Homeಅಂಕಣಗಳುಯತ್ನಾಳಶಾಹಿಯ ಚದುರಂಗದಾಟ

ಯತ್ನಾಳಶಾಹಿಯ ಚದುರಂಗದಾಟ

- Advertisement -
- Advertisement -

ಮನ್ನೆ ಏನಾತಪಾ ಅಂದರ ನಮ್ಮ ಬಿಜಾಪುರದ ಬಸನಗೌಡರು ಜನಪರ ಹೋರಾಟಗಾರ ಹಾಗೂ ಸ್ವಾತಂತ್ರ್ಯ ಸೇನಾನಿ ದೊರೆಸ್ವಾಮಿ ಅವರ ಬಗ್ಗೆ ಅಪದ್ಧ ಅಪದ್ಧ ಮಾತಾಡ್ಯಾರ.

ಯತ್ನಾಳಗೌಡರು ದೊರೆಸ್ವಾಮಿ ಅವರನ್ನ ಪಾಕಿಸ್ತಾನದ ಏಜಂಟ ಅಂತ ಕರದಾರ. ನಕಲಿ ದೇಶಭಕ್ತ ಅಂತ ಹೆಸರು ಇಟ್ಟಾರ. “ಅವರೇನು ಸಾವರಕರನ ಗತೆ ದೇಶಪ್ರೇಮಿನಾ? ಬ್ರಿಟಿಷರ ಲಾಠಿ ಏಟು ತಿಂದಾರ?” ಅಂತ ಕೇಳ್ಯಾರ. ಇದು ಬರೇ ಒಬ್ಬ ಎಮ್ಮೆಲ್ಲೇ ಒಬ್ಬ ಹಿರಿಯ ಹೋರಾಟಗಾರರ ಬಗ್ಗೆ ಬಡಬಡಿಸಿದ್ದು ಅಂತ ತಿಳಕೋಬ್ಯಾಡ್ರಿ. ಅದು ಅಷ್ಟ ಸಿಂಪಲ್ಲಾದ ವಿಷಯ ಅಲ್ಲ. ಇದು ಇಲ್ಲಿಗೇ ಮುಗಿಯಂಗಿಲ್ಲ. ಇದು ಈಗ ಸುರು ಆಗೇದ. ದೊರೆಸ್ವಾಮಿಯವರನ್ನೇ ಬಿಡಲಾರದವರು ಇನ್ನು ಮತ್ತ ಯಾರನ್ನು ಬಿಟ್ಟಾರು? ಹಳ್ಳಿ ಊರಾಗ ಗೌಡನ ಕಪಾಳಕ್ಕ ಹೊಡೆದ ಹುಡುಗಾ ಉಳಿದವರನ್ನ ಬರೇ ಬೆದರಿಕೆಯಿಂದಲೇ ಮುಗಿಸಿಬಿಟ್ಟನಂತ, ಹಂಗಾತು ಇದು ಕತಿ.

ಉಪಚುನಾವಣೆಯೊಳಗ ಮಹಿಳಾ ಶಾಸಕಿಯೊಬ್ಬರನ್ನ ಹಂಗಿಸಲಿಕ್ಕೆ ಯತ್ನಾಳರು ಒಂದು ಕುಚೋದ್ಯ ಮಾಡತಿದ್ದರು. ಅವರು ಏನು ಮಾಡ್ಯಾರ? ಡ್ಯಾಶ್ -ಡ್ಯಾಶ್. ಇವರೇನು ಮಾಡ್ಯಾರ? ಡ್ಯಾಶ್- ಡ್ಯಾಶ್ ಅಂತ ಹೋದಲ್ಲೆ – ಬಂದಲ್ಲೆ ಭಾಷಣ ಮಾಡತಿದ್ದರು. ಅದರ ಹಂಗನ ಇದು ಬರೇ ಟಿಆರ್‍ಪಿ ಸಲುವಾಗಿ ಮಾಡಿದ ಡ್ಯಾಶ್ ಡ್ಯಾಶ್ ಭಾಷಣ ಅಂತ ತಿಳಕೋಬ್ಯಾಡ್ರಿ ಮತ್ತ.

ಇದು ಒಂದು ವೈರಲ್ ಆಗುವ ಸಾಧ್ಯತೆ ಇರುವ ರೋಗ. ಎಲ್ಲಾ ಉದಾರವಾದಿಗಳನ್ನ, ಪ್ರಗತಿಪರರನ್ನ, ಕೆಳಗಿನವರನ್ನ ಮ್ಯಾಲೆ ಎತ್ತಲಿಕ್ಕೆ ಕೈ ಎತ್ತಿದವರನ್ನ ಸಂಶಯದಿಂದ ನೋಡೋ ಜಡ್ಡು. ಈಗ ನಮ್ಮ ಭವ್ಯ ಭಾರತದಾಗ ಈ ಗುಮಾನಿಯ ರೋಗ ಸುರು ಆಗೇದ. ಅದು ಕೊರೋನಾ ವೈರಸ್ಸಿಗಿಂತ ಅಪಾಯಕಾರಿ. ಆಳುವ ಪಕ್ಷದವರನ್ನ, ಅಧಿಕಾರಶಾಹಿಯನ್ನ, ಯಾರೋ ಒಬ್ಬ ಜನಪ್ರಿಯ ನಾಯಕನನ್ನ ವಿರೋಧ ಮಾಡೋದನ್ನ ದೇಶದ್ರೋಹ ಅಂತ ಥೂತ್ಕರಿಸೋ ಅಸಹ್ಯವಾದ ಆಟ ಈಗ ಸುರು ಆಗೇದ. ಇದು ಯತ್ನಾಳ ಒಬ್ಬರ ಮಾತಲ್ಲ. ಅವರು ಈ ಚದುರಂಗದ ಆಟದಾಗ ಒಬ್ಬ ಬಡ ಪ್ಯಾದೆ ಅಷ್ಟ. ಇವು ಯತ್ನಾಳಶಾಹಿ ದಿನಗಳು. ಎಲ್ಲ ನಾಗರಿಕರನ್ನ ಪೇದೆಗಳನ್ನಾಗಿ ಮಾಡಿ, ಕೆಲವು ಪೇದೆಗಳನ್ನ ರಾಜರನ್ನಾಗಿ ಮಾಡಿ ಆಟ ಮುಗಿಸೋ ಮಂತ್ರಿಗಳ ಷಡ್ಯಂತ್ರ.

ಇಲ್ಲೆ ವ್ಯವಸ್ಥೆಯ ವಿರುದ್ಧ ಮಾತಾಡುವ -ಹೋರಾಟಗಾರರು, ಸಾಹಿತಿಗಳು, ಚಿಂತಕರು, ಕಲಾವಿದರು, ಶಿಲ್ಪಿ, ನಾಟಕಕಾರರು, ಚಿತ್ರಕತೆಗಾರರು, ನಟ-ನಟಿಯರು, ನಿರ್ದೇಶಕರು – ಯಾರನ್ನೂ ಸಹಿಸಲಾರದ ಮನಸ್ಥಿತಿ ತಯಾರಾಗಲಿಕ್ಕೆ ಹತ್ತೇದ. ಈ ಪಟ್ಟಿ ಬೆಳಕೋತ ಹೋಗತದ. ಇದು ಯಾವುದೇ ಹೊಸ ವಿಷಯವನ್ನ ಮಾತಾಡುವ, ಪ್ರಚಾರ ಮಾಡುವ- ತಿಳಿ ಹೇಳುವ ಯಾರನ್ನೂ ಸಹಿಸಲಾರದು. ಅವರನ್ನ ಅವಮಾನ ಮಾಡಿ, ಅವರಿಗೆ, ಅವರ ವ್ಯಕ್ತಿತ್ವಕ್ಕ, ಅವರ ವಿಚಾರಕ್ಕ ಕಿಮ್ಮತ್ತು ಇಲ್ಲಾ ಅನ್ನೋ ಹಂಗ ಮಾಡಿ ಅವರನ್ನ ಜನರ ಮನಸ್ಸಿನಿಂದಾ ದೂರ ಸರಿಸಿ ಬಿಡೋ ಸಂಚು ಇದು. ಯಾರಿಗೆ ತಮ್ಮ ಬಲದ ಬಗ್ಗೆ, ಜಾಣತನದ ಬಗ್ಗೆ ಸಂಶಯ ಇರತದೋ ಅವರು ಇತರರ ಮೌಲ್ಯಗಳ ಬಗ್ಗೆ, ಸಂಶಯ ವ್ಯಕ್ತಪಡಿಸತಾರ. ದೊಡ್ಡ ದೊಡ್ಡ ಸ್ಥಾನದಾಗ ಇರೋವರು ಇಂಥಾ ಮಾತಾಡಲಿಕ್ಕೆ ಹತ್ತಿದಾಗ ಸಣ್ಣ ವಯಸ್ಸಿನ ಹುಡುಗರು, ಕುರುಡ ಬೆಂಬಲಿಗರು ಹೌದು ಹೌದು ಅಂತ ಚಪ್ಪಾಳೆ ತಟ್ಟತಾರ. ಅವಕಾಶ ಸಿಕ್ಕರ ಈ ವಿಚಾರಗಳನ್ನ ಹಿಂಸೆಯಿಂದ ಎದುರಿಸಲಿಕ್ಕೂ ತಯಾರಾಗತಾರ. ಅದಕ್ಕ ಮಹಾತ್ಯಾಗ ಅನ್ನೋ ಹೆಸರು ಕೊಡತಾರ.

