ಸಂಪರ್ಕದಿಂದಿರಿ. ಎಲ್ಲೋ ನೋಡಿಕೊಂಡು ಮಾತನಾಡಿದಲ್ಲಿ ನಿಮಗೆ ನಿಮ್ಮ ಮೇಲೆ ಅಥವಾ ಅವರ ಮೇಲೆ ನಂಬಿಕೆ/ಆಸಕ್ತಿ ಇಲ್ಲ ಎಂಬ ಸಂದೇಶ ಹೋಗುತ್ತದೆ. ಗುಂಪನ್ನು ಸಂಬೋಧಿಸಿ ಮಾತನಾಡುವಾಗ ಕೇವಲ ಓರ್ವ ವ್ಯಕ್ತಿಯನ್ನು ಮಾತ್ರ ದೃಷ್ಟಿಯಲ್ಲಿಟ್ಟುಕೊಂಡು ಮಾತನಾಡಬೇಡಿ, ಮಿಕ್ಕವರು ತಪ್ಪು ಕಲ್ಪನೆಗೆ ಒಳಗಾಗುತ್ತಾರೆ. ಯಾರು ಹೆಚ್ಚು ಆಸಕ್ತಿ (ಪ್ರತ್ಯಾದಾನ) ನೀಡುತ್ತಿದ್ದಾರೋ ಅವರನ್ನು ಹೆಚ್ಚು ಸಲ ಗಮನಿಸುವುದರಲ್ಲಿ ತಪ್ಪಿಲ್ಲ ಅಥವಾ ಯಾರು ಋಣಾತ್ಮಕ ಪ್ರತ್ಯಾದಾನ ನೀಡುತ್ತಿದ್ದಾರೋ ಅವರನ್ನು ನಿರ್ಲಕ್ಷಿಸುವುದರಲ್ಲಿ ಅಡ್ಡಿಯಿಲ್ಲ. ಹೀಗೆ ಮಾಡುವುದರಿಂದ ನಿಮ್ಮ ಆತ್ಮಸ್ಥೈರ್ಯವೂ ಹೆಚ್ಚುತ್ತದೆ.

ಮುಖ ತಿರುಚುವಿಕೆ: ನಾವು ಮಾತನಾಡುತ್ತಿರುವ ವಿಷಯಕ್ಕೆ ತಕ್ಕ ಮುಖಚರ್ಯೆ ಇರಬೇಕು ಆದರೆ ಮುಖದಲ್ಲಿ ಮಂದಹಾಸ ಎಲ್ಲರಿಗೂ ಇಷ್ಟವಾಗುತ್ತದೆ. ನಮ್ಮ ಮುಖಚರ್ಯೆಯಲ್ಲಿ ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಭೀಭತ್ಸ, ಅದ್ಭುತ ಮತ್ತು ಶಾಂತ, ಎಂಬ (ಒಂಬತ್ತು) ನವರಸಗಳನ್ನು ಸಮರ್ಪಕವಾಗಿ ಬಿಂಬಿಸಬಹುದು. ಅದಕ್ಕೆ ನೀವು ಭರತನಾಟ್ಯ ಅಥವಾ ಮಿಕ್ಕ ಪ್ರದರ್ಶನ ಕಲೆಯ ತಜ್ಞರಾಗಿರಲೇಬೇಕೆಂದಿಲ್ಲ.

ನಿಮ್ಮ ಮಾತಿನ ಸಂದರ್ಭಕ್ಕೆ ತಕ್ಕಂತೆ ಮುಖಚರ್ಯೆ ಹೊಂದಿಸಿಕೊಳ್ಳಿ ಆದರೆ ಮಿಕ್ಕವರ ಬಗ್ಗೆ ಸೊಟ್ಟಮೂತಿ ಮಾಡುವುದನ್ನು ತಪ್ಪಿಸಿ.

