Homeಚಳವಳಿವಿವಾದಾತ್ಮಕ ಕೃಷಿ ಕಾಯ್ದೆಗಳು: ರೈತಸಂಘಟನೆಗಳನ್ನು ಮತ್ತೊಮ್ಮೆ ಚರ್ಚೆಗೆ ಆಹ್ವಾನಿಸಿದ ಕೇಂದ್ರ!

ವಿವಾದಾತ್ಮಕ ಕೃಷಿ ಕಾಯ್ದೆಗಳು: ರೈತಸಂಘಟನೆಗಳನ್ನು ಮತ್ತೊಮ್ಮೆ ಚರ್ಚೆಗೆ ಆಹ್ವಾನಿಸಿದ ಕೇಂದ್ರ!

ರೈತರ ಪ್ರತಿಭಟನೆಗೆ ಮಣಿದಂತೆ ಕಂಡುಬಂದಿರುವ ಕೇಂದ್ರ ಸರ್ಕಾರ, 30 ರೈತ ಸಂಘಟನೆಗಳಲ್ಲಿ 29 ಸಂಘಟನೆಗಳ ಮುಖಂಡರಿಗೆ ಪತ್ರ ಬರೆದಿದೆ.

- Advertisement -
- Advertisement -

ಕೃಷಿ ಸಂಬಂಧ ಇತ್ತೀಚೆಗೆ ಅಂಗೀಕರಿಸಿರುವ ವಿವಾದಾತ್ಮಕ ಕೃಷಿ ಕಾನೂನುಗಳ ಕುರಿತು ಚರ್ಚೆಸಲು ರೈತ ಮುಖಂಡರು ಭಾಗವಹಿಸಬೇಕೆಂದು ಕೇಂದ್ರ ಸರ್ಕಾರ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳ ರೈತ ಸಂಘಟನೆಗಳಿಗೆ ಎರಡನೇ ಬಾರಿಗೆ ಪತ್ರ ಬರೆದು ಆಹ್ವಾನಿಸಿದೆ.

ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿ ಸೇರಿದಂತೆ, ಕೃಷಿ ಸಂಬಂಧಿ ಕಾಯ್ದೆಗಳ ತಿದ್ದುಪಡಿಗಳನ್ನು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಧ್ವನಿ ಮತದ ಮೂಲಕ ಅಂಗೀಕರಿಸಿತ್ತು. ಇದಕ್ಕೆ ಪಂಜಾಬ್ ಮತ್ತು ಹರಿಯಾಣದಲ್ಲಿ ರೈತ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.

ಇದನ್ನೂ ಓದಿ: ರೈತವಿರೋಧಿ ಸುಗ್ರಿವಾಜ್ಞೆಗಳು ಬೇಡ: ಕೇಂದ್ರದ ವಿರುದ್ಧ ತಿರುಗಿಬಿದ್ದ ರೈತರು

ರೈತರ ಪ್ರತಿಭಟನೆಗೆ ಮಣಿದಂತೆ ಕಂಡುಬಂದಿರುವ ಕೇಂದ್ರ ಸರ್ಕಾರ, 30 ರೈತ ಸಂಘಟನೆಗಳಲ್ಲಿ 29 ಸಂಘಟನೆಗಳ ಮುಖಂಡರಿಗೆ ಕೇಂದ್ರ ಸರ್ಕಾರದ ಕೃಷಿ ಸಹಕಾರ ಮತ್ತು ರೈತ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಸಂಜಯ್ ಅಗರ್ ವಾಲ್ ಪತ್ರ ಬರೆದು ಸಭೆಯಲ್ಲಿ ಭಾಗವಹಿಸಿ ಮಾತುಕತೆ ನಡೆಸಬೇಕು ಎಂಬ ಮನವಿಯನ್ನು ಮಾಡಿದ್ದಾರೆ ಎಂದು ದಿ ವೈರ್.ಇನ್ ವರದಿ ಮಾಡಿದೆ.

ಅಕ್ಟೋಬರ್ 14ರಂದು ಬೆಳಗ್ಗೆ 11.30ಕ್ಕೆ ನವದೆಹಲಿಯ ಕೃಷಿ ಸಚಿವಾಲಯದ ಕೊಠಡಿ ಸಂಖ್ಯೆ 142ರಲ್ಲಿ ರೈತ ಮುಖಂಡರ ಸಭೆ ಕರೆಯಲಾಗಿದೆ. ಹಾಗಾಗಿ ದಯವಿಟ್ಟು ಪ್ರತಿಭಟನಾನಿರತ ರೈತ ಮುಖಂಡರು ಸರ್ಕಾರದ ಜೊತೆ ಚರ್ಚಿಸಲು ಆಗಮಿಸಬೇಕು ಎಂದು ಎರಡನೇ ಬಾರಿಗೆ ಕೇಂದ್ರ ಸರ್ಕಾರ ಮನವಿ ಮಾಡಿದೆ.

