Homeರಾಷ್ಟ್ರೀಯಶೃಂಗಸಭೆಗೆ ತೆರಳದಂತೆ ತಡೆ: ಲೆಫ್ಟಿನೆಂಟ್ ಗವರ್ನರ್‌ರನ್ನು ಧಿಕ್ಕರಿಸಿದ ಅರವಿಂದ್ ಕೇಜ್ರಿವಾಲ್!

ಶೃಂಗಸಭೆಗೆ ತೆರಳದಂತೆ ತಡೆ: ಲೆಫ್ಟಿನೆಂಟ್ ಗವರ್ನರ್‌ರನ್ನು ಧಿಕ್ಕರಿಸಿದ ಅರವಿಂದ್ ಕೇಜ್ರಿವಾಲ್!

- Advertisement -
- Advertisement -

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ವಿದೇಶದಲ್ಲಿ ಶೃಂಗಸಭೆಯಲ್ಲಿ ಪಾಲ್ಗೊಳ್ಳದಂತೆ ರಾಜ್ಯದ ಲೆಫ್ಟಿನೆಂಟ್ ಗವರ್ನರ್‌ ವಿನಯ್ ಕುಮಾರ್‌ ಸಕ್ಸೇನಾ ಅವರು ಎರಡನೇ ಬಾರಿಗೆ ತಡೆದಿದ್ದಾರೆ. ಆದರೆ ತಾನು ಈ ಬಾರಿ ಶೃಂಗಸಭೆಯಲ್ಲಿ ಭಾಗವಹಿಸುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದಾರೆ.

ನಡೆಯುವ ಕಾರ್ಯಕ್ರಮವೂ ಮೇಯರ್‌ಗಳದ್ದಾಗಿದ್ದು, ಮುಖ್ಯಮಂತ್ರಿಗಳು ಅದಕ್ಕೆ ಹೋಗಬಾರದು ಎಂದು ಲೆಫ್ಟಿನೆಂಟ್ ಗವರ್ನರ್‌ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ, ಈ ವಾದವೆ ಸರಿಯೆಂದಾದರೆ, ಪ್ರಧಾನಿ ಮೋದಿ ಅವರು ಕೂಡ ಎಲ್ಲಿಗೂ ಹೋಗಲು ಸಾಧ್ಯವಿಲ್ಲ ಎಂದು ಉಲ್ಲೇಖಿಸಿದ್ದಾರೆ.

“ವಿಶ್ವ ನಗರಗಳ ಶೃಂಗಸಭೆ”ಗಾಗಿ ಕೇಜ್ರಿವಾಲ್ ಅವರನ್ನು ಸಿಂಗಾಪುರದ ಹೈ ಕಮಿಷನರ್ ಸೈಮನ್ ವಾಂಗ್ ಅವರು ಆಹ್ವಾನಿಸಿದ್ದರು. ಅವರು ಆಗಸ್ಟ್ 1 ರಂದು ನಡೆಯುವ ಸಭೆಯನ್ನು ಉದ್ದೇಶಿಸಿ ಮಾತನಾಡುವ ನಿರೀಕ್ಷೆಯಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಆದರೆ ಮಂಜೂರಾತಿ ವಿಳಂಬವಾಗುತ್ತಿರುವುದರಿಂದ ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ‘‘ಮುಖ್ಯಮಂತ್ರಿಯೊಬ್ಬರು ಇಂತಹ ಮಹತ್ವದ ವೇದಿಕೆಗೆ ಭೇಟಿ ನೀಡುವುದನ್ನು ತಡೆಯುವುದು ದೇಶದ ಹಿತಾಸಕ್ತಿಗೆ ವಿರುದ್ಧವಾಗಿದೆ’’ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಇದನ್ನೂ ಓದಿ: ಜಹಾಂಗೀರ್‌‌‌ಪುರಿ ಗಲಭೆ: 45 ಜನರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ ದೆಹಲಿ ಪೊಲೀಸ್‌‌

“ಇದು ಮೇಯರ್‌ಗಳ ಕಾರ್ಯಕ್ರಮವಾಗಿದ್ದು, ಮುಖ್ಯಮಂತ್ರಿಗಳು ಅದಕ್ಕೆ ಹೋಗಬಾರದು” ಎಂದು ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರು ದೆಹಲಿ ಸರ್ಕಾರದ ಅನುಮತಿಗಾಗಿ ಬಂದಿರುವ ಮನವಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇದಕ್ಕೆ ಮತ್ತೆ ಪ್ರತ್ಯತ್ತರ ಬರೆದಿರುವ ಮುಖ್ಯಮಂತ್ರಿ, “ಸಂವಿಧಾನದ ಮೂರು ಪಟ್ಟಿಗಳಲ್ಲಿ ಉಲ್ಲೇಖಿಸಲಾದ ವಿಷಯಗಳಲ್ಲಿ ಮಾನವ ಜೀವನವನ್ನು ವಿಭಾಗಿಸಲಾಗಿಲ್ಲ. ನಮ್ಮ ದೇಶದ ಪ್ರತಿಯೊಂದು ಸಾಂವಿಧಾನಿಕ ಪ್ರಾಧಿಕಾರದ ಭೇಟಿಯನ್ನು ಆ ಪ್ರಾಧಿಕಾರದ ವ್ಯಾಪ್ತಿಯೊಳಗೆ ಯಾವ ವಿಷಯಗಳು ಬರುತ್ತವೆ ಎಂಬುದರ ಆಧಾರದ ಮೇಲೆ ನಿರ್ಧರಿಸಿದರೆ ಅದು ತಮಾಷೆಯ ಪರಿಸ್ಥತಿಯನ್ನು ಉಂಟು ಮಾಡುತ್ತದೆ” ಎಂದು ಹೇಳಿದ್ದಾರೆ.

