Homeಮುಖಪುಟತಮಿಳುನಾಡು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮತದಾನ ಮಾಡದ ಸ್ಟಾರ್‌ ನಟರು: ಜನರ ಟೀಕೆ

ತಮಿಳುನಾಡು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮತದಾನ ಮಾಡದ ಸ್ಟಾರ್‌ ನಟರು: ಜನರ ಟೀಕೆ

- Advertisement -
- Advertisement -

ತಮಿಳುನಾಡಿನಲ್ಲಿ ಫೆಬ್ರವರಿ 19 ರಂದು ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ರಜನಿಕಾಂತ್, ಅಜಿತ್ ಸೇರಿದಂತೆ ತಮಿಳು ಸ್ಟಾರ್‌ ನಟರು ಮತದಾನ ಮಾಡದೇ ಇರುವುದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಮುಖ ಚರ್ಚೆಗೆ ಗ್ರಾಸವಾಗಿದೆ.

ಸೂಪರ್‌ ಸ್ಟಾರ್‌ ರಜನಿಕಾಂತ್, ಧನುಷ್, ಅಜಿತ್, ಶಿವ ಕಾರ್ತಿಕೇಯನ್, ಸಿಂಬು, ತ್ರಿಶಾ ಕೃಷ್ಣನ್ ಮತದಾನಕ್ಕೆ ಬರುತ್ತಾರೆ ಎಂದು ಅವರ ಅಭಿಮಾನಿಗಳು ತಮ್ಮ ತಮ್ಮ ಬೂತ್‌ಗಳಲ್ಲಿ ಕಾಯುತ್ತಿದ್ದರು. ಆದರೆ, ಅವರು ಮತ ಚಲಾಯಿಸಲು ಬಂದಿಲ್ಲ. ಇದರಿಂದ ಜನ ನಿರಾಶರಾಗಿದ್ದಾರೆ.

ಚೆನ್ನೈನ ಕಾಲೇಜೊಂದರ ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕರಾಗಿರುವ ರಾಜಕೀಯ ವಿಶ್ಲೇಷಕ ಎಂ.ಚಿದಂಬರೇಶನ್ ಅವರನ್ನು ಉಲ್ಲೇಖಿಸಿರುವ IANS, “ಕಮಲ್ ಹಾಸನ್, ಸೀಮಾನ್‌ನಂತಹ ತಾರೆಯರು ರಾಜಕೀಯದಲ್ಲಿ ಆಸಕ್ತಿಯನ್ನು ಹೊಂದಿಲ್ಲ ಎಂಬುದು ತಿಳಿದು ಬರುತ್ತದೆ. ನಟ ವಿಜಯ್ ಅವರನ್ನು ಹೊರತುಪಡಿಸಿ, ತಮಿಳುನಾಡಿನಲ್ಲಿ ಈಗ ಸಾಮಾಜಿಕ ಮತ್ತು ರಾಜಕೀಯ ವಿಷಯಗಳಿಗೆ ಪ್ರತಿಕ್ರಿಯಿಸುವ ಯಾವುದೇ ಸ್ಟಾರ್ ಇಲ್ಲ. ಇದು ಚುನಾವಣೆಯಲ್ಲಿ ಮತ ಚಲಾಯಿಸಲು ಅವರ ಆಸಕ್ತಿಯ ಕೊರತೆಯನ್ನು ಪ್ರತಿಬಿಂಬಿಸುತ್ತದೆ” ಎಂದಿದ್ದಾರೆ.

ಇದನ್ನೂ ಓದಿ: ಚಂದನವನದ ಸುದ್ದಿ: ಇಬ್ಬರು ವಿಶೇಷ ಚೇತನ ಮಕ್ಕಳನ್ನು ದತ್ತು ಪಡೆದ ನಟಿ ಶ್ರೀಲೀಲಾ

ತಮಿಳು ನಟ ವಿಜಯ್ ಬೆಳಗ್ಗೆಯೇ ಚೆನ್ನೈನ ನಂಗೇರಾಣಿ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದರು. 2021 ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ, ವಿಜಯ್ ಅವರು ತಮ್ಮ ಮನೆಯಿಂದ ಮತಗಟ್ಟೆಗೆ ಬೈಸಿಕಲ್ ಮೂಲಕ ತೆರಳುವ ಮೂಲಕ ಸಾಕಷ್ಟು ಚರ್ಚೆಗೆ ಹುಟ್ಟುಹಾಕಿದ್ದರು. ದೇಶದಲ್ಲಿ ಇಂಧನ ಬೆಲೆ ಏರಿಕೆಯ ವಿರುದ್ಧ ಸಂದೇಶವನ್ನು ತಿಳಿಸಲು ಬೂತ್‌ಗೆ ಸೈಕಲ್‌ನಲ್ಲಿ ಇಳಿದಿದ್ದಾರೆ ಎನ್ನಲಾಗಿತ್ತು.

