Homeರಂಜನೆಕ್ರೀಡೆಪ್ರೊ ಕಬಡ್ಡಿ ಪ್ಲೇಆಫ್‌ನಲ್ಲಿ ಬೆಂಗಳೂರು ಬುಲ್ಸ್ ವಿರುದ್ಧ ಗುಜರಾತ್ ಎದುರಾಳಿ: ಗೆದ್ದರಷ್ಟೆ ಸೆಮಿಫೈನಲ್ ಪ್ರವೇಶ

ಪ್ರೊ ಕಬಡ್ಡಿ ಪ್ಲೇಆಫ್‌ನಲ್ಲಿ ಬೆಂಗಳೂರು ಬುಲ್ಸ್ ವಿರುದ್ಧ ಗುಜರಾತ್ ಎದುರಾಳಿ: ಗೆದ್ದರಷ್ಟೆ ಸೆಮಿಫೈನಲ್ ಪ್ರವೇಶ

ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಪಟ್ನಾ ಪೈರೇಟ್ಸ್ ಮತ್ತು ಎರಡನೇ ಸ್ಥಾನದಲ್ಲಿರುವ ದಬಾಂಗ್ ಡೆಲ್ಲಿ ತಂಡಗಳು ನೇರವಾಗಿ ಸೆಮಿಫೈನಲ್ ತಲುಪಿವೆ.

- Advertisement -
- Advertisement -

ಪ್ರೊ ಕಬಡ್ಡಿ ಲೀಗ್‌ 8ನೇ ಆವೃತ್ತಿಯ ಲೀಗ್ ಹಂತದ ಪಂದ್ಯಗಳು ಮುಕ್ತಾಯವಾಗಿವೆ. ತೀವ್ರ ಕೂತುಹಲಕಾರಿ ಘಟ್ಟದಲ್ಲಿ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿರುವ ಬೆಂಗಳೂರು ಬುಲ್ಸ್ ಪ್ಲೇಆಫ್ ಪ್ರವೇಶ ಪಡೆದಿದೆ. 4ನೇ ಸ್ಥಾನದಲ್ಲಿರುವ ಗುಜರಾತ್ ಗೈಂಟ್ಸ್ ವಿರುದ್ಧ ಫೆಬ್ರವರಿ 21ರ ಸೋಮವಾರದಂದು ನಡೆಯುವ ಎರಡನೇ ಎಲಿಮಿನೇಟರ್ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಇಲ್ಲಿ ಗೆದ್ದರಷ್ಟೆ ಬೆಂಗಳೂರು ಬುಲ್ಸ್ ಸೆಮಿಫೈನಲ್‌ನಲ್ಲಿ ದಬಾಂಗ್ ಡೆಲ್ಲಿ ವಿರುದ್ಧ ಕಾದಾಡಲು ಅವಕಾಶ. ಸೋತಲ್ಲಿ ಟೂರ್ನಿಯಿಂದ ಹೊರಬೀಳಲಿದೆ.

ಸೋಮವಾರದ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಯು.ಪಿ ಯೋಧ ಮತ್ತು ಪುಣೇರಿ ಪಲ್ಟನ್ ಸೆಣಸಲಿದ್ದು ಗೆದ್ದವರು ಫೆಬ್ರವರಿ 23 ರಂದು ನಡೆಯುವ ಮೊದಲ ಸೆಮಿಫೈನಲ್‌ನಲ್ಲಿ ಪಟ್ನಾ ಪೈರೇಟ್ಸ್ ವಿರುದ್ಧ ಕಾದಾಡಲಿವೆ. ಫೈನಲ್ ಪಂದ್ಯ ಫೆಬ್ರವರಿ 25 ರಂದು ನಡೆಯಲಿದೆ.

ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಪಟ್ನಾ ಪೈರೇಟ್ಸ್ ಮತ್ತು ಎರಡನೇ ಸ್ಥಾನದಲ್ಲಿರುವ ದಬಾಂಗ್ ಡೆಲ್ಲಿ ತಂಡಗಳು ನೇರವಾಗಿ ಸೆಮಿಫೈನಲ್ ತಲುಪಿವೆ. ಉಳಿದಂತೆ ಹರ್ಯಾಣ ಸ್ಟೀಲರ್ಸ್, ಜೈಪುರ್ ಪಿಂಕ್ ಪ್ಯಾಂಥರ್ಸ್, ಯು ಮುಂಬಾ, ತಮಿಳು ತಲೈವಾಸ್, ಬೆಂಗಾಲ್ ವಾರಿಯರ್ಸ್ ಮತ್ತು ತೆಲುಗು ಟೈಟನ್ಸ್ ತಂಡಗಳು ಲೀಗ್ ಹಂತದಲ್ಲಿ ಹೊರಬಿದ್ದಿವೆ.

