Homeಅಂಕಣಗಳುಮತ್ತೆ ಚುನಾವಣೆ ನಡೆಸಿ ಸ್ಥಿರ ಸರ್ಕಾರ ರಚಿಸುವುದೇ ಪರಿಹಾರ

ಮತ್ತೆ ಚುನಾವಣೆ ನಡೆಸಿ ಸ್ಥಿರ ಸರ್ಕಾರ ರಚಿಸುವುದೇ ಪರಿಹಾರ

- Advertisement -
- Advertisement -

ವಿಧಾನಸಭಾಧ್ಯಕ್ಷರಾದ ರಮೇಶ್ ಕುಮಾರ್ ಅವರು ಅತೃಪ್ತ ಶಾಸಕರ ರಾಜೀನಾಮೆ ಪತ್ರಗಳನ್ನು ಪರಿಶೀಲಿಸಿ, ಅವರ ರಾಜೀನಾಮೆ ಒಪ್ಪಿಕೊಳ್ಳಬಹುದು. ಇಲ್ಲವೇ ಅವರನ್ನು ಅನರ್ಹಗೊಳಿಸಬಹುದು. ಇದು ಅವರ ವಿವೇಚನೆಗೆ ಬಿಟ್ಟ ವಿಷಯ ಎಂದು ಸರ್ವೋಚ್ಚ ನ್ಯಾಯಾಲಯ ಮಧ್ಯಂತರ ತೀರ್ಪು ನೀಡಿದೆ.

ಈ ಅತೃಪ್ತ ಶಾಸಕರ ಅರ್ಹತೆಯ ಬಗೆಗೆ ಪರಿಶೀಲಿಸುವ ಮೊದಲು, ಕರ್ನಾಟಕದಲ್ಲಿ ಈ ಒಂದು ವರ್ಷದ ಅವಧಿಯಲ್ಲಿ ನಡೆದಿರುವ ರಾಜಕೀಯ ಬೆಳವಣಿಗೆಯನ್ನು ವಿಧಾನಸಭಾಧ್ಯಕ್ಷರು ಗಮನಿಸಬೇಕು. 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಕ