Homeಕರ್ನಾಟಕಕನಸಿನ ಭಾರತಕ್ಕೆ ಸಂವಿಧಾನವೇ ರೋಡ್‌ ಮ್ಯಾಪ್‌: ಗಾಯಕಿ ಎಂ.ಡಿ.ಪಲ್ಲವಿ

ಕನಸಿನ ಭಾರತಕ್ಕೆ ಸಂವಿಧಾನವೇ ರೋಡ್‌ ಮ್ಯಾಪ್‌: ಗಾಯಕಿ ಎಂ.ಡಿ.ಪಲ್ಲವಿ

"ಪ್ರಗತಿಪರ ಹೋರಾಟಗಳಿಂದಲೇ ಸಂವಿಧಾನದ ಕನಸನ್ನು ಸಾಕಾರಗೊಳಿಸುವ, ಎಲ್ಲರಿಗೂ ಎಲ್ಲ ರೀತಿಯ ಸಮಾನತೆ ದೊರಕಿಸುವ ಕೆಲಸ ಆಗಬೇಕಿದೆ"

- Advertisement -
- Advertisement -

“ಸ್ವಾತಂತ್ರ್ಯ ನಂತರ ದೇಶ ಯಾವ ರೀತಿ, ಸಮಾಜ ಯಾವ ರೀತಿ ಇರಬೇಕು ಅನ್ನುವ ಕನಸನ್ನು ಸಂವಿಧಾನ ಕಟ್ಟಿಕೊಟ್ಟಿತು. ನಮ್ಮ ಕನಸಿನ ಗುರಿಗೆ ಒಂದು ರೀತಿಯ ರೋಡ್ ಮ್ಯಾಪ್ ನಮ್ಮ ಸಂವಿಧಾನ. ನಾವಿನ್ನೂ ಗುರಿಯನ್ನು ಮುಟ್ಟಿಲ್ಲ. ಸಮಾನತೆ ಎಲ್ಲರಿಗೂ ಸಿಕ್ಕಿಲ್ಲ” ಎಂದು ಖ್ಯಾತ ಗಾಯಕಿ ಎಂ.ಡಿ.ಪಲ್ಲವಿ ವಿಷಾದಿಸಿದರು.

ಜನ ಪ್ರಕಾಶನ, ಪರ್ಯಾಯ ಕಾನೂನು ವೇದಿಕೆ ಹಾಗೂ ಮಾರ್ಗ ಸಂಸ್ಥೆಯ ಸಹಯೋಗದಲ್ಲಿ ಬೆಂಗಳೂರಿನ ರಾಜೇಂದ್ರನಗರದ ಡಾ.ಅಂಬೇಡ್ಕರ್‌ ಸಮುದಾಯಭವನದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ‘ಸಂವಿಧಾನ ಪೀಠಿಕೆ ಒಂದು ಪುಟ್ಟ ಮುನ್ನುಡಿ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

“ಆ ಆದರ್ಶಮಯ ಸಮಾಜ ಸಿಗದೆ ಇರುವುದಕ್ಕೆ ನಾವೇ ಕಾರಣ. ಆ ರೋಡ್ ಮ್ಯಾಪ್, ಆ ಬ್ಲೂಪ್ರಿಂಟ್ ನಮ್ಮ ಬಳಿ ಇದೆ. ನಾವು ಇನ್ನು ಕೂಡ ಹೋರಾಟದಿಂದಲೇ ಮುನ್ನಡೆಯಬೇಕಿದೆ. ಪ್ರಗತಿಪರ ಹೋರಾಟಗಳಿಂದಲೇ ಸಂವಿಧಾನದ ಕನಸನ್ನು ಸಾಕಾರಗೊಳಿಸುವ, ಎಲ್ಲರಿಗೂ ಎಲ್ಲ ರೀತಿಯ ಸಮಾನತೆ ದೊರಕಿಸುವ ಕೆಲಸ ಆಗಬೇಕಿದೆ. ಹೋರಾಟಗಳಿಂದ, ಅರಿವಿನಿಂದ, ಸಂವಿಧಾನ ಓದುವುದರಿಂದ, ನಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಳ್ಳುವುದರಿಂದ ಗುರಿ ಮುಟ್ಟಬಹುದಾಗಿದೆ” ಎಂದು ಅಭಿಪ್ರಾಯಪಟ್ಟರು.

“ನಮ್ಮದು ಬಹುದೊಡ್ಡ ಪ್ರಜಾಪ್ರಭುತ್ವ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಈ ಪ್ರಜಾಪ್ರಭುತ್ವದಲ್ಲಿ ಕೆಲವು ಕೊರತೆಗಳಿವೆ. ಆದರೆ ಅದರತ್ತಲೇ ನಾವು ನಡೆದುಕೊಂಡು ಹೋಗುವುದನ್ನು ಬಿಟ್ಟು ಪ್ರಜಾಪ್ರಭುತ್ವವನ್ನು ಗಟ್ಟಿಯಾಗಿಸಬೇಕಿರುವುದು ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿ. ಆ ಜವಾಬ್ದಾರಿಯನ್ನು ಪೂರೈಸುವ ನಿಟ್ಟಿನಲ್ಲಿ ನಮ್ಮ ಸಂವಿಧಾನವನ್ನು ನಾವು ಓದಬೇಕು. ನಮ್ಮ ಹಕ್ಕುಗಳನ್ನು, ಕನಸುಗಳನ್ನು ಅರ್ಥಮಾಡಿಕೊಂಡರೆ ಗುರಿ ಸ್ಪಷ್ಟವಾಗುತ್ತದೆ. ಈ ನಿಟ್ಟಿನಲ್ಲಿ ನಾನು ಕೂಡ ಕೆಲಸ ಮಾಡುತ್ತೇನೆ” ಎಂದು ತಿಳಿಸಿದರು.

ಸಮಾಜ, ಸಂಸ್ಕೃತಿಯ ದ್ವಿಮುಖ ನೀತಿ ತೆರದಿಟ್ಟ ಅಕ್ಕಯ್ ಪದ್ಮಶಾಲಿಯವರ ಭಾಷಣ

‘ಒಂದೆಡೆ ಸಂಸ್ಥೆ’ಯ ಸಂಸ್ಥಾಪಕಿಯಾಗಿರುವ ಅಕ್ಕಯ್ ಪದ್ಮಶಾಲಿಯವರು ಲಿಂಗತ್ವ ಅಲ್ಪಸಂಖ್ಯಾತರ ದಿಟ್ಟದನಿ. ಲಿಂಗತ್ವ ಅಲ್ಪಸಂಖ್ಯಾತರ ಕುರಿತು ಸಮಾಜಕ್ಕಿರುವ ತಾತ್ಸಾರದ ವಿರುದ್ಧ ಅಕ್ಕಯ್‌ ಪದ್ಮಶಾಲಿಯವರು ಮಾತನಾಡಲು ನಿಂತರೆಂದರೆ ಇಡೀ ಸಮಾಜಕ್ಕೆ ಕನ್ನಡಿ ಹಿಡಿದಂತೆ ಭಾಸವಾಗುತ್ತದೆ. ಸಮಾರಂಭದಲ್ಲಿ ಪಾಲ್ಗೊಂಡು ಅವರಾಡಿದ ಮಾತುಗಳು ಸಮಾಜದ ದ್ವಿಮುಖ ನೀತಿಗಳನ್ನು ತೆರದಿಟ್ಟವು.

“ಪ್ರಕೃತಿ ಉದ್ಭವವಾದಾಗಿನಿಂದ ನಾವು (ಲಿಂಗತ್ವ ಅಲ್ಪಸಂಖ್ಯಾತರು) ಇದ್ದೇವೆ ಎನ್ನಲಾಗುತ್ತದೆ. ಹರಿ-ಹರನ ಪುತ್ರನಾಗಿ ಅಯ್ಯಪ್ಪ ಹುಟ್ಟಲು ಹೇಗೆ ಸಾಧ್ಯ? ಹರಿ ಒಬ್ಬ ಗಂಡು, ಹರ ಒಬ್ಬ ಗಂಡು- ಇಬ್ಬರು ಗಂಡಸರ ಮಧ್ಯೆ ಸೆಕ್ಸ್‌ ಮಾಡಿದರೆ ಮಕ್ಕಳಾಗಲು ಸಾಧ್ಯವಾಗುತ್ತದಾ? ಇಬ್ಬರಲ್ಲಿ ಒಬ್ಬರಿಗೆ ಯೋನಿ ಇರಬೇಕಾಗುತ್ತದೆ. ಶಿವನನ್ನು ಅರ್ಧನಾರೀಶ್ವರ ಎನ್ನುತ್ತಾರೆ. ಅಯ್ಯೋ, ನನಗೆ ಎಷ್ಟು ಗೌರವ ಸಿಗುತ್ತದೋ? ಸಾಂಸ್ಕೃತಿಕವಾಗಿ ನೀವು ನಮ್ಮನ್ನು ಒಪ್ಪಿಕೊಳ್ಳುತ್ತೀರಿ. ಸಾಮಾಜಿಕವಾಗಿ ಯಾಕೆ ನಮ್ಮನ್ನು ನೀವು ಒಪ್ಪಿಕೊಂಡಿಲ್ಲ” ಎಂದು ಅಕ್ಕಯ್ ಪದ್ಮಶಾಲಿ ಪ್ರಶ್ನಿಸಿದರು.