ಮತ ಚಲಾಯಿಸಿಸಲು ಬಂದಿದ್ದ ನಟ ವಿಜಯ್

ಚೆನ್ನೈನ ಅಶೋಕ್ ನಗರದ ಟೀ ಅಂಗಡಿಯಲ್ಲಿ ಕೆಲಸ ಮಾಡುವ ವ್ಯಕ್ತಿ ರತ್ನಕುಮಾರ್, “ರಾಜ್ಯ ಚುನಾವಣಾ ಆಯೋಗವು ನಮ್ಮಂತಹ ಸ್ಥಳೀಯರಿಗೆ ಮತ ಚಲಾಯಿಸುವಂತೆ ಪ್ರೇರೇಪಿಸುತ್ತಿರುವಾಗ, ಸೆಲೆಬ್ರಿಟಿಗಳೂ ಮತ ಚಲಾಯಿಸುವಂತೆ ಅವರು ಏಕೆ ತಿಳಿಸುವುದಿಲ್ಲ? ಮತದಾನ ನನ್ನಂತಹ ಸಾಮಾನ್ಯ ಜನರಿಗೆ ನಾವೆಲ್ಲರೂ ಪ್ರಜಾಪ್ರಭುತ್ವ ವ್ಯವಸ್ಥೆಯ ಭಾಗವಾಗಿದ್ದೇವೆ ಎಂಬ ಭಾವನೆಯನ್ನು ನೀಡುತ್ತದೆ. ಆದರೆ, ಈಗ ಅವರು ಬೇರೆ ವರ್ಗ ಮತ್ತು ನಾವು ಕೀಳು ಎಂಬುದನ್ನು ತೋರಿಸಿದಂತಾಗುತ್ತದೆ” ಎಂದಿದ್ದಾರೆ.

ಸ್ಟಾರ್‌ ನಟ, ನಟಿಯರು ಚುನಾವಣೆಯಲ್ಲಿ ಮತ ಚಲಾಯಿಸಲು ಬರದಿರುವ ಬಗ್ಗೆ ರಾಜ್ಯ ಚುನಾವಣಾ ಆಯೋಗವೂ ಟೀಕೆ ಮಾಡಿದೆ. ಅಸೆಂಬ್ಲಿ ಚುನಾವಣೆಯಲ್ಲಿ ಮತದಾನ ಮಾಡುವಂತೆ ಜಾಗೃತಿ ಮೂಡಿಸುವ ಆಯೋಗವು, ಇಂತಹ ಚುನಾವಣೆಯಲ್ಲಿ ಮತದಾನ ಮಾಡುವ ಕುರಿತು ಜಾಗೃತಿ ಮೂಡಿಸುವುದಿಲ್ಲ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ.

ತಮಿಳುನಾಡಿನಲ್ಲಿ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಉತ್ತಮ ಮತದಾನವಾಗಿಲ್ಲ, ಶೇಕಡಾ 61 ರಷ್ಟು ಮತದಾನವಾಗಿದ್ದು, ಚೆನ್ನೈ ಕಾರ್ಪೋರೇಶನ್‌ನಲ್ಲಿ ಶೇಕಡಾ 43 ರಷ್ಟು ಮತದಾನವಾಗಿದೆ.


ಇದನ್ನೂ ಓದಿ: ಒಟಿಟಿ ವೇದಿಕೆಗಳಿಂದ ಮುಕ್ತ ಅವಕಾಶ: ವೈಜ್ಞಾನಿಕ ಕಲ್ಪನೆಯ ಸಿನಿಮಾಗಳಿಗೆ ಹೆಚ್ಚಿದ ಬೇಡಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪೂಂಚ್‌ನ ನ್ಯಾಷನಲ್ ಕಾನ್ಫರೆನ್ಸ್‌ ರ‍್ಯಾಲಿಯಲ್ಲಿ ಚಾಕುವಿನಿಂದ ದಾಳಿ; 3 ಮಂದಿಗೆ ಗಾಯ

0
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಭಾನುವಾರ ನ್ಯಾಚನಲ್ ಕಾನ್ಫರೆನ್ಸ್‌ ಪಕ್ಷದ ರೋಡ್ ಶೋ ವೇಳೆ ಅಪರಿಚಿತ ದುಷ್ಕರ್ಮಿಗಳ ಚಾಕು ದಾಳಿಯಲ್ಲಿ ಮೂವರು ಗಾಯಗೊಂಡಿದ್ದಾರೆ. ಮೆಂಧರ್ ಪ್ರದೇಶದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ...