Homeಮುಖಪುಟಒಟಿಟಿ ವೇದಿಕೆಗಳಿಂದ ಮುಕ್ತ ಅವಕಾಶ: ವೈಜ್ಞಾನಿಕ ಕಲ್ಪನೆಯ ಸಿನಿಮಾಗಳಿಗೆ ಹೆಚ್ಚಿದ ಬೇಡಿಕೆ

ಒಟಿಟಿ ವೇದಿಕೆಗಳಿಂದ ಮುಕ್ತ ಅವಕಾಶ: ವೈಜ್ಞಾನಿಕ ಕಲ್ಪನೆಯ ಸಿನಿಮಾಗಳಿಗೆ ಹೆಚ್ಚಿದ ಬೇಡಿಕೆ

- Advertisement -
- Advertisement -

ಕೊರೊನಾ ಸಮಯದಲ್ಲಿ ಪ್ರೇಕ್ಷಕರಿಗೆ ಮನರಂಜನೆ ನೀಡುವ ವಿಚಾರದಲ್ಲಿ ಒಟಿಟಿ ಪ್ಲಾಟ್ ಫಾರ್ಮ್‌ಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಈಗ ಒಟಿಟಿ ಪ್ಲಾಟ್ ಫಾರ್ಮ್‌ಗಳಲ್ಲಿ ವೈಜ್ಞಾನಿಕ ಕಲ್ಪನೆಯ ಚಿತ್ರಗಳದ್ದೇ ಅಧಿಪತ್ಯ. ಮನರಂಜನೆ ಕ್ಷೇತ್ರದಲ್ಲಿ ಎಲ್ಲಾ ಭಾಷೆಯ ಮುಖ್ಯವಾಗಿ ಹಾಲಿವುಡ್ ವೈಜ್ಞಾನಿಕ ಶೈಲಿಯ ಸಿನಿಮಾ ಹಾಗೂ ವೆಬ್ ಸಿರೀಸ್‌ಗಳಿಗೆ ವೀಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಇದರಿಂದ ಭಾರತೀಯ ಸಿನಿಮಾ ನಿರ್ದೇಶಕರು ಹೆಚ್ಚು ವೈಜ್ಞಾನಿಕ ಕಥೆಗಳ ಕಡೆಗೆ ಉತ್ಸುಕರಾಗಿದ್ದಾರೆ. ಇತ್ತೀಚಿಗೆ ಬಿಡುಗಡೆಯಾದ ಈ ಶೈಲಿಯ ಸಿನಿಮಾಗಳು ಒಳ್ಳೆ ಪ್ರದರ್ಶನ ಪಡೆದಿವೆ.

ಇದಕ್ಕೆ ಸಾಕ್ಷಿಯಾಗಿ ನಟ ಟೋವಿನೋ ಥಾಮಸ್ ಅಭಿನಯದ ಮಲಯಾಳಂನ ‘ಮಿನಲ್ ಮುರಳಿ’ ಚಿತ್ರ ಸೇರ್ಪಡೆಯಾಗಿದೆ. ಇದರಲ್ಲಿ ಒಬ್ಬ ಬಟ್ಟೆ ಹೊಲಿಯುವ ಟೈಲರ್ ಅತಿಮಾನುಷ ಶಕ್ತಿಗಳನ್ನು ಪಡೆದು ಸೂಪರ್ ಹೀರೋ ಆಗುವ ಕಥೆಯನ್ನು ಹೊಂದಿದ್ದು, ಚಿತ್ರಕ್ಕೆ ಬೆಸಿಲ್ ಜೋಸೆಫ್ ಅವರ ನಿರ್ದೇಶನವಿದೆ. ಜಗತ್ತಿನಾದ್ಯಾಂತ 30 ದೇಶಗಳ ಒಟಿಟಿ ಪ್ಲಾಟ್ ಫಾರ್ಮ್‌ಗಳಲ್ಲಿ ‘ಮಿನಲ್ ಮುರಳಿ’ ಸಿನಿಮಾ ಟಾಪ್ 10 ರಲ್ಲಿ ಸ್ಥಾನ ಪಡೆದಿದೆ.

