Homeಮುಖಪುಟತೆಲಂಗಾಣ: ಮಾವಿನ ಹಣ್ಣು ಕದ್ದರೆಂದು ಮಕ್ಕಳಿಗೆ ಸಗಣಿ ತಿನ್ನಿಸಿದ ಕಿಡಿಗೇಡಿಗಳು

ತೆಲಂಗಾಣ: ಮಾವಿನ ಹಣ್ಣು ಕದ್ದರೆಂದು ಮಕ್ಕಳಿಗೆ ಸಗಣಿ ತಿನ್ನಿಸಿದ ಕಿಡಿಗೇಡಿಗಳು

- Advertisement -
- Advertisement -

ಮಾವಿನ ಹಣ್ಣು ಕದ್ದ ಆರೋಪದಲ್ಲಿ ಇಬ್ಬರು ಅಪ್ರಾಪ್ತ ಬಾಲಕರನ್ನು ಕಟ್ಟಿಹಾಕಿ ಕೋಲುಗಳಿಂದ ಥಳಿಸಿ, ಬಲವಂತವಾಗಿ ಹಸುವಿನ ಸಗಣಿ ಬಾಯಿಗೆ ತುರುಕಿ ಹಿಂಸಿಸಿರುವ ಆಘಾತಕಾರಿ ಘಟನೆ ತೆಲಂಗಾಣದ ಮೆಹಬೂಬಾದ್‌ನಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ.

ಮಹಬೂಬಾದ್ ಜಿಲ್ಲೆಯ ತೋರೂರ್ ಮಂಡಲದ ಹೊರವಲಯದಲ್ಲಿರುವ ಮಾವಿನ ತೋಟದಲ್ಲಿ 13 ಮತ್ತು 16 ವರ್ಷ ವಯಸ್ಸಿನ ಇಬ್ಬರು ಬಾಲಕರನ್ನು ಮಾವಿನ ಹಣ್ಣುಗಳನ್ನು ಕದ್ದ ಆರೋಪದ ಮೇಲೆ ತೋಟದ ಕಾವಲುಗಾರರು ಥಳಿಸಿದ್ದಾರೆ.

ತೋಟದ ಕಾವಲುಗಾರರರಾದ ಯಾಕೂಬ್ ಮತ್ತು ರಾಮು ಇಬ್ಬರು ಮಕ್ಕಳನ್ನು ಕಟ್ಟಿಹಾಕಿ, ಥಳಿಸಿ ಕ್ರೂರವಾಗಿ ವರ್ತಿಸಿದ್ದಾರೆ. ಕೈಗಳನ್ನು ನಿರ್ದಾಕ್ಷಿಣ್ಯವಾಗಿ ಕಟ್ಟಿ ಕಟ್ಟಿಗೆಗಳಿಂದ ಹೊಡೆದಿದ್ದಾರೆ. ದನಗಳ ಸಗಣಿಯನ್ನು ಬಲವಂತವಾಗಿ ಮಕ್ಕಳ ಬಾಯಿಗೆ ಸಗಣಿ ತುರುಕಿ ಪೈಶಾಚಿಕ ಆನಂದ ಪಟ್ಟಿದ್ದಾರೆ. ಮಕ್ಕಳು ಎಷ್ಟು ಬೇಡಿಕೊಂಡರು ಇಬ್ಬರು ಅವರನ್ನು ಬಿಟ್ಟಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ: `1232 ಕಿ.ಮೀ’ | ಕರಾಳ ಲಾಕ್‌ಡೌನ್‌‌ನಲ್ಲಿ ಕಾರ್ಮಿಕರ ‘ಮಹಾವಲಸೆ’ಯ ಕತೆ ಹೇಳುವ ಸಾಕ್ಷ್ಯಚಿತ್ರ

 

ಗಾಯಗೊಂಡ ಇಬ್ಬರು ಬಾಲಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಇಬ್ಬರು ಕಾವಲುಗಾರರನ್ನು ಬಂಧಿಸಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕರು ತಾವು ಮಾವಿನಹಣ್ಣನ್ನು ಕದ್ದಿಲ್ಲ ಎಂದು ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ. ತಪ್ಪಿಸಿಕೊಂಡಿದ್ದ ತಮ್ಮ ನಾಯಿಯನ್ನು ಹುಡುಕಲು ಮಾತ್ರ ಹಣ್ಣಿನ ತೋಟಕ್ಕೆ ಹೋಗಿದ್ದಾಗಿ ತಿಳಿಸಿದ್ದಾರೆ.


ಇದನ್ನೂ ಓದಿ: ವಿವಾದಿತ ಕೃಷಿ ಕಾಯ್ದೆಗಳ ಬಗ್ಗೆ ಅಧ್ಯಯನ: ಸುಪ್ರೀಂಕೋರ್ಟ್‌ಗೆ ವರದಿ ಸಲ್ಲಿಸಿದ ಸ್ಥಾಯಿ ಸಮಿತಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಮಕ್ಕಳಿಗೆ ಸೆಗಣಿ ತಿನ್ನಿಸಿದವರನ್ನು ಗಲ್ಲು ಶಿಕ್ಷೆಯನ್ನು ಕೊಟ್ಟರೆ ಒಳ್ಳೆಯದು

LEAVE A REPLY

Please enter your comment!
Please enter your name here

- Advertisment -

Must Read

2023ರಲ್ಲಿ ತೀವ್ರ ಹಸಿವಿನಿಂದ ತತ್ತರಿಸಿದ 282 ಮಿಲಿಯನ್ ಜನರು: ಆಹಾರದ ಅಭಾವಕ್ಕೆ ವಿಶ್ವಸಂಸ್ಥೆ ಉಲ್ಲೇಖಿಸಿದ...

0
ಕಳೆದ ವರ್ಷ ಪ್ರಪಂಚದಾದ್ಯಂತ ಆಹಾರ ಅಭದ್ರತೆ ಸ್ಥಿತಿ ಭಾರೀ ಹದಗೆಟ್ಟಿದೆ, 2023ರಲ್ಲಿ ಸುಮಾರು 282 ಮಿಲಿಯನ್ ಜನರು ತೀವ್ರ ಹಸಿವಿನಿಂದ ಬಳಲಿದ್ದಾರೆ, ಇದರಲ್ಲಿ ವಿಶೇಷವಾಗಿ ಯುದ್ಧಪೀಡಿತ ಗಾಝಾ ಮತ್ತು ಸುಡಾನ್‌ನಲ್ಲಿ ಹೆಚ್ಚಿನ ಜನರು...