ಮೂಲ: ದಿ ವಲ್ಡ್ ಸಿಖ್ ನ್ಯೂಸ್
ಕನ್ನಡಕ್ಕೆ: ಸೋಮಶೇಖರ್ ಚಲ್ಯ
ತಮ್ಮ ಜೀವ ಮತ್ತು ತಮ್ಮ ಕುಟುಂಬಗಳಿಗೆ ಬೆದರಿಕೆಗಳಿದ್ದರೂ ಎನ್‍ಡಿಟಿವಿಯ ರವೀಶ್ ಕುಮಾರ್, ಎಬಿಪಿಯ ಪುಣ್ಯ ಪ್ರಸುನ್ ಬಾಜ್ಪೈ ಮತ್ತು ಅಭಿಶಾರ್ ಶರ್ಮಾರವರು ದೇಶದ ಚುನಾವಣೆಯ ಸಂದರ್ಭದಲ್ಲಿ ದೇಶದ ಆತ್ಮಸಾಕ್ಷಿಯ ಕೀಪರ್‍ಗಳಾಗಿ ನಿಂತಿದ್ದರು. ಭಾರತದ ಪ್ರಧಾನಿ ಮೋದಿರವರ ಅಭಿಪ್ರಾಯ ಉತ್ಪಾದನಾ ಯಂತ್ರದ ಮುಖವಾಡ ಕಳಚುವ ಅವರ ಪ್ರಾಮಾಣಿಕ ಮತ್ತು ನಿರ್ಣಾಯಕ ಕೆಲಸಕ್ಕಾಗಿ ದಿ ವಲ್ಡ್ ಸಿಖ್ ನ್ಯೂಸ್ (ಡಬ್ಲ್ಯೂಎಸ್‍ಎನ್) ಅವರನ್ನು ಗೌರವಿಸಿದೆ.
ರವೀಶ್ ಕುಮಾರ್‍ರವರು ಯಾವುದೇ ಮಿಂಚಿನ ಪದಗಳನ್ನು ಬಳಸದೇ ರಾಜಕೀಯ ನಾಯಕರನ್ನು ನೇರವಾಗಿ ಟೀಕೆ ಮಾಡುವ ಮತ್ತು ಜನರ ನೈಜ ಅಜೆಂಡಾಗಳನ್ನು ಮುಂದೆತರುವಲ್ಲಿ ಯಶಸ್ವಿಯಾದ ಪತ್ರಕರ್ತರಾಗಿದ್ದಾರೆ. ಆದ ಕಾರಣ ಭಾರತೀಯ ಜನತಾ ಪಾರ್ಟಿ ಬಹಿಷ್ಕರಿಸಿದ ಮೊದಲ ಪತ್ರಕರ್ತರಾಗಿದ್ದಾರೆ. ಇವರ ಹೆಸರಿಗೆ ಕಳಂಕ ತರಲು ಯತ್ನಿಸುತ್ತಿರುವ ಬಲಪಂಥೀಯ ನೂರು ಕಾರ್ಯಕರ್ತರು ಓದುವುದಕ್ಕಿಂತ ಹೆಚ್ಚು ಓದಿರುವ ವಿಚಾರವಂತರಾಗಿದ್ದಾರೆ. ಹಿಂದಿ ಮಾತನಾಡುತ್ತಾ, ಅವರ ಆಲೋಚನೆಗಳನ್ನು ಗ್ರಹಿಸುವ ಯುವಜನರ ಆದರ್ಶವಾಗಿದ್ದಾರೆ. ಇವರ ಆದರ್ಶಗಳು ಮೋಡಿ ಮಾಡುವಂತವಲ್ಲದೆ ನೈಜತೆಯಿಂದ ಕೂಡಿವೆ. ಅವರ ಪ್ರಕಾರ ನೈಜ ಪತ್ರಿಕೋದ್ಯಮವನ್ನು ಅನುಸರಿಸಲು ಪ್ರಯತ್ನಸುವ ಕೆಲವು ಯೂಟ್ಯೂಬ್ ಚಾನಲ್‍ಗಳು, ಹವ್ಯಾಸಿ ಮತ್ತು ವೃತ್ತಿಪರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸ್ಪೂರ್ತಿಗೊಳಿಸುವುದರಿಂದ ಅವರನ್ನು ಪತ್ರಿಕೋದ್ಯಮದ ಭಾಗವಾಗಿಸಬಹುದು.