“ಸದ್ಯ ವಿಶ್ವಾದ್ಯಂತ ಸಿನಿಮಾ ನಿರ್ದೇಶಕರಿಗೆ ತಮ್ಮ ಚಿತ್ರವನ್ನು ಪ್ರಸ್ತುತ ಪಡಿಸಲು ಅನೇಕ ಅನಿರೀಕ್ಷಿತ ಅವಕಾಶಗಳು ಸಿಕ್ಕವೆ. ಅದಕ್ಕೆ ಉದಾಹರಣೆ ಎಂಬಂತೆ ‘ಮಿನಲ್ ಮುರಳಿ’ ಸಿನಿಮಾ ಮೂಡಿಬಂದಿದೆ” ಎಂದು ನಟ ಥಾಮಸ್ ತಿಳಿಸಿದ್ದಾರೆ.

2020 ರಲ್ಲಿ ತೆರೆ ಕಂಡ ‘ಕಾರ್ಗೋ’ ಸಿನಿಮಾದಲ್ಲಿ ಪುಷ್ಪಕ್ 634A ಎಂಬ ಹೆಸರಿನ ಬಾಹ್ಯಾಕಾಶ ನೌಕೆಯಲ್ಲಿ ನಡೆಯುವ ಕತೆಯಿದೆ. ವಿಜ್ಞಾನಿ ಪ್ರಹಸ್ತ ಮತ್ತು ಅವರ ಸಹಾಯಕಿಯಾಗಿರುವ ಮಹಿಳಾ ಗಗನಯಾತ್ರಿ ಸೇರಿ ಮರಣೋತ್ತರ ಸೇವೆ ನೀಡುವ ಕರ್ತವ್ಯ ನಿಭಾಯಿಸುತ್ತಾರೆ. ಸತ್ತವರನ್ನು ಬದುಕಿಸಿ ಪುನರ್ಜನ್ಮ ನೀಡುವ ಕತೆಯನ್ನು ಸಿನಿಮಾದಲ್ಲಿ ನಿರೂಪಿಸಲಾಗಿದೆ. ಈ ಸಿನಿಮಾಕ್ಕೆ ಆರತಿ ಕಡವ್ ನಿರ್ದೇಶನವಿದೆ. ಚಿತ್ರದಲ್ಲಿ ನಟ ವಿಕ್ರಾಂತ್ ಮಸ್ಸೆ ಮತ್ತು ನಟಿ ಶ್ವೇತಾ ತ್ರಿಪಾಠಿ ಅಭಿನಯಿಸಿದ್ದಾರೆ.

ಇದನ್ನೂ ಓದಿ: ಚಂದನವನದ ಸುದ್ದಿ: ಇಬ್ಬರು ವಿಶೇಷ ಚೇತನ ಮಕ್ಕಳನ್ನು ದತ್ತು ಪಡೆದ ನಟಿ ಶ್ರೀಲೀಲಾ

ಸದ್ಯ ಬಿಡುಗಡೆಯಾದ ‘ಜೆಎಲ್ 50’, ‘ಭನ್ವರ್’, ಮತ್ತು ‘ಓಕೆ ಕಂಪ್ಯೂಟರ್’ ಯೋಜನೆಗಳು ವೈಜ್ಙಾನಿಕ ಕಲ್ಪನೆಯ ಕಥಾಹಂದರವನ್ನು ಹೊಂದಿದ್ದು, ಈ ಚಿತ್ರಗಳಲ್ಲಿ ನಟ ಅಭಯ್ ಡಿಯೊಲ್, ನಟ ವಿಜಯ್ ವರ್ಮ ಮತ್ತು ನಟಿ ರಾಧಿಕಾ ಆಪ್ಟೇ ಅಭಿನಯಿಸಿದ್ದಾರೆ.

