ದೇಶದ ರಾಜಧಾನಿಯಲ್ಲಿ ಗುರುವಾರ ಪೆಟ್ರೋಲ್ ದರ ಸಾರ್ವಕಾಲಿಕ ಗರಿಷ್ಠ ದರ ಲೀಟರ್‌ಗೆ 84.20 ರೂ.ಗೆ ಏರಿದೆ. ಡಿಸೇಲ್ ದರ 74.36 ರೂ ಏರಿದೆ. ತೈಲ ಮಾರಾಟ ಕಂಪನಿಗಳು ಗುರುವಾರ ಪೆಟ್ರೋಲ್ ದರವನ್ನು 23 ಪೈಸೆ ಮತ್ತು ಡಿಸೇಲ್ ದರವನ್ನು 24 ಪೈಸೆ ಏರಿಸಿವೆ. ಬುಧವಾರ ಪೆಟ್ರೋಲ್ ದರವನ್ನು 26 ಪೈಸೆ ಮತ್ತು ಡಿಸೇಲ್ ದರವನ್ನು 25 ಪೈಸೆ ಏರಿಸಿದ್ದು, ಸತತ ಎರಡನೇ ದಿನ ತೈಲ ಬೆಲೆ ಏರಿಕೆ ಕಂಡಿದೆ.
ಈ ಹಿಂದೆ 2018ರ ಅಕ್ಟೋಬರ್‌ನಲ್ಲಿ ದೆಹಲಿಯಲ್ಲಿ ಪೆಟ್ರೋಲ್ ದರ ಗರಿಷ್ಠ 84 ರೂ. ಮುಟ್ಟಿದಾಗ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬ್ಯಾರಲ್‌ಗೆ 80 ಡಾಲರ್ ಇತ್ತು. ಸದ್ಯ ಕಚ್ಚಾ ತೈಲದ ದರ ಬ್ಯಾರೆಲ್‌ಗೆ 54 ಡಾಲರ್ ಇದೆ. ಆದರೂ ಪೆಟ್ರೋಲ್ ಬೆಲೆ ಮಾತ್ರ ಏರುತ್ತಲೇ ಇದೆ.
ಸರ್ಕಾರಗಳ ಲೆವಿಯೇ ಕಾರಣ
ಕಚ್ಚಾ ತೈಲದ ದರ ಇಳಿದಿದ್ದರೂ, ಪೆಟ್ರೋಲ್, ಡಿಸೇಲ್ ದರ ಏರಿಕೆಯಾಗಲು ಸರ್ಕಾರ ವಿಧಿಸಿರುವ ಲೆವಿ/ತೆರಿಗೆಗಳೇ ಕಾರಣ. 2019ರ ಆರಂಭದಲ್ಲಿ ಕೇಂದ್ರ ಸರ್ಕಾರವು ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 19.18 ರೂ.ನಿಂದ 36.98 ರೂ.ಗೆ, ಡಿಸೇಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 15.83 ರೂ.ನಿಂದ 31.83 ರೂ.ಗೆ ಏರಿಸಿತು. ಸಾಂಕ್ರಾಮಿಕದಿಂದಾಗಿ ಕುಸಿದ ಆರ್ಥಿಕ ನಷ್ಟ ಸರಿದೂಗಿಸಲು ಸರ್ಕಾರ ಜನರ ಮೇಲೆಯೇ ಸುಂಕ ಹೆಚ್ಚಳದ ಹೊರೆ ಹಾಕಿತು.
ತಮ್ಮ ಆರ್ಥಿಕ ಸುಧಾರಣೆಗೆ ಹಲವು ರಾಜ್ಯ ಸರ್ಕಾರಗಳೂ ಪೆಟ್ರೋಲ್-ಡಿಸೇಲ್ ಮೇಲಿನ ವ್ಯಾಟ್ ತೆರಿಗೆ ಹೆಚ್ಚಿಸಿದವು. ಇವೆಲ್ಲವೂ ಗ್ರಾಹಕನಿಗೆ ಹೊರೆಯಾಗಿವೆ.
ಸದ್ಯ ದೇಶದ ರಾಜಧಾನಿಯಲ್ಲಿ ಪೆಟ್ರೋಲ್‌ನ ಚಿಲ್ಲರೆ ಮಾರಾಟ ದರದ ಶೇ.62ರಷ್ಟು ಸರ್ಕಾರದ ಲೆವಿಗಳ ರೂಪದಲ್ಲಿದೆ. ಡಿಸೇಲ್ ದರದ ಶೇ. 57ರಷ್ಟು ಲೆವಿಗಳ ರೂಪದಲ್ಲಿದೆ.
ಇದನ್ನೂ ಓದಿ: ನಿಮ್ಮ ವೈಯಕ್ತಿಕ ಡೇಟಾ ಬಳಸಲು ಅನುಮತಿಸಿ, ಇಲ್ಲವೆ ಹೊರನಡೆಯಿರಿ: ವಾಟ್ಸಾಪ್ ಎಚ್ಚರಿಕೆ