“ಈ ಸಮಾಜದಲ್ಲಿ ಜಾತಿ, ಧರ್ಮ, ಪ್ರಾಂತ್ಯ, ಬಟ್ಟೆ, ಊಟ ಎಲ್ಲ ವಿಚಾರಗಳಲ್ಲೂ ಸಮಸ್ಯೆಗಳನ್ನು ಕಾಣುತ್ತಿದ್ದೇವೆ. ನಾನು ಮದುವೆಯಾದರೂ ಕಷ್ಟ, ಇಲ್ಲದಿದ್ದರೂ ಕಷ್ಟ. ಬೆಳ್ಳಿಗೆ ಇದ್ದರೂ ಕಷ್ಟ, ಕಪ್ಪಗಿದ್ದರೂ ಕಷ್ಟ. ಮೊಲೆಗಳು ದಪ್ಪ ಇದ್ದರೂ ಕಷ್ಟ, ಸಣ್ಣ ಇದ್ದರೂ ಕಷ್ಟ. ಹಾಗಿದ್ದರೆ ನಾವು ಯಾವ ಸಮಾಜವನ್ನು ಸಮಾಧಾನ ಮಾಡಲು ಹೊರಟ್ಟಿದ್ದೇವೆ? ನೀವು ನಮ್ಮನ್ನು ಕೇಳಿದರೆ ನಾನು ಸಮಾಜಕ್ಕೆ ಸಮಾಧಾನ ಮಾಡಲು ಖಂಡಿತ ಇಲ್ಲ, ನನಗೆ ನಾನು ಸಮಾಧಾನ ಮಾಡಿಕೊಳ್ಳಲು ಇದ್ದೇನೆ ಎನ್ನುತ್ತೇನೆ. ನೈಸರ್ಗಿಕವಾಗಿ ಲಿಂಗತ್ವ ಬದಲಾವಣೆ ಆಗಿರಬೇಕಾದರೆ, ರಾಮ, ಅಲ್ಲಾ, ಜೀಸಸ್ ಬಂದು ಲಿಂಗತ್ವ ಬದಲಾವಣೆ ತಪ್ಪು ಎಂದು ಹೇಳಿಲ್ಲ. ಧರ್ಮಗ್ರಂಥಗಳನ್ನು ವಿಶ್ಲೇಷಿಸುವ ಕಳ್ಳರು ತಪ್ಪು ಎನ್ನುತ್ತಾರೆ. ಆರ್‌ಎಸ್‌ಎಸ್‌ ಮತ್ತು ಬಿಜೆಪಿಯವರು ಭಗವದ್ಗೀತೆಯೇ ದೇಶದ ಸಂವಿಧಾನ ಎಂದು ಮಾತನಾಡುವಾಗ ಹೆಣ್ಣು ಮಕ್ಕಳಿಗೆ ಅವಕಾಶ ಕೊಡುತ್ತಾರೆ?” ಎಂದು ಕೇಳಿದರು.


ಇದನ್ನೂ ಓದಿರಿ: 2 ತಿಂಗಳಿನಿಂದ ವೇತನವಿಲ್ಲ: ಎಐಸಿಸಿಟಿಯು ನೇತೃತ್ವದಲ್ಲಿ ವಿಕ್ಟೋರಿಯಾ ಆಸ್ಪತ್ರೆ ಕಾರ್ಮಿಕರ ಪ್ರತಿಭಟನೆ