“ಒಂದು ವೇಳೆ ಹಾಗೆ ನಿರ್ಧರಿಸಿದ್ದರೆ ಪ್ರಧಾನಿಯವರು ಎಲ್ಲಿಗೂ ಹೋಗಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಅವರ ಹೆಚ್ಚಿನ ಭೇಟಿಗಳಲ್ಲಿ ಅವರು ರಾಜ್ಯ ಪಟ್ಟಿಯಲ್ಲಿ ಬರುವ ಮತ್ತು ಅವರ ಅಧಿಕಾರ ವ್ಯಾಪ್ತಿಗೆ ಬರದ ವಿಷಯಗಳನ್ನು ಚರ್ಚಿಸುತ್ತಾರೆ” ಎಂದು ಕೇಜ್ರಿವಾಲ್ ಪತ್ರದಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ಜುಬೇರ್‌‌‌ ಬಂಧನದ ಐದು ದಿನದ ನಂತರ ದೂರುದಾರನನ್ನು ಹುಡುಕಿದ ದೆಹಲಿ ಪೊಲೀಸರು!

ತಮ್ಮ ಪತ್ರದಲ್ಲಿ ಅವರು ಲೆಫ್ಟಿನೆಂಟ್ ಗವರ್ನರ್‌ಗೆ “ದಯವಿಟ್ಟು ಕೇಂದ್ರ ಸರ್ಕಾರದಿಂದ ರಾಜಕೀಯ ಅನುಮತಿಗಾಗಿ ಅರ್ಜಿ ಸಲ್ಲಿಸಿ” ಎಂದು ಸಲಹೆ ನೀಡಿದ್ದಾರೆ.

“ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಿಂಗಾಪುರ್ ಭೇಟಿಯನ್ನು ದೆಹಲಿ ಲೆಫ್ಟಿನೆಂಟ್ ಗವರ್ನರ್‌ ನಿರ್ಬಂಧಿಸಿದ ನಂತರ, ಸಿಎಂ ಈಗ ‘ರಾಜಕೀಯ ಕ್ಲಿಯರೆನ್ಸ್’ಗಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ. ಈ ಭೇಟಿಯು ವಿಶ್ವ ನಗರಗಳ ಶೃಂಗಸಭೆಯಲ್ಲಿ ಭಾರತವನ್ನು ಹೆಮ್ಮೆಪಡುವಂತೆ ಮಾಡುತ್ತದೆಯಾದ್ದರಿಂದ ಕೇಂದ್ರವು ಈ ಅನುಮತಿಯನ್ನು ನೀಡುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.

ಮೇಯರ್‌ಗಳ ಸಮ್ಮೇಳನವಾಗಿರುವುದರಿಂದ ಈ ಸಮಾವೇಶಕ್ಕೆ ಹಾಜರಾಗದಂತೆ ಎಲ್‌ಜಿ ಕೇಜ್ರಿವಾಲ್‌ಗೆ ಸೂಚಿಸಿದ್ದಾರೆ. ಈ ಹಿಂದೆ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು ಈ ಸಮಾವೇಶದಲ್ಲಿ ಭಾಗವಹಿಸಿದ್ದಾರೆ. ಪ್ರಧಾನಿ ಕೂಡ ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳಿಗೆ ಹೋಗುತ್ತಾರೆ. ಇದು ರಾಜಕೀಯ ಪ್ರೇರಿತ ಕೃತ್ಯವಾಗಿದೆ” ಎಂದು ಸಿಸೋಡಿಯಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ವೈವಾಹಿಕ ಅತ್ಯಾಚಾರ: ಭಿನ್ನ ತೀರ್ಪು ನೀಡಿದ ದೆಹಲಿ ಹೈಕೋರ್ಟ್‌‌!; ಸುಪ್ರೀಂ ಮೆಟ್ಟಿಲೇರಲಿರುವ ಅರ್ಜಿದಾರರು

2019 ರಲ್ಲಿ, ಮೇಯರ್‌ಗಳಿಗೆ ಮೀಸಲಾದ ಸಭೆಯಲ್ಲಿ ಮುಖ್ಯಮಂತ್ರಿ ಭಾಗವಹಿಸುವುದು ಯೋಗ್ಯವಲ್ಲ ಎಂದು ಹೇಳುವ ಮೂಲಕ ಒಕ್ಕೂಟ ಸರ್ಕಾರವೂ ಕೇಜ್ರಿವಾಲ್‌ಗೆ ಇದೇ ರೀತಿಯ ಭೇಟಿಗೆ ಅನುಮತಿಯನ್ನು ತಡೆಹಿಡಿದಿತ್ತು. ಅಂತಿಮವಾಗಿ ಕೇಜ್ರಿವಾಲ್ ಅವರು ಆನ್‌ಲೈನ್‌ನಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಬೇಕಾಯಿತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...