Homeಕರ್ನಾಟಕಪಠ್ಯ ಪುಸ್ತಕ ಪರಿಷ್ಕರಣೆ ವಿವಾದ; ದೇವನೂರಿನಿಂದ ಗಾಂಧಿಗುಡಿಗೆ

ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ; ದೇವನೂರಿನಿಂದ ಗಾಂಧಿಗುಡಿಗೆ

- Advertisement -
- Advertisement -

ಪಠ್ಯ ಪರಿಷ್ಕರಣೆ ವಿಷಯದಲ್ಲಿ ಹೋರಾಡಲು ನಮಗಿರುವ ದೊಡ್ಡ ಶಕ್ತಿ ಯಾವುದೆಂದರೆ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು. ಪಠ್ಯ ಪರಿಷ್ಕರಣ ಕುತಂತ್ರಿಗಳ ವಿರುದ್ಧ ಮೊದಮೊದಲು ದನಿ ಎತ್ತಿದವರೇ ಅವರು. ಪರಿಷ್ಕರಣೆಯಲ್ಲಿ ಬಸವಣ್ಣನವರಿಗೆ ಅಪಚಾರವೆಸಗಿದ್ದಾರೆ ಎಂದು ಗೊತ್ತಾದಾಗ ನಡೆದ ಧಾರವಾಡದ ಸಭೆಯಲ್ಲಿ, ಎಲ್ಲ ಜಗದ್ಗುರುಗಳು ಸಾಣೆಹಳ್ಳಿ ಶ್ರೀಗಳಿಗೆ ಸರಕಾರವನ್ನ ಪ್ರಶ್ನಿಸುವ ಜವಬ್ದಾರಿ ವಹಿಸಿದರು. ಅದಾದನಂತರ ಅವರು ಮುಖ್ಯಮಂತ್ರಿ ಜತೆ ಮಾತನಾಡಿ ಹೋರಾಟದ ಎಚ್ಚರಿಕೆ ನೀಡಿದರು. ಆದರೂ ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವ ಹಾಗೂ ಚಕ್ರತೀರ್ಥನ ಉದ್ಧಟತನದ ಮಾತುಗಳು ಮುಂದುವರಿದವು. ಪಠ್ಯ ಪುಸ್ತಕದಲ್ಲಿ ತಪ್ಪುಗಳಾಗಿದ್ದರೆ ಸರಿಪಡಿಸುತ್ತೇವೆ ಎಂದರು. ತಪ್ಪುಗಳು ಅವೇ ಆಗಲು ಸಾಧ್ಯವೆ? ಆರೆಸ್ಸೆಸ್ ಅಜೆಂಡಾ ಇಟ್ಟುಕೊಂಡು ತಿದ್ದಿದ್ದರಿಂದ ತಪ್ಪುಗಳಾಗಿವೆ. ಮಕ್ಕಳ ವಿದಯ ಬಗ್ಗೆ ಕಾಳಜಿಯಿದ್ದವರ್‍ಯಾರು ಇಂತಹ ಅಪರಾಧ ಎಸಗಲಾರರು. ಎಷ್ಟೇ ಆಗಲಿ ಶತಮಾನಗಳ ಕಾಲ ಶೂದ್ರ-ದಲಿತರಿಗೆ ವಿದ್ಯೆಯನ್ನ ವಂಚಿಸಿ ಮನಸ್ಸಗಳಲ್ಲವೆ!

ಇದೆಲ್ಲವನ್ನ ಚರ್ಚಿಸಿದ ಚಿಕ್ಕಮಗಳೂರಿನ ಹಲವು ಸಂಘಟನೆಯ ಗೆಳೆಯರು ಒಂದು ಜಾಥಾ ಮಾಡಿ ಸರಕಾರದ ಗಮನ ಸೆಳೆಯಲು ಯೋಚಿಸಿದರು. ಅದರಂತೆ ಲಕ್ಷ್ಮೀಶ ಕವಿಯ ನೆಲೆಯಾದ ದೇವನೂರು ಸಮೀಪದ ಎಸ್.ಕೊಪ್ಪಲಿನಿಂದ ನಿಡಘಟ್ಟದ ಗಾಂಧಿ ಗುಡಿಯವರೆಗೂ ಜಾಥಾ ತೆಗೆಯಲು ನಿರ್ಧರಿಸಿದರು. ಈ ಜಾಥಾದ ಉದ್ಘಾಟನೆಗೆ ಪಂಡಿತಾರಾಧ್ಯರನ್ನ ಆಹ್ವಾನಿಸಲು ಹೋದಾಗ ಅವರು ಸಾಮರಸ್ಯದ ನಡಿಗೆಯಾಗಿ ಬದಲಾಯಿಸಿಕೊಳ್ಳಲು ಹೇಳಿದರು. ಏಕೆಂದರೆ ಪ್ರಸ್ತುತ ಸಂದರ್ಭದಲ್ಲಿ ಸಾಮರಸ್ಯಕ್ಕೆ ಧಕ್ಕೆ ಬಂದಿರುವುದರಿಂದ ನಮ್ಮ ನಡಿಗೆ ಎಲ್ಲರನ್ನ ಒಳಗೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದರು; ಅದರಿಂದ ಪಠ್ಯಪರಿಷ್ಕರಣ ಅವಾಂತರ, ಸಾಮರಸ್ಯದ ನಡಿಗೆ ಸಾಮಾನ್ಯರೆಡೆಗಾಯ್ತು. ಇದರ ಫಲವಾಗಿ ಜಾಥಾಕ್ಕೆ ಬಸವಪಂಥದವರು, ದಲಿತ ಸಂಘದವರು ಮತ್ತು ಕಮ್ಯುನಿಸ್ಟರು, ಸಿಪಿಐನವರು ಹಾಗೂ ಕಾಂಗ್ರೆಸ್ ಮತ್ತು ದಳದವರೆಲ್ಲಾ ದೇವನೂರಿನಿಂದ ಗಾಂಧಿಗುಡಿಗೆ ಹೆಜ್ಜೆ ಹಾಕಿದರು. ಈ ಕಾಲ್ನಡಿಗೆ ಹೋರಾಟಗಾರರು ಮಳೆಗೇ ಸೆಡ್ಡು ಹೊಡೆದು ನಡೆದರು.

ಎಸ್. ಕೊಪ್ಪಲಿನಲ್ಲಿ ಜಾಥಾ ಉದ್ಘಾಟನೆ ಮಾಡಿದ ಪಂಡಿತಾರಾಧ್ಯರು ನೇರವಾಗಿ ಸರಕಾರ ನಡೆಸುವವರನ್ನ ಕುರಿತು, ’ಈಗ ಹೊಸ ಪಠ್ಯ ರಚನೆ ಕಷ್ಟ ಆದರೂ, ಮಕ್ಕಳಿಗೆ ಸರಿಯಾದ ಇತಿಹಾಸ ಬೋಧಿಸಬೇಕಾದ ಶಿಕ್ಷಣ ತಜ್ಞರು ಮತ್ತು ರಾಜಕೀಯ ಧುರೀಣರು ಯೋಚಿಸಬೇಕು. ದೂರದೃಷ್ಟಿ ಇಲ್ಲದೆ ಮಾಡಿರುವ ಅವಾಂತರಕ್ಕೆ ಈ ನಾಡು ಕ್ಷೆಭೆಗೊಳಪಟ್ಟಿದೆ. ಜಾತಿ ಧರ್ಮದ ಸಂಘರ್ಷವೇರ್ಪಟ್ಟಿದೆ. ಎಲ್ಲಾ ಕ್ಷೇತ್ರದಲ್ಲೂ ಕೊಳಕು ತುಂಬಿಹೋಗಿದೆ. ನಾವು ಇದನ್ನೆಲ್ಲಾ ಸ್ಪಷ್ಟಗೊಳಿಸಬೇಕಿದೆ. ನಮ್ಮ ಹೋರಾಟದ ಮನಸ್ಸುಗಳು ಎಚ್ಚರಗೊಳ್ಳಬೇಕಿದೆ. ಯಾವ ದುರ್ಘಟನೆಗೂ ನಮ್ಮ ಮನಸ್ಸು ಹೋರಾಟ ಮಾಡಲು ಅಣಿಯಾಗುತ್ತಿದ್ದು, ವ್ಯವಸ್ಥೆಯೊಂದಿಗೆ ರಾಜಿ ಮನೋಭಾವ ತುಂಬ ಅಪಾಯಕಾರಿ. ಅನ್ಯಾಯ ನಡೆದಾಗ ನಾವು ಪ್ರತಿಭಟಿಸದಿದ್ದರೆ ನಾವು ಸತ್ತಿದ್ದೇವೆ ಎಂದು ಅರ್ಥ. ಪ್ರತಿಭಟನೆಯೇ ಜೀವಂತಿಕೆಯ ಸಂಕೇತ’ ಎಂದವರು ಎಸ್.ಕೊಪ್ಪಲಿನಿಂದ ದೇವನೂರರವರೆಗೂ ನಡೆದು ಬಂದು ಜಾಥಾ ಮುನ್ನಡೆಸುವಂತೆ ಹೇಳಿಹೋದರು.

