ದಲಿತ ಮಹಿಳೆ ಅಂಬಾದಿಪುದಿ ಮರಿಯಮ್ಮ ಅವರ ಲಾಕಪ್ ಡೆತ್‌ಗೆ ಸಂಬಂಧಿಸಿದಂತೆ ಈ ಹಿಂದೆ ಅಮಾನತುಗೊಂಡಿದ್ದ ಮೂವರು ತೆಲಂಗಾಣ ಪೊಲೀಸ್ ಸಿಬ್ಬಂದಿಯನ್ನು ಈಗ ಸೇವೆಯಿಂದ ಶಾಶ್ವತವಾಗಿ ವಜಾಗೊಳಿಸಲಾಗಿದೆ.
ಅಡಗುದೂರ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಸ್ಟಡಿಯಲ್ಲಿಯೇ ದಲಿತ ಮಹಿಳೆ ಮರಿಯಮ್ಮ ಸಾವನ್ನಪ್ಪಿದ್ದರು. ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಸಬ್ ಇನ್ಸ್‌ಪೆಕ್ಟರ್ ವಿ.ಮಹೇಶ್ವರ ಮತ್ತು ಪೊಲೀಸ್ ಕಾನ್‌ಸ್ಟೆಬಲ್‌ಗಳಾದ ಎಂ.ಎ.ರಶೀದ್ ಪಟೇಲ್ ಮತ್ತು ಪಿ.ಜನಯ್ಯ ಅವರನ್ನು ಜುಲೈ 20 ರ ಮಂಗಳವಾರ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ರಾಚಕೊಂಡ ಪೊಲೀಸ್ ಆಯುಕ್ತ ಮಹೇಶ್ ಭಾಗವತ್ ಹೇಳಿದ್ದಾರೆ.
ಖಮ್ಮಂ ಜಿಲ್ಲೆಯ ಚಿಂತಕಣಿ ಮೂಲದ ಮರಿಯಮ್ಮ (45) ಯಾದಾದ್ರಿ ಜಿಲ್ಲೆಯ ಅಡಗುದೂರಿನಲ್ಲಿರುವ ಪಾದ್ರಿಯ ಮನೆಯಲ್ಲಿ ಅಡುಗೆಯವರಾಗಿ ಕೆಲಸ ಮಾಡುತ್ತಿದ್ದರು. ಜೂನ್ 15 ರಂದು 2 ಲಕ್ಷ ರೂ. ಕಳ್ಳತನ ಮಾಡಿದ್ದರೆಂದು ಆರೋಪಿಸಿ ಕಳ್ಳತನ ಪ್ರಕರಣದಲ್ಲಿ ವಿಚಾರಣೆಗಾಗಿ ಆಕೆಯ ಮಗ ಉದಯ್ ಕಿರಣ್ ಮತ್ತು ಅವನ ಸ್ನೇಹಿತನೊಂದಿಗೆ ಯಾದಾದ್ರಿ ಭೋಂಗೀರ್ ಜಿಲ್ಲೆಯ ಪೊಲೀಸ್ ಠಾಣೆಗೆ ಕರೆತರಲಾಗಿತ್ತು.
ಇದನ್ನೂ ಓದಿ: ಹರಿಯಾಣ: ದಲಿತ ಯುವತಿಯನ್ನು ಅಪಹರಿಸಿ ಸತತ 9 ದಿನ ಅತ್ಯಾಚಾರ ನಡೆಸಿದ ದುಷ್ಕರ್ಮಿಗಳು
ಎರಡು ದಿನಗಳ ನಂತರ ಮರಿಯಮ್ಮನನ್ನು ಬಂಧಿಸಲಾಗಿತ್ತು. ತಾಯಿಯೊಂದಿಗೆ ಬಂಧನಕ್ಕೊಳಗಾಗಿದ್ದ ಮಗ, ಇಬ್ಬರಿಗೂ ತೀವ್ರವಾಗಿ ಥಳಿಸಲಾಗಿತ್ತು ಎಂದು ಹೇಳಿದ್ದಾರೆ.
