ರಾಷ್ಟ್ರಪತಿ ಭವನದಲ್ಲಿ ಇರುವ ಭವನದ ಆತ್ಮದಂತಿರುವ ಉದ್ಯಾನವನವಾಗಿದೆ ’ಮೊಘಲ್ ಗಾರ್ಡನ್’. ಈ ಉದ್ಯಾನವು ಜಮ್ಮು ಕಾಶ್ಮೀರದ ಮೊಘಲ್ ಉದ್ಯಾನಗಳು, ತಾಜ್ ಮಹಲ್ ಸುತ್ತಮುತ್ತಲಿನ ಉದ್ಯಾನಗಳು ಮತ್ತು ಭಾರತ ಮತ್ತು ಪರ್ಷಿಯಾದ ಚಿಕಣಿ ವರ್ಣಚಿತ್ರಗಳಿಂದ ಸ್ಫೂರ್ತಿ ಪಡೆದವು ಆಗಿದೆ. ಸರ್ ಎಡ್ವಿನ್ ಲುಟಿಯನ್ಸ್ 1917 ರಲ್ಲಿ ಮೊಘಲ್ ಉದ್ಯಾನಗಳ ವಿನ್ಯಾಸವನ್ನು ಅಂತಿಮಗೊಳಿಸಿದ್ದರು.
ಇದು 15 ಎಕರೆ ಪ್ರದೇಶದಲ್ಲಿ ವ್ಯಾಪಿಸಿದ್ದು, ದೆಹಲಿಯ ಆಕರ್ಷಣೆಯ ಕೇಂದ್ರವಾಗಿದೆ. ಇದು ಸುಂದರವಾದ ಹೂವುಗಳು, ಅಪರೂಪದ ಜಾತಿಯ ಸಸ್ಯಗಳು ಮತ್ತು ಗಿಡಮೂಲಿಕೆಗಳಿಗೆ ಹೆಸರುವಾಸಿಯಾಗಿದೆ.
ಇದನ್ನೂ ಓದಿ: ಈ ಚ್ರಿತ್ರಗಳು ಬೆಂಗಳೂರಿನಲ್ಲಿ ನಡೆದ ಹಿಂಸಾಚಾರದ್ದೆ?
ಆಗಸ್ಟ್ 18 ರಂದು ಅನುರಾಗ್ ಶ್ರೀವಾಸ್ತವ ಎಂಬ ಟ್ವಿಟ್ಟರ್ ಬಳಕೆದಾರ “ಬಿಗ್ಗ್ ವಾವ್, ರಾಷ್ಟ್ರಪತಿ ಭವನದೊಳಗಿನ ಮೊಘಲ್ ಉದ್ಯಾನದ ಹೆಸರನ್ನು ಡಾ. ರಾಜೇಂದ್ರ ಪ್ರಸಾದ್ ಗಾರ್ಡನ್ ಎಂದು ಬದಲಾಯಿಸಲಾಗಿದೆ” ಎಂದು ಟ್ವೀಟ್ ಮಾಡಿದ್ದರು. ಇದು ಇದುವರೆಗೂ 5,300 ಲೈಕ್ಸ್ ಪಡೆದಿದೆ ಮತ್ತು 1,000 ಕ್ಕೂ ಹೆಚ್ಚು ಬಾರಿ ರಿಟ್ವೀಟ್ ಆಗಿದೆ. ಅದರ ಆರ್ಕೈವ್ ಇಲ್ಲಿದೆ.
BIG: Wow, The name of the Mughal Garden inside the Rashtrapati Bhavan is changed to Dr. Rajendra Prasad Garden.