ಎಲ್ಲ ಕಡೆಯಿಂದ ಉದಾರ ವಿಚಾರ ಬರೋದನ್ನ ನಿಲ್ಲಿಸಬೇಕು, ಬರೇ ನಮ್ಮ ವಿಚಾರ ತುಂಬಿ ತುಳುಕಬೇಕು ಅಂಥೇಳಿ ಅಡ್ನಾಡಿ ಪ್ರಯತ್ನ ಮಾಡತಾರ. ಅದಕ್ಕ ಎಲ್ಲಾ ವಿಶ್ವವಿದ್ಯಾಲಯದಾಗೂ ‘ನಮ್ಮ ವಿಚಾರದ ಜನಾ ಇರಬೇಕು’ ಅನ್ನೋದರ ಮ್ಯಾಲೆ ನೇಮಕಾತಿ ಆಗ್ಯಾವು. ಆ ಮನುಷ್ಯ ಆ ಕೆಲಸಕ್ಕ ಯೋಗ್ಯ ಇದ್ದಾನೋ ಇಲ್ಲವೋ ಅನ್ನೋದರ ಬಗ್ಗೆ ಯಾರೂ ವಿಚಾರ ಮಾಡಲಿಕ್ಕೆ ಹತ್ತಿಲ್ಲ.

ಎಲ್ಲ ಪ್ರಗತಿಪರರನ್ನ, ಮುಂದಾಲೋಚನೆ ಉಳ್ಳವರನ್ನ, ಸಮಾನತಾವಾದಿಗಳನ್ನ, ವೈಜ್ಞಾನಿಕ ಮನೋಭಾವ ಇದ್ದವರನ್ನ, ಕಮ್ಯುನಿಸ್ಟ ಅಂತನೋ, ದೇಶದ್ರೋಹಿ ಅಂತನೋ, ವೈರಿದೇಶದ ಏಜೆಂಟ ಅಂತನೋ ಪಟ್ಟ ಕಟ್ಟಿ ಬಿಡುವುದು ಸಹಜ ಆಗೇತಿ. ಇದು ಭಯಂಕರ ಅಪಾಯಕಾರಿ. ಇದನ್ನ ತಲಿ ಸಮಾ ಇರೋರೆಲ್ಲಾ ವಿರೋಧಿಸಬೇಕು. ಮೂರ್ಖರ ರಾಜ್ಯದಾಗ ಬುದ್ಧಿವಂತರಾಗಿರೋದು ತಪ್ಪು ಅಂತಂತಾರ ಖರೆ. ಆದರೆ ಸುತ್ತಲಿನ ಮೂರ್ಖರ ಹುಚ್ಚುತನ ನೋಡಿಕೊಂಡು ಸುಮ್ಮನಿದ್ದರ ಅವರಿಗೂ ಇವರಿಗೂ ಏನೂ ವ್ಯತ್ಯಾಸ ಉಳಿಯಂಗಿಲ್ಲ. ಇಷ್ಟೇಲ್ಲಾ ರಾಜಾರೋಷವಾಗಿ ನಡೀಲಿಕ್ಕೆ ಹತ್ತಿದಾಗ ಇವರೆಲ್ಲಾ ಹೆಂಗ ಸುಮ್ಮನಿದ್ದರು, ಅಂತ ನಾಳೆ ಹುಟ್ಟುವವರು ತಮ್ಮ ಹಿರಿಯರನ್ನ ಆಡಿಕೊಳ್ಳೋಹಂಗಾಗತದ.