ದೇಹದ ನಿಲುವು (ಪಾಷ್ಚರ್): ಇತರರೊಂದಿಗೆ ಮಾತನಾಡುವಾಗ ನೀವು ಸ್ವಲ್ಪ ಅವರ ಮುಂದಕ್ಕೆ ಬಗ್ಗಿದ್ದರೆ ಅವರ ಬಗ್ಗೆ ವಿನಯ/ಆಸಕ್ತಿ ತೋರಿಸುತ್ತದೆ, ತೀರಾ ಮುಂದಕ್ಕೆ ಬಗ್ಗಿದ್ದರೆ ಅದು ಅತಿ ವಿನಯ ಸೂಚಿಸುತ್ತದೆ ಅಥವಾ ಮುಗ್ಗರಿಸಿ ಮುಂದಕ್ಕೆ ಬೀಳುವ ಸಾಧ್ಯತೆ ಇರುತ್ತದೆ.

ಕಣ್ಣು ಮಿಟುಕಿಸುವುದು: ದೃಷ್ಟಿ-ಸಂಪರ್ಕ ಮತ್ತು ನವರಸಕ್ಕೆ ಅನುಗುಣವಾಗಿಲ್ಲವಾದಾಗ ವೃಥಾ ಕಣ್ಣು ಮಿಟುಕಿಸುವುದು ಅಥವಾ ರೆಪ್ಪೆ ಬಡಿಯುವುದನ್ನು ಬಿಡಿ. ಇದೂ ಸಹ ತಪ್ಪು ಸಂದೇಶ ರವಾನಿಸುತ್ತದೆ.

ಮೈ-ಕೈ ಹಾವಭಾವ: ನಿಮ್ಮ ಭಾವನೆಗನುಗುಣವಾಗಿ ಕೈಗಳನ್ನು ಬಳಸಿ, ಅವನ್ನು ಕೋಟ್-ಪ್ಯಾಂಟ್ ಜೇಬಿನಲ್ಲಿ ಮುಚ್ಚಿಟ್ಟುಕೊಳ್ಳಲು ಪ್ರಯತ್ನಿಸುತ್ತಿರಬೇಡಿ. ಅಂಗೈಗಳನ್ನು ಮೇಲಕ್ಕೆ ಮಾಡಿದ್ದಾಗ ಅದು ನಿಮ್ಮ ಮುಕ್ತ ವ್ಯಕ್ತಿತ್ವ ಸೂಚಿಸುತ್ತದೆ. ಕೈಗಳು ನಿಮ್ಮ ಕಡೆಗೇ ತೋರಿಸುತ್ತಿದ್ದಲ್ಲಿ ಇತರರಿಂದ ನಿಮ್ಮನ್ನು ನೀವೇ ದೂರ ಇರಿಸುತ್ತಿದ್ದೀರೆಂಬುದನ್ನು ತೋರಿಸುತ್ತದೆ.

ಸಾಮೀಪ್ಯ (ಅಥವಾ ದೂರ): ಇದು ನಿಮ್ಮ ನಡುವಣ ಬಾಂಧವ್ಯ ತೋರಿಸುತ್ತದೆ ಆದ್ದರಿಂದ ವ್ಯಕ್ತಿ, ಸಮಯ, ಪರಿಸ್ಥಿತಿಗೆ ತಕ್ಕಂತೆ ಸಾಮೀಪ್ಯ ಅಥವಾ ದೂರ ಇರುವಂತೆ ನೋಡಿಕೊಳ್ಳಿ. ಯಾವುದೇ ಕಾರಣಕ್ಕೂ ನಿಮ್ಮ ಎಲ್ಲೆ ಮೀರಬೇಡಿ. ಅದರಲ್ಲೂ ಲಿಂಗಬೇಧ ಗಮನದಲ್ಲಿಟ್ಟುಕೊಂಡು, ನಿಮ್ಮ ಲಕ್ಷ್ಮಣ ರೇಖೆ ನೀವೇ ಎಳೆದುಕೊಂಡು, ಅದನ್ನು ದಾಟದಂತೆ ಎಚ್ಚರಿಕೆ ವಹಿಸಿ.

