Homeಮುಖಪುಟತಮಿಳುನಾಡು: ಕೋವಿಡ್ ಸೋಂಕು ನಿವಾರಣೆಗೆ ’ಕೊರೊನಾ ದೇವಿ’ ದೇವಾಲಯ ನಿರ್ಮಾಣ

ತಮಿಳುನಾಡು: ಕೋವಿಡ್ ಸೋಂಕು ನಿವಾರಣೆಗೆ ’ಕೊರೊನಾ ದೇವಿ’ ದೇವಾಲಯ ನಿರ್ಮಾಣ

- Advertisement -
- Advertisement -

ದೇಶದ ಜನ ಕೊರೊನಾ ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಸಂಕಷ್ಟದಲ್ಲಿರುವಾಗ ತಮಿಳುನಾಡಿನ ಕೊಯಮತ್ತೂರಿನ ಹೊರವಲಯದಲ್ಲಿ ‘ಕೊರೊನಾ ದೇವಿ’ ದೇವಾಲಯ ನಿರ್ಮಾಣವಾಗಿದೆ.

ಈ ಕೊರೊನಾ ದೇವಿ ದೇವಾಲಯವನ್ನು ಕಾಮಚಿಪುರಿ ಅಧೀನಂ ಎಂಬ ಮಠ ನಿರ್ಮಿಸಿದೆ. ದೇವಾಲಯವು ‘ಪ್ಲೇಗ್ ಮರಿಯಮ್ಮನ್ ದೇವಾಲಯ’ದಂತಿದ್ದು, ಸುಮಾರು 150 ವರ್ಷಗಳ ಹಿಂದೆ ಜಿಲ್ಲೆಯನ್ನು ಪ್ಲೇಗ್ ಹೊಡೆತದಿಂದ ರಕ್ಷಣೆ ನೀಡುವಂತೆ ಕೋರಿ ದೇವಿಯ ಭಕ್ತರು ದೇವಾಲಯ ನಿರ್ಮಿಸಿದ್ದರು.

ಇಂತಹದ್ದೇ ದೇವಾಲಯದಲ್ಲಿ ‘ಕೊರೊನಾ ದೇವಿ’ ಎಂಬ ವಿಗ್ರಹವನ್ನು ಸ್ಥಾಪಿಸಲಾಗಿದೆ. ದೇವಾಲಯದಲ್ಲಿ 1.5 ಅಡಿ ಎತ್ತರದ ಕಪ್ಪು ಕಲ್ಲಿನ ವಿಗ್ರಹವನ್ನು ಇಟ್ಟು, 48 ದಿನಗಳ ಕಾಲ ಜನರನ್ನು ಮಾರಣಾಂತಿಕ ಕಾಯಿಲೆಯಿಂದ ರಕ್ಷಿಸಲು ಆಶೀರ್ವಾದ ಕೋರಿ ದೈನಂದಿನ ಪ್ರಾರ್ಥನೆ ನಡೆಸಲಾಗುತ್ತಿದೆ ಎಂದು ಅಧೀನಂ ಮಠದ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ‘56 ಇಂಚಿನ ಎದೆಯ ಧೈರ್ಯ ಎಂದರೆ ಇದೇನಾ?’- ಸಿದ್ದರಾಮಯ್ಯ ಆಕ್ರೋಶ

ಒಂದು ಶತಮಾನದ ಹಿಂದೆ ಕೊಯಮತ್ತೂರಿನಲ್ಲಿ ಪ್ಲೇಗ್ ಹರಡಿದಾಗ, ಮರಿಯಮ್ಮನ್ ವಿಗ್ರಹವನ್ನು ಸ್ಥಾಪಿಸಲಾಗಿತ್ತು. ಪ್ಲೇಗ್ ನಿವಾರಣೆಯಾಗಲು ಕೋರಿ ಜನರು ಪ್ರಾರ್ಥನೆ ಸಲ್ಲಿಸಲು ಪ್ರಾರಂಭಿಸಿದ್ದರು. ಈ ಸ್ಥಳವು ದೇವಾಲಯವಾಗಿ ಮಾರ್ಪಟ್ಟಿದ್ದು, ಇದನ್ನು “ಪ್ಲೇಗ್ ಮರಿಯಮ್ಮನ್ ದೇವಾಲಯ” ಎಂದು ಕರೆಯಲಾಯಿತು.

Image

ಈಗ ಸಾಂಕ್ರಾಮಿಕ ರೋಗವನ್ನು ಗಮನದಲ್ಲಿಟ್ಟುಕೊಂಡು ‘ಕೊರೊನಾ ದೇವಿ’ ದೇವಾಲಯದ ಒಳಗೆ ಅರ್ಚಕರು ಮತ್ತು ಮಠದ ಅಧಿಕಾರಿಗಳಿಗೆ ಮಾತ್ರ ಅನುಮತಿ ನೀಡಲಾಗಿದೆ. ದೇವಾಲಯದಲ್ಲಿ ಕೊರೊನಾ ಮಾರ್ಗಸೂಚಿಗಳನ್ನು, ದೈಹಿಕ ಅಂತರವನ್ನು ಕಾಪಾಡಿಕೊಳ್ಳಲಾಗುತ್ತಿದೆ.

ಈ ದೇವಾಲಯವು ಸಾರ್ವಜನಿಕರಿಗೆ ಕಟ್ಟುನಿಟ್ಟಾಗಿ ನಿರ್ಬಂಧಿಸಿದೆ ಎಂದು ಮಠದ ಅಧಿಕಾರಿಗಳು ತಿಳಿಸಿದ್ದಾರೆ. 48 ದಿನಗಳ ಪ್ರಾರ್ಥನೆಯ ಕೊನೆಯ ದಿನದಂದು ಮಹಾಯಾಗಂ ಅಥವಾ ವಿಶೇಷ ಯಜ್ಞವನ್ನು ಆಯೋಜಿಸಲಾಗುವುದು ಎಂದು ಮಠದ ಮೂಲಗಳು ತಿಳಿಸಿವೆ.


ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ‘ಅನುಕಂಪಕ್ಕಾಗಿ ಗಾಝಾ ನಾಟಕವಾಡುತ್ತಿದೆ’ ಎಂದು ಎಡಿಟೆಡ್‌‌ ವಿಡಿಯೊ ಶೇರ್‌ ಮಾಡುತ್ತಿರುವ ಬಲಪಂಥೀಯರು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯ ಅಧಿಕೃತ ‘ಎಕ್ಸ್’ ಖಾತೆ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಚುನಾವಣಾ ಆಯೋಗ

0
ವಿವಿಧ ಗುಂಪುಗಳು ಮತ್ತು ವರ್ಗಗಳ ನಡುವೆ ದ್ವೇಷ ಹರಡಲು ಮತ್ತು ಉತ್ತೇಜಿಸಲು ಯತ್ನಿಸುತ್ತಿರುವ ಆರೋಪದ ಮೇಲೆ ಬಿಜೆಪಿಯ ಅಧಿಕೃತ ಎಕ್ಸ್ ಖಾತೆ ವಿರುದ್ಧ ಚುನಾವಣಾ ಆಯೋಗ ಎಫ್‌ಐಆರ್‌ನ್ನು ದಾಖಲಿಸಿದೆ. ಈ ಕುರಿತು ಚುನಾವಣಾ ಆಯೋಗ...