“ನಮಗೆ ಸ್ಮಶಾನವೇ ಇಲ್ಲ. 2009ರಲ್ಲಿ ಸತ್ತ ನಾಯಿಗಳಿಗೆ ಮಣ್ಣು ಮಾಡಲು ಸ್ಮಶಾನವನ್ನು ಕೊಡುತ್ತೇವೆ ಎಂದು ಬಿಜೆಪಿ ಸರ್ಕಾರ ಹೇಳಿತು. ನಮಗೆ ಇರಲು ಮನೆಯೂ ಇಲ್ಲ. ಅಂದರೆ ನಾವು ಪ್ರಾಣಿಗಳಿಗಿಂತ ಕಡೆಯವರಾ ಎಂಬ ಪ್ರಶ್ನೆ ಮೂಡುತ್ತದೆ. 1860ನೇ ಇಸವಿಯಿಂದ ಇತ್ತೀಚಿನ ವರ್ಷಗಳವರೆಗೆ ನಾವು ಕಾನೂನಿನ ಕಣ್ಣಿನಲ್ಲಿ ಕ್ರಿಮಿನಲ್‌ ಆಗಿದ್ದವು. ಯೋನಿ ಮತ್ತು ಶಿಶ್ನದ ಆಧಾರದಲ್ಲಿ ಆಗುವ ಸೆಕ್ಸ್‌ನಿಂದ ಸಂತಾನೋತ್ಪತಿ ಆಗುತ್ತದೆ. ಹಾಗಿದ್ದರೆ ಮಾತ್ರ ಅದು ಸೆಕ್ಸ್‌ ಎಂದು ಮೆಕಾಲೆ ಕಾನೂನು ಹೇಳಿತ್ತು. ಮಕ್ಕಳು ಹುಟ್ಟಿಸಲು ಮಾತ್ರವೇ ಸೆಕ್ಸ್ ಮಾಡುತ್ತಾರಾ? ನಾನು ಕಾನೂನು ವ್ಯವಸ್ಥೆಗೆ ಧನ್ಯವಾದ ಹೇಳುತ್ತೇನೆ. ಸಂವಿಧಾನದ ಮುಂದೆ ಸಮಾನ ಪ್ರಜೆಗಳಾಗಿ ತೃತೀಯ ಲಿಂಗಿಗಳನ್ನು ಕಾಣಬೇಕು ಎಂದು ಸುಪ್ರೀಂ ಕೋರ್ಟ್ 2014ರಲ್ಲಿ ಹೇಳಿತು” ಎಂದು ಧನ್ಯತೆ ಅರ್ಪಿಸಿದರು.

“ಮೂಲಭೂತವಾದಿಗಳು ಗೊತ್ತಾ? ಈ ಬಾಬಾ ರಾಮ್‌ ದೇವ್‌. ಅದೇ ಪತಂಜಲಿ. ಅಯ್ಯೋ ದೇವರೆ, ಅವರ ಜೊತೆಗೆ ಕೆಲವು ಜನ ಸೇರಿಸಿಕೊಂಡು ಲಿಂಗತ್ವ ಅಲ್ಪಸಂಖ್ಯಾತರ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ದಾವೆಯನ್ನು ಹೂಡಿದರು. ಭಾರತಕ್ಕೆ ಅಂಟು ರೋಗಬಂದಿದೆ, ಮುಟ್ಟಿದ ತಕ್ಷಣ ಸಲಿಂಗ ಕಾಮಿಗಳಾಗುತ್ತಾರೆ, ಲೆಸ್ಬಿಯನ್ ಆಗುತ್ತಾರೆ ಎಂದು ಆರೋಪಿಸಿದರು. ನಾವು ಇದನ್ನು ಒಪ್ಪಲಿಲ್ಲ. ಹೋರಾಟ ಮಾಡಿದೆವು. ಶಾಲೆ, ಕಾಲೇಜಿಗಳಿಗೆ ಬಂದೆವು, ಎಲ್ಲ ಚಳವಳಿಗಳ ಜೊತೆ ಕೂತೆವು. ಆಮೇಲೆ ಕಾನೂನು ಹೋರಾಟ ಮಾಡಿದೆವು. ನಮ್ಮನ್ನು ಅಪರಾಧಿಗಳನ್ನಾಗಿ ಮಾಡುವ ಪ್ರಕ್ರಿಯೆ ನಡೆಯುತ್ತಲೇ ಬಂದಿತ್ತು. ಅಂತಿಮವಾಗಿ ನಾವು ಅಪರಾಧಿಗಳಲ್ಲ ಎಂದು ತೀರ್ಪು ಹೊರಬಂತು” ಎಂದು ತಮ್ಮ ಹೋರಾಟದ ಕ್ಷಣಗಳನ್ನು ಮೆಲುಕು ಹಾಕಿದರು ಅಕ್ಕಯ್‌ ಪದ್ಮಶಾಲಿ.