ಪವನ್ ಕುಮಾರ್ ಶೆಹ್ರಾವತ್ ನಾಯಕತ್ವದಲ್ಲಿ ಬೆಂಗಳೂರು ತಂಡ ನಿರೀಕ್ಷೆಗೂ ಮೀರಿ ಆಟವಾಡುತ್ತಿದೆ. ಲೀಗ್ ಹಂತದ 22 ಪಂದ್ಯಗಳಲ್ಲಿ 11 ರಲ್ಲಿ ಜಯಗಳಿಸಿ 09 ರಲ್ಲಿ ಸೋತು 02 ಪಂದ್ಯಗಳನ್ನು ಟೈ ಮಾಡಿಕೊಂಡಿದೆ. 274 ರೈಡ್ ಪಾಯಿಂಟ್‌ಗಳೊಂದಿಗೆ ಪವನ್ ಕುಮಾರ್ ಅಗ್ರಸ್ಥಾನದಲ್ಲಿದ್ದಾರೆ. ಅವರು 16 ಸೂಪರ್ ಟೆನ್‌ಗಳನ್ನು ಗಳಿಸಿಕೊಂಡಿದ್ದಾರೆ. ಭರತ್ ಅವರಿಗೆ ಉತ್ತಮ ಸಾಥ್ ನೀಡುತ್ತಿದ್ದಾರೆ. ಡಿಫೆಂಡಿಂಗ್ ವಿಭಾಗದಲ್ಲಿ ಸೌರಬ್ ನಂದಲ್, ಅಮನ್ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ.

2014ರಲ್ಲಿ ಪ್ರೊ ಕಬಡ್ಡಿ ಲೀಗ್ ಆರಂಭವಾಗಿದೆ. ಮೊದಲ ಆವೃತ್ತಿಯಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ಚಾಂಪಿಯನ್ ಆಗಿದ್ದರು. ಎರಡನೇ ಬಾರಿ ಯು ಮುಂಬಾ ಕಪ್ ಎತ್ತಿ ಹಿಡಿದಿತ್ತು. 3, 4, 5 ನೇ ಆವೃತ್ತಿಗಳಲ್ಲಿ ಪಟ್ನಾ ಪೈರೇಟ್ಸ್ ಸತತವಾಗಿ ಚಾಂಪಿಯನ್ ಆಗಿತ್ತು. 6ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ಚಾಂಪಿಯನ್ ಪಟ್ಟಕ್ಕೇರಿತ್ತು. ಕಳೆದ 7ನೇ ಆವೃತ್ತಿಯಲ್ಲಿ ಬೆಂಗಾಲ್ ವಾರಿಯರ್ಸ್ ಫೈನಲ್ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ವಿರುದ್ಧ ಜಯಗಳಿಸಿ ಚಾಂಪಿಯನ್ ಆಗಿತ್ತು.

2019ರ 7ನೇ ಆವೃತ್ತಿಯಲ್ಲಿ ಇದೇ ರೀತಿಯ ಎಲಿಮಿನೇಟರ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಯು.ಪಿ ಯೋಧ ವಿರುದ್ಧ ಟೈ ಬ್ರೇಕರ್‌ನಲ್ಲಿ ರೋಚಕ 3 ಪಾಯಿಂಟ್‌ಗಳ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿತ್ತು. ಆದರೆ ಸೆಮಿಯಲ್ಲಿ ದಬಾಂಗ್ ಡೆಲ್ಲಿ ವಿರುದ್ಧ ಎಡವಿತ್ತು. ಈ ಬಾರಿ ಏನಾಗಲಿದೆ ಕಾದು ನೋಡಬೇಕಿದೆ.


ಇದನ್ನೂ ಓದಿ; ಈಗ ಎಲ್ಲೆಲ್ಲೂ ಕಬಡ್ಡಿ.. ಕಬಡ್ಡಿ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ, ಕಾರ್ಯಕರ್ತನಿಗೆ ಹಲ್ಲೆ: ಬಿಜೆಪಿ ಮುಖಂಡರು ಸೇರಿ 10...

0
ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ಭಾನುವಾರ (ಮೇ 5) ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಪಕ್ಷದ ಕಚೇರಿಯ ಹೊರಗೆ ನಿಲ್ಲಿಸಿದ್ದ ಹಲವು ವಾಹನಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು,...