Homeಮುಖಪುಟತೆಲಂಗಾಣ: ಉಪಚುನಾವಣೆಯಲ್ಲಿ ಟಿಆರ್‌ಎಸ್ ಸೋಲು- ಕಾರ್ಯಕರ್ತನ ಅಸಹಜ ಸಾವು!

ತೆಲಂಗಾಣ: ಉಪಚುನಾವಣೆಯಲ್ಲಿ ಟಿಆರ್‌ಎಸ್ ಸೋಲು- ಕಾರ್ಯಕರ್ತನ ಅಸಹಜ ಸಾವು!

ಕೊಟ್ಟಿಂಟಿ ಸ್ವಾಮಿ ಟಿಆರ್‌ಎಸ್ ಪಕ್ಷದ ತೀವ್ರ ಬೆಂಬಲಿಗರಾಗಿದ್ದು, ಚುನಾವಣೆ ಘೋಷಣೆಯಾದ ಮೊದಲ ದಿನದಿಂದಲೇ ದುಬ್ಬಕಾ ಉಪಚುನಾವಣೆ ಅಭಿಯಾನದ ಭಾಗವಾಗಿದ್ದರು

- Advertisement -
- Advertisement -

ದುಬ್ಬಾಕ ಉಪ ಚುನಾವಣೆಯಲ್ಲಿ ಟಿಆರ್‌ಎಸ್ ಅಭ್ಯರ್ಥಿ ಎಸ್ ಸುಜಾತಾ ಸೋತಿದ್ದಕ್ಕೆ ಖಿನ್ನತೆಗೆ ಒಳಗಾದ ಪಕ್ಷದ 23 ವರ್ಷದ ಕಾರ್ಯಕರ್ತ ಮಂಗಳವಾರ ತಡರಾತ್ರಿ ಅಸಹಜವಾಗಿ ಸಾವನ್ನಪ್ಪಿದ್ದು, ದೌಲತಾಬಾದ್‌ನ ಕೊನೈಪಲ್ಲಿ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಕೊಟ್ಟಿಂಟಿ ಸ್ವಾಮಿ ಟಿಆರ್‌ಎಸ್ ಪಕ್ಷದ ತೀವ್ರ ಬೆಂಬಲಿಗರಾಗಿದ್ದು, ಚುನಾವಣೆ ಘೋಷಣೆಯಾದ ಮೊದಲ ದಿನದಿಂದಲೇ ದುಬ್ಬಕಾ ಉಪಚುನಾವಣೆ ಅಭಿಯಾನದ ಭಾಗವಾಗಿದ್ದರು. ಮಂಗಳವಾರ ಮತದಾನ ಎಣಿಕೆ ಪ್ರಕ್ರಿಯೆಯನ್ನು ಪ್ರಾರಂಭಿಸಿದ ಕ್ಷಣದಿಂದ ಕೊಟ್ಟಿಂಟಿ ಸ್ವಾಮಿ ಟಿವಿಯನ್ನು ನೋಡುತ್ತಲೇ ಇದ್ದರು ಎಂದು ಅವರ ಪತ್ನಿ ಹೇಳಿದ್ದಾರೆ.

ಇದನ್ನೂ ಓದಿ: ಗೆಲುವು ಸಂಭ್ರಮಿಸಲು ಹಿಂದಿ ಮಾತ್ರವಲ್ಲ ವೈವಿದ್ಯಮಯ ಭಾಷೆಗಳು ಬೇಕು!

ಟಿಆರ್‌ಎಸ್ ಅಭ್ಯರ್ಥಿ ಗೆಲ್ಲುತ್ತಾರೆಂದು ಕೊನೆಯ ಕ್ಷಣದವರೆಗೂ ಭರವಸೆ ಹೊಂದಿದ್ದರು. ಆದರೆ ಮಂಗಳವಾರ ಸಂಜೆ 5 ಗಂಟೆಯ ಹೊತ್ತಿಗೆ ಫಲಿತಾಂಶ ಹೊರಬಂದು ಬಿಜೆಪಿ ಅಭ್ಯರ್ಥಿ ಗೆದ್ದರು. ಇದರಿಂದ ಕೊಟ್ಟಿಂಟಿ ಸ್ವಾಮಿ ಖಿನ್ನತೆಗೆ ಒಳಗಾಗಿದ್ದರು.

ನಿರಾಶೆಗೊಂಡ ಕೊಟ್ಟಿಂಟಿ ಸ್ವಾಮಿ, “ಈಗ ಬದುಕಿರುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿ, ತಮ್ಮ ಕೃಷಿಭೂಮಿಗೆ ಹೋಗುವುದಾಗಿ ಹೇಳಿ ಶೀಘ್ರದಲ್ಲೇ ಮನೆಯಿಂದ ಹೊರಟುಹೋದರು” ಎಂದು ಅವರ ಪತ್ನಿ ಹೇಳಿದರು.

