Homeಮುಖಪುಟತೆಲಂಗಾಣ: ಬಿಜೆಪಿ ಅಭ್ಯರ್ಥಿ ವಿರುದ್ಧ ಜಯ ಸಾಧಿಸಿದ ಪಿ.ವಿ ನರಸಿಂಹ ರಾವ್ ಪುತ್ರಿ

ತೆಲಂಗಾಣ: ಬಿಜೆಪಿ ಅಭ್ಯರ್ಥಿ ವಿರುದ್ಧ ಜಯ ಸಾಧಿಸಿದ ಪಿ.ವಿ ನರಸಿಂಹ ರಾವ್ ಪುತ್ರಿ

- Advertisement -
- Advertisement -

ಮಹಾಬೂಬ್‌ನಗರ-ರಂಗರೆಡ್ಡಿ-ಹೈದರಾಬಾದ್ ಪದವೀಧರರ ಕ್ಷೇತ್ರದಿಂದ ತೆಲಂಗಾಣ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಟಿಆರ್‌ಎಸ್ ಅಭ್ಯರ್ಥಿ, ಮಾಜಿ ಪ್ರಧಾನಿ ಪಿ.ವಿ ನರಸಿಂಹ ರಾವ್ ಅವರ ಪುತ್ರಿ ಎಸ್.ವಾಣಿ ದೇವಿ ಶನಿವಾರ ಜಯಗಳಿಸಿದ್ದಾರೆ.

ವಾಣಿ ದೇವಿ ತನ್ನ ಹತ್ತಿರದ ಬಿಜೆಪಿ ಪ್ರತಿಸ್ಪರ್ಧಿ ಮತ್ತು ಹಾಲಿ ಎಂಎಲ್‌ಸಿ ಎನ್. ರಾಮಚಂದರ್ ರಾವ್ ಅವರನ್ನು ಸೋಲಿಸಿದ್ದಾರೆ. ಶನಿವಾರ ರಾತ್ರಿ ಚುನಾವಣಾ ಅಧಿಕಾರಿಯಿಂದ ವಿಜಯದ ಚುನಾವಣಾ ಪ್ರಮಾಣಪತ್ರವನ್ನು ಸ್ವೀಕರಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಮಾರ್ಚ್ 14 ರಂದು ಮಹಾಬೂಬ್‌ನಗರ-ರಂಗರೆಡ್ಡಿ-ಹೈದರಾಬಾದ್ ಮತ್ತು ವಾರಂಗಲ್-ಖಮ್ಮಮ್-ನಲ್ಗೊಂಡ ಪದವೀಧರರ ಕ್ಷೇತ್ರಗಳಿಂದ ಪರಿಷತ್ತಿಗೆ ಚುನಾವಣೆ ನಡೆದಿತ್ತು. ಎರಡು ಕ್ಷೇತ್ರಗಳ ಒಟ್ಟು ಮತದಾರರ ಸಂಖ್ಯೆ 10 ಲಕ್ಷಕ್ಕೂ ಹೆಚ್ಚಿದೆ.

ಇದನ್ನೂ ಓದಿ: ಎಲ್ಲೆಲ್ಲೋ ಬಟ್ಟೆಬಿಚ್ಚಿ ಮರ್ಯಾದೆ ಕಳೆಯುತ್ತಿರುವ ಬಿಜೆಪಿ ನಾಯಕರಿಗಾಗಿ ಬಟ್ಟೆ ಖರೀದಿ- ಸಿದ್ದರಾಮಯ್ಯ

ವಾರಂಗಲ್-ಖಮ್ಮಮ್-ನಲ್ಗೊಂಡಾ ಕ್ಷೇತ್ರದಲ್ಲಿ ಮತ ಏಣಿಕೆ ನಡೆಯುತ್ತಿದ್ದು, ಟಿಆರ್‌ಎಸ್ ಅಭ್ಯರ್ಥಿ ಮತ್ತು ಹಾಲಿ ಎಂಎಲ್‌ಸಿ ಪಲ್ಲಾ ರಾಜೇಶ್ವರ ರೆಡ್ಡಿ ಮುನ್ನಡೆ ಸಾಧಿಸಿದ್ದಾರೆ.

ಮತಗಳ ಎಣಿಕೆ ಬುಧವಾರದಿಂದ ಪ್ರಾರಂಭವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿದ್ದ ಅಭ್ಯರ್ಥಿಗಳ ದೃಷ್ಟಿಯಿಂದ ಮತದಾನದಲ್ಲಿ ಜಂಬೋ ಗಾತ್ರದ ಮತಪತ್ರಗಳನ್ನು ಬಳಸಲಾಗಿದೆ.

ಮಹಾಬೂಬ್‌ನಗರ-ರಂಗರೆಡ್ಡಿ-ಹೈದರಾಬಾದ್ ಕ್ಷೇತ್ರದಿಂದ 93 ಅಭ್ಯರ್ಥಿಗಳು ಕಣದಲ್ಲಿದ್ದರೆ, 71 ನಾಮನಿರ್ದೇಶಿತರು ವಾರಂಗಲ್-ಖಮ್ಮಮ್-ನಲ್ಗೊಂಡಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಮಹಾಬುಬ್‌ನಗರ-ರಂಗರೆಡ್ಡಿ-ಹೈದರಾಬಾದ್ ಸ್ಥಾನವು ಶೇಕಡಾ 67.26 ರಷ್ಟು ಮತದಾನ ಕಂಡರೆ, ವಾರಂಗಲ್-ಖಮ್ಮಮ್-ನಲ್ಗೊಂಡ ಕ್ಷೇತ್ರದಲ್ಲಿ ಮತದಾನದ ಪ್ರಮಾಣ ಶೇ 76.41 ರಷ್ಟಿದೆ.

ಕಳೆದ ವರ್ಷದ ಕೊನೆಯಲ್ಲಿ ಡಬ್ಬಾಕ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮತ್ತು ಹೈದರಾಬಾದ್ ಸ್ಥಳೀಯ ಚುನಾವಣೆಗಳಲ್ಲಿ ಹಿನ್ನಡೆ ಅನುಭವಿಸಿದ ಟಿಆರ್‌ಎಸ್ ಈ ಎರಡು ಸ್ಥಾನಗಳನ್ನು ಗೆಲ್ಲಲು ದೃಢ ನಿರ್ಣಯ ಮಾಡಿತ್ತು.


ಇದನ್ನೂ ಓದಿ: ಕೇರಳದಲ್ಲಿ ಬಿಜೆಪಿಗೆ ಭಾರಿ ಹಿನ್ನಡೆ, ಮೂವರು ಎನ್‌ಡಿಎ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...