Homeಮುಖಪುಟ'ಲವ್ ಜಿಹಾದ್' ಎಂದು ಆರೋಪಿಸಿ ಪ್ರಯಾಣಿಕರಿಬ್ಬರನ್ನು ರೈಲಿನಿಂದ ಹೊರಗೆಳೆದು ಹಲ್ಲೆಗೈದ VHP ದುಷ್ಕರ್ಮಿಗಳ ವಿರುದ್ಧ ಪ್ರಕರಣ...

‘ಲವ್ ಜಿಹಾದ್’ ಎಂದು ಆರೋಪಿಸಿ ಪ್ರಯಾಣಿಕರಿಬ್ಬರನ್ನು ರೈಲಿನಿಂದ ಹೊರಗೆಳೆದು ಹಲ್ಲೆಗೈದ VHP ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಿಸದ ಪೊಲೀಸರು!

- Advertisement -
- Advertisement -

ಬಿಜೆಪಿ ಬೆಂಬಲಿತ ಸಂಘಟನೆಯಾದ ವಿಎಚ್‌ಪಿಯ ಕಾರ್ಯಕರ್ತರು ಮಧ್ಯಪ್ರದೇಶದ ಉಜ್ಜಯಿನಿ ರೈಲ್ವೇ ನಿಲ್ದಾಣದಲ್ಲಿ ಅಜ್ಮೀರ್‌ಗೆ ತೆರಳುತ್ತಿದ್ದ ರೈಲಿನಿಂದ ಮುಸ್ಲಿಂ ಯುವಕ ಮತ್ತು ಆತನೊಂದಿಗೆ ಪ್ರಯಾಣಿಸುತ್ತಿದ್ದ ಹಿಂದೂ ಯುವತಿಯನ್ನು ರೈಲಿನಿಂದ ಹೊರಗೆ ಎಳೆದು ಹಾಕಿದ್ದರು. ಜನವರಿ 14ರ ಸಂಜೆ ಈ ಘಟನೆ ನಡೆದಿದ್ದು, ಈ ವೇಳೆ ದುಷ್ಕರ್ಮಿಗಳು ಲವ್ ಜಿಹಾದ್ ಎಂದು ಆರೋಪಿಸಿ ಯುವಕನಿಗೆ ಹಲ್ಲೆ ಕೂಡಾ ನಡೆಸಿದ್ದಾರೆ.

ಮೂವತ್ತು ವರ್ಷದ ಆಸಿಫ್ ಶೇಖ್ ತನ್ನ ಕುಟುಂಬದ ಸ್ನೇಹಿತರಾದ 26 ವರ್ಷದ ಸಾಕ್ಷಿ ಜೈನ್ ಅವರೊಂದಿಗೆ ಪ್ರಯಾಣಿಸುತ್ತಿದ್ದಾಗ ವಿಎಚ್‌ಪಿ ದುಷ್ಕರ್ಮಿಗಳು ಅವರನ್ನು ರೈಲಿನಿಂದ ಹೊರಗೆ ಎಳೆದು ಹಾಕಿದ್ದಾರೆ. ಈ ಇಬ್ಬರೂ ಇಂದೋರ್ ನಿವಾಸಿಗಳಾಗಿದ್ದಾರೆ.

ವಿಎಚ್‌ಪಿ ದುಷ್ಕರ್ಮಿಗಳು ಅವರನ್ನು ಬಲವಂತವಾಗಿ ಉಜ್ಜಯಿನಿ ರೈಲ್ವೆ ಪೊಲೀಸ್ ಠಾಣೆಗೆ ವಿಚಾರಣೆಗೆ ಕರೆದೊಯ್ದಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಸಹೋದರ ಸಂಬಂಧಿಗಳ ಪ್ರೇಮ ಪ್ರಕರಣಕ್ಕೆ ‘ಲವ್‌ ಜಿಹಾದ್’ ಪಟ್ಟ ಕಟ್ಟಿದ ಬಿಜೆಪಿ ಪರ ಸಂಘಟನೆ ಮತ್ತು ಮಾಧ್ಯಮಗಳು

ಪೊಲೀಸರು ಅವರ ಹೇಳಿಕೆಗಳನ್ನು ದಾಖಲಿಸಿಕೊಂಡು, ಅವರಿಬ್ಬರೂ ಕುಟುಂಬ ಸ್ನೇಹಿತರು ಎಂದು ಪತ್ತೆ ಹಚ್ಚಿದ್ದಾರೆ. ಇದರ ನಂತರ ಅವರನ್ನು ಹೋಗಲು ಬಿಟ್ಟಿದ್ದಾರೆ. ಇಬ್ಬರು ಪ್ರಯಾಣಿಕರು ಕೂಡಾ ದೂರುಗಳನ್ನು ದಾಖಲಿಸಲು ನಿರಾಕರಿಸಿದ್ದರು ಮತ್ತು ರೈಲ್ವೆ ಪೊಲೀಸರು ಕೂಡಾ VHP ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ.