— Anurag Srivastava (@theanuragkts) August 17, 2020
ಅದೇ ದಿನ ಸ್ಮಿತಾ ದೇಶ್ಮುಖ್ ಎಂಬ ಇನ್ನೊಬ್ಬ ಬಳಕೆದಾರರು ಕೂಡಾ ಇದೇ ತರದ ಸುದ್ದಿಯನ್ನು ಟ್ವಿಟ್ಟರ್‌ನಲ್ಲಿ ಹಂಚಿದ್ದರು, “ಕರೋನಾ ಅವಧಿಯ ಅತ್ಯುತ್ತಮ ಸುದ್ದಿ – ರಾಷ್ಟ್ರಪತಿ ಭವನದಲ್ಲಿ ಮೊಘಲ್ ಉದ್ಯಾನವನ್ನು ಈಗ ಡಾ. ರಾಜೇಂದ್ರ ಪ್ರಸಾದ್ ಗಾರ್ಡನ್ ಎಂದು ಮರುನಾಮಕರಣ ಮಾಡಲಾಗಿದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ. ಅದರ ಆರ್ಕೈವ್ ಇಲ್ಲಿದೆ.
Best news in #covid times – The Mughal Garden inside the Rashtrapati Bhavan is now renamed to Dr. Rajendra Prasad Garden ?
— Smita Deshmukh (@smitadeshmukh) August 18, 2020
ಸ್ಮಿತಾ ದೇಶ್ಮುಖ್ ಅವರ ಈ ಟ್ವೀಟ್ 14,400 ಲೈಕ್ ಪಡೆದಿದ್ದರೆ ಮತ್ತು 2,700 ಬಾರಿ ರಿಟ್ವೀಟ್ ಮಾಡಲಾಗಿದೆ. ಸ್ಮಿತಾ ಅವರ ಟ್ವಿಟರ್ ಬಯೋ ಪ್ರಕಾರ, ಅವರು ಪತ್ರಕರ್ತೆಯಾಗಿದ್ದಾರೆ ಮತ್ತು ಈಗ ಸಂವಹನ ತಜ್ಞರಾಗಿದ್ದಾರೆ.
ಆಗಸ್ಟ್ 19 ರಂದು ಇನ್ನೊಬ್ಬ ಬಳಕೆದಾರರು ಟ್ವೀಟ್ ಮಾಡಿ, “ರಾಷ್ಟ್ರಪತಿ ಭವನದಲ್ಲಿ ಈ ಉದ್ಯಾನವು ಇನ್ನು ಮುಂದೆ ಮೊಘಲ್ ಉದ್ಯಾನವಲ್ಲ… ಡಾ. ರಾಜೇಂದ್ರ ಪ್ರಸಾದ್ ಗಾರ್ಡನ್‌ಗೆ ಸುಸ್ವಾಗತ… ನಮ್ಮ ಮೊದಲನೇ ರಾಷ್ಟ್ರಪತಿಗೆ ಸಮರ್ಪಿಸಲಾಗಿದೆ. ಮಾಡದೇ ಇರುವುದಕ್ಕಿಂತ ನಿಧಾನವಾದರೂ ಒಳ್ಳೆಯದು” ಎಂದು ಬರೆದಿದ್ದಾರೆ. ಇದರ ಆರ್ಕೈವ್ ಇಲ್ಲಿದೆ.
This Garden in Rashtrapati Bhavan is no longer Mughal Garden…
Welcome to Dr. Rajendra Prasad Garden… Dedicated to our 1st President.
Better Late than Never ?☺️ pic.twitter.com/IqOpE5af4u
— Kashmiri Pandit कश्मीरी पण्डित (@KashmiriPandit7) August 19, 2020
ಈ ಟ್ವೀಟ್‌ಗೆ 540 ಲೈಕ್‌ಗಳು ಬಂದಿದ್ದು, 139 ಬಾರಿ ರಿಟ್ವೀಟ್ ಮಾಡಲಾಗಿದೆ.
ಫ್ಯಾಕ್ಟ್‌ಚೆಕ್
ರಾಷ್ಟ್ರಪತಿ ಭವನದ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಉದ್ಯಾನದ ಹೆಸರು ಇನ್ನೂ ಮೊಘಲ್ ಉದ್ಯಾನ ಎಂದೇ ಇದೆ. ಆದ್ದರಿಂದ ಇಲ್ಲಿಗೆ ಈ ಸುದ್ದಿ ತಪ್ಪು ಎನ್ನಬಹುದಾಗಿದೆ.
