Homeಅಂಕಣಗಳುಇತಿಹಾಸ ಇಷ್ಟು ಬೇಗ ಮರುಕಳಿಸಿತಲ್ಲಾ ಥೂತ್ತೇರಿ!!

ಇತಿಹಾಸ ಇಷ್ಟು ಬೇಗ ಮರುಕಳಿಸಿತಲ್ಲಾ ಥೂತ್ತೇರಿ!!

- Advertisement -
- Advertisement -

ಕರ್ನಾಟಕದಲ್ಲಿ ಅದರಲ್ಲೂ ನಮ್ಮ ಪ್ರಭುತ್ವದ ಕೇಂದ್ರ ಸ್ಥಾನದಲ್ಲಿ ನಡೆದಿರುವ ಹೇಸಿಗೆ ಪ್ರಹಸನದ ಉದ್ಘಾಟಕರೇ ಕುಮಾರಣ್ಣನವರಂತಲ್ಲಾ. ಅಂದು ಧರ್ಮಸಿಂಗ್ ಸರಕಾರ ಗಜಗಾಂಭೀರ್ಯದಿಂದ ಸಾಗುತ್ತಿದ್ದಾಗ, ಕುಮಾರಣ್ಣನವರು ಜಮೀರ್ ಅಹಮದ್‍ನ ಕಾರಾಸ್ಥಾನದಲ್ಲಿ ತಯಾರಿಸಿದ ರೂಪುರೇಷೆಯಂತೆ ಜೆ.ಡಿ.ಎಸ್‍ಗೆ ಅಷ್ಟೂ ಶಾಸಕರನ್ನು ರೆಸಾರ್ಟ್‍ಗೆ ಹೊತ್ತೊಯ್ದರು. ಆ ಸಂದರ್ಭದ ದುಷ್ಟ ಚತುಷ್ಟಯರಲ್ಲಿ ಪ್ರಮುಖರಾದ ಬಾಲಕೃಷ್ಣ, ಚಲುವರಾಯ, ಜಮೀರು ಹೊತ್ತೊಯ್ದವರ ಬೇಕು, ಬೇಡಗಳು, ಜಿಹ್ವಾಚಾಪಲ್ಯ ಮತ್ತು ಗರ್ಮಿ ಪದಾರ್ಥಗಳ ಸೇವನೆಯಿಂದುಂಟಾದ ದೈಹಿಕ ಬಾಧೆಗಳನ್ನು ಪೂರೈಸಿದ್ದರಂತಲ್ಲಾ. ನಂತರ ಅವರನ್ನೆಲ್ಲ ಸುಸೂತ್ರವಾಗಿ ಕರೆದುಕೊಂಡು ಬಂದು, ವಿಧಾನಸೌಧದ ಎದುರು ಸುರಿದು ಕುಮಾರಣ್ಣ ಮುಖ್ಯಮಂತ್ರಿಯಾಗಿ ಮಾನ್ಯ ಎಡೂರಪ್ಪ ಉಪಮುಖ್ಯಮಂತ್ರಿಯಾಗುವಂತಹ ಪ್ರಹಸನವನ್ನು ನಿರೂಪಿಸಿದ್ದರಲ್ಲಾ. ಆದರೆ ಇಂತಹ ಸಾಹಸವೊಂದನ್ನು ಕಣ್ಣಲ್ಲಿ ನೋಡಲಾಗದೆ ಕಡು ದುಃಖದ ಮುಖಭಾವದಲ್ಲಿ ದೇವೇಗೌಡರು ಮನೆಯಲ್ಲೇ ಕುಳಿತಿದ್ದರಂತಲ್ಲಾ, ಥೂತ್ತೇರಿ…!

*****

ಕುಮಾರಣ್ಣನವರು ಮುಖ್ಯಮಂತ್ರಿಯಾಗಲು ಕ್ಷಣಗಣನೆ ನಡೆಯುತ್ತಿರುವಾಗ ಇತ್ತ ಪದ್ಮನಾಭನಗರದಲ್ಲಿ ದೇವೇಗೌಡರು ಬದುಕುಳಿಯುವುದೇ ಕಷ್ಟವೆಂಬ ಸ್ಥಿತಿಯಲ್ಲಿ ಕುಳಿತಿರಬೇಕಾದರೆ, ಕರ್ನಾಟಕದ ರಾಜಕಾರಣದ ಇನ್‍ಚಾರ್ಜ್ ಹೊತ್ತಿದ್ದ ಆಂಟೋನಿ ಜೊತೆಗೆ ಪಿ.ಜಿ.ಆರ್. ಸಿಂಧ್ಯಾ, ಎಂ.ಪಿ.ಪ್ರಕಾಶ್, ಮಿರಾಜುದ್ದೀನ್, ಡಿ.ಮಂಜುನಾಥ್ ಕೂಡ ದುರಂತವಾರ್ತೆ ವಿಧಾನಸೌಧದ ಕಡೆಯಿಂದ ಬರುತ್ತದೋ ಅಥವಾ ಪದ್ಮನಾಭನಗರ ಕಡೆಯಿಂದ ಹೊರಡುತ್ತದೋ ಎಂಬ ಆತಂಕದಲ್ಲೇ ಆಸೀನರಾಗಿದ್ದರಂತಲ್ಲಾ. ಆ ಯಾರೊಬ್ಬರಿಗೂ ಗೌಡರ ಮಹಾನಾಟಕ ಅರಿವಿಗೇ ಬರಲಿಲ್ಲವಂತಲ್ಲಾ. ಆ ನಾಟಕ ಯಾವುದೆಂದರೆ, ಮಗನ ಸಿಂಹಾಸನಕ್ಕೆ ತೊಂದರೆ ಕೊಡಬಹುದಾದ ಸಿದ್ದರಾಮಯ್ಯನನ್ನ ತೆಗೆದು ಬಿಸಾಡಿ, ಆ ಜಾಗಕ್ಕೆ ತಿಪ್ಪೇಮೇಗಲ ಒಣ ಸಗಣಿಯಂತ ತಿಪ್ಪಣ್ಣನನ್ನ ತಂದು ಕೂರಿಸಲಾಗಿತ್ತು. ಆತ ತಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡರ ಮೌಖಿಕ ಆದೇಶದಂತೆ, ಕುಮಾರಣ್ಣನೇ ನಮ್ಮ ನಾಯಕ ಅನ್ನುವ ಲೆಟರನ್ನು ರಾಜ್ಯಪಾಲರಿಗೆ ಕೊಡುತ್ತಾರೆ. ರಾಜ್ಯಪಾಲ ಅದನ್ನು ಊರ್ಜಿತ ಮಾಡುತ್ತಾರೆ. ದೇವೇಗೌಡರೇ ನೇಮಿಸಿದ ಕೆ.ಆರ್.ಪೇಟೆ ಕೃಷ್ಣ ಸದನದ ಸ್ಪೀಕರ್ ಆಗಿದ್ದು ಗೌಡರ ಋಣವನ್ನು ತೀರಿಸಿದ್ದರಂತಲ್ಲ ಥೂತ್ತೇರಿ…!!

*****

ಅಂತೂ ಕುಮಾರಣ್ಣನ ಸಭಾ ಪರ್ವ ಆರಂಭವಾಗಿ ಸಿಂಧ್ಯ ಎದ್ದು ನಿಂತು ನಮ್ಮ ಸಭಾ ನಾಯಕರು ಎಂ.ಪಿ.ಪ್ರಕಾಶ್ ಎಂದಾಗ ಆ ಗುಂಡಿಗೆಯನ್ನು ಹಲವರು ಮೆಚ್ಚಿದರು. ಆದರೇ ಅಂದೇ ಅಪ್ಪಮಕ್ಕಳು ಸಿಂಧ್ಯನ ಕತೆ ಮುಗಿಸಲು ಪಣತೊಟ್ಟರು. ಸಿಂಧ್ಯನ ಗಂಡು ಮಾತಿಗೆ ತಕ್ಕ ಉತ್ತರ ಕೊಡುವ ಅವಕಾಶ ಒದಗಿ ಬಂದಾಗ ಎಂ.ಪಿ.ಪ್ರಕಾಶರು, ಕುಮಾರ ಅಲ್ಲ ನಾನೇ ಸಭಾ ನಾಯಕ ಅಂದಿದ್ದರೆ ಆ ಕತೆಯೇ ಬೇರೆಯಾಗಿ ಕರ್ನಾಟಕದ ಇಂದಿನ ಪ್ರಹಸನಕ್ಕೂ ಅವಕಾಶವಿರಲಿಲ್ಲ. ಆದರೆ ಪ್ರಕಾಶ್ ಹಿಂಜರಿದರು. ಆದರೂ ಕುಮಾರಣ್ಣನ ಸರಕಾರ ಅವರಿಗೆ ಗೃಹಸಚಿವರ ಸ್ಥಾನ ನೀಡಿದ್ದಲ್ಲದೆ ಸದನದಲ್ಲಿ ಸರಕಾರದ ಎಲ್ಲಾ ಸಮಸ್ಯೆಗಳಿಗೆ ಸಮಂಜಸ ಉತ್ತರ ನೀಡುವ ಜವಾಬ್ದಾರಿ ವಹಿಸಿತ್ತು. ಆದರೇನು, ಪ್ರಕಾಶ್ ಅವರು ಅಪ್ಪಮಗನ ಗಾಣದಲ್ಲಿ ಸಿಕ್ಕು ನಜ್ಜುಗುಜ್ಜಾಗಿ ಹೋಗಿದ್ದರು. ಕಡೆಗೆ ಇವರ ಸಹವಾಸವೇ ಸಾಕು ಎಂದು ತಮ್ಮ ಜೀವಿತಾವಧಿಯಲ್ಲಿ ಟೀಕೆ ಮಾಡಿಕೊಂಡು ಬಂದ ಕಾಂಗ್ರೆಸ್‍ಗೆ ಹೋದರು, ಅಲ್ಲಿ ಸೋತರು. ಏಕೆಂದರೆ ಗೌಡರು ಅವರ ವಿರುದ್ಧವೂ ಅಭ್ಯರ್ಥಿ ಹಾಕಿದ್ದರು. ಅಂತೂ ಪ್ರಕಾಶರ ಅವನತಿಗೆ ಗೌಡರು ಕಾರಣರಾಗಿ ಹೋದರಲ್ಲಾ ಥೂತ್ತೇರಿ…!!!