ಈ ಜಾಥಾ ರೂಪುಗೊಂಡದ್ದೇ ಕವಿ ಎಸ್.ಜಿ ಸಿದ್ದರಾಮಯ್ಯನವರಿಂದ. ಹಾಗಾಗಿ ಅವರು ಹಿಂದಿನ ದಿನವೇ ರುದ್ರಪ್ಪ ಅನಗವಾಡಿ ಮತ್ತು ಶ್ರೀಪಾದ ಭಟ್‌ರೊಡನೆ ಬಂದಿದ್ದರು. ಪಂಡಿತಾರಾಧ್ಯರು ನಿರ್ಗಮಿಸಿದ ನಂತರ ಜಾಥಾ ಮುನ್ನಡೆಸಿದ ಸಿದ್ದರಾಮಯ್ಯನವರು ಮಳೆಯಲ್ಲಿ ತೊಯ್ದರೂ ಲೆಕ್ಕಿಸದೆ ಗಾಂಧಿ ಗುಡಿ ತಲುಪಿದರು. ವಿಶೇಷ ಅಂದರೆ ಕೇವಲ ಒಂದು ಮೇಸೆಜ್ ಕಳಿಸೇಸಿದ್ದಕ್ಕೆ ಬಸವಕುಮಾರ ಸ್ವಾಮೀಜಿ ಮತ್ತು ಕಲ್ಕೆರೆ ಅಲ್ಲಮಪ್ರಭು ಪೀಠದ ತಿಪ್ಪೆರುದ್ರ ಸ್ವಾಮಿ ಬಂದು ಬರಿಗಾಲಲ್ಲೇ ನಡೆದುದು.