ಸುಳ್ಳು ಅನ್ನೋದು ಸೆರಗಿನ್ಯಾಗಿನ ಕೆಂಡ. ಅದನ್ನ ಕಟ್ಟಿಕೊಂಡು ಯತ್ನಾಳಶಾಹಿ ಅಪಾಯಕಾರಿ ಆಟ ಆಡಲಿಕ್ಕೆ ಹತ್ತೇದ. ಬ್ಯಾರೆಯವರ ಮನಿಗೆ ಬೆಂಕಿ ಹಚ್ಚಲಿಕ್ಕೆ ನಾವು ಅದನ್ನು ಉಪಯೋಗಿಸಬಹುದು. ಆದರ ಅದು ಕಡೀಕೆ ಎಲ್ಲಾರಿಗೂ ಹತ್ತಿಕೊಳ್ಳೋದ. ಇದನ್ನ ತಿಳಕೊಳ್ಳಲಾರದವರು ಹಾಡಾಡಿ ಕುಣೀಲಿಕ್ಕೆ ಹತ್ಯಾರ. ಹಾಡು ಮುಗಿಯೋದರಾಗ ಸೆರಗು ಸುಟ್ಟು ಹೋಗಿರತದ. ಕೆಂಡ ಮೈಗೆಲ್ಲಾ ಮೆತ್ತಿಕೊಂಡಿರತದ. ಅಷ್ಟರಾಗ ಸತ್ಯ ಅನ್ನೋ ತಣ್ಣೀರಿನ ಝರಿ ಯೊಳಗ ಜಿಗೀಬೇಕು. ಎಲ್ಲಾ ಸಮಾ ಆಗೋತನಕಾ ತೇಲಿಕೋತ ಹೋಗಬೇಕು.

ನಮ್ಮ ಇಂದಿನ ಸಂಕಟವನ್ನ, ಅದಕ್ಕ ಉತ್ತರವಾಗಿ ಆಶಾವಾದವನ್ನ ತೋರಿಸೋ ಅಮೀರ ಕಜಲಬಾಷ ಅವರ ಒಂದು ಗಜಲ್ಲಿನ ಸಾಲು ಹಿಂಗವ

ಪೂರ್ತೆ ಹಾಳ ಬಿದ್ದದ ಈ ಊರು
ಇಂಥಾದರಾಗ ಕನ್ನಡಿ ಮಾರಾಕ ಬಂದೇವಲ್ಲಾ,
ನಾವೆಷ್ಟು ಹುಚ್ಚರಿರಬೇಕು ನೋಡು
ಅವರು ನಮ್ಮನ್ನ ಬಿಟ್ಟು ಅಡ್ಯಾಡಿದರೇನಾತು,
ನಾವು-ನಾವ ಭೆಟ್ಟಿ ಆಗಕೋತ ಇರಲಿಕ್ಕೆ,
ಮಾತಾಡಿಕೋತ ಹೋಗಲಿಕ್ಕೆ
ನೆವಾ ಹುಡಕಲಿಕ್ಕೆ ಬಂದೇವೆಲ್ಲಾ
ನಾವೆಷ್ಟು ಹುಚ್ಚರಿರಬೇಕು ನೋಡು
ಆದರ ಕತ್ತಲದಾಗ ಎಷ್ಟು ದಿನಾಂತ ಇರೋದು?
ಒಂದ ಸಣ್ಣ ದೀಪ ಹಚ್ಚಬೇಕೂಂತ ಹೊಂಟೆವೆಲ್ಲಾ
ನಾವು ಎಷ್ಟು ಹುಚ್ಚರಿರಬೇಕು ನೋಡು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...