Homeಕರೋನಾ ತಲ್ಲಣಕೊರೊನಾ ಲಾಕ್‌ಡೌನ್‌ಗೆ ನಲುಗಿದ ಕೋಲಾರ ಜಿಲ್ಲೆ: ಹುಲುಸಾದ ಬೆಳೆ ಹೊಲದಲ್ಲೇ ನೆಲಸಮ

ಕೊರೊನಾ ಲಾಕ್‌ಡೌನ್‌ಗೆ ನಲುಗಿದ ಕೋಲಾರ ಜಿಲ್ಲೆ: ಹುಲುಸಾದ ಬೆಳೆ ಹೊಲದಲ್ಲೇ ನೆಲಸಮ

ಕೋಲಾರ ಜಿಲ್ಲೆ ಹಾಲು, ರೇಷ್ಮೆ ಮತ್ತು ಮಾವಿನ ಮಡಿಲು ಎಂದೇ ಹೆಸರು ಪಡೆದಿರುವ ಜಿಲ್ಲೆ. ಇಲ್ಲಿ ಟಮೋಟ, ತರಕಾರಿಗಳು ದೆಹಲಿ, ಪುಣೆ, ಮುಂಬೈ, ಬಾಂಗ್ಲಾದೇಶ, ನೇಪಾಳ ಹಾಗೂ ಇತರೆ ರಾಜ್ಯ, ದೇಶಗಳಿಗೂ ರಫ್ತಾಗುತ್ತದೆ.

- Advertisement -
- Advertisement -

ಕೊರೊನಾದಿಂದ ಇಡೀ ವಿಶ್ವವೇ ಬೆಚ್ಚಿ ಬಿದ್ದಿದೆ. ಕೊರೊನಾ ಲಾಕ್‌ಡೌನ್‌ನಿಂದಾಗಿ ಎಲ್ಲಾ ಕ್ಷೇತ್ರಗಳಿಗೂ ತೊಂದರೆಯಾಗಿದೆ. ಅದರಂತೆ ಕೃಷಿ ಕ್ಷೇತ್ರದ ಮೇಲೂ ತುಂಬಾ ದೊಡ್ಡ ಹೊಡೆತ ಬಿದ್ದಿದೆ. ಆದರೆ ಬೇರೆ ಕ್ಷೇತ್ರಗಳ ಬಗ್ಗೆ ಮಾಧ್ಯಮಗಳಾಗಲಿ, ವ್ಯವಸ್ಥೆ, ಪ್ರಭುತ್ವ ಕೊಟ್ಟ ಗಮನವನ್ನು ಕೃಷಿ ಕ್ಷೇತ್ರಕ್ಕೆ ನೀಡದಿರುವುದು ದುರಂತ. ಕೃಷಿ ಸಂಕಷ್ಟಗಳನ್ನು ಮುನ್ನಲೆಗೆ ತಂದಿದ್ದು ಬಹಳ ಕಡಿಮೆ.

ತೀರಾ ಅನೀರಿಕ್ಷಿತವಾಗಿ ಕೊರೊನಾ ಒಂದನೇ ಅಲೆ ಬಂತು. ನಮ್ಮ ರೈತರಿಗೆ ಇಂತಹ ಪರಿಸ್ಥಿತಿ ಬರುತ್ತೆ ಎಂಬುದು ಯಾರಿಗೂ ತಿಳಿದಿರಲಿಲ್ಲ. ಆಗಾಗಲೇ ಹೂ, ಹಣ್ಣು, ತರಕಾರಿಗಳನ್ನು, ಎಲ್ಲಾ ರೀತಿಯ ಬೆಳೆಗಳನ್ನು ನಾಟಿ ಮಾಡಲಾಗಿತ್ತು ಮತ್ತು ಒಂದಷ್ಟು ಬೆಳೆಗಳು ಕಟಾವಿಗೂ ಬಂದಿತು. ಬೆಳೆದ ಬೆಳೆಗಳು ಮಾರಾವಾಗದೆ ತೋಟದಲ್ಲಿ, ರಸ್ತೆಗಳಿಗೆ ಸುರಿಯುವ ಪರಿಸ್ಥಿತಿ ನಿರ್ಮಾಣವಾಯಿತು, ಈ ಎಲ್ಲದರ ಹೊಡೆತಗಳನ್ನು ರೈತರು ತಡೆದುಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಬಂತು. ಈ ಸಮಯದಲ್ಲಿ ಸರ್ಕಾರ ರೈತರ ರಕ್ಷಣೆಗೆ ನಿಲ್ಲುತ್ತೇವೆ ಎಂಬ ಭರವಸೆ ಕೊಟ್ಟರೆ ಹೊರತು ವಾಸ್ತವದಲ್ಲಿ ರೈತರ ರಕ್ಷಣೆಗೆ ನಿಲ್ಲಲಿಲ್ಲ. ಇನ್ನು ಈ ಸಮಸ್ಯೆಗಳಿಂದ ರೈತರು ಚೇತರಿಸಿಕೊಳ್ಳುವ ಮೊದಲೇ ಕೊರೊನಾ ಎರಡನೇ ಅಲೆ ಬಂತು. ಈ ಅಲೆಗೆ ಸರ್ಕಾರ ಮುನ್ನೆಚ್ಚರಿಕೆ ವಹಿಸಿರಲಿಲ್ಲ. ಆಸ್ಪತ್ರೆ, ಬೆಡ್, ಆಕ್ಸಿಜನ್ ಯಾವುದು ಸಿದ್ದತೆ ಮಾಡಿಕೊಂಡಿರಲಿಲ್ಲ. ಇಂತಹ ಸಮಯದಲ್ಲಿ ಮತ್ತೊಮ್ಮೆ ಲಾಕ್‌ಡೌನ್ ಘೋಷಣೆ ಮಾಡಿದರು.

ನಾವು ಈಗಾಗಲೇ ಹಸಿರುಕ್ರಾಂತಿ ಎಂಬ ಹೆಸರಿನಲ್ಲಿ ಬಿತ್ತನೆಬೀಜ, ರಸಗೊಬ್ಬರ, ಔಷಧಿಗಳು ಎಲ್ಲದಕ್ಕೂ ನಾವು ಸರ್ಕಾರ ಮತ್ತು ಕಾರ್ಪೊರೇಟ್ ಕಂಪನಿಗಳ ಮೇಲೆ ಅವಲಂಬಿತರಾಗಿದ್ದೇವೆ. ಉತ್ತಮ ಬೆಳೆ ಪಸಲು ಬರಬೇಕಾದರೆ ರಾಸಾಯನಿಕ ಗೊಬ್ಬರ, ಔಷಧಿಗಳನ್ನು ಸಿಂಪಣೆ ಮಾಡದೇ ಇದ್ದರೆ ಇಳುವರಿ ಮತ್ತು ಉತ್ತಮ ಬೆಳೆ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಅಂದರೆ ಖರ್ಚು ದುಬಾರಿಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ರೈತರು ಬೆಳೆದ ತರಕಾರಿ, ಹಣ್ಣು, ಹೂ ಮತ್ತು ತೋಟಗಾರಿಕಾ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲಾಗದೆ ಸಂಕಷ್ಟಕ್ಕೆ ಗುರಿಯಾದರು. ಈ ಲಾಕ್‌ಡೌನ್‌ನಿಂದಾಗಿ ಬೆಳೆದಿರುವ ಬೆಳೆಗಳನ್ನು ರಸ್ತೆಗೆ ತಂದು ಸುರಿಯುವ ಘಟನೆಗಳನ್ನು ನೋಡಬೇಕಾಯಿತು. ಕೋಲಾರದಲ್ಲಿ ಇತ್ತೀಚೆಗೆ ನೂರಾರು ರೈತರು ಬಹುಕಷ್ಟಪಟ್ಟು ಬೆಳೆದ ಟಮೋಟವನ್ನು ರಸ್ತೆಗೆ ಸುರಿದಿದ್ದನ್ನು ನೋಡಬಹುದು.

ಕೋಲಾರ ಜಿಲ್ಲೆ ಹಾಲು, ರೇಷ್ಮೆ ಮತ್ತು ಮಾವಿನ ಮಡಿಲು ಎಂದೇ ಹೆಸರು ಪಡೆದಿರುವ ಜಿಲ್ಲೆ. ಇಲ್ಲಿ ಬೆಳೆದಂತಹ ಮಾವು, ಟಮೋಟ, ತರಕಾರಿಗಳು ದೆಹಲಿ, ಪುಣೆ, ಮುಂಬೈ, ಬಾಂಗ್ಲಾದೇಶ, ನೇಪಾಳ ಹಾಗೂ ಇತರೆ ರಾಜ್ಯ, ದೇಶಗಳಿಗೂ ರಫ್ತಾಗುತ್ತದೆ. ಸರ್ಕಾರದ ಅವೈಜ್ಞಾನಿಕ ಲಾಕ್‌ಡೌನ್‌ನಿಂದಾಗಿ ಲಕ್ಷಾಂತರ ರೂ ಬಂಡವಾಳ ಹಾಕಿ ಬೆಳೆದಿದ್ದ ತರಕಾರಿ, ದ್ರಾಕ್ಷಿ, ಟಮೋಟ, ಪಪ್ಪಾಯಗಳಿಗೆ ಬೆಲೆಯಿಲ್ಲದೆ, ಮತ್ತೊಂದು ಕಡೆ ಮಾರುಕಟ್ಟೆಗೆ ಸಾಗಿಸಲು ವಾಹನಗಳ ವ್ಯವಸ್ಥೆಯಿಲ್ಲದೆ ರೈತರು ರಸ್ತೆಗೆ ಸುರಿದರು.

ನಾವು ಕೋಲಾರ ತಾಲ್ಲೂಕು ಹೊಸಮಟ್ಟ ಹಳ್ಳಿ ಗ್ರಾಮದಲ್ಲಿ 10 ಎಕರೆಯಲ್ಲಿ ಟಮೋಟ, 7 ಎಕರೆಯಲ್ಲಿ ಎಲೆಕೋಸು ಬೆಳೆದಿದ್ದೆವು. 1 ಎಕರೆ ಟಮೋಟ ಬೆಳೆಯಲು ಕನಿಷ್ಠ 1.5 ರಿಂದ 2 ಲಕ್ಷದವರೆಗೆ ಬಂಡವಾಳ ಹಾಕಬೇಕು. ಇನ್ನೂ 10 ಎಕರೆಯಲ್ಲಿ ಟಮೋಟ ಬೆಳೆಯಲು ಬಂಡವಾಳ ಎಷ್ಟಾಗಬಹುದು? ಲಾಕ್‌ಡೌನ್ ಸಮಯದಲ್ಲಿ ಕಟಾವಿಗೆ ಬಂದಿದ್ದ ನಮ್ಮದೇ ತೋಟದ 5 ಎಕರೆ ಜಮೀನಿನಲ್ಲಿ ಬೆಳೆದಿದ್ದ ಟಮೋಟಾಗೆ ಮಾರುಕಟ್ಟೆಯಲ್ಲಿ ಬರುವ ಬೆಲೆ ಕನಿಷ್ಠ ಟಮೋಟ ಬಿಡಿಸಿದ ಕೃಷಿ ಕಾರ್ಮಿಕರಿಗೂ ಕೂಲಿ ಕೊಡಲು ಸಾಲದ ಪರಿಸ್ಥಿತಿ ಉಂಟಾಯಿತು. ಆದ ಕಾರಣ ತೋಟದಲ್ಲಿಯೇ ಅದನ್ನು ನೆಲಸಮ ಮಾಡಲಾಯಿತು. ನಮ್ಮಂತಹ ಆದೆಷ್ಟೊ ರೈತರು ಬೆಳೆಗಳನ್ನು ತೋಟಗಳಲ್ಲಿ, ರಸ್ತೆಗಳಲ್ಲಿ ಕೊಳೆಸಿದರು.

ಇನ್ನು 1 ಎಕರೆ ಕೋಸು ಬೆಳೆಯಲು ಕನಿಷ್ಠ 1 ಲಕ್ಷ ಬಂಡವಾಳ ಬೇಕು. ಆದರೆ ಕೊನೆಗೆ 1Kgಗೆ 2-3 ರೂ ಕೊಟ್ಟರೆ ಏನು ಮಾಡುವುದು?

ನಮ್ಮ ಊರು ಕೇವಲ 40-50 ಮನೆಗಳನ್ನು ಹೊಂದಿರುವ ಚಿಕ್ಕ ಗ್ರಾಮ. ಇಲ್ಲಿ ಕೊರೊನಾ ಬರುವ ಮುನ್ನ 5-6 ರೈತ ಕುಟುಂಬಗಳು ಮಾತ್ರ ಬೆಳೆ ಮಾಡುತ್ತಿದ್ದರು. ಕೆ.ಸಿ ವ್ಯಾಲಿ ನೀರು ಮತ್ತು ಕೊರೊನಾ ಬಂದ ಮೇಲೆ ನಗರಗಳಲ್ಲಿದ್ದ ಎಲ್ಲಾ ಯುವಕರು ಹಳ್ಳಿಗಳತ್ತ ಮುಖ ಮಾಡಿ ಮೂಲ ಕಸುಬಾದ ಕೃಷಿ ಮಾಡಲು ಶುರು ಮಾಡಿದರು. ಈಗ ನಮ್ಮೂರಲ್ಲಿ 30-35 ಕುಟುಂಬಗಳು ಕೃಷಿಯನ್ನೆ ನಂಬಿ ಜೀವನ ಮಾಡುತ್ತಿದ್ದಾರೆ. ಯುವ ಜನತೆ ವ್ಯವಸಾಯ ಮಾಡಿದರೆ ಏನೋ ಲಾಭ ಬರುತ್ತದೆಯೆಂದು ಸಾಲ ಮಾಡಿ ಬಂಡವಾಳ ಹಾಕಿದವರ ಗತಿಯೇನು? ಇವರ ನೆರವಿಗೆ ನಿಲ್ಲುವವರು ಯಾರು? ಇನ್ನೂ ಸರ್ಕಾರ ಸಂಕಷ್ಟದಲ್ಲಿರುವ ರೈತರಿಗೆ ಎಷ್ಟು ಪರಿಹಾರ ಕೊಟ್ಟಿದೆ? ರೈತರಿಗೆ ಸೇರಿದ್ದು ಕೇವಲ ಬಿಡಿಗಾಸು ಮಾತ್ರ. ಕೆಲವು ರೈತರಿಗೆ ಅದೂ ಇಲ್ಲ..

ಉದಾಹರಣೆಗೆ ನಾವು ಕೊರೊನಾದಿಂದ ಬೆಲೆಯಿಲ್ಲದೆ ಹೊಲದಲ್ಲಿಯೇ ಬೆಳೆ ನೆಲಸಮ ಮಾಡಿದಾಗ ಪರಿಹಾರದ ಹಣ ನಮಗೆ ಸಿಗಲಿಲ್ಲ. ಅಧಿಕಾರಿಗಳು ಮಾಡಿದ ಸಣ್ಣ ತಪ್ಪಿಗೆ ನಾವು ಪರಿಹಾರ ವಂಚಿತರಾದೆವು.
ಇನ್ನೂ ಮಾವು, ಹೂಗಳು, ರೇಷ್ಮೆ ಬೆಳೆಯುವ ರೈತರ ಪರಿಸ್ಥಿತಿ ಹೇಳತೀರದು. ಯಾವುದೇ ಶುಭ ಸಮಾರಂಭಗಳಿಲ್ಲದೆ ದೇವಸ್ಥಾನಗಳಿಲ್ಲದೆ ಹೂಗಳು ಮಾರಟವಾಗಲೇ ಇಲ್ಲ. ಮಾವು ಬೆಳೆದ ರೈತರು ಪ್ರತಿ ಕೆಜಿಗೆ 2-3ರೂಗಳಂತೆಯೂ ಬೆಲೆ ಸಿಗದೆ ಕಂಗಾಲಾಗಿದ್ದಾರೆ.

ಇದನ್ನೂ ಓದಿ: ಮಾಧುಸ್ವಾಮಿಯವರನ್ನು ಪ್ರಶ್ನಿಸಿದ ನಳಿನಿ ಯಾರು? ಅವರು ಯಾವಾಗಲೂ ಹಾಗೇನಾ?

ರಾಜ್ಯದಲ್ಲಿ ಸುಮಾರು 1.20 ಲಕ್ಷ ಹೆಕ್ಟೆರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಾರೆ. ಇಷ್ಟು ಬೆಳೆದರು ಇದರಿಂದ ರೈತರಿಗೂ ಲಾಭ ಸಿಗಲಿಲ್ಲ. ಅತ್ತ ಕಡೆ ಗ್ರಾಹಕನಿಗೂ ಕಡಿಮೆ ಬೆಲೆಗೆ ಹಣ್ಣು-ತರಕಾರಿ ಸಿಗಲಿಲ್ಲ.

ಮತ್ತೊಂದು ಕಡೆ ಮುಂಗಾರು ಶುರುವಾಯಿತು ಬಿತ್ತನೆಗಳು ಪ್ರಾರಂಭವಾದವು ಉಳುಮೆ ಮಾಡಲು ನೇಗಿಲು ಕಟ್ಟಬೇಕು. ನೇಗಿಲಿಗೆ ಹುಳಿ ಕಟ್ಟಬೇಕು. ವೆಲ್ಡಿಂಗ್ ಅಂಗಡಿಗಳು ತೆರೆಯಲೇ ಇಲ್ಲ. ಉಳುಮೆ ಮಾಡಲು ಟ್ರಾಕ್ಟರ್ ತೆಗೆದುಕೊಂಡು ಹೋದರೆ ಒಂದು ನಟ್ಟು ಬೋಲ್ಟ್ ಇಲ್ಲದೇ ಇದ್ದರೂ ಟ್ರಾಕ್ಟರ್ ಮುಂದೆ ಹೋಗುವುದಿಲ್ಲ. ತೋಟಕ್ಕೆ ನೀರು ಹಾಯಿಸಲು ಹನಿ ನೀರಾವರಿ ಬಳಸುತ್ತೇವೆ. ಪೈಪ್ ಹೊಡೆದು ಹೋಗಿದ್ದು ಅದನ್ನು ಅಂಟಿಸಲು ಗಮ್ ಇಲ್ಲ. ನೀರು ಹೊರ ತೆಗೆಯಲು ಮೋಟರ್ Spare Parts ಇಲ್ಲದೇ ಇದ್ರೆ ಕೆಲಸ ಆಗಲ್ಲ. ಇವುಗಳು ಸದ್ಯಕ್ಕೆ ಲಾಕ್‌ಡೌನ್ ಇರುವುದರಿಂದ ಸಿಗುವುದಿಲ್ಲ. ಹೀಗೆ ಸಣ್ಣ ಸಣ್ಣ ವಸ್ತುಗಳಿಂದ ರೈತರಿಗೆ ಒಡೆತ ಬಿತ್ತು. ಆದರೆ ಆಡಳಿತ ನಡೆಸುವ ಸರ್ಕಾರ ಮತ್ತು IAS  ಅಧಿಕಾರಿಗಳು ಕೇವಲ ಗೊಬ್ಬರದ ಅಂಗಡಿ, ಔಷಧಿ ಅಂಗಡಿಗಳು ತೆರೆದರೆ ಕೃಷಿ ಮಾಡಿ ಬಿಡಬಹುದೆಂಬ ಭ್ರಮೆಯಲ್ಲಿದ್ದಾರೆ.

ಇದರ ನಡುವೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ರಸಗೊಬ್ಬರಗಳು, ಡ್ರಿಪ್ ಪೈಪ್‌ಗಳ ಬೆಲೆ ಏರಿಕೆ ಜೊತೆಗೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ರೈತರು ಜನ ಸಾಮಾನ್ಯರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದರು.

ಇದನ್ನೂ ಓದಿ: ನಳಿನಿ ವಿರುದ್ಧ ಬಿಜೆಪಿ ಐಟಿ ಸೆಲ್: ಒಂದು ಕ್ಲಾಸಿಕ್ ಕೇಸು

ಸರ್ಕಾರವಂತೂ ರೈತರ ನೆರವಿಗೆ ಬರುತ್ತಿಲ್ಲ. ಹಾಗಾಗಿ ರೈತರೇ ಪರ್ಯಾಯ ಆಲೋಚನೆಗಳತ್ತ ಮುಖ ಮಾಡಬೇಕಾಗಿದೆ. ಬೆಳೆದ ತರಕಾರಿಗಳನ್ನು ಮೌಲ್ಯವರ್ಧನೆ ಮಾಡಿ ಬೆಲೆ ಬಂದಾಗ ಮಾರಾಟ ಮಾಡಬೇಕು. ಜೊತೆಗೆ ಸಣ್ಣ ಕೆಲಸಗಳಾದ ಟಮೋಟ ಬೆಳೆಯುವ ರೈತರು ಸಾಸ್, ಉಪ್ಪಿನಕಾಯಿ ಇತರೆ ಉಪಉತ್ಪನ್ನಗಳನ್ನು ತಾವೇ ತಯಾರಿಸಿ ಮಾರಾಟ ಮಾಡುವ ಮೂಲಕ ಪರ್ಯಾಯಗಳತ್ತ ಯೋಚಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಕೋಲಾರ ಜಿಲ್ಲೆ ವಿಭಿನ್ನ ಎಂದು ಹೇಳಬಹುದು. ಏಕೆಂದರೆ ಇಲ್ಲಿ ಇತರೆ ಜಿಲ್ಲೆಗಳಂತೆ ಕೋಲಾರದಲ್ಲಿ ವಾರ್ಷಿಕ ಬೆಳೆಗಳನ್ನು ಬೆಳೆಯುವುದು ತುಂಬಾ ಕಡಿಮೆ. ಇಲ್ಲಿ ಟಮೋಟೊ ಹಣ್ಣುಗಳು, ಎಲ್ಲಾ ರೀತಿಯ ತರಕಾರಿಗಳು, ಮಾವು, ದ್ರಾಕ್ಷಿ ಇತರೆ ಎಲ್ಲಾ ಬೆಳೆಗಳನ್ನು ಬೆಳೆಯುವುದರಲ್ಲಿ ರೈತರು ಎತ್ತಿದ ಕೈ. ಹಾಗಾಗಿ 2 ತಿಂಗಳು ಲಾಕ್‌ಡೌನ್ ಆದ ಕಾರಣ ಈ ಬೆಳೆಗಳಿಗೆ ಸರಿಯಾದ ಬೆಲೆ ಇಲ್ಲದೆ ಸುಮಾರು ಸಾವಿರಾರು ಹೆಕ್ಟೇರ್ ಪ್ರದೇಶದ ಹೊಲಗಳಲ್ಲಿ ಪಸಲನ್ನು ಕಟಾವು ಮಾಡದೆ ಹಾಗೆ ಬಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರಗಳು ರೈತರ ಹಿತ ಕಾಯ್ದು, ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಕೊಡುವ ಬದಲು ರೈತ ವಿರೋಧಿ, ಜನವಿರೋಧಿ ಕೃಷಿ ಕಾಯ್ದೆಗಳನ್ನು ಜಾರಿ ಮಾಡುವಲ್ಲಿ ನಿರತರಾಗಿರುವುದು ದುರಂತ.

  • ನಳಿನಿ
ನಳಿನಿ
ನಳಿನಿ

(ಕರ್ನಾಟಕ ರಾಜ್ಯ ರೈತ ಸಂಘದ ಯುವ ವಿಭಾಗದ ಸಕ್ರಿಯ ಕಾರ್ಯಕರ್ತೆಯಾಗಿರುವ ನಳಿನಿ ಸ್ವತಃ ಕೃಷಿಯಲ್ಲಿ ತೊಡಗಿಸಿಕೊಂಡಿರುವವರು. ರೈತಪರವಾದ ಎಲ್ಲಾ ಹೋರಾಟದಲ್ಲಿ ಅವರು ಮುಂದಿರುತ್ತಾರೆ)


ಇದನ್ನೂ ಓದಿ: ಕನ್ನಡ ಶಾಲೆ ಕೆಡವಿ ಸ್ಮಾರಕ ನಿರ್ಮಾಣ: ತೀವ್ರಗೊಂಡ ಮೈಸೂರು NTM ಶಾಲೆ ಉಳಿಸಿ ಹೋರಾಟ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...