Homeಕರ್ನಾಟಕಮಹಿಳೆ ತನ್ನ ತಲೆ ಮುಚ್ಚುವುದು, ಮುಚ್ಚದೇ ಇರುವುದು ಅವರ ಆಯ್ಕೆ; ಅದನ್ನು ಪ್ರಶ್ನಿಸದಿರಿ: ಕವಿತಾ ಕೃಷ್ಣನ್‌

ಮಹಿಳೆ ತನ್ನ ತಲೆ ಮುಚ್ಚುವುದು, ಮುಚ್ಚದೇ ಇರುವುದು ಅವರ ಆಯ್ಕೆ; ಅದನ್ನು ಪ್ರಶ್ನಿಸದಿರಿ: ಕವಿತಾ ಕೃಷ್ಣನ್‌

- Advertisement -
- Advertisement -

ಮಹಿಳೆ ತನ್ನ ತಲೆ ಮುಚ್ಚುವುದು, ಮುಚ್ಚದೇ ಇರುವುದು ಅವರ ಆಯ್ಕೆ; ಅದನ್ನು ಪ್ರಶ್ನಿಸದಿರಿ ಎಂದು ಸಿಪಿಐ(ಎಂಎಲ್‌) ಪಾಲಿಟ್‌ಬ್ಯೂರೋ ಸದಸ್ಯೆ ಕವಿತಾ ಕೃಷ್ಣನ್‌‌ ಶುಕ್ರವಾರ ಹೇಳಿದರು. ಸರ್ಕಾರದ ಯಾವುದೆ ಕಾಯ್ದೆ ಕಾನೂನಿನ ಅಗತ್ಯವೇ ಇಲ್ಲದೆ ಮಹಿಳೆಯರ ಸರಾಸರಿ ಮದುವೆಯ ವಯಸ್ಸು 19ಕ್ಕೆ ಏರಿದೆ. ಆದರೆ ಸರ್ಕಾರವು ಮಹಿಳೆಯರೇ ತಮ್ಮ ಸಂಗಾತಿಯನ್ನು ಆಯ್ಕೆ ಮಾಡುವುದನ್ನು ತಪ್ಪಿಸಲು ಬೇಕಾಗಿ, ಹುಡುಗಿಯರ ಮದುವೆಯ ವಯಸ್ಸನ್ನು 18 ರಿಂದ 21 ಕ್ಕೆ ಏರಿಸಿದೆ ಎಂದು ಅವರು ಆರೋಪಿಸಿದರು.

ಅವರು ದಾವಣಗೆರೆಯ ತಾಜ್ ಪ್ಯಾಲೆಸ್‌ನಲ್ಲಿ ಎರಡು ದಿನಗಳ ಕಾಲ ನಡೆಯುತ್ತಿರು 8ನೇ ಮೇ ಸಾಹಿತ್ಯ ಮೇಳದಲ್ಲಿ ಮಾತನಾಡುತ್ತಿದ್ದರು. “ರಾಜ್ಯದಲ್ಲಿ ಅಂತರ್ಜಾತೀಯ ಮತ್ತು ಅಂತಧರ್ಮೀಯ ಮದುವೆಗಳನ್ನು ತಡೆಯಬೇಕಾಗಿ ಮತಾಂತರ ವಿರೋಧಿ ಕಾನೂನನ್ನು ತರಲಾಯಿತು” ಎಂದು ಅವರು ಆರೋಪಿಸಿದ್ದು, ಮಕ್ಕಳು ಬೇಗ ಮದುವೆ ಆಗರದೆಂದಾದರೆ ಶಿಕ್ಷಣ ಸಂಸ್ಥೆಗಳನ್ನು ಸರಿಯಾಗಿ ಒದಗಿಸಿ. ಅದನ್ನು ಬಿಟ್ಟು ಕಾಯ್ದೆ ರಚಿಸುವುದು ಯಾಕೆ? ಎಂದು ಅವರು ಪ್ರಶ್ನಿಸಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಸಾಹಿತ್ಯ ಹಬ್ಬದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಕವಿತಾ ಕೃಷ್ಣನ್ ಅವರು, “ಇಂದು ಸಾಹಿತ್ಯ ಹಬ್ಬಕ್ಕೆ ಒಂದು ಶುಭ ಸುದ್ದಿ ಇದೆ. ಮಹಿಳೆಯೊಬ್ಬರು ಹಿಂದಿಯಲ್ಲಿ ಬರೆದ ‘ರೇತ್ ಸಮಾಧಿ’ ಎಂಬ ಕಾದಂಬರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿಯಾದ ಬೂಕರ್‌‌ ಪ್ರಶಸ್ತಿ ಘೋಷಣೆಯಾಗಿದೆ. ಈ ಕಾದಂಬರಿಯ ಬಗ್ಗೆ ನಿಮಗೆ ತಿಳಿಸಿದರೆ ನೀವು ಇನ್ನೂ ಖುಷಿ ಪಡುತ್ತೀರಿ” ಎಂದು ಹೇಳಿದರು.