ಸ್ಪರ್ಶ:ಇದು ಸಹ ನಿಮ್ಮ ನಡುವಣ ಬಾಂಧವ್ಯ ತೋರಿಸುತ್ತದೆ ಆದ್ದರಿಂದ ವ್ಯಕ್ತಿ, ಸಮಯ, ಪರಿಸ್ಥಿತಿಗೆ ತಕ್ಕಂತೆ ಸ್ಪರ್ಷದ ಬಳಕೆ ಇರುವಂತೆ ನೋಡಿಕೊಳ್ಳಿ.

ವಿನೋದ/ಅಣಕು: ವಿನೋದ/ಹಾಸ್ಯ ಎಲ್ಲರಿಗೂ ಇಷ್ಟವಾಗುತ್ತದೆ ಆದರೆ ನೀವೂ ಸಹ ಹಾಸ್ಯ ಕಲಾವಿದರಾಗಿಲ್ಲದಿದ್ದರೆ, ಇತರರನ್ನು ಅಣಕಿಸಿ ಹಾಸ್ಯದ ಉತ್ಪನ್ನಕ್ಕೆ ಪ್ರಯತ್ನಿಸಬೇಡಿ. ಇದು ತೊಂದರೆಗೆ ಕಾರಣವಾಗುತ್ತದೆ.

ಮೌನ: ಮಾತು ಮುತ್ತಾದರೆ ಮೌನ ಚಿನ್ನ ಎನ್ನುತ್ತಾರೆ. ಸಮರ್ಪಕವಾಗಿ ಬಳಸಿಕೊಳ್ಳಿ. ಇನ್ನೊಬ್ಬರು ಪ್ರತಿಕ್ರಯಿಸುತ್ತಿರುವಾಗ ನೀವು ಮೌನವಾಗಿರಿ. ಮಧ್ಯೆ ಬಾಯಿ ಹಾಕಬೇಡಿ. ನಿಮ್ಮ ಮೌನವೇ ಉತ್ತರವಾದಲ್ಲಿ ಅದನ್ನು ಮಿಕ್ಕವರು ತಪ್ಪಾಗಿ ಗ್ರಹಿಸಬಹುದು.

ಸಂಕೇತಗಳು: ಯಾವುದೇ ರೀತಿಯದ್ದಾಗಿರಬಹುದು. ಕೈ ಸಂಜ್ಞೆ ಅಥವಾ ಬೆರಳಸಂಜ್ಞೆ ಉಪಯೋಗಿಸುವಾಗ ಬಹಳ ಎಚ್ಚರಿಕೆಯಿಂದಿರಿ. ಕೆಲವು ಬೆರಳು ಅಷ್ಟು ಗೌರಪೂರ್ವಕವಲ್ಲ. ಇನ್ನೊಬ್ಬರ ಕಡೆ ಒಂದು ಬೆರಳು ತೋರಿಸುವಾಗ ಮೂರು ಬೆರಳು ನಮ್ಮ ಕಡೆಗೆ ಇರುತ್ತವೆ ಎಂಬುದನ್ನು ಮರೆಯಬೇಡಿ.

ಕಣ್ಣಿಗೆ ಕಾಣುವಂತಹ ಇತರ ಚಿನ್ಹೆಗಳು:  ಇವು ನಿಮ್ಮ ಪೋಷಾಕು, ಅದರ ಬಣ್ಣ ಅಥವಾ ಅದರೊಂದಿಗೆ ಧರಿಸಿರುವ ಇತರ ಸಾಧನ ಸಾಮಗ್ರಿಗಳಾಗಿರಬಹುದು. ಯೋಚಿಸಿ ಧರಿಸಿ. ಅಪಾರ್ಥಕ್ಕೆ ಎಡೆಯಾಗದಂತೆ ನೋಡಿಕೊಳ್ಳಿ. ಚಿತ್ರದ ಎಡಬದಿಯಲ್ಲಿರುವ ಟಿ-ಶರ್ಟ್ ಬದಲಿಗೆ ಬಲಬದಿಯಲ್ಲಿರುವ ಟಿ-ಶರ್ಟ್ ಧರಿಸಿ, ಜನರ ಪ್ರತಿಕ್ರಿಯೆ ಗಮನಿಸಿ.