“ಪೊಲೀಸರು ನನ್ನ ತಾಯಿಯ ಹೊಟ್ಟೆಗೆ ಬೂಟು ಕಾಲುಗಳಿಂದ ಒದೆಯುತ್ತಿದ್ದರು. ನೋವನ್ನು ಸಹಿಸಲಾಗದೆ ಆಕೆ ಅಲ್ಲಿಯೇ ಮೂತ್ರ ವಿಸರ್ಜಿಸಿದ್ದರು. ನಂತರ ಆಕೆ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಬೆಳಿಗ್ಗೆ 9.30 ಕ್ಕೆ ಆಕೆಯನ್ನು ಪೊಲೀಸರು ಮತ್ತೆ ಎಬ್ಬಿಸಲು ನೋಡಿದಾಗ, ಆಕೆ ನನ್ನ ಮಡಿಲಲ್ಲಿ ಸಾವನ್ನಪ್ಪಿದರು” ಎಂದು ಮಗ ಆರೋಪಿಸಿದ್ದಾನೆ. ಉದಯ್ ಕಿರಣ್ ಕೂಡ ಗಾಯಗಳಿಮದ ಬಳಲುತ್ತಿದ್ದು, ಖಮ್ಮಂ ಜನರಲ್ ಆಸ್ಪತ್ರೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು.
ಲಾಕಪ್ ಡೆತ್ ಘಟನೆಯ ಬಗ್ಗೆ ತೆಲಂಗಾಣ ರಾಜ್ಯ ಮಾನವ ಹಕ್ಕುಗಳ ಆಯೋಗ (SHRC) ರಾಚಕೊಂಡ ಪೊಲೀಸ್ ಆಯುಕ್ತರಿಂದ ವಿವರವಾದ ವಿಚಾರಣೆಗೆ ಆದೇಶ ನೀಡಿತ್ತು. ಈ ಘಟನೆಯ ಬಗ್ಗೆ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ (NCSC) ತೆಲಂಗಾಣ ಸರ್ಕಾರಕ್ಕೆ ನೋಟಿಸ್ ನೀಡಿತ್ತು.
ಜೂನ್ 25 ರಂದು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಮರಿಯಮ್ಮ ಅವರ ಸಾವಿನ ಬಗ್ಗೆ ತನಿಖೆ ಆರಂಭಿಸುವಂತೆ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಮಹೇಂದರ್ ರೆಡ್ಡಿ ಅವರಿಗೆ ನಿರ್ದೇಶನ ನೀಡಿದ್ದರು. ತಪ್ಪಿತಸ್ಥರೆಂದು ಕಂಡುಬಂದಲ್ಲಿ ಪೊಲೀಸ್ ಸಿಬ್ಬಂದಿಯನ್ನು ಸೇವೆಗಳಿಂದ ತೆಗೆದುಹಾಕುವಂತೆ ಡಿಜಿಪಿಗೆ ಸೂಚಿಸಿದ್ದರು.
ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಲಾಕಪ್ ಡೇತ್‌ಗೆ ಬಲಿಯಾದ ಮೃತ ಅಂಬಾದಿಪುದಿ ಮರಿಯಮ್ಮ ಕುಟುಂಬಕ್ಕೆ 35 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ರಾಚಕೊಂಡ ಪೊಲೀಸ್ ಆಯುಕ್ತ ಮಹೇಶ್ ಭಗವತ್ ಅವರು ಸಂವಿಧಾನದ 311 (2) (ಬಿ) ಮತ್ತು ಸಂವಿಧಾನದ 311 (2) (ಬಿ) ಮತ್ತು 25 (2) ನಡವಳಿಕೆಯ ನಿಯಮಗಳ ಅಡಿಯಲ್ಲಿ ಮಂಗಳವಾರ ಸಬ್ ಇನ್ಸ್‌ಪೆಕ್ಟರ್ ವಿ.ಮಹೇಶ್ವರ ಸೇರಿ ಇಬ್ಬರು ಕಾನ್‌ಸ್ಟೆಬಲ್‌ಗಳನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ: ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ, ಒಬ್ಬನ ಬಂಧನ



It has coming very nice keep it up