ಇದನ್ನೂ ಓದಿ: ಭಾರತದಲ್ಲಿ ಮಾತಿನ ಸ್ವಾತಂತ್ಯ್ರ ಇದೆ; ಮಾತಿನ ನಂತರ ಸ್ವಾತಂತ್ಯ್ರ ಇಲ್ಲ: ಮೇ ಸಾಹಿತ್ಯ ಮೇಳದಲ್ಲಿ ಹಿರಿಯ ಪತ್ರಕರ್ತ ಪಿ.ಸಾಯಿನಾಥ್‌ ಕಳವಳ

“ನೀವು ಮಾತ್ರ ಅಲ್ಲ, ಸಂಘಪರಿವಾರ ಮತ್ತು ಬಿಜೆಪಿಯವರೂ ಕೂಡಾ ಖುಷಿಯಾಗುತ್ತಾರೆ. ಯಾಕೆಂದರೆ, ಈ ಕಾದಂಬರಿಯ ಕತೆ ಬಹಳ ಸುಂದರವಾದ ಕತೆಯಾಗಿದ್ದು, ಅದರಲ್ಲಿ 80 ವರ್ಷ ವೃದ್ಧ ಮಹಿಳೆಯ ಬಗ್ಗೆ ಬರೆದಿದ್ದಾರೆ. ಅವರ ಪತಿ ಸತ್ತು ಹೋಗಿದ್ದು, ಅದರಿಂದಾಗಿ ಅವರು ತುಂಬಾ ದುಃಖದಲ್ಲಿ ಇರುತ್ತಾರೆ. ಅವರು ತಮ್ಮ ಬಾಲ್ಯವನ್ನು ನೆನಪು ಮಾಡಿಕೊಳ್ಳುತ್ತಾರೆ. ಅವರು ತನ್ನ ಬಾಲ್ಯವನ್ನು ಪಾಕಿಸ್ತಾನದಲ್ಲಿ ಕಳೆದಿದ್ದರು. ಆವೇಳೆ ಭಾರತ-ಪಾಕಿಸ್ತಾನ ವಿಭಜನೆಗೊಂಡಿರಲಿಲ್ಲ”

“ಈ ಮಹಿಳೆ ಶೀಘ್ರವಾಗಿ ತಮ್ಮ ಖಿನ್ನತೆಯಿಂದ ಹೊರಬರುತ್ತಾರೆ. ಅವರ ಮಕ್ಕಳ ಜೊತೆಗೆ ಮತ್ತೆ ಹೊಸದಾಗಿ ಸಂಬಂಧ ಕಟ್ಟಿಕೊಳ್ಳುತ್ತಾರೆ. ಅವರು ಹೇಗೆ ಮತ್ತೇ ತನ್ನ ಮಗಳೊಂದಿಗೆ ಪಾಕಿಸ್ತಾನಕ್ಕೆ ಹೋಗುತ್ತಾರೆ. ಅಲ್ಲಿ ಹೋಗಿ ಅವರು ಹೇಗೆ ತಮ್ಮ ಬದುಕನ್ನು ಹೊಸದಾಗಿ ಕಟ್ಟಿಕೊಳ್ಳುತ್ತಾರೆ ಎಂಬುವುದು ಕತೆ”

“ನಾವು ಭಾರತಕ್ಕಾಗಿ ಕೆಲಸ ಮಾಡುತ್ತೇವೆ. ಇಲ್ಲಿನ ಜನರು ಖುಷಿಯ ಜೀವನ ನಡೆಸುಲು ಬೇಕಾಗಿ ಕೆಲಸ ಮಾಡುತ್ತೇವೆ. ಆದರೆ ಸಂಘಪರಿವಾರದವರು ನಮ್ಮನ್ನು ಪಾಕಿಸ್ತಾನಕ್ಕೆ ಹೋಗಿ ಎಂದು ಹೇಳುತ್ತಾರೆ. ಆದರೆ ಬೂಕರ್‌ ಪ್ರಶಸ್ತಿ ಸಿಕ್ಕಿದ ಈ ಕಾದಂಬರಿ ಪಾಕಿಸ್ತಾನಕ್ಕೆ ತೆರಳಿದ ಮಹಿಳೆಯ ಬಗ್ಗೆ ಕತೆ ಹೇಳುತ್ತದೆ. ಇದು ಸಂಘಪರಿವಾರಕ್ಕೆ ಖುಷಿಯ ಮಾತಲ್ಲವೆ? ಇಷ್ಟು ಸುಂದರವಾದ ಕತೆಗೆ ಬೂಕರ್‌ ಪ್ರಶಸ್ತಿ ಸಿಕ್ಕಿದೆ. ಪಾಕಿಸ್ತಾನಕ್ಕೆ ಹೋಗುವುದು ಕೆಟ್ಟ ಕೆಲಸವೇ? ಒಬ್ಬ ಮಹಿಳೆ ಅಲ್ಲಿ ಹೋಗಿ ಖುಷಿಯನ್ನು ಗಳಿಸುತ್ತಾರೆಂದರೆ ಒಳ್ಳೆಯ ವಿಷಯವೆ ಅಲ್ಲವೆ?”

