Homeಅಂತರಾಷ್ಟ್ರೀಯಅಮೆಜಾನ್ ಅರಣ್ಯನಾಶ ತಡೆಯಲು ಸೈನ್ಯ ಕಳುಹಿಸಲು ಮುಂದಾದ ಬ್ರೆಜಿಲ್

ಅಮೆಜಾನ್ ಅರಣ್ಯನಾಶ ತಡೆಯಲು ಸೈನ್ಯ ಕಳುಹಿಸಲು ಮುಂದಾದ ಬ್ರೆಜಿಲ್

- Advertisement -
- Advertisement -

ಜಗತ್ತಿನ ಆಕ್ಸಿಜನ್ ತೊಟ್ಟಿಲು ಎಂದು ಕರೆಯಲ್ಪಡುವ ದಕ್ಷಿಣ ಅಮೆರಿಕಾದ ಅಮೆಜಾನ್ ಕಾಡುಗಳು ಒತ್ತುವರಿಯಾಗುತ್ತಿವೆ, ನಾಶವಾಗುತ್ತಿವೆ ಎಂಬ ಕೂಗು ಕಳೆದ ಹಲವಾರು ವರ್ಷಗಳಿಂದ ಕೇಳಿಬರುತ್ತಿದೆ. ಅಮೆಜಾನ್ ಉಳಿಸಿ ಅಭಿಯಾನ ಕೂಡ ನಡೆಯುತ್ತಿದೆ. ವಿವಿಧ ಪರಿಸರ ಸಂಘಟನೆಗಳು ಅಮೆಜಾನ್ ಉಳಿಸುವ ಹೋರಾಟದಲ್ಲಿ ತೊಡಗಿಸಿಕೊಂಡಿವೆ. ಬ್ರೆಜಿಲ್ ಸರ್ಕಾರ ಮಾತ್ರ ಅಮೆಜಾನ್ ಉಳಿಸಲು ಇದುವರೆಗೆ ಹೆಚ್ಚಿನ ಪ್ರಯತ್ನ ಮಾಡಿರಲಿಲ್ಲ. ಬದಲಾಗಿ 2018 ರ ತಮ್ಮ ಚುನಾವಣಾ ಪ್ರಚಾರದಲ್ಲಿ ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸಾನೇರೋ ಅಮೆಜಾನ್ ಅಭಿವೃದ್ಧಿ ಮಾಡುವುದಾಗಿ ಭರವಸೆ ನೀಡಿದ್ದರು.

ಅಮೆರಿಕಾ ಮೂಲದ ಜಾಗತಿಕ ಕಂಪನಿಗಳು ಅಮೆಜಾನ್ ಅರಣ್ಯ ವಲಯದಲ್ಲಿ ಫಾರ್ಮಿಂಗ್, ಕೃಷಿ ಸೇರಿದಂತೆ ವಿವಿಧ ರೀತಿಯ ಉದ್ಯಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದವು. ಬ್ರೆಜಿಲ್ ಸರ್ಕಾರ ಬಹುರಾಷ್ಟ್ರೀಯ ಕಂಪನಿಗಳಿಗೆ ನೆರವಾಗುವಂತಹ ಕಾನೂನುಗಳನ್ನು ಜಾರಿಗೆ ತಂದಿತ್ತು. ಜೊತೆಗೆ ಸ್ಥಳೀಯ ನಿವಾಸಿಗಳು ಕೂಡ ಕಾಡಿಗೆ ಬೆಂಕಿ ಹಚ್ಚಿ ತಮ್ಮ ಕೃಷಿ ಜಮೀನನ್ನು ವಿಸ್ತರಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಇದೆಲ್ಲದರಿಂದ ಜಗತ್ತಿನ ಹಸಿರು ತೊಟ್ಟಿಲು ಅಮೆಜಾನ್ ಕಾಡಿಗೆ ಧಕ್ಕೆಯಾಗಿದೆ. ಈಗ ಬ್ರೆಜಿಲ್ ಸರ್ಕಾರ ಎಚ್ಚೆತ್ತುಕೊಂಡು ಅಮೆಜಾನ್ ಕಾಡುಗಳನ್ನು ಉಳಿಸುವ ಪ್ರಯತ್ನಕ್ಕೆ ಮುಂದಾಗಿದೆ.