ತುಂಬಾ ಸಮಯದ ನಂತರವೂ ಅವರು ಮನೆಗೆ ಹಿಂತಿರುಗಲಿಲ್ಲವಾದ್ದರಿಂದ, ಕಾರ್ಯಕರ್ತನ ಪತ್ನಿಯು ಗ್ರಾಮಸ್ಥರಿಗೆ ಮಾಹಿತಿ ನೀಡಿದಳು. ಆಗ ಅವರು ಕೊಟ್ಟಿಂಟಿ ಸ್ವಾಮಿಯ ಹೊಲಕ್ಕೆ ಹೋದರು. ಆದರೆ ಅಲ್ಲಿ ಆತ ನೇಣುಬಿಗಿದುಕೊಂಡಿದ್ದನು ಎಂದು ಹೇಳಿದರು. ಪ್ರತ್ಯಕ್ಷದರ್ಶಿಯ ಪ್ರಕಾರ, ಸಾಯುವಾಗ ತನ್ನ ಪಕ್ಷದ ಸ್ಕಾಫ್‌ ಅನ್ನು ಕುತ್ತಿಗೆಗೆ ಸುತ್ತಿಕೊಂಡಿದ್ದನು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ತೆಲಂಗಾಣ ಉಪಚುನಾವಣೆ: ಪೊಲೀಸರು ವಶಪಡಿಸಿಕೊಂಡ ಹಣ ಕಸಿದು ದುರ್ವರ್ತನೆ ತೋರಿದ ಬಿಜೆಪಿ ಕಾರ್ಯಕರ್ತರು!

ನಂತರ ಪೊಲೀಸರಿಗೆ ಮಾಹಿತಿ ನೀಡಿದರು. ಅವರು ಸ್ಥಳಕ್ಕೆ ತಲುಪಿ ಶವವನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು. ಶವಪರೀಕ್ಷೆಯ ನಂತರ, ಮೃತ ದೇಹವನ್ನು ಬುಧವಾರ ಅವರ ಸಂಬಂಧಿಕರಿಗೆ ಹಸ್ತಾಂತರಿಸಿದರು.

ಉಪಚುನಾವಣೆಯ ಪಕ್ಷದ ಉಸ್ತುವಾರಿ ಮತ್ತು ಹಣಕಾಸು ಸಚಿವ ಟಿ.ಹರೀಶ್ ರಾವ್‌ಗೆ ಈ ಘಟನೆಯ ಬಗ್ಗೆ ತಿಳಿದಾಗ ಆಘಾತಕ್ಕೊಳಗಾಗಿದ್ದಾರೆ. ಸಚಿವರು ಮತ್ತು ಮೇದಕ್ ಸಂಸದ ಕೆ ಪ್ರಭಾಕ ಬುಧವಾರ ಸಂತ್ರಸ್ತರ ಮನೆಗೆ ತಲುಪಿ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು. ನಂತರ ಮೃತನ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಘೋಷಿಸಿದರು.

ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಹರೀಶ್, ಪಕ್ಷದ ಕಾರ್ಯಕರ್ತರಿಗೆ ಇಂತಹ ತೀವ್ರ ಕ್ರಮಗಳ ಮೋರೆ ಹೋಗದಂತೆ ವಿನಂತಿಸಿದರು

ಜೀವ ಅಮೂಲ್ಯವಾಗಿದೆ. ಮಾನಸಿಕ ಒತ್ತಡಗಳಿದ್ದರೆ ಇಲ್ಲಿ ಸಂಪರ್ಕಿಸಿ:

ಬೆಂಗಳೂರು ಸಹಾಯವಾಣಿ – 080-25497777, ಬೆಳಿಗ್ಗೆ 10 ರಿಂದ ಸಂಜೆ 8 ರವರೆಗೆ

ಕರ್ನಾಟಕ ಆರೋಗ್ಯ ಸಹಾಯವಾಣಿ: 104


ಇದನ್ನೂ ಓದಿ: ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳದಲ್ಲೂ ಸ್ಫರ್ಧಿಸುತ್ತೇವೆ: ಅಸಾದುದ್ದಿನ್ ಒವೈಸಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಯುಎಸ್ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, ಹರ್ದೀಪ್ ಸಿಂಗ್‌ ಹತ್ಯೆ ಬಗ್ಗೆ ಉಲ್ಲೇಖ

0
ಯುನೈಟೆಡ್ ಸ್ಟೇಟ್ಸ್ ತನ್ನ 2023ರ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, BBC ಮೇಲೆ ತೆರಿಗೆ ಅಧಿಕಾರಿಗಳ ದಾಳಿ, ಕೆನಡಾದಲ್ಲಿ ಸಿಖ್ ಕಾರ್ಯಕರ್ತ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಂತಹ ಭಾರತಕ್ಕೆ ಸಂಬಂಧಿಸಿದ ಪ್ರಮುಖ...