ಇದನ್ನೂ ಓದಿ: ಫ್ಯಾಕ್ಟ್‌‌ಚೆಕ್‌: ತಾಲಿಬಾನ್‌ಗೆ ಥ್ಯಾಂಕ್ಸ್‌ ಹೇಳಿದ ಈ ಟ್ವಿಟರ್‌ ಅಕೌಂಟ್‌ ದಿಟ್ಟ ವಿದ್ಯಾರ್ಥಿನಿ ಮುಸ್ಕಾನ್‌ ಅವರದ್ದಲ್ಲ, ಅದು ನಕಲಿ

ಮುಸ್ಲಿಂ ಸಮುದಾಯದ ಆತಂಕ ಅಭದ್ರತೆಯಲ್ಲಿದೆ

“ಈ ಸಮಯ ನಮ್ಮ ದೇಶದ ಎಲ್ಲಾ ಜಾಗದಲ್ಲಿ ಮುಸ್ಲಿಂ ಸಮುದಾಯದ ಜನರ ಮೇಲೆ ದಾಳಿಗಳಾಗುತ್ತಿವೆ. ಸಮುದಾಯ ಆತಂಕ, ಅಭದ್ರತೆಯಲ್ಲಿದೆ. ಮುಸ್ಲಿಂ ಸಮುದಾಯದ ಮಕ್ಕಳಿಗೆ ಅವರ ಹೆತ್ತವರು, ‘ಯಾರಾದರೂ ಏನಾದರೂ ಅಂದರೆ ಅವರಿಗೆ ಪ್ರತಿಕ್ರಿಯೆ ನೀಡದಿರಿ, ಕೋಪ ಮಾಡಿಕೊಳ್ಳಬೇಡಿ. ಯಾಕೆಂದರೆ ಇದರಿಂದ ನಿಮಗೆ ಅಪಾಯ’ ಎಂದು ಹೇಳುತ್ತಿದ್ದಾರೆ. ಇದು ಎಷ್ಟೊಂದು ಕೆಟ್ಟ ವಿಷಯ”

“ಇಂತಹ ವಿಷಮ ಪರಿಸ್ಥಿತಿಯಲ್ಲಿ ಕತೆ-ಕವಿತೆಗಳು ಏನು ಕೆಲಸ ಮಾಡುತ್ತದೆ ಎಂದು ಕೆಲವರು ಕೇಳುತ್ತಾರೆ. ಆದರೆ ನನಗೆ ಅನಿಸುತ್ತದೆ ಕತೆ-ಕವಿತೆಗಳಿಗೆ ಭಾರಿ ದೊಡ್ಡ ಕೆಲಸವಿದ್ದು, ಯಾಕೆಂದರೆ ಈ ಕತೆ-ಕವಿತೆಗಳು ಮುಲಾಮು ಹಚ್ಚಬಹುದೆಂದು ನಾನು ಭಾವಿಸಿದ್ದೇನೆ. ಅದಕ್ಕಿಂತಲೂ ದೊಡ್ಡ ಕೆಲಸವಿದ್ದು, ಅದರ ಬಗ್ಗೆ ನಾನು ಯೋಚಿಸುತ್ತಿದ್ದೇನೆ”

“ಈಗಿನ ದಿನಗಳಲ್ಲಿ ಕೇವಲ ಭಾರತವಲ್ಲದೆ, ಇಡೀ ವಿಶ್ವದಲ್ಲಿ ಸರ್ವಾಧಿಕಾರಿ ಆಡಳಿತವಿದೆ. ರಷ್ಯಾ ಉಕ್ರೇನ್‌ ಮೇಲೆ ದಾಳಿ ಮಾಡುತ್ತಿದೆ. ರಷ್ಯಾ ಬೇರೆ ದೇಶಗಳ ಮೇಲೆ ದಾಳಿ ಮಾಡುತ್ತಿರುವುದು ಇದು ಮೊದಲನೇ ಬಾರಿ ಅಲ್ಲ. ಈ ಹಿಂದೆ ಕೂಡಾ ಕ್ರಿಮಿಯಾ ಮೇಲೆ ದಾಳಿ ಮಾಡಿ ಅದನ್ನು ವಶಪಡಿಸಿಕೊಂಡಿತ್ತು. ಅದಕ್ಕಿಂತಲೂ ಮುಂಚೆ ರಷ್ಯಾ ಚೆಚೆನ್ಯಾದ ಮೇಲೆ ದಾಳಿ ಮಾಡಿತ್ತು. ಸಿರಿಯಾದಲ್ಲೂ ದಾಳಿ ಮಾಡಿದ್ದು ರಷ್ಯಾದ ಬಾಂಬ್‌ಗಳೇ ಆಗಿದ್ದವು. ಈಗ ಉಕ್ರೇನ್ ಮೇಲೆ ದಾಳಿ ಮಾಡಿ ಅದನ್ನು ದೇಶವೇ ಅಲ್ಲ, ಇದು ಅಖಂಡ ರಷ್ಯಾದ ಭಾಗ ಎನ್ನುತ್ತಿವೆ”