ಮೊಘಲ್ ಗಾರ್ಡನ್ ಎಂದು ಇರುವ ಇದರ ಹೆಸರನ್ನು ಬದಲಾಯಿಸಿ ಭಾರತದ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಉದ್ಯನ್ ಎಂದು ಮರುನಾಮಕರಣ ಮಾಡಬೇಕು ಎಂದು ಹಿಂದೂ ಮಹಾಸಭಾ ಒತ್ತಾಯಿಸುತ್ತಿದೆ. ಆದರೆ ಈ ಬಗ್ಗೆ ಯಾವುದೆ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿಲ್ಲ.
ಇದನ್ನೂ ಓದಿ: ಅಯೋಧ್ಯೆಯ ಮಸೀದಿ ಜಾಗದಲ್ಲಿ ಬಾಬ್ರಿ ಆಸ್ಪತ್ರೆ ಸ್ಥಾಪನೆ? ಈ ಸುದ್ದಿ ನಿಜವೆ?
ಕೇಂದ್ರ ಸರ್ಕಾರ ಮೊಘಲ್ ಗಾರ್ಡನ್ಸ್ ಹೆಸರನ್ನು ಬದಲಾಯಿಸಿಲ್ಲ ಎಂದು ಆಗಸ್ಟ್ 21 ರಂದು ಭಾರತ ಸರ್ಕಾರದ ಮಾಹಿತಿ ವಿಭಾಗ, ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (ಪಿಐಬಿ) ಸ್ಪಷ್ಟಪಡಿಸಿ ಟ್ವೀಟ್ ಮಾಡಿತ್ತು. ಅದರ ಆರ್ಕೈವ್ ಇಲ್ಲಿದೆ.
Claim: The name of the Mughal Garden at Rashtrapati Bhavan will be changed.#PIBFactCheck: The claim is false. No such decision has been taken by Central Government. pic.twitter.com/bRm1nKIvNM
— PIB Fact Check (@PIBFactCheck) August 21, 2020
ಆಗಸ್ಟ್ 21 ರಂದು ಆಲ್ ಇಂಡಿಯಾ ರೇಡಿಯೋ ಸುದ್ದಿ ಟ್ವೀಟ್ ಮಾಡಿತ್ತು. “ಫೇಕ್ ನ್ಯೂಸ್ ಅಲರ್ಟ್, ರಾಷ್ಟ್ರಪತಿ ಭವನದಲ್ಲಿ ಮೊಘಲ್ ಗಾರ್ಡನ್ಸ್ ಹೆಸರನ್ನು ಬದಲಾಯಿಸಲಾಗುವುದು ಎಂದು ಹಲವಾರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹೇಳಲಾಗುತ್ತಿದೆ. ಸರ್ಕಾರ ಈ ಸುದ್ದಿಯನ್ನು ನಿರಾಕರಿಸುತ್ತದೆ; ಮೊಘಲ್ ಗಾರ್ಡನ್ಸ್ ಎಂದು ಮರುನಾಮಕರಣ ಮಾಡಲು ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ” ಎಂದು ಹೇಳಿದೆ. ಇದರ ಆರ್ಕೈವ್ ಇಲ್ಲಿದೆ.
FAKE NEWS ALERT
It is being claimed across several social media platforms that the name of Mughal Garden at Rashtrapati Bhawan will be changed.
Government denies the claim; Says, no decision has been taken to rename the Mughal Gardens. pic.twitter.com/fxckDOEOTp
— All India Radio News (@airnewsalerts) August 21, 2020
ಆದ್ದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗುತ್ತಿರುವ ಈ ಸುದ್ದಿ ಸುಳ್ಳು ಎಂದು ಸಾಬೀತಾಗಿದೆ.