*****

ಇತಿಹಾಸ ಒಂದು ದಶಕದಲ್ಲೇ ಮರುಕಳಿಸಿ ಹೋಯ್ತಲ್ಲ! ದುಷ್ಟ ಚತುಷ್ಟರ ಪೈಕಿ, ಕುಮಾರಣ್ಣನ ಬಳಿ ಯಾರೂ ಇಲ್ಲ. ಇದ್ದರೂ ಜಮೀರನನ್ನ ಪೂರಾ ನಂಬುವಂತಿಲ್ಲ. ಇತ್ತ ಎಡೂರಪ್ಪನ ಮುಖದಲ್ಲಿ ಅಂತಹ ಗೆಲುವಿಲ್ಲ. ಇಡೀ ಬಿ.ಜೆ.ಪಿ.ಯಲ್ಲೇ ಎಡೂರಪ್ಪ ಮತ್ತೆ ವಕ್ಕರಿಸುವ ಬಗ್ಗೆ, ಹೇಳಿಕೊಳ್ಳುವ ಹುಮ್ಮಸ್ಸಿಲ್ಲ. ಅದರಲ್ಲೂ ಈಶ್ವರಪ್ಪ ದಿಕ್ಕೇ ತೋಚದಂತಾಗಿದ್ದಾರೆ. ಏಕೆಂದರೆ ಎಡೂರಪ್ಪ ಮತ್ತು ಈಶ್ವರಪ್ಪನ ದಾಯಾದಿ ಕಲಹಕ್ಕೆ ಇತಿಹಾಸವೇ ಇದೆ. ಆದ್ದರಿಂದ ಎಡೂರಪ್ಪ ಮುಖ್ಯಮಂತ್ರಿಯಾದ ಕೂಡಲೇ ಅವರ ತಲೆನೋವಾಗಿ ಪರಿಣಮಿಸಲಿದ್ದಾರೆ. ಎಡೂರಪ್ಪ ಯಾವುದಕ್ಕೂ ಬಗ್ಗದಿದ್ದರೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಬದಲು, ಕನಕದಾಸ ಸಮರಸೇನೆ ಹುಟ್ಟು ಹಾಕಿದರೂ ಅಚ್ಚರಿಯಿಲ್ಲವಂತಲ್ಲಾ. ಏಕೆಂದರೆ ಕನಕದಾಸರು ಬರೀ ದಾಸರಷ್ಟೇ ಅಲ್ಲ. ಅದಕ್ಕೂ ಮೊದಲು ಬಾಡದ ನಾಯಕರಾಗಿ ಕಾದಾಡಿ, ವಿಜಯನಗರದ ಅರಸರ ಜೀತಕ್ಕಿಂತ ತಂಬೂರಿಯೇ ಲೇಸೆಂದು ಹೊರಟವರು. ಇದನ್ನೆಲ್ಲಾ ಬಿ.ಜೆ.ಪಿ ವಿದ್ವಾಂಸರಿಂದ ಸಂಗ್ರಹಿಸಿಕೊಂಡು ಮತ್ತೆ ಎಡೂರಪ್ಪನ ಎದುರು ಹೋರಾಟ ಆರಂಭಿಸುವುದಿಲ್ಲ ಎಂಬುದು ಯಾವ ಗ್ಯಾರಂಟಿ… ಥೂತ್ತೇರಿ!!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...