‘ಸಂವಿಧಾನ ಪೀಠಿಕೆ’ ಒಂದು ಪುಟ್ಟ ಮುನ್ನುಡಿ ಕೃತಿಯನ್ನು ಜಸ್ಟೀಸ್ ಎಚ್.ಎನ್.ನಾಗಮೋಹನ ದಾಸ್‌ ಬಿಡುಗಡೆ ಮಾಡಿದರು.

ಸಂವಿಧಾನದಿಂದಾಗಿ ಸಾಧನೆಗಳಾಗಿವೆ: ಜಸ್ಟೀಸ್ ದಾಸ್‌

ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್.ನಾಗಮೋಹನ ದಾಸ್‌, “ಸಂವಿಧಾನ ಜಾರಿಯಾಗಿ 73 ವರ್ಷಗಳ ಈ ಅವಧಿಯಲ್ಲಿ ಏನೂ ಸಾಧನೆಯಾಗಿಲ್ಲ ಎಂದು ಹೇಳಲಾಗದು. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ 1947ರಲ್ಲಿ 600 ಜನ ರಾಜ ಮಹಾರಾಜರು ಇದ್ದರು. ಎಲ್ಲರನ್ನು ಒಂದುಗೂಡಿಸಿ, ಭಾರತ ರಚನೆಯಾಗಿದ್ದು, ಸಂವಿಧಾನದಿಂದ. ಪಾಳೇಗಾರಿಕೆ ತೊಲಗಿಸಿ, ಪ್ರಜಾಪ್ರಭುತ್ವವನ್ನು ಕಟ್ಟಿದ್ದೇವೆ. ಈ ಪ್ರಜಾಪ್ರಭುತ್ವದಲ್ಲಿ ಎಲ್ಲ ಜನರೂ ಪಾಲ್ಗೊಳ್ಳುತ್ತಿರುವುದಕ್ಕೆ ಕಾರಣ ಸಂವಿಧಾನ” ಎಂದರು.

“ಆಹಾರದಲ್ಲಿ ಸ್ವಾವಲಂಬನೆ ಸಾಧಿಸಿದ್ದೇವೆ. ಶೇ. 80ರಷ್ಟು ಸಾಕ್ಷರತೆ ಸಾಧಿಸಿದ್ದೇವೆ. ಬಡತನ ರೇಖೆಯನ್ನು ಶೇ. 21ಕ್ಕೆ ಇಳಿಸಿದ್ದೇವೆ. ಒಂದಿಷ್ಟು ಮೂಲಸೌಕರ್ಯವನ್ನು ಪಡೆದುಕೊಂಡಿದ್ದೇವೆ. ಸಂವಿಧಾನದಿಂದಾಗಿ ಮಹಿಳೆಯೊಬ್ಬರು ಪ್ರಧಾನಿಯಾದರು. ದಲಿತರೊಬ್ಬರು ರಾಷ್ಟ್ರಪತಿಯಾದರು. ಐಎಎಸ್‌, ಐಪಿಎಸ್, ಐಆರ್‌ಎಸ್‌ಗಳಾಗಿ ಮಹಿಳೆಯರು, ದಲಿತರು ಅಧಿಕಾರ ಹಿಡಿದರು. ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು, ದಲಿತರು ಪ್ರವೇಶಿಸಿದ್ದಾರೆ. ಇದಕ್ಕೆ ಕಾರಣ ಭಾರತದ ಸಂವಿಧಾನ” ಎಂದು ಬಣ್ಣಿಸಿದರು.

ದಸಂಸ ರಾಜ್ಯ ಮುಖಂಡರಾದ ಎನ್‌.ವೆಂಕಟೇಶ್, ಸೇಂಟ್ ಜೋಸೆಫ್ ಕಾಲೇಜಿನ ನಿರ್ದೇಶಕರಾದ ಫಾದರ್ ಜೆರಾಲ್ಡ್ ಡಿ’ಸೌಜ ಎಸ್.ಜೆ., ಪ್ರಕಾಶಕರಾದ ರಾಜಶೇಖರ್‌‌, ಮುಖಂಡರಾದ ಪ್ರಭಾಕರ್‌ ಹಾಜರಿದ್ದರು. ಕಾನೂನು ವಿದ್ಯಾರ್ಥಿ ಪೂರ್ಣಾ ಕಾರ್ಯಕ್ರಮವನ್ನು ನಿರೂಪಿಸಿದರು.