ನೀವು ಇನ್ನೊಬ್ಬರಿಗೆ ಹೇಳಿಕೊಳ್ಳಬೇಕೆಂದಿರುವುದನ್ನು ಇತರರು ತಾವೇ ನಿಮಗೆ ಓದಿ ಹೇಳುತ್ತಾರೆ.

ನಿಮ್ಮ ಬಾಡಿ ಲಾಂಗ್ವೇಜ್ ಸುಧಾರಿಸಿಕೊಳ್ಳಲು ನಿಮ್ಮನ್ನು ನೀವು ಕನ್ನಡಿಯಲ್ಲಿ ನೋಡಿಕೊಳ್ಳಿ, ಅಥವಾ ಯಾವುದಾದರೂ ಸಂದರ್ಭದಲ್ಲಿ ವೀಡಿಯೋ ತೆಗೆದಿದ್ದಲ್ಲಿ ಅದನ್ನು ಸೂಕ್ಷ್ಮವಾಗಿ ಗಮನಿಸಿ, ನಿಮ್ಮ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಿ. ನಿಮ್ಮ ಸ್ನೇಹಿತರನ್ನು ಕೇಳಿ ಫೀಡ್-ಬ್ಯಾಕ್ ಪಡೆಯಿರಿ. ನಿಮ್ಮ ದೈಹಿಕ ಭಾಷೆ ಉತ್ತಮಗೊಂಡಷ್ಟೂ ನಿಮ್ಮ ಸಂವಹನ ಕಲೆಯೂ ಉತ್ತಮಗೊಳ್ಳುತ್ತದೆ.

 

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೊಬೈಲ್ ಪತ್ತೆ ಪ್ರಕರಣ: ಪ್ರಜ್ವಲ್ ರೇವಣ್ಣ 2 ದಿನ ಪೊಲೀಸ್ ಕಸ್ಟಡಿಗೆ

ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಸಜಾ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಜೈಲಿನ ಅವರ ಕೊಠಡಿಯಲ್ಲಿ ಅಕ್ರಮವಾಗಿ ಮೊಬೈಲ್...

ರಾಜ್ಯದಲ್ಲಿ ಅವಧಿ ಮೀರಿದ ಆಹಾರ ಪೂರೈಕೆಯ ಬೃಹತ್ ದಂಧೆ: ₹1.43 ಕೋಟಿಯ ಉತ್ಪನ್ನಗಳು ಜಪ್ತಿ

ಆನ್‌ಲೈನ್ ಮತ್ತು ಇ-ಕಾಮರ್ಸ್ ವೇದಿಕೆಗಳ ಮೂಲಕ ಸಾರ್ವಜನಿಕರಿಗೆ ಅವಧಿ ಮೀರಿದ ಹಾಗೂ ಕಳಪೆ ಗುಣಮಟ್ಟದ ಆಹಾರ ಉತ್ಪನ್ನಗಳನ್ನು ಸರಬರಾಜು ಮಾಡುತ್ತಿದ್ದ ಬೃಹತ್ ದಂಧೆಯನ್ನು ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ...

ಭಾರತೀಯ ಮಹಿಳೆಯನ್ನು ಬಾಂಗ್ಲಾ ಗಡಿಯಾಚೆಗೆ ತಳ್ಳಿದ ಪ್ರಕರಣ : 2 ಲಕ್ಷ ರೂ. ಪರಿಹಾರ ಪಾವತಿಸಲು ಅಸ್ಸಾಂ ಸರ್ಕಾರಕ್ಕೆ ಗುವಾಹಟಿ ಹೈಕೋರ್ಟ್ ಆದೇಶ