ನಿನ್ನೆ ಬ್ರೆಜಿಲ್ ಸರ್ಕಾರ ಅಮೆಜಾನ್ ರಕ್ಷಿಸಲು ಸೈನ್ಯವನ್ನು ಕಳುಹಿಸುವುದಾಗಿ ಗ್ಯಾಝೆಟ್ ನೋಟಿಫಿಕೇಶನ್ ಹೊರಡಿಸಿದ್ದು ಎಷ್ಟು ಪ್ರಮಾಣದ ಸೈನ್ಯವನ್ನು ಅಮೆಜಾನ್ ಕಾಡುಗಳಿಗೆ ಬ್ರೆಜಿಲ್ ಸರ್ಕಾರ ಕಳುಹಿಸಿಕೊಡಲಿದೆ ಎಂಬುದು ಇದುವರೆಗೆ ಸ್ಪಷ್ಟವಾಗಿಲ್ಲ. ಆಗಸ್ಟ್ ಅಂತ್ಯದ ವೇಳೆಗೆ ಅಮೆಜಾನ್ ವಲಯದ ಪಾರಾ, ಅಮೆಜೊನಸ್, ಮಾಟೊ ಗ್ರೋಸೊ, ರೊಂಡೆನಿಯಾ ರಾಜ್ಯಗಳಿಗೆ ಆಗಸ್ಟ್ ಅಂತ್ಯದ ವೇಳೆಗೆ ಸೈನ್ಯವನ್ನು ಕಳುಹಿಸುವುದಾಗಿ ಬ್ರೆಜಿಲ್ ಸರ್ಕಾರ ಅಧಿಕೃತವಾಗಿ ಹೇಳಿದೆ.

ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅವರ ಒತ್ತಡದ ಕಾರಣದಿಂದ ಬ್ರೆಜಿಲ್ ಸರ್ಕಾರ ಈ ಕ್ರಮಗಳನ್ನು ಕೈಗೊಳ್ಳುತ್ತಿದೆ. 2020ರಲ್ಲಿ ಬ್ರೆಜಿಲ್‌ನಲ್ಲಿ ವ್ಯಾಪಕವಾದ ಅರಣ್ಯ ನಾಶ ನಡೆದಿರುವ ಸುದ್ದಿ ಜಗತ್ತಿನಾದ್ಯಂತ ಹರಡಿತ್ತು. ಉಪಗ್ರಹ ಚಿತ್ರಗಳು ಕೂಡ ಅಮೆಜಾನ್ ಕಾಡುಗಳಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಚಟುವಿಕೆಗಳನ್ನು ಬಹಿರಂಗಗೊಳಿಸಿದ್ದವು. ಅಕ್ರಮ ಟಿಂಬರ್ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಆರೋಪವನ್ನು ಎದುರಿಸಿತ್ತಿದ್ದ ಜೂನ್ 23 ರಂದು ಬ್ರೆಜಿಲ್‌ನ ಪರಿಸರ ಮಂತ್ರಿ ರಿಕಾರ್ಡೋ ಸೆಲ್ಲಾಸ್ ಇದೇ ವಿಷಯಕ್ಕೆ ರಾಜೀನಾಮೆಯನ್ನು ನೀಡಿದ್ದರು. ಇದರಿಂದ ಬ್ರೆಜಿಲ್ ಮತ್ತು ಅಮೆಜಾನ್ ಕಾಡು ನಾಶದ ವಿಷಯ ಮತ್ತೊಮ್ಮೆ ಚರ್ಚೆಗೆ ಬಂದಿದೆ.