“ಇದಲ್ಲವನ್ನೂ ನೋಡಿಕೊಂಡು ನಮ್ಮ ದೇಶದ ಸಂಘಪರಿವಾರದ ಜನರಿಗೆ ಸಂತೋಷವಾಗಿದೆ. ವ್ಹಾ, ನಾವು ನಿಮ್ಮಂತೆ ಅಖಂಡಾ ಭಾರತದ ರಚನೆ ಮಾಡುತ್ತೇವೆ ಅನ್ನುತ್ತಿದ್ದಾರೆ. ಪರಸ್ಪರರ ಬಗ್ಗೆ ಪ್ರೀತಿ, ವಿಶ್ವಾಸ, ಒಬ್ಬೊಬ್ಬರ ಭಾಷೆ, ಸಂಸ್ಕೃತಿಯ ಕುರಿತ ಒಳ್ಳೆಯದನ್ನು ಯೋಚಿಸುವುದು ಇದೆಲ್ಲವನ್ನೂ ಮುಗಿಸಲು ನೋಡುತ್ತಿದ್ದಾರೆ. ನಿಮಗೆ ಏನಾದರೂ ನೋವಾಗುತ್ತಿದ್ದರೆ ಅದನ್ನು ನಾನು ಅನುಭವಿಸಲು ಸಾಧ್ಯವಾಗುವುದು, ಇದೆಲ್ಲ ಇಂದು ಕಾಣೆಯಾಗುತ್ತಿದೆ”

“ಹಿಂದೆಯೂ ಸತ್ಯ ಮತ್ತು ಮಿಥ್ಯೆಗಳಿದ್ದವು, ಆದರೂ ಮೊದಲು ಎಲ್ಲರಿಗೂ ಒಂದಷ್ಟಾದರೂ ಸತ್ಯದ ಅರಿವಾಗುತ್ತಿತ್ತು. ಈಗ ಎಲ್ಲರೂ ಅವರ ಇಚ್ಛೆಯನ್ನೇ ಸತ್ಯವೆಂದು ನಂಬಬೇಕಾಗುತ್ತಿದೆ”

ಇದನ್ನೂ ಓದಿ: ಫೀಚರ್‌ ಫೋಟೊಗ್ರಫಿಗಾಗಿ ಪ್ರತಿಷ್ಠಿತ ‘ಪುಲಿಟ್ಜರ್‌‌-2022’ ಪ್ರಶಸ್ತಿ ಗೆದ್ದ ಭಾರತೀಯ ಪತ್ರಕರ್ತರ ಪರಿಚಯ ಮತ್ತು ಫೊಟೊಗಳು ಹೀಗಿವೆ

ತಮ್ಮ ಕುಟುಂಬದವರೇ ಸತ್ತು ಗಂಗಾದಲ್ಲಿ ತೇಲಿ ಹೋದರೂ ಎಲ್ಲವೂ ಚೆನ್ನಾಗಿದೆ ಎನ್ನುತ್ತಿದ್ದಾರೆ

“ಕೋವಿಡ್ ಸಂದರ್ಭದಲ್ಲಿ ಭಾರತದಲ್ಲಿ 50 ಲಕ್ಷಕ್ಕಿಂತ ಹೆಚ್ಚು ಸಾವು ನೋವು ಸಂಭವಿಸಿದೆ. ಆದರೆ ಸರ್ಕಾರವು ಅದನ್ನು 4 ಲಕ್ಷ ಎಂದು ಹೇಳಲು ಬಯಸುತ್ತಿದೆ. ಸರ್ಕಾರದ ಸಮರ್ಥನೆ ಮಾಡುವ ಜನರ ಕುಟುಂಬದ ಜನರೂ ಸಾವಿಗೀಡಾಗಿದ್ದು, ಅವರ ಜನರಿಗೂ ಆಮ್ಲಜನಕ ಸಿಗಲಿಲ್ಲ, ಅವರೂ ಗಂಗಾನದಿಯಲ್ಲಿ ಹರಿದು ಹೋದರು. ಆದರೂ ಅವರು ಹೇಳುವುದು ಎಲ್ಲವೂ ಚೆನ್ನಾಗಿದೆ, ಎಲ್ಲರಿಗೂ ಆಮ್ಲಜನಕ ಸಿಗುತ್ತಿದೆ ಎಂದಾಗಿದೆ’’

“ಯಾಕೆ ಹೀಗಾಗುತ್ತಿದೆ? ನೀವು ಕಣ್ಣೆದುರಿಗೆ ಇರುವುದನ್ನು ಬಿಟ್ಟು, ಸರ್ವಾಧಿಕಾರಿ ಏನು ಹೇಳುತ್ತಿರುತ್ತಾನೋ ಅದನ್ನೆ ನಂಬುತ್ತಿದ್ದೀರಿ. ಅದನ್ನು ನೇರವಾಗಿ ಹೇಳಬಹುದು ಅಥವಾ ವಾಟ್ಸಾಪ್ ಮೆಸೇಜ್‌ ಮೂಲಕ ಹೇಳಬಹುದು ಅಥವಾ ತನ್ನದೇ ಆಗಿರುವ ಮಾಧ್ಯಮಗಳ ಮೂಲಕ ಹೇಳಬಹುದು. ಈ ಸರ್ವಾಧಿಕಾರಿ ನೀವು ಏನು ಯೋಚನೆ ಮಾಡಬೇಕು, ಹೇಗೆ ಯೋಚನೆ ಮಾಡಬೇಕು ಎಂದು ಹೇಳುತ್ತಿದ್ದಾನೆ”