ಪಶ್ಚಿಮ ಬಂಗಾಳ ಮೂಲದ ಮುಸ್ಲಿಂ ಮಹಿಳೆಯೊಬ್ಬರಿಗೆ ವಿದೇಶಿಯರ ನ್ಯಾಯಾಧಿಕರಣದ (ಫಾರಿನರ್ಸ್ ಟ್ರಿಬ್ಯೂನಲ್) ಆದೇಶವನ್ನು ಪ್ರಶ್ನಿಸಲು ಯಾವುದೇ ಅವಕಾಶ ನೀಡದೆ, ಅವರನ್ನು ಬಾಂಗ್ಲಾ ಗಡಿಯಾಚೆಗೆ ತಳ್ಳಿದ್ದಕ್ಕಾಗಿ ಮಧ್ಯಂತರ ಪರಿಹಾರವಾಗಿ ಆಕೆಯ ಪತಿಗೆ 2 ಲಕ್ಷ...

ಮಂಡಿಯ ಐಐಟಿ ಕ್ಯಾಂಪಸ್‌ನಲ್ಲಿ ‘ಶೂದ್ರರು ಮೇಲ್ವರ್ಗಗಳ ಸೇವಕರು’ ಎಂಬ ವರ್ಣ ಶ್ರೇಣೀಕರಣ ಚಿತ್ರಣ: ಜಾತಿ ವಿವಾದದ ನಂತರ ತನಿಖೆಗೆ ಆದೇಶ

ಮಂಡಿ: ಶೂದ್ರರನ್ನು ‘ಉನ್ನತ ವರ್ಗಗಳಿಗೆ ಸೇವೆ ಸಲ್ಲಿಸಲು ಉದ್ದೇಶಿಸಿರುವವರು’ ಎಂದು ಬಿಂಬಿಸುವ ಪೋಸ್ಟರ್‌ವೊಂದು ಹಿಮಾಚಲ ಪ್ರದೇಶದ ಐಐಟಿ ಮಂಡಿಯಲ್ಲಿ ಜಾತಿ ವಿವಾದಕ್ಕೆ ಕಾರಣವಾಗಿದ್ದು, ಪ್ರಕರಣದ ಕುರಿತು ಸಂಸ್ಥೆ ತನಿಖೆಗೆ ಆದೇಶಿಸಿದೆ. ಸೆಪ್ಟೆಂಬರ್ 4ರಂದು...

ಎಸ್ಐಆರ್ ಬಳಿಕ ಮಣಿಪುರ, ಸಿಕ್ಕಿಂ, ಮಿಜೋರಾಂನಲ್ಲಿ 2.24 ಲಕ್ಷ ಮತದಾರರ ಹೆಸರು ಕಡಿತ: ಸಿಕ್ಕಿಂನಲ್ಲಿ ಶೇ.11.15ರಷ್ಟು ಇಳಿಕೆ 

ನವದೆಹಲಿ: ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಬಳಿಕ ಈಶಾನ್ಯ ಭಾರತದ ಮಣಿಪುರ, ಸಿಕ್ಕಿಂ ಮತ್ತು ಮಿಜೋರಾಂ ರಾಜ್ಯಗಳ ಮತದಾರರ ಪಟ್ಟಿಯಲ್ಲಿ ದೊಡ್ಡ ಪ್ರಮಾಣದ ಬದಲಾವಣೆ ಕಂಡುಬಂದಿದೆ. ಈ ಮೂರು ರಾಜ್ಯಗಳಲ್ಲಿ...

ಜೆಎನ್‌ಯು ಪ್ರೊಫೆಸರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ : 10ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಂದ ದೂರು

ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಆಂತರಿಕ ದೂರುಗಳ ಸಮಿತಿಯು (ಐಸಿಸಿ), ಸುಮಾರು ಹನ್ನೊಂದು ವಿದ್ಯಾರ್ಥಿನಿಯರು ಪ್ರೊಫೆಸರ್ ಒಬ್ಬರ ವಿರುದ್ಧ ಮಾಡಿರುವ ಲೈಂಗಿಕ ಕಿರುಕುಳದ ಆರೋಪಗಳ ಕುರಿತು ಪ್ರಸ್ತುತ ತನಿಖೆ ನಡೆಸುತ್ತಿದೆ ಎಂದು...