ಇದನ್ನೂ ಓದಿ: ಮಂಡ್ಯ: ರೈತ ಮಸೂದೆಗಳನ್ನು ವಿರೋಧಿಸಿ ರಾಜ್ಯ ಮಟ್ಟದ ಬೃಹತ್ ಸಮಾವೇಶ

ಆದರೆ ಈ ಸಭೆಯಲ್ಲಿ ಭಾಗವಹಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಪ್ರತಿಭಟನಾನಿರತ ರೈತ ಸಂಘಟನೆಗಳು ಇದುವರೆಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ರೈತ ನಾಯಕ ಜಗಮೋಹನ್ ಸಿಂಗ್ ಹೇಳಿದ್ದಾರೆ.

ಅಕ್ಟೋಬರ್ 14ರಂದು ನವದೆಹಲಿಯಲ್ಲಿ ನಡೆಯಲಿರುವ ಸಭೆಯಲ್ಲಿ ರೈತ ಮುಖಂಡರು ಭಾಗವಹಿಸುವ ಅಥವಾ ಭಾಗವಹಿಸದೇ ಇರುವ ಬಗ್ಗೆ ಅಕ್ಟೋಬರ್ 13ರಂದು ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರತಿಭಟನಾನಿರತರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:  ಕೃಷಿ ಮಸೂದೆ ವಿರೋಧಿಸುವ ರೈತರನ್ನು ಭಯೋತ್ಪಾದಕರು ಎಂದ ನಟಿ ಕಂಗನಾ!

ಮೊದಲು ಕೃಷಿ ಇಲಾಖೆ ಅಧಿಕಾರಿಗಳು ರೈತ ನಾಯಕರಿಗೆ ಪತ್ರ ಬರೆದಿದ್ದರು. ಅಧಿಕಾರಿಗಳ ಜೊತೆ ಮಾತುಕತೆ ನಡೆಸುವುದಿಲ್ಲ ಎಂದು ರೈತ ನಾಯಕರು ಈ ಆಹ್ವಾನವನ್ನು ತಿರಸ್ಕರಿಸಿದ್ದರು. ಕೃಷಿ ಸಚಿವರು ಮತ್ತು ಪ್ರಧಾನಿಯಿಂದ ಸೂಕ್ತ ಆಹ್ವಾನ ಬಂದರೆ ಮಾತ್ರ ಮಾತುಕತೆಗೆ ಸಿದ್ದ ಎಂದು ರೈತ ನಾಯಕರು ಹೇಳಿದ್ದರು. ಇದೀಗ ಕೃಷಿ ಸಚಿವಾಲಯದಿಂದ ಎರಡನೇ ಪತ್ರ ಬಂದಿದೆ. ಈ ಪತ್ರಕ್ಕೆ ರೈತ ನಾಯಕರು ಸ್ಪಂದಿಸುವರೇ ಎಂಬುದನ್ನು ನೋಡಬೇಕಾಗಿದೆ.

ಇದನ್ನೂ ಓದಿ: ರೈತವಿರೋಧಿ ಕಾಯ್ದೆಗಳನ್ನು ಹಿಂಪಡೆಯದಿದ್ದರೆ, ಯಡಿಯೂರಪ್ಪನವರ ಕುರ್ಚಿ ಉಳಿಯುವುದಿಲ್ಲ: ಬಡಗಲಪುರ ನಾಗೇಂದ್ರ

ಈ ನಡುವೆ ಪಂಜಾಬ್ ಸರ್ಕಾರ ಪ್ರತಿಭಟನಾನಿರತ ರೈತರನ್ನು ರೈಲ್ ರೋಕೋ ಪ್ರತಿಭಟನೆಯನ್ನು ಕೈಬಿಡುವಂತೆ ಮನವಿ ಮಾಡಿದೆ. ರೈತರ ಪ್ರತಿಭಟನೆಯಿಂದ ಕಲ್ಲಿದ್ದಲು ಸಾಗಾಣೆಗೆ ಅಡ್ಡಿಯಾಗಿದ್ದು, ಥರ್ಮಲ್ ವಿದ್ಯುತ್ ಉತ್ಪಾದನೆಯ ಮೇಲೆ ಪರಿಣಾಮ ಬೀರಲಿದೆ ಎಂದು ಪಂಜಾಬ್ ಸರ್ಕಾರ ತಿಳಿಸಿದೆ.

ಸೆಪ್ಟೆಂಬರ್ ಮಧ್ಯಭಾಗದಿಂದಲೂ ಪಂಜಾಬ್ ಮತ್ತು ಹರಿಯಾಣದಲ್ಲಿ ರೈತ ಸಂಘಟನೆಗಳು ತೀವ್ರ ಸ್ವರೂಪದ ಪ್ರತಿಭಟನೆಯನ್ನು ನಡೆಸುತ್ತಿವೆ. ದೇಶಾದ್ಯಂತ ಕೇಂದ್ರ ಸರ್ಕಾರ ಅಂಗೀಕರಿಸಿರುವ ಕೃಷಿ ಸಂಬಂಧಿ ಕಾಯ್ದೆಗಳಿಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ರೈತ ಸಂಘಟನೆಗಳಿಂದ ಇನ್ನೂ ಪ್ರತಿಭಟನೆ ವ್ಯಕ್ತವಾಗುತ್ತಲೇ ಇದೆ.


ಇದನ್ನೂ ಓದಿ: ಮಸೂದೆ ವಿರೋಧಿಗಳು ರೈತರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ: ಪ್ರಧಾನಿ ಮೋದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...