“ಆದರೆ ನಿಮಗೆ ಗೊತ್ತು ಇದು ಸುಳ್ಳು ಎಂದು, ಆದರೂ ನೀವು ಸರ್ವಾಧಿಕಾರಿಯ ಮಾತನ್ನು ಕೇಳುತ್ತಿದ್ದೀರಿ. ಈ ಸುಳ್ಳನ್ನೇ ಹೇಳುವುದೇ ನಿಮ್ಮ ಸತ್ಯ ಎಂದು ಭಾವಿಸಿದ್ದೀರಿ. ಇದು ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲ, ಇಡೀ ವಿಶ್ವದಲ್ಲಿ ನಡೆಯುತ್ತಿದೆ”

“ನಾಝೀಗಳನ್ನು ಮುಗಿಸಲು ಬೇಕಾಗಿ ಉಕ್ರೇನ್ ಮೇಲೆ ದಾಳಿ ಮಾಡುತ್ತಿದ್ದೇನೆ ಎಂದು ಪುಟಿನ್ ಹೇಳುತ್ತಿದ್ದಾರೆ. ಆದರೆ ಉಕ್ರೇನ್‌ ರಷ್ಯಾದ ಭಾಗವಾಗಿದ್ದಾಗ ರಷ್ಯಾಕ್ಕಾಗಿ ಹುತಾತ್ಮರಾದವರು ಹೆಚ್ಚಾಗಿ ಉಕ್ರೇನ್‌ನವರಾಗಿದ್ದರು. ಅವರಿಗೇ ಪುಟಿನ್ ಈಗ ಹಿಟ್ಲರ್‌ವಾದಿಗಳು ಎನ್ನುತ್ತಿದ್ದಾರೆ. ಅದು ಹೇಗೆ ಸಾಧ್ಯ, ವಾಸ್ತವದಲ್ಲಿ ಪುಟಿನ್ ಅವರೇ ಹಿಟ್ಲರ್‌ವಾದಿ ಆಗಿದ್ದಾರೆ. ಹಿಟ್ಲರ್‌ ಕೂಡಾ ಇದನ್ನೇ ಮಾಡಿದ್ದು. ಅದನ್ನೇ ಪುಟಿನ್ ಮಾಡುತ್ತಿದ್ದಾರೆ”

ಇದನ್ನೂ ಓದಿ: ಗೌರಿ ಲಂಕೇಶ್‌ ಹತ್ಯೆ ಪ್ರಕರಣ: ಪ್ರತಿ ತಿಂಗಳೂ ಒಂದು ವಾರ ಪೂರ್ತಿ ವಿಚಾರಣೆ ನಿಗದಿ, ಜುಲೈ 4ರಿಂದ ಆರಂಭ

ಅತ್ಯಾಚಾರಿಗಳ ಪರ ಮೆರವಣಿಗೆ ಮಾಡಿದ ಪಕ್ಷವಿದ್ದರೆ ಅದು ಬಿಜೆಪಿ

“ಮಹಿಳೆಯರ ವಿಚಾರದಲ್ಲೂ ಇದೇ ಆಗುತ್ತಿದೆ. ಮೋದಿ ಸರ್ಕಾರ ಪ್ರತಿ ಬಾರಿ ಅತ್ಯಾಚಾರಿಗಳ ಪರವಾಗಿ ನಿಂತಿದೆ. ಅತ್ಯಾಚಾರಿಗಳ ಪರವಾಗಿ ನಗರದಲ್ಲಿ ಮೆರವಣಿಗೆ ಮಾಡಿದ ಪಕ್ಷವಿದ್ದರೆ ಅದು ಬಿಜೆಪಿ ಮಾತ್ರ. ಕಾಶ್ಮೀರದಲ್ಲಿ ಮತ್ತು ಯುಪಿಯಲ್ಲಿ ಬಿಜೆಪಿ ಅದನ್ನೇ ಮಾಡಿದ್ದು. ಆದರೂ ಅವರು ನಾವು ಮಹಿಳೆಯರ ಪರ ಅನ್ನುತ್ತಾರೆ. ಏನು ಕೆಲಸ ಮಾಡಿದ್ದಾರೆ ಅವರು? ”

ಕೋರ್ಟ್‌ ತ್ರಿಪಲ್‌ ತಲಾಖ್‌ ವಿರುದ್ದ ಕಾನೂನು ಮಾಡಿಲ್ಲ ಎಂದಿಲ್ಲ

“ನಾವು ತ್ರಿಪಲ್ ತಲಾಖ್ ವಿರುದ್ಧ ಕಾನೂನು ಮಾಡಿದ್ದೇವೆ ಎಂದು ಅವರು ಹೇಳುತ್ತಾರೆ. ಇದರ ಬಗ್ಗೆ ಮುಸ್ಲಿಂ ಮಹಿಳೆಯರು ಕೋರ್ಟಿಗೆ ಹೋದಾಗ, ಕೋರ್ಟು ಕೂಡಾ ಹೌದು ಮೂರು ಬಾರಿ ತಲಾಖ್ ಹೇಳಿಬಿಟ್ಟರೆ ವಿಚ್ಛೇದನ ಆಗುವುದಿಲ್ಲ, ಇದರಲ್ಲಿ ಸ್ಪಷ್ಟತೆ ಇರಬೇಕು ಎಂದಿತು”