“ಆಸಿಫ್‌ ಇಂದೋರ್‌ನಲ್ಲಿ ಸ್ಟಿಕ್ಕರ್ ಅಂಗಡಿಯನ್ನು ನಡೆಸುತ್ತಿದ್ದಾರೆ ಮತ್ತು ವಿವಾಹಿತರಾಗಿದ್ದಾರೆ. ಸಾಕ್ಷಿ ಜೈನ್ ಕೂಡಾ ವಿವಾಹಿತೆಯಾಗಿದ್ದು, ಇಂದೋರ್‌ನ ಖಾಸಗಿ ಶಾಲೆಯ ಶಿಕ್ಷಕಿಯಾಗಿದ್ದಾರೆ. ಅವರಿಬ್ಬರೂ ಫ್ಯಾಮಿಲಿ ಸ್ನೇಹಿತರಾಗಿದ್ದು, ಪುಷ್ಕರ್‌‌ ಮೇಳದಲ್ಲಿ ಪಾಲ್ಗೊಳ್ಳಲು ಅಜ್ಮೀರ್‌ಗೆ ತೆರಳುತ್ತಿದ್ದರು” ಎಂದು ಉಜ್ಜಯಿನಿ ರೈಲ್ವೆ ಪೊಲೀಸರು ಹೇಳಿದ್ದಾರೆ.

ಈ ಘಟನೆಯ ವೀಡಿಯೊವನ್ನು ಬಲಪಂಥೀಯ ಹ್ಯಾಂಡಲ್‌‌ಗಳು ತಪ್ಪಾಗಿ ಬಿಂಬಿಸಿ ವೈರಲ್ ಮಾಡಿದ ನಂತರ ಈ ವಿಷಯವು ಜನವರಿ 18 ರಂದು ಬೆಳಕಿಗೆ ಬಂದಿತ್ತು.

ಇದನ್ನೂ ಓದಿ:ಗುಂಪು ಹಲ್ಲೆ ಸರಣಿ ಮುಂದುವರಿಕೆ – ‘ಲವ್‌ ಜಿಹಾದ್‌’ ಆರೋಪದಲ್ಲಿ ಅಪ್ರಾಪ್ತ ಹಿಂದೂ ಬಾಲಕನಿಗೆ ಥಳಿತ

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ವಿಎಚ್‌ಪಿ ಕಾರ್ಯಕರ್ತರು ಅಜ್ಮೀರ್‌ಗೆ ಹೋಗುವ ರೈಲಿನ ಎಸಿ ಕೋಚ್‌ನಿಂದ ಪೊಲೀಸ್ ಠಾಣೆಗೆ ಹೋಗುವ ದಾರಿಯಲ್ಲಿ, ಆಸಿಫ್‌ ಶೇಖ್‌ನನ್ನು ಎಳೆದುಕೊಂಡು ಹೋಗುತ್ತಿರುವಾಗ ಥಳಿಸುತ್ತಿರುವುದನ್ನು ಕಾಣಬಹುದು. ಈ ವೇಳೆ ಅವರ ಲಗೇಜ್‌ಗಳನ್ನು ಹಿಡಿದ ಮತ್ತಿಬ್ಬರು ಕಾರ್ಯಕರ್ತರು ಸಾಕ್ಷಿ ಜೈನ್ ಅವರನ್ನು ಹಿಂಬಾಲಿಸಿದ್ದಾರೆ.

ಘಟನೆಯ ಮತ್ತೊಂದು ವೀಡಿಯೊದಲ್ಲಿ, ಯುವತಿಯು ತನ್ನನ್ನು ಚಿತ್ರೀಕರಣ ಮಾಡುವುದನ್ನು ನಿಲ್ಲಿಸುವಂತೆ ಪೊಲೀಸ್ ಠಾಣೆಯೊಳಗೆ ವಿಎಚ್‌ಪಿ ದುಷ್ಕರ್ಮಿಗಳಲ್ಲಿ ಕೇಳಿಕೊಂಡಿದ್ದಾರೆ.

ಈ ವಿಡಿಯೊದಲ್ಲಿ ಅವರು, “ನೀವು ನಮ್ಮನ್ನು ತಪ್ಪಾಗಿ ತಿಳಿದುಕೊಂಡಿದ್ದೀರಿ, ಇದರಿಂದ ನನ್ನ ಜೀವನ ನಾಶವಾಗುತ್ತದೆ. ನನ್ನನ್ನು ವಿಡಿಯೊ ಮಾಡುತ್ತಿದ್ದೀರಿ, ನನ್ನ ಮಾತು ಕೇಳಿ… ನಾನು ವಯಸ್ಕಳಿದ್ದೇನೆ, ನಾನು ಏನು ಮಾಡುತ್ತಿದ್ದೇನೆಂದು ನನಗೆ ತಿಳಿದಿದೆ…ನಾನು ಶಿಕ್ಷಕಿ…” ಎಂದು ಹೇಳುತ್ತಾರೆ. ಯುವತಿಯು ಕಿರುಚುತ್ತಿರುವುದನ್ನು ಕೇಳಿಸಿಕೊಂಡರೂ ಸಹ, ಪೊಲೀಸರು ಅವರನ್ನು ನೋಡುತ್ತಾ ಕುಳಿತಿರುವುದನ್ನು ಕಾಣಬಹುದು.

ದಿ ವೈರ್ ಜೊತೆ ಮಾತನಾಡಿದ ಉಜ್ಜಯಿನಿಯ ಜಿಆರ್‌ಪಿ ಇನ್ಸ್‌ಪೆಕ್ಟರ್ ಆರ್.ಎಸ್. ಮಹಾಜನ್‌, ‘‘ಲವ್ ಜಿಹಾದ್ ಎಂದು ಶಂಕಿಸಿ ಜನವರಿ 14 ರಂದು ವಿಎಚ್‌ಪಿ ಕಾರ್ಯಕರ್ತರು ಇಬ್ಬರು ಪ್ರಯಾಣಿಕರನ್ನು ಕರೆತಂದರು, ಅವರನ್ನು ವಿಚಾರಿಸಿದಾಗ ಅದು ಸುಳ್ಳು ಎಂದು ತಿಳಿದುಬಂದಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ:ಲವ್‌ ಜಿಹಾದ್‌, ಗೋ ಹತ್ಯೆ ನಿಷೇಧದಂತಹ ನಾಟಕಗಳು ಬಿಜೆಪಿಯನ್ನು ಗೆಲ್ಲಿಸುವುದಿಲ್ಲ- ‌ RLD ಮುಖ್ಯಸ್ಥ ಜಯಂತ್‌ ಚೌಧರಿ

ಅವರಿಬ್ಬರು ಒಟ್ಟಿಗೆ ಪ್ರಯಾಣಿಸುತ್ತಿರುವುದು ಅವರ ಕುಟುಂಬಗಳಿಗೆ ತಿಳಿದಿದೆ ಎಂದು ಅವರು ಹೇಳಿದ್ದಾರೆ.

ಅದಾಗಿಯು, ಅಸಿಫ್‌ ಮತ್ತು ಸಾಕ್ಷಿ ಅವರ ಪೋಷಕರು 65 ಕಿಮೀ ದೂರದ ಇಂದೋರ್‌ನಿಂದ ಉಜ್ಜಯಿನಿಗೆ ಬರುವವರೆಗೆ ಪೊಲೀಸ್ ಠಾಣೆಯಲ್ಲಿ ಅವರನ್ನು ಕಾಯುವಂತೆ ಮಾಡಲಾಯಿತು ಎಂದು ವೈರ್ ಉಲ್ಲೇಖಿಸಿದೆ.

ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಮತ್ತು ಪ್ರಯಾಣಿಕರನ್ನು ಎಳೆದೊಯ್ದು ಹಲ್ಲೆ ಮಾಡಿದ ವಿಎಚ್‌ಪಿ ದುಷ್ಕರ್ಮಿಗಳ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ ಎಂಬ ವೈರ್‌ ಪ್ರಶ್ನೆಗೆ ಉತ್ತರಿಸಿದ ಪೊಲೀಸ್ ಅಧೀಕ್ಷಕ ನಿವೇದಿತಾ ಗುಪ್ತಾ, “ಉಜ್ಜಯಿನಿ ಘಟನೆಯಲ್ಲಿ ಪ್ರಯಾಣಿಕರೊಬ್ಬರನ್ನು ಅನುಚಿತವಾಗಿ ನಡೆಸಿಕೊಂಡ ಘಟನೆ ನಮಗೆ ತಿಳಿದು ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆದ ನಂತರವೇ ವಿಎಚ್‌ಪಿಯವರಿಗೆ ಲವ್ ಜಿಹಾದ್ ಶಂಕೆ ವ್ಯಕ್ತವಾಗಿದೆ. ಪ್ರಶ್ನಿಸಿದಾಗ, ಇಬ್ಬರೂ ಪ್ರಯಾಣಿಕರು ಒಂದೇ ದಿನದಲ್ಲಿ ಬಿಡುಗಡೆಗೊಂಡು ಅಲ್ಲಿಂದ ತೆರಳಿದ್ದಾರೆ ಎಂದು ನಾವು ಕಂಡುಕೊಂಡಿದ್ದೇವೆ. ಆದರೆ ಅವರು ವಿಎಚ್‌ಪಿ ಕಾರ್ಯಕರ್ತರ ವಿರುದ್ಧ ಯಾವುದೇ ದೂರು ನೀಡಿಲ್ಲ” ಎಂದು ಹೇಳಿದ್ದಾರೆ.

ಈ ಮಧ್ಯೆ, ವಿಎಚ್‌ಪಿಯ ಮಾಲ್ವಾ ಪ್ರಾಂತ್‌ನ ಪ್ರಚಾರ್ ಪ್ರಮುಖ್ ಕುಂದನ್ ಚಂದ್ರಾಕರ್, “ಮುಸ್ಲಿಂ ವ್ಯಕ್ತಿಯೊಬ್ಬ ಹಿಂದೂ ಯುವತಿಯನ್ನು ಆಮಿಷವೊಡ್ಡುತ್ತಿದ್ದಾನೆ ಮತ್ತು ಮದುವೆಗಾಗಿ ಅಜ್ಮೀರ್‌ಗೆ ಕರೆದುಕೊಂಡು ಹೋಗುತ್ತಿದ್ದಾನೆ ಎಂದು ನಮ್ಮ ಮೂಲಗಳು ತಿಳಿಸಿವೆ. ‘ ಲವ್ ಜಿಹಾದ್ ’ ಎಂದು ಶಂಕಿಸಿ ನಮ್ಮ ಕಾರ್ಯಕರ್ತರು ಅವರನ್ನು ಹಿಡಿದು ಜಿಆರ್‌ಪಿ ಪೊಲೀಸ್ ಠಾಣೆಗೆ ಕರೆದೊಯ್ದು ಬಿಟ್ಟರು. ನಂತರ ಪೊಲೀಸರು ಏನು ಮಾಡಿದರು ಎಂಬುದು ನಮಗೆ ತಿಳಿದಿಲ್ಲ” ಎಂದು ತಿಳಿಸಿದ್ದಾರೆ.

ಯುವತಿಯು ಮುಸ್ಲಿಂ ಯುವಕನೊಂದಿಗೆ ಆಕರ್ಷಿತಳಾಗಿದ್ದಾಳೆ ಎಂದು ಅವರಿಗೆ ಹೇಗೆ ತಿಳಿಯಿತು ಎಂಬ ಪ್ರಶ್ನೆಗೆ, “ನಮ್ಮ ಹಿಂದೂ ಹೆಣ್ಣುಮಕ್ಕಳು ‘ಲವ್ ಜಿಹಾದ್’ ಮಾಡುವ ಮುಸ್ಲಿಂ ಪುರುಷರಿಂದ ಶೋಷಣೆಗೆ ಒಳಗಾಗುತ್ತಿರುವ ಬಗ್ಗೆ ಜನರು ಕಾಳಜಿ ವಹಿಸುವ ಸಮಾಜದಲ್ಲಿ ನಾವು ವಾಸಿಸುತ್ತಿದ್ದೇವೆ. ನಮ್ಮ ಸಹೋದರಿಯರ ಮೇಲಿನ ಕಾಳಜಿಯಿಂದ ನಮ್ಮ ಕಾರ್ಯಕರ್ತರು ಮಧ್ಯಪ್ರವೇಶಿಸಿದ್ದಾರೆ” ಎಂದು ಚಂದ್ರಾಕರ್‌‌ ತಿಳಿಸಿದ್ದಾರೆ.

ಇದನ್ನೂ ಓದಿ:ಫ್ಯಾಕ್ಟ್‌ಚೆಕ್: ವೈರಲ್ ಚಿತ್ರದಲ್ಲಿರುವ ಮಹಿಳೆ ’ಲವ್‌ ಜಿಹಾದ್’ ಪ್ರಕರಣದಲ್ಲಿ ಹತ್ಯೆ ಆಗಿದ್ದು ನಿಜವೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...