ಚಿಕ್ಕಮಗಳೂರು ಜಿಲ್ಲೆಯ ನಿಡಘಟ್ಟದಲ್ಲಿ ಗಾಂಧಿಗುಡಿಯಿದೆ. 1948 ಫೆಬ್ರವರಿಯಲ್ಲಿ ನಿರ್ಮಿಸಿದ ಈ ಪುಟ್ಟಗುಡಿಯಲ್ಲಿ ಗಾಂಧೀಜಿ ಪ್ರತಿಮೆಯಿದೆ. ಯಾವುದೇ ಕಾರ್ಯಕ್ರಮಕ್ಕೂ ಮುನ್ನ ಈ ಗುಡಿಯಲ್ಲಿ ನಿಂತಿರುವ ಗಾಂಧೀಜಿ ವಿಗ್ರಹಕ್ಕೆ ಮಾಲಾರ್ಪಣೆ ಮಾಡುವುದು ವಾಡಿಕೆ. ಗಾಂಧಿ ಗುಡಿ ಸಾಮಾನ್ಯವಾಗಿ ಎಲ್ಲೂ ಇರಲಾರದು. ಹರಪನಹಳ್ಳಿ ಪ್ರೈಮರಿ ಶಾಲೆಯಲ್ಲಿ ಗಾಂಧೀಜಿ ಮಲಗಿಹೋಗಿದ್ದರಂತೆ. ಅವರ ನೆನಪಿಗೆ ಎಂ.ಪಿ ಪ್ರಕಾಶ್ ಮಗ ರವೀಂದ್ರ ಆ ಶಾಲಾಕೊಠಡಿಯೊಳಗೆ ವಿಶ್ರಾಂತ ಭಂಗಿಯ ವಿಗ್ರಹ ನಿರ್ಮಿಸಿದ್ದಾರೆ. ಅದು ಬಿಟ್ಟರೆ ನಿಡಘಟ್ಟದಲ್ಲಿರುವ ಗಾಂಧಿ ಗುಡಿ ಅವರ ಹತ್ಯೆಯಾದ ನಂತರ ಅನುಯಾಯಿಗಳು ನಿರ್ಮಿಸಿದ್ದು. ತೆಳು ನಗೆಯ ಗಾಂಧಿ ಪ್ರತಿಮೆ ಜಾಥಾ ಬಂದವರನ್ನ ನೋಡಿ ಮೆಚ್ಚಿದಂತೆ ಕಾಣುತ್ತಿತ್ತು. ಹಾಗೆ ನೋಡಿದರೆ ಚಳವಳಿಗಾರರ
ಜಾಥಾಗಳೆಲ್ಲಾ ಗಾಂಧೀಜಿ ಹಾಕಿಕೊಟ್ಟ ಮಾರ್ಗಗಳು. ಚಿಕ್ಕಮಗಳೂರಲ್ಲಿ ಗಾಂಧೀಜಿಯ ನೆನಪು ಇನ್ನೂ ಹಸಿರಾಗಿದೆ. ಇಲ್ಲಿನ ಡಿ.ಸಿ ಕಚೇರಿ ಆವರಣದಲ್ಲಿ ಕುಳಿತು ಗಾಂಧೀಜಿ ಭಾಷಣ ಮಾಡಿದ್ದರು. ಆ ನೆನಪಿಗಾಗಿ ಅಂದು ತೆಗೆದ ಭಾವಚಿತ್ರ ಇಲ್ಲಿರುವುದಲ್ಲದೆ, ಅವರ ಸಂದೇಶಗಳೂ ಇವೆ. ಇಲ್ಲಿ ದಲಿತ ಚಳುವಳಿ ಕಮ್ಯುನಿಸ್ಟರ ಚಳುವಳಿ ಮತ್ತು ರೈತ ಚಳವಳಿ ಜಿಲ್ಲೆಯನ್ನು ಸದಾ ಜೀವಂತವಾಗಿಟ್ಟಿದ್ದವು. ಎಲ್ಲ ಚಳವಳಿಯ ನೇತಾರರು ಅಕಾಲ ಮರಣಕ್ಕೆ ತುತ್ತಾಗಿಹೋದರು. ಕಮ್ಯುನಿಸ್ಟ್ ನಾಯಕ ಸುಂದರೇಶ್ ರೈಲ್ವೆ ಅಪಘಾತದಲ್ಲಿ ಮಡಿದರು, ಎಂ.ಡಿ ಗಂಗಯ್ಯ ಹೃದಯಾಘಾತದಲ್ಲಿ ತೀರಿಕೊಂಡರು. ಇನ್ನ ರೈತಸಂಘದ ನಾಯಕರಾದ ಎಂ.ಡಿ ನಂಜುಂಡಸ್ವಾಮಿಯವರ ನಿಧನಾನಂತರ ಹೆಚ್.ಹೆಚ್ ದೇವರಾಜ್ ಕಾಂಗ್ರೆಸ್ ಸೇರಿದರು. ಹಾಳೂರಿಗೆ ಉಳಿದವನೇ ಹಮ್ಮೀರ ಎಂಬಂತೆ ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಹೆಚ್.ಹೆಚ್ ದೇವರಾಜ್ ಎದುರಿಗೆ ಠೇವಣಿ ಕಳೆದುಕೊಂಡಿದ್ದ ಸಿ.ಟಿ ರವಿ ಬಾಬಾಬುಡನ್‌ಗಿರಿಯ ಸಮಸ್ಯೆಯನ್ನು ಬೃಹದಾಕಾರವಾಗಿ ಬೆಳೆಸಿಕೊಂಡು ಅದನ್ನೆ ಜೀವಂತವಾಗಿರಿಸಿಕೊಂಡು ಚುನಾವಣೆಯಲ್ಲಿ ಗೆದ್ದು ಬರುತ್ತಿದ್ದಾರೆ. ಇವರಿಗೆ ಪಠ್ಯಪುಸ್ತಕದ ಪರಿಷ್ಕರಣೆ ವಿಷಯದಲ್ಲಿ ಕುವೆಂಪು ಬಗ್ಗೆಯೂ ಗೌರವವಿಲ್ಲ. ಮತ್ತೆ ಬಸವಣ್ಣನ ವಿಷಯದಲ್ಲಿ ಚಕ್ರತೀರ್ಥ
ಮತ್ತು ಈತನ ಅಭಿಪ್ರಾಯಕ್ಕೆ ಯಾವುದೇ ವ್ಯತ್ಯಾಸವಿಲ್ಲ. ಒಬ್ಬ ಚಕ್ರತೀರ್ಥನನ್ನು ನೀವು ಅರಗಿಸಿಕೊಳ್ಳಲಾಗಿಲ್ಲ ಎಂಬ ಈತನ ಮಾತೇ ಕಾಲ್ನಡಿಗೆ ಜಾಥಾ ನಡೆಯುವಂತೆ ಪ್ರಚೋದಿಸಿತು. ಈಗಾಗಲೇ ಕವಿಶೈಲದಿಂದ ತೀರ್ಥಹಳ್ಳಿಗೆ ನಡೆದ ಹಲವರು ಇಲ್ಲೂ ಇದ್ದರು. ಹಾಗೆ ಮಹಿಳೆಯರ ಮುಖಂಡರಾಗಿ ರೇಖಾ ಹುಲಿಯಪ್ಪಗೌಡ, ಜಾಥಾ ಸಂಘಟಿಸಿದ ರವೀಶ್ ಬಸಪ್ಪ ಗುರುಶಾಂತಪ್ಪ ಅಮ್ಜದ್, ದೇವರಾಜ್ ಮತ್ತು ನಟರಾಜ್ ಇವರೆಲ್ಲಾ ಮುಂದೆ ಹಲವು ಜಾಥಾಗಳನ್ನ ಸಂಘಟಿಸುವ ಹುಮ್ಮಸ್ಸಿನಲ್ಲಿದ್ದರು.

ಮಳೆಯ ಕಾರಣಕ್ಕೆ ನಿಡಘಟ್ಟದ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ಕವಿ ಎಸ್.ಜಿ ಸಿದ್ದರಾಮಯ್ಯನವರು ಪಠ್ಯಪರಿಷ್ಕರಣದ ಪೂರ್ಣ ವಿವರವನ್ನ ಜನರಿಗೆ ಮನವರಿಕೆ ಮಾಡಿಕೊಟ್ಟರು. ಶ್ರೀಪಾದ ಭಟ್ ಆರೆಸ್ಸೆಸಿಗರ ಹುನ್ನಾರಗಳನ್ನ ಬಿಡಿಸಿದರು. ತಿಪ್ಪೆರುದ್ರಸ್ವಾಮಿ ಒಂದಿಷ್ಟು ಆವೇಶದಿಂದ ಮಾತನಾಡಿ ಬಸವಣ್ಣನಿಗೆ ಅವಮಾನವಾಗಿದ್ದರೂ ಸುಮ್ಮನಿದ್ದೀರಲ್ಲಾ ಎಂದರು.

ಬಸವಣ್ಣನನ್ನ ಮುಗಿಸಲು ಬೊಮ್ಮಾಯಿ, ಕನಕದಾಸರನ್ನ ಮರೆಯಾಗಿಸಲು ಈಶ್ವರಪ್ಪ, ಕುವೆಂಪು ಹಣಿಯಲು ಅಶೋಕ, ಅಶ್ವತ್ಥನಾರಾಯಣ, ಸಿ.ಟಿ ರವಿ, ನಾರಾಯಣಗುರುವನ್ನು ಗತಿ ಕಾಣಿಸಲು ಸುನೀಲ್ ಕುಮಾರ್ ಇನ್ನು ಅಂಬೇಡ್ಕರ್‌ರವರಿಗೆ ಅವಮಾನಿಸಲು ನಾರಾಯಣಸ್ವಾಮಿ ಹೀಗೆ ಆಯಾ ಜಾತಿಯವರನ್ನೇ ಗುರುತಿಸಿ ಜವಾಬ್ದಾರಿ ವಹಿಸಿರುವ ಆರೆಸ್ಸೆಸ್ಸಿಗರು ತಾವು ಮಾತ್ರ ಅಗಮ್ಯ ಜಾಗದಲ್ಲಿ ಕುಳಿತು ಮಾಯಾ ಯುದ್ಧ ಮಾಡುತ್ತಿದ್ದಾರೆ. ಹಾಗಾಗಿ ಜಾಥಾಗಳು ಸಭೆಗಳು ನಾಡಿನಾದ್ಯಂತ ನಡೆಯಬೇಕಿದೆ.


ಇದನ್ನೂ ಓದಿ: ಸಂವಿಧಾನ ಒಬ್ಬರೇ ಬರೆದಿದ್ದು ಎಂದು ಹೇಗೆ ಹೇಳುತ್ತೀರಿ?: ಪಠ್ಯದಿಂದ ‘ಸಂವಿಧಾನ ಶಿಲ್ಪಿ’ ಪದ ಕೈಬಿಟ್ಟಿದ್ದಕ್ಕೆ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...