“ಆದರೆ ಕೋರ್ಟು ಕಾನೂನು ಮಾಡಿ ಎನ್ನಲಿಲ್ಲ, ಇವರೇ ಕಾನೂನು ಮಾಡಿದರು. ಈ ವೇಳೆ ಮಹಿಳೆಯರು ಹೇಳಿದರು, ಈಗಾಗಲೇ ಮುಸ್ಲಿಂ ಪರ್ಸನಲ್ ಕಾಯ್ದೆಯಲ್ಲಿ ಸರಿಯಾದ ವಿಧಾನ ಇದೆ ಎಂದು. ಆದರೂ ಕಾನೂನು ಮಾಡಿದರು”

ಪ್ರಧಾನ ಮಂತ್ರಿಗಳೇ ಪತ್ನಿಯನ್ನು ಬಿಟ್ಟಿದ್ದಾರೆ, ಅವರಿಗೆ ಇಲ್ಲದ ಶಿಕ್ಷೆ ಮುಸ್ಲಿಂ ಗಂಡಸರಿಗೆ ಮಾತ್ರ ಏಕೆ?

“ಈ ಕಾನೂನಿನ ಪ್ರಕಾರ ಪ್ರಕಾರ ಯಾರೇ ಮೂರನೇ ವ್ಯಕ್ತಿ ಆಪಾದನೆ ಮಾಡಿದರೂ ತಲಾಖ್ ನೀಡಿದ್ದಕ್ಕೆ ಮುಸ್ಲಿಂ ಗಂಡಸು ಜೈಲಿಗೆ ಹೋಗುತ್ತಾರೆ. ಅನೇಕ ಗಂಡಸರು ಮಹಿಳೆಯರನ್ನು ಹಾಗೇ ತಿರಸ್ಕರಿಸಿ ಹೋಗಿ ಬಿಡುವುದುಂಟು, ಆದರೆ ಅವರು ಯಾರೂ ಜೈಲಿಗೆ ಹೋಗುತ್ತಿಲ್ಲ. ಸ್ವತಃ ಪ್ರಧಾನ ಮಂತ್ರಿಗಳೇ ಪತ್ನಿಯನ್ನು ಬಿಟ್ಟಿದ್ದಾರೆ, ಅವರಿಗೆ ಇಲ್ಲದ ಶಿಕ್ಷೆ ಒಂದು ಸಮುದಾಯದ ಗಂಡಸರಿಗೆ ಮಾತ್ರ ಏಕೆ?”

ಇದನ್ನೂ ಓದಿ: ಈ ದೇಶದ ಬಹುಜನರಿಗೆ ನ್ಯಾಯ ದೊರಕುತ್ತಿಲ್ಲ: ಮೇ ಸಾಹಿತ್ಯ ಮೇಳದಲ್ಲಿ ಜಸ್ಟೀಸ್ ಕೆ.ಚಂದ್ರು ಅಭಿಮತ

“ಹೀಗೆಯೇ ಹೆಣ್ಣುಮಕ್ಕಳ ಮದುವೆಯ ವಯಸ್ಸನ್ನು 21ಕ್ಕೆ ಏರಿಸಿ ಹುಡುಗರಿಗೆ ಸಮಾನ ಮಾಡಿದ್ದು. ನಮ್ಮ ಅನೇಕ ಸ್ನೇಹಿತರೂ ಇದರಲ್ಲಿ ಗೊಂದಲಕ್ಕೊಳಗಾದರು. ಹೆಣ್ಣು ಮಕ್ಕಳು ಬೇಗ ಮದುವೆಯಾಗಲಿ ಎಂದು ನಾವೂ ಬಯಸುವುದಿಲ್ಲ”

“18 ವರ್ಷಕ್ಕೆ ಮತ ಹಾಕುವ ಹಕ್ಕು ಸಿಗುತ್ತದೆ, ಅವರು ವಯಸ್ಕರೆನಿಸುತ್ತಾರೆ. ಅವರು ಎಂಪಿ, ಎಂಎಲ್‌ಎ ಆರಿಸಬಹದು, ತಮ್ಮ ಬಾಳಸಂಗಾತಿಯ ಆಯ್ಕೆ ಮಾತ್ರ ಏಕೆ ಮಾಡಬಾರದು? ಈಗಾಗಲೇ ಸರ್ಕಾರದ ಯಾವುದೇ ಕಾನೂನು ಕಾಯ್ದೆಯ ಅಗತ್ಯವಿಲ್ಲದೆ ಮಹಿಳೆಯರ ಸರಾಸರಿ ಮದುವೆಯ ವಯಸ್ಸು 19ಕ್ಕೆ ಏರಿದೆ”

“ಮಕ್ಕಳು ಬೇಗ ಮದುವೆ ಆಗಬಾರದೆಂದಾದರೆ ಶಿಕ್ಷಣ ಸಂಸ್ಥೆಗಳನ್ನು ಸರಿಯಾಗಿ ಒದಗಿಸಿ. ಅದನ್ನು ಬಿಟ್ಟು ಕಾಯ್ದೆ ರಚಿಸುವುದು ಯಾಕೆ? ರಾಜ್ಯದಲ್ಲಿ ಅಂತರ್ಜಾತೀಯ ಮತ್ತು ಅಂತಧರ್ಮೀಯ ಮದುವೆಗಳನ್ನು ತಡೆಯಬೇಕಾಗಿ ಮತಾಂತರ ವಿರೋಧಿ ಕಾನೂನನ್ನು ತರಲಾಯಿತು”