ಪ್ರಧಾನಿ ಮತ್ತು ಪ್ರಧಾನಿ ಕಛೇರಿಯಿಂದ ಹಬ್ಬಿಸಲಾಗುವ ಸುಳ್ಳುಗಳನ್ನು ಬಹಿರಂಗಪಡಿಸುವ ಮೂಲಕ ಪುಣ್ಯ ಪ್ರಸೂನ್ ಬಾಜ್‍ಪಾಯಿ ಎಬಿಪಿ ನ್ಯೂಸ್‍ನಲ್ಲಿ ಅವರ ಮಾಸ್ಟರ್‍ಸ್ಟ್ರೋಕ್ ಕಾರ್ಯಕ್ರಮದಲ್ಲಿ ಪ್ರಖ್ಯಾತರಾದವರು. ಇತ್ತೀಚೆಗೆ ಈ ಚಾನೆಲ್ ಒಂದು ಪಕ್ಷದ ಪರವಾಗಿ ಕೆಲಸ ಮಾಡಿದ ಕಾರಣ ಎಬಿಪಿ ನ್ಯೂಸ್ ಪ್ರಾಮಾಣೀಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಪುಣ್ಯ ಪ್ರಸಾನ್ ಎಬಿಪಿಗೆ ರಾಜಿನಾಮೆ ನೀಡಿದರು. ಸುದ್ದಿವಾಹಿನಿಗಳು ಮತ್ತು ಪತ್ರಿಕೆಗಳ ಮೇಲ್ವಿಚಾರಣೆ ಮಾಡಿರುವ ಅವರು ಮೋದಿ ಸರ್ಕಾರ ಸಂಪೂರ್ಣ ಗೊಬೆಲಿಯನ್ ತಂತ್ರಗಳ ಸುತ್ತ ಕೆಲಸ ಮಾಡುತ್ತಿದೆ ಎಂದು ಅವರು ನಿರೂಪಿಸಿದ್ದರು. ಅವರ ಯೂಟ್ಯೂಬ್ ನ್ಯೂಸ್ ಚಾನೆಲ್ ಪ್ರಖ್ಯಾತವಾಗಿದ್ದು ಪರ್ಯಾಯ ಮಾಧ್ಯಮವಾಗಿ ಕೆಲಸ ಮಾಡುತ್ತಿದೆ.
ಎಬಿಪಿಗೆ ರಾಜಿನಾಮೆ ನೀಡಿ ಹೊರಬಂದ ಇನ್ನೊರ್ವ ಪತ್ರಕರ್ತ ಅಭಿಶಾರ್ ಶರ್ಮಾ ಸಹ ಯೂಟ್ಯೂಬ್ ಚಾಲನ್ ಶುರುಮಾಡಿದ್ದಾರೆ. ಚುನಾವಣಾ ಆಯೋಗದ ಎಲ್ಲಾ ರೀತಿಯ ಗಿಮಿಕ್ ಮತ್ತು ಲೋಪಗಳನ್ನು ಪದೇ ಪದೇ ಪಟ್ಟು ಬಿಡದೆ ಎತ್ತಿಹಿಡಿದ ಕಾರ್ಯವೈಖರಿ ಅವರ ಪತ್ರಿಕೊದ್ಯಮದ ಬದ್ದತೆಯನ್ನು ತೋರಿಸಿದೆ. ಅವರ ಹಸನ್ಮುಖ ಮಾತುಗಳು ಮತ್ತು ಕಟು ಸತ್ಯಗಳು ವೀಕ್ಷಕರಿಗೆ ಸುಲಭ ರೀತಿಯಲ್ಲಿ ತಲುಪುತ್ತಿವೆ.
ಈ ಮೂವರು ಆತ್ಮಸಾಕ್ಷಿಯುಳ ಪತ್ರಕರ್ತರು ಚುನಾವಣೆಯ ಮುಂಚೆ ಮತ್ತು ನಂತರದಲ್ಲಿ ನಿಸಂದೇಹವಾಗಿ ಹೀರೋಗಳಾಗಿದ್ದಾರೆ. ಆದರೆ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ಮಾಧ್ಯಮ ಸಂಸ್ಥೆಗಳ ಕಪಟ ಮೌನದಿಂದ ಹಲವು ಸಂಸ್ಥೆಗಳಿಗೆ ಇವರು ಖಳನಾಯಕರಾಗಿ ಕಾಣಿಸುತ್ತಾರೆ.
ಚುನಾವಣೆಯ ನಂತರ ಭಾರತ ಯಾವ ಹಾದಿಯಲ್ಲಿ ಹೋಗುತ್ತದೆಯೋ ತಿಳಿದಿಲ್ಲ. ಆದರೆ ದಿ ವಲ್ಡ್ ಸಿಖ್ ನ್ಯೂಸ್ ಫ್ಯಾಸಿಸಂ ವಿರುದ್ದದ ಹೋರಾಟದಲ್ಲಿ ಮತ್ತು ಪತ್ರಿಕೋದ್ಯಮದ ನೈತಿಕತೆಯನ್ನು ಉಳಿಸಲು ಬದ್ದವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಡಬ್ಲ್ಯೂಎಸ್‍ಎನ್ ಪ್ರಕಟಿಸಿದೆ.