ಹಿಂದೂ ಧಾರ್ಮಿಕ ಸಂಘಟನೆ ನಿಯೋಗದ ಭೇಟಿ ವೇಳೆ ಮಹಿಳಾ ಸಿಬ್ಬಂದಿಯನ್ನು ದೂರವಿಟ್ಟ ಆರೋಪ; ಈಫೆಲ್ ಟವರ್‌ನಲ್ಲಿ ನೌಕರರ ಮುಷ್ಕರ

ಹಿಂದೂ ಧಾರ್ಮಿಕ ಸಂಘಟನೆ ಬಿಎಪಿಎಸ್ (BAPS) ನಿಯೋಗದ ಭೇಟಿಯ ವೇಳೆ ಮಹಿಳಾ ಸಿಬ್ಬಂದಿಯನ್ನು ಕೆಲಸದ ಸ್ಥಳಗಳಿಂದ ದೂರವಿಡಲಾಗಿತ್ತು ಎಂಬ ಆರೋಪ ಫ್ರಾನ್ಸ್‌ನಲ್ಲಿ ವಿವಾದಕ್ಕೆ ಕಾರಣವಾಗಿದೆ. ಘಟನೆಯನ್ನು ಖಂಡಿಸಿ ಈಫೆಲ್ ಟವರ್‌ನ ಸಿಬ್ಬಂದಿ ಸೋಮವಾರ...

KPSC ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ: CID ತನಿಖೆಯಲ್ಲಿ ರೂ. 12 ಕೋಟಿಗೂ ಅಧಿಕ ಡೀಲ್ ಬಯಲು!

ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯ ಅಕ್ರಮ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಸಿಐಡಿ (CID) ತನಿಖೆಯಲ್ಲಿ ಸಾಲು ಸಾಲು ಆಘಾತಕಾರಿ ಸಂಗತಿಗಳು ಹೊರಬಿದ್ದಿವೆ. ಒಟ್ಟು 24 ಅಭ್ಯರ್ಥಿಗಳು ಹಣ...

ದೆಹಲಿಯಲ್ಲಿ ಮಣಿಪುರದ ಸಂಗೀತಗಾರನ ಗುಂಪು ಹತ್ಯೆ : ಎಂಟು ಜನರ ಬಂಧನ

ದೆಹಲಿಯ ಆಶ್ರಮ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಮಣಿಪುರದ ಸಂಗೀತಗಾರ ಚೊಂಗ್ಥಾಮ್ ವಿಕ್ರಮ್ ಸಿಂಗ್ ಅವರು ಭಾನುವಾರ (ಸೆ.6) ರಾತ್ರಿ ಗುಂಪೊಂದರಿಂದ ಕಲ್ಲು ತೂರಾಟ ಅಥವಾ ಹಲ್ಲೆಗೆ ಒಳಗಾಗಿ, ಅದರಿಂದ ಉಂಟಾದ ಗಂಭೀರ ಗಾಯಗಳಿಂದಾಗಿ ಸೋಮವಾರ...

SIR: ಚಿಂತಕ ಪರಕಾಲ ಪ್ರಭಾಕರ್‌ಗೆ ಚುನಾವಣಾ ಆಯೋಗದಿಂದ ನೋಟಿಸ್

ಅರ್ಥಶಾಸ್ತ್ರಜ್ಞ, ರಾಜಕೀಯ ವಿಶ್ಲೇಷಕ ಡಾ. ಪರಕಾಲ ಪ್ರಭಾಕರ್ ಅವರಿಗೂ ಈಗ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಡಿ ಚುನಾವಣಾ ಆಯೋಗದ ನೋಟಿಸ್ ಜಾರಿಯಾಗಿದೆ. ವೋಟರ್ ಐಡಿ ಪರಿಶೀಲನೆಯಲ್ಲಿ ‘Logical Discrepancy’ (ತಾರ್ಕಿಕ ಅಸಂಗತತೆ)...