ಅಂತಧರ್ಮೀಯ ಮದುವೆ ಮಾಡಿಕೊಂಡರೆ ಅವರನ್ನು ಜೈಲಿಗೆ ಹಾಕಿ ಗರ್ಭಪಾತ ಮಾಡಿಸುತ್ತಾರೆ

“ಉತ್ತರ ಪ್ರದೇಶದಲ್ಲಿ ಮತಾಂತರ ನಿಷೇಧ ಕಾಯ್ದೆ ತಂದಾಗ ನಡೆದ ಒಂದು ಘಟನೆ ನಡೆದಿತ್ತು. ಉತ್ತರಾಖಂಡದ ಮುಸ್ಲಿಂ ಯುವಕನೊಂದಿಗೆ 19 ವರ್ಷದ ಯುಪಿಯ ಯುವತಿ ಮದುವೆ ಮಾಡಿಕೊಂಡಳು. ಅವಳು ತಾನು ವಯಸ್ಕಳು ಎಂದು ಹೇಳಿದರೂ ಬಿಡದೆ ಆಕೆಯ ಗಂಡ ಮತ್ತು ಕುಟುಂಬವನ್ನು ಜೈಲಿಗೆ ಹಾಕಿ ಈಕೆಗೆ ಒತ್ತಾಯದಿಂದ ಗರ್ಭಪಾತ ಮಾಡಿಸಿದರು. ಆಕೆಗೆ ಚಿಕಿತ್ಸೆ ನಾವು ಕೊಡಿಸಬೇಕಾಯಿತು”

“ಅಂತಧರ್ಮೀಯ ಮದುವೆ ಮಾಡಿಕೊಂಡರೆ ಅವರನ್ನು ಜೈಲಿಗೆ ಹಾಕಿ ಗರ್ಭಪಾತ ಮಾಡಿಸುತ್ತಾರೆ. ಅದಕ್ಕಾಗಿ ಈ ಮತಾಂತರ ವಿರೂಧಿ ಕಾನೂನು. ನೀವು ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಹಾಸ್ಟೆಲ್, ಉದ್ಯೋಗ ಇತ್ಯಾದಿ ಕೊಡಿ. ಮಕ್ಕಳು ನಿಧಾನವಾಗಿ ಮದುವೆಯಾಗುತ್ತಾರೆ. ಆದರೆ ಅದೇನ್ನು ಏನೂ ಕೊಡದೆ ಈಗ ಅವರ ಒಂದು ಅವಕಾಶವನ್ನೂ ಕಿತ್ತುಕೊಳ್ಳಲಾಗುತ್ತಿದೆ”

ಇದನ್ನೂ ಓದಿ: ಫ್ಯಾಸಿಸಂ ವಿರುದ್ಧದ ಹೋರಾಟದಲ್ಲಿ ಎದುರಿಸಬೇಕಾದ ವಿಫಲತೆಗಳು – ಕವಿತಾ ಕೃಷ್ಣನ್

“ಇವರು ಮಾಡುತ್ತಿರುವುದೆಲ್ಲ ಮಹಿಳಾ ವಿರೋಧಿ ಕೆಲಸ. ಆದರೆ ಜನರ ನಡುವೆ ಸಂದೇಶ ಹೋಗುತ್ತಿರುವುದು ಮಹಿಳಾ ಪರ ಸರ್ಕಾರ ಎಂದು. ಹಿಜಾಬ್ ವಿಚಾರದಲ್ಲಿ ಸರ್ಕಾರ ಹೆಣ್ಣುಮಕ್ಕಳಿಗೆ ಮುಕ್ತಿ ಕೊಡಿಸಿದೆ ಎಂದು ಸಾಮಾನ್ಯ ಜನರೂ ಕೂಡಾ ಭಾವಿಸಿದ್ದಾರೆ. ನಾನು ಅವರನ್ನು ಕೇಳಿದೆ ಪ್ರತಿಭಾ ಪಾಟೀಲ್, ಇಂದಿರಾ ಗಾಂಧಿ ಅವರುಗಳು ತಲೆ ಮುಚ್ಚಿಕೊಳ್ಳದೆ ಭಾಷಣ ಮಾಡುತ್ತಿರುವ ಒಂದೇ ಫೋಟೋ ತೊರಿಸಿ ಎಂದು. ಅವರು ಯಾಕೆ ಸೆರಗು ತಲೆಮೇಲೆ ಧರಿಸುತ್ತಿದ್ದರು ಎಂದು ನಾವು ಅವರನ್ನು ಕೇಳುವುದಿಲ್ಲ, ಅವರಿಗೆ ಕಾರಣಗಳಿರಬಹುದು”