ಅಮೆಜಾನ್ ಕಾಡುಗಳ ರಕ್ಷಣೆಗೆ ಸಂಬಂಧಿಸಿದಂತೆ ವ್ಯಾಪಕ ಕ್ರಮ ಕೈಗೊಳ್ಳಲು ತನ್ನ ಬಳಿ ಆರ್ಥಿಕ ಸಂಪನ್ಮೂಲಗಳು ಇಲ್ಲವೆಂದು ಬ್ರೆಜಿಲ್ ಹೇಳಿತ್ತು. ಬ್ರೆಜಿಲ್ ಅಮೆಜಾನ್ ರಕ್ಷಣೆಗೆ ಕ್ರಮ ಕೈಗೊಳ್ಳುವವರೆಗೆ ಯಾವುದೇ ಆರ್ಥಿಕ ಸಹಾಯ ಮಾಡುವುದಿಲ್ಲವೆಂದು ಅಮೆರಿಕಾ ಹೇಳಿದೆ. ಜಾಗತಿಕ ತಾಪಮಾನ ಏರಿಕೆ ಸಮಸ್ಯೆಗೆ ಅಮೆರಿಕಾ ಕ್ರಮ ಕೈಗೊಳ್ಳುವ ಸಲುವಾಗಿ ಅದು ಒತ್ತಡ ಹೇರುತ್ತಿದೆ. ಅಮೆರಿಕಾ ಒತ್ತಡದ ಪರಿಣಾಮವಾಗಿ ಬ್ರೆಜಿಲ್ ಸೈನ್ಯವನ್ನು ಕಳುಹಿಸಲು ಮುಂದಾಗಿದೆ ಎಂದು ಬ್ರೆಜಿಲ್‌ನ ಪರಿಸರ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಬ್ರೆಜಿಲ್ ಸರ್ಕಾರ ಅಮೆಜಾನ್ ರಕ್ಷಣೆಗೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಅರಣ್ಯ ನಾಶ ಮಾಡುವವರು ಮತ್ತು ಅಕ್ರಮ ಚಟುವಟಿಕೆ ನಡೆಸುವವರಿಗೆ ದಂಡ ವಿಧಿಸುವ ಕಾನೂನನ್ನು ರದ್ದುಗೊಳಿಸಿದೆ ಎಂದು ಪರಿಸರ ಹೋರಾಟಗಾರ ಮಾರ್ಸಿಯೋ ಆಸ್ಟಿನಿ ಸರ್ಕಾರದ ಮೇಲೆ ಆರೋಪ ಮಾಡಿದ್ದಾರೆ.

ಬ್ರೆಜಿಲ್ ಸರ್ಕಾರ ಅಮೆಜಾನ್ ರಕ್ಷಣೆಗೆ ಸೈನ್ಯವನ್ನು ಕಳುಹಿಸಿಕೊಡುತ್ತಿರುವದು ಇದು 3 ನೇ ಬಾರಿ. ಇದುವರೆಗೆ ಅಲ್ಫಾವಧಿಗೆ ಸೈನ್ಯವನ್ನು ಕಳುಹಿಸಿ ಮತ್ತೆ ಮರಳಿ ಕರೆಸಿಕೊಂಡಿದೆ. ಬ್ರೆಜಿಲ್ ಸರ್ಕಾರದ ಕೈಗೊಂಡಿರುವ ಕ್ರಮಗಳು ಅಮೆಜಾನ್ ಅರಣ್ಯ ರಕ್ಷಣೆಗೆ ಎಷ್ಟರ ಮಟ್ಟಿಗೆ ಸಹಕಾರಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ಜಗತ್ತಿನ ಹಸಿರಿನ ತೊಟ್ಟಿಲು ಅಮೆಜಾನ್ ಕಾಡುಗಳು ನಾಶವಾದಂತೆಲ್ಲ ಜಗತ್ತಿನಲ್ಲಿ ಪರಿಸರ ಸಮಸ್ಯೆಗಳು ತಲೆದೋರುತ್ತಿವೆ. ನೀರ್ಗಲ್ಲುಗಳು ಕರಗಿ ಸಮುದ್ರದ ಮಟ್ಟದಲ್ಲಿ ಹೆಚ್ಚಳವಾಗುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ  ಮುಂದೊಂದು  ದಿನ ನ್ಯೂಯಾರ್ಕ, ಲಂಡನ್, ಮುಂಬೈ ಸೇರಿದಂತೆ ಸಮುದ್ರದಂಚಿನ ನಗರಗಳು ನೀರಿನಲ್ಲಿ ಮುಳುಗಡೆಯಾಗುವ ದಿನಗಳು ದೂರದಲ್ಲಿಲ್ಲ.


ಇದನ್ನೂ ಓದಿ : ಎಲ್ಲರೂ ಜೊತೆಗೂಡಿ ಆರಿಸಬೇಕಾದ ಅಮೆಜಾನ್ ಕಾಡಿನ ಬೆಂಕಿ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...