“ಇಂತಹ ಸಿನಿಮಾಗಳಲ್ಲಿ ನಟಿಸಲು ತುಂಬ ಕಾತುರನಾಗಿದ್ದೆ. ದೇಶದ ಅಪ್ರತಿಮ ನಿರ್ದೇಶಕರು ಮತ್ತು ಬರಹಗಾರರ ಜೊತೆಗೆ ಕೆಲಸ ಮಾಡಿರುವುದು ಖುಷಿ ತಂದಿದೆ. ಈ ರೀತಿಯ ವೈಜ್ಞಾನಿಕ ಚಿತ್ರಗಳು ದೇಶದಲ್ಲಿ ಹೊಸ ಆರಂಭಕ್ಕೆ ಮುನ್ನುಡಿಯಾಗಲಿವೆ” ಎಂದು ನಟ ವಿಜಯ್ ವರ್ಮ ಹೇಳಿದ್ಧಾರೆ.

ಇದೇ ಸಾಲಿಗೆ ಸೇರಲಿರುವ ತೆಲುಗಿನ ಯೋಜನೆ ‘ಕುಡಿ ಯೆಡಮೈಥೆ’ ವೆಬ್ ಸಿರೀಸ್ ಬಂದಿದೆ. ಇದರಲ್ಲಿ ಅಪಹರಣ ದಂಧೆಯನ್ನು ಪತ್ತೆಹಚ್ಚುವ ಇಬ್ಬರು ನಾಯಕರ ಕತೆಯಿದೆ. ಸಿನಿಮಾಗೆ ಪವನ್ ಕುಮಾರ್ ನಿರ್ದೇಶನವಿದೆ. ಈ ವೆಬ್ ಸಿರೀಸ್‌ನಲ್ಲಿ ನಟ ರಾಹುಲ್ ವಿಜಯ್ ಮತ್ತು ನಟಿ ಅಮಲಾ ಪೌಲ್ ಅಭಿನಯಿಸಿದ್ದಾರೆ.

“ಪ್ರೇಕ್ಷಕರನ್ನು ಕುತೂಹಲದಿಂದ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕೇವಲ ವೈಜ್ಞಾನಿಕ ಕಥಾ ಹಂದರದ ಸಿನಿಮಾ, ವೆಬ್ ಸಿರೀಸ್‌ಗಳಿಗೆ ಮಾತ್ರ ಇದೆ. ಇಂತಹವುಗಳಲ್ಲಿ ಪ್ರೇಕ್ಷಕ ಅದರೊಳಗೆ ಪ್ರಯಾಣಿಸಿ ಆನಂದಿಸುತ್ತಾನೆ. ಈ ರೀತಿಯ ಕಥೆಗಳನ್ನು ತೆರೆ ಮೇಲೆ ತರಲು ತುಂಬ ಶ್ರಮ ಅಗತ್ಯವಿದೆ” ಎಂದು ನಿರ್ದೇಶಕ ಪವನ್ ಕುಮಾರ್ ತಿಳಿಸಿದ್ದಾರೆ.


ಇದನ್ನೂ ಓದಿ: ಟರ್ಬನ್ ಆಯ್ಕೆಯಾಗಿರಬಹುದಾದರೆ, ಹಿಜಾಬ್ ಏಕೆ ಆಗಬಾರದು?: ನಟಿ ಸೋನಮ್ ಕಪೂರ್ ಪ್ರಶ್ನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೊಪ್ಪಳ: ಬಿಜೆಪಿ ಭದ್ರಕೋಟೆಯನ್ನು ಛಿದ್ರಗೊಳಿಸಲು ಕಾಂಗ್ರೆಸ್‌ಗೆ ಸುವರ್ಣಾವಕಾಶ!?

0
ಹಿಂದುತ್ವ ರಾಜಕಾರಣದ ವಿಚಾರದಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರ ಕಳೆದ ಒಂದೂವರೆ ದಶಕದಿಂದ ಥೇಟ್ ಚಿಕ್ಕಮಗಳೂರು-ಶಿವಮೊಗ್ಗದ ತದ್ರೂಪಿ. ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಹಿಂದುತ್ವದ ಅಜೆಂಡಾ ಇಲ್ಲಿ ನಿರ್ಣಾಯಕ. ಆದರೆ, 2014ರಲ್ಲಿ ಲೋಕಸಭಾ ಕಣಕ್ಕೆ ಸಂಗಣ್ಣ ಕರಡಿ...