“ದಯವಿಟ್ಟು ಮಹಿಳೆಯರನ್ನು ಯಾಕೆ ಅವರು ಇದೇ ಬಟ್ಟೆ ಧರಿಸಿದ್ದಾರೆ ಎಂದು ದಯಮಾಡಿ ಕೇಳಲೇಬೇಡಿ. ಅವರು ಶಿಕ್ಷಣ ಪಡೆಯಲು ಹಿಜಾಬ್ ಧರಿಸುವುದು ಅಥವಾ ಧರಿಸದಿರುವುದು ಯಾಕೆ ಕಾರಣವಾಗಬೇಕು?
ಆಫ್ಘಾನಿಸ್ಥಾನದಲ್ಲಿ ಮಹಿಳಾ ಟಿವಿ ಆಂಕರ್‌ಗಳು ಪೂರ್ತಿ ಮುಖ ಮುಚ್ಚಿ ಕಾಣಿಸಿ ಕೊಳ್ಳಬೇಕೆಂದು ತಾಲಿಬಾನ್ ಸರ್ಕಾರ ಆದೇಶಿಸಿದಾಗ, ಇಡೀ ಪುರುಷ ಆಂಕರ್‌ಗಳ ಬಳಗ ಕಾನೂನು ಬದಲಾಗುವವರೆಗೂ ತಾವೂ ಮುಖ ಮುಚ್ಚಿ ಮಹಿಳೆಯರ ಪರವಾಗಿ ನಿಂತರು. ಹಾಗೆಯೆ ಮಹಿಳೆಯರ ಆಯ್ಕೆಯನ್ನು ಗೌರವಿಸಿ, ಅವರನ್ನು ಬೆಂಬಲಿಸಿ”

“ಇಂದು ನಾವೆಲ್ಲ ಇಲ್ಲಿ ಸ್ವಲ್ಪ ಸಮಯದ ಮೊದಲು ಇಂಕ್ವಿಲಾಬ್ ಜಿಂದಾಬಾದ್ ಎಂಬ ಘೋಷಣೆ ಕೂಗಿದೆವು. ನಮ್ಮ ಸ್ನೇಹಿತರಾದ ಉಮರ್ ಖಾಲಿದ್ ಇಂದು ಜೈಲಿನಲ್ಲಿದ್ದಾರೆ. ಆದರೆ ಕೋರ್ಟಿನಲ್ಲಿ ನ್ಯಾಯಾಧೀಶರು ಕೇಳುತ್ತಾರೆ, ಯಾಕೆ ಈ ಇಂಕ್ವಿಲಾಬ್ ಘೋಷಣೆ ಘೋಷಣೆ ಎಂದು. ಅದು ಸ್ವಾತಂತ್ಯ್ರ ಸಂಗ್ರಾಮದ ಸಮಯದ ಘೋಷಣೆ. ಮೋದಿಯವರ ಭಾಷಣವನ್ನು ಜುಮ್ಲಾ ಎಂದದ್ದು ಅಮಿತ್ ಶಾ. ಅದನ್ನು ನೆನಪಿಸಿದ್ದು ಉಮರ್‌ ಖಾಲಿದ್‌ ಅವರ ತಪ್ಪಾಯಿತು”

ಇದನ್ನೂ ಓದಿ: ಸಿಂಧೂರ ಧರಿಸುವುದು ನನ್ನ ಆಯ್ಕೆ, ಹಿಜಾಬ್ ಧರಿಸುವುದು ಮುಸ್ಕಾನ್ ಆಯ್ಕೆ: ’ಹಮ್ ಸಬ್ ಹಿಂದೂಸ್ತಾನಿ’ ಎಂದ ತೆಲಂಗಾಣ ಸಿಎಂ ಪುತ್ತಿ ಕವಿತಾ

“ನ್ಯಾಯಾಧೀಶರು ಗಾಂಧಿಯವರಂತೆ ಶಾಂತಿಯುತರಾಗಿ ಬನ್ನಿ ಎನ್ನುತ್ತಾರೆ. ಆದರೆ ನಾವು ಹೇಗೇ ಬಂದರೂ ಅವರಿಗೆ ಅದು ಬಂದೂಕು ಹಿಡಿದು ಬಂದಂತೇ ಕಾಣುತ್ತದೆ. ಸಂಘಪರಿವಾರ ಹತ್ಯೆಗೆ ಕರೆ ಕೊಡುವ ಘೋಷಣೆಗಳು ಮುಗುಳ್ನಗುವಿನ ಮಾತಿನಂತೆ ಕಾಣಬಹದು. ಹೀಗೆ, ಪದಗಳ ಅರ್ಥಗಳು ಬದಲಾಗುತ್ತಿವೆ. ಈ ಅರ್ಥಗಳು ಬದಲಾಗುತ್ತಿರುವ ಕಾಲದಲ್ಲಿ, ನೀವು ಜನರನ್ನು ಅವರ ಬುದ್ಧಿಯಿಂದಲ್ಲ ಬದಲಿಗೆ ಹೃದಯದ ಮೂಲಕ ತಲುಪಬಲ್ಲಿರಿ ಎಂದು ನನಗೆ ವಿಶ್ವಾಸವಿದೆ. ನೀವು ಪ್ರಾಣವೇ ಪಣಕ್ಕಿದ್ದರೂ ಕೂಡಾ ಈ ಪ್ರತಿರೋಧದಲ್ಲಿ ಸಂಘರ್ಷ ಮುಂದುವರೆಸಿ ಗೆಲ್ಲಬಲ್ಲಿರಿ ಎಂದು ನಂಬಿದ್ದೇನೆ. ಹೋರಾಟಕ್ಕೆ ಜಯವಾಗಲಿ”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...