ಇದನ್ನೂ ಓದಿರಿ: ಸಮಾಜವನ್ನು ಬದಲಾಯಿಸುವ ಮುನ್ನ ಯುವಜನರು ತಮ್ಮನ್ನು ಬದಲಾಯಿಸಿಕೊಳ್ಳಬೇಕು- ಕಾಮ್ರೇಡ್ ಪ್ರತಿಭಾ ನಾಯಕ್


ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...

ಮೊದಲ ಪತ್ನಿಗೆ ಮುಸ್ಲಿಂ ಪತಿ ಜೀವನಾಂಶ ನಿರಾಕರಿಸುವಂತಿಲ್ಲ: ಕೇರಳ ಹೈಕೋರ್ಟ್

ಎರಡನೇ ಪತ್ನಿಯ ಮೇಲಿನ ಆರ್ಥಿಕ ಜವಾಬ್ದಾರಿ ಕುರಿತ ಮಹತ್ವದ ತೀರ್ಪಿನಲ್ಲಿ, ಮುಸ್ಲಿಂ ಪುರುಷನು ತನ್ನ ಮೊದಲ ಪತ್ನಿಗೆ ಜೀವನಾಂಶ ಪಾವತಿಸುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. ಎಲ್ಲ ಪತ್ನಿಯರನ್ನು ಸಮಾನವಾಗಿ...

ಆಸ್ಪತ್ರೆಗಳು ಕಡ್ಡಾಯವಾಗಿ ದರಪಟ್ಟಿ ಪ್ರದರ್ಶಿಸಬೇಕು, ಹಣ ಪಾವತಿಸದ ಕಾರಣ ತುರ್ತು ಆರೈಕೆ ನಿರಾಕರಿಸುವಂತಿಲ್ಲ : ಕಾನೂನು ಎತ್ತಿ ಹಿಡಿದ ಹೈಕೋರ್ಟ್

ಕೇರಳ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ಮತ್ತು ನಿಬಂಧನೆಗಳನ್ನು ಎತ್ತಿಹಿಡಿದ ಹೈಕೋರ್ಟ್‌ನ ಏಕ ಸದಸ್ಯ ಪೀಠದ ಆದೇಶದ ವಿರುದ್ಧ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮತ್ತು ಕೇರಳ ಖಾಸಗಿ ಆಸ್ಪತ್ರೆಗಳ ಸಂಘ ಸಲ್ಲಿಸಿದ್ದ ಮೇಲ್ಮನವಿಗಳನ್ನು...

ಎಸ್‌ಐಆರ್‌ನ ನಿಜವಾದ ಉದ್ದೇಶ ಎನ್‌ಆರ್‌ಸಿ : ಮಮತಾ ಬ್ಯಾನರ್ಜಿ

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್‌) ಹಿಂದಿನ ಕೇಂದ್ರ ಸರ್ಕಾರದ ನಿಜವಾದ ಉದ್ದೇಶ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಮಾಡುವುದು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ನವೆಂಬರ್...

ಬೆಂಗಳೂರು ಚಲೋ: ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಸಚಿವ ಮಹದೇವಪ್ಪ: ಸಿಎಂ ಜೊತೆ ಚರ್ಚಿಸುವ ಭರವಸೆ 

ಕೇಂದ್ರ ಸರ್ಕಾರದ ರೈತ, ಕಾರ್ಮಿಕ, ಜನವಿರೋಧಿ ನೀತಿಗಳು ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯ, ನಿರ್ಲಜ್ಜ ಧೋರಣೆಯ ವಿರುದ್ಧ ಸಂಯುಕ್ತ ಹೋರಾಟ ಕರ್ನಾಟಕದ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ‘ಬೆಂಗಳೂರು ಚಲೋ’...

ಛತ್ತೀಸ್‌ಗಢ : ಬಿಜಾಪುರದಲ್ಲಿ 41 ಮಾವೋವಾದಿಗಳು ಶರಣಾಗತಿ

ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಬುಧವಾರ (ನವೆಂಬರ್ 26) 41 ಮಂದಿ ನಕ್ಸಲರು ಶರಣಾಗಿದ್ದು, ಈ ಪೈಕಿ 32 ಮಂದಿಯ ತಲೆಗೆ ಒಟ್ಟು 1.19 ಕೋಟಿ ರೂಪಾಯಿ ಬಹುಮಾನ ಘೋಷಣೆಯಾಗಿತ್ತು ಎಂದು ವರದಿಯಾಗಿದೆ. ಸರ್ಕಾರದ ಹೊಸ...