Homeಮುಖಪುಟಯುಪಿ ಚುನಾವಣೆ: ಬಿಜೆಪಿ ಬಿಟ್ಟು ಏಕಾಂಗಿ ಸ್ಪರ್ಧೆ ಘೋಷಿಸಿದ ಜೆಡಿಯು

ಯುಪಿ ಚುನಾವಣೆ: ಬಿಜೆಪಿ ಬಿಟ್ಟು ಏಕಾಂಗಿ ಸ್ಪರ್ಧೆ ಘೋಷಿಸಿದ ಜೆಡಿಯು

- Advertisement -
- Advertisement -

ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಜನತಾ ದಳ (ಯುನೈಟೆಡ್) ಘೋಷಿಸಿದೆ. ಬಿಹಾರದಲ್ಲಿ ಬಿಜೆಪಿ ಮೈತ್ರಿಯೊಂದಿಗೆ ಸರ್ಕಾರ ನಡೆಸುತ್ತಿರುವ ಜೆಡಿಯು ಉತ್ತರ ಪ್ರದೇಶದಲ್ಲಿ ಬಿಜೆಪಿ ತನ್ನನ್ನು ಮಿತ್ರಪಕ್ಷ ಎಂದು ಹೆಸರಿಸದಿರುವ ಬಗ್ಗೆ ನಿರಾಶೆ ವ್ಯಕ್ತಪಡಿಸಿದೆ.

ಜೆಡಿಯು ರಾಷ್ಟ್ರೀಯ ವಕ್ತಾರ ಮತ್ತು ಪ್ರಧಾನ ಕಾರ್ಯದರ್ಶಿ ಕೆ.ಸಿ ತ್ಯಾಗಿ, ಯುಪಿ ಚುನಾವಣಾ ರಂಗದಲ್ಲಿ ಪಕ್ಷ ಏಕಾಂಗಿಯಾಗಿ ಕಣಕ್ಕಿಳಿಯಲಿದೆ ಎಂದಿದ್ದು, ಉತ್ತರ ಪ್ರದೇಶದಲ್ಲಿ ನ್ಯಾಯದೊಂದಿಗೆ ಅಭಿವೃದ್ಧಿ ಎಂಬ ‘ಬಿಹಾರ ಮಾದರಿ ಆಡಳಿತ’ವನ್ನು ಜಾರಿಗೆ ತರಲು ಎದುರು ನೋಡುತ್ತಿದೆ ಎಂದು ಹೇಳಿದ್ದಾರೆ.

“ನಮ್ಮ ಪಕ್ಷದ ಸಹೋದ್ಯೋಗಿ ಆರ್‌ಸಿಪಿ ಸಿಂಗ್ ಅವರು ಅಮಿತ್ ಶಾ, ರಾಜನಾಥ್ ಸಿಂಗ್, ಜೆಪಿ ನಡ್ಡಾ ಮತ್ತು ಯುಪಿ ವಿಧಾನಸಭಾ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಸೇರಿದಂತೆ ಬಿಜೆಪಿಯ ಉನ್ನತ ನಾಯಕರೊಂದಿಗೆ ಮಾತನಾಡಿದ್ದರು. ಅವರು ಯಾವುದೇ ಹಂತದಲ್ಲೂ ನಮ್ಮೊಂದಿಗೆ ಮೈತ್ರಿಯನ್ನು ಯಾರೂ ನಿರಾಕರಿಸಿರಲಿಲ್ಲ. ಆದರೆ, ಬಿಜೆಪಿ ಮೂರು ದಿನಗಳ ಹಿಂದೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದಾಗ ಅಪ್ನಾ ದಳ ಮತ್ತು ನಿಶಾದ್ ಪಕ್ಷವು ಅದರ ಮಿತ್ರಪಕ್ಷಗಳು ಎಂದು ಹೇಳಿದೆ. ಇದರಿಂದ ಜೆಡಿಯು ಮೈತ್ರಿಕೂಟದ ಭಾಗವಾಗಿಲ್ಲ ಎಂಬುದು ಸ್ಪಷ್ಟವಾಗಿದೆ” ಎಂದಿದ್ದಾರೆ.

ಇದನ್ನೂ ಓದಿ: ವಿಶ್ಲೇಷಣೆ: ಆದಿತ್ಯನಾಥ್‌‌ ಅಯೋಧ್ಯೆಯಲ್ಲಿ ಸ್ಪರ್ಧಿಸುವ ಕನಸು ಭಗ್ನವಾಗಿದ್ದೇಕೆ?

ಮುಂದುವರೆದು, “ಬಿಜೆಪಿಯಿಂದ ನಾವು ಕೋಪಗೊಂಡಿಲ್ಲ ಆದರೆ ನಿರಾಶೆಗೊಂಡಿದ್ದೇವೆ. ಹೀಗಾಗಿ ಏಕಾಂಗಿಯಾಗಿ ಉತ್ತರ ಪ್ರದೇಶ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದೇವೆ. ಈ ಬೆಳವಣಿಗೆಯು ಬಿಹಾರದಲ್ಲಿ ಬಿಜೆಪಿಯೊಂದಿಗಿನ ಮೈತ್ರಿಯ ಮೇಲೆ ಪರಿಣಾಮ ಬೀರುವುದಿಲ್ಲ” ಎಂದು ಕೆ.ಸಿ ತ್ಯಾಗಿ ಹೇಳಿದ್ದಾರೆ.

ಬಿಹಾರದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜನತಾ ದಳ (ಯು)ಈ ಹಿಂದೆ ಯುಪಿಯಲ್ಲಿ 3 ರಿಂದ 4 ಸ್ಥಾನಗಳಲ್ಲಿ ಸ್ಪರ್ಧಿಸಲು ಬಯಸಿತ್ತು. ಆದರೆ, ಈಗ ಬಿಜೆಪಿ ತನನ್ ಮಿತ್ರಪಕ್ಷಗಳ ಪಟ್ಟಿಯಲಿ ಸೇರಿಸದೆ ಇರುವುದರಿಂದ ಸ್ಪತಂತ್ರವಾಗಿ ಸ್ಪರ್ಧಿಸುವುದಾಗಿ ಹೇಳಿಕೆ ನೀಡಿದೆ.


ಇದನ್ನೂ ಓದಿ: ಯುಪಿ ಬಿಜೆಪಿ: ಅತ್ತ ರಾಜೀನಾಮೆ ಪರ್ವ, ಇತ್ತ ಸೀಟು ಹಂಚಿಕೆಯಲ್ಲಿ ಪಾಲು ಹೆಚ್ಚಳಕ್ಕೆ ಮಿತ್ರಪಕ್ಷಗಳ ಪಟ್ಟು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪತಂಜಲಿ ಪ್ರಕರಣ: ಸುಪ್ರೀಂಕೋರ್ಟ್‌ ಪ್ರಶ್ನೆ ಬಳಿಕ ರಾಮ್‌ದೇವ್‌ ಮತ್ತೆ ಸಾರ್ವಜನಿಕ ಕ್ಷಮೆಯಾಚನೆ

0
ಪ್ರಸ್ತುತ ಸುಪ್ರೀಂಕೋರ್ಟ್‌ ಅಂಗಳದಲ್ಲಿರುವ 'ತಪ್ಪು ದಾರಿಗೆಳೆಯುವ ಜಾಹೀರಾತುಗಳ' ಕುರಿತು ಪತಂಜಲಿ ಆಯುರ್ವೇದ, ಆಚಾರ್ಯ ಬಾಲಕೃಷ್ಣ ಮತ್ತು ಸ್ವಾಮಿ ರಾಮ್‌ದೇವ್ ಅವರು ಹೊಸ ಸಾರ್ವಜನಿಕ ಕ್ಷಮೆಯಾಚನೆಯನ್ನು ಪ್ರಕಟಿಸಿದೆ. ನಿನ್ನೆ ಸುಪ್ರೀಂಕೋರ್ಟ್‌, ಪತ್ರಿಕೆಗಳಲ್ಲಿ ಮುದ್ರಿತ ಹಿಂದಿನ ಸಾರ್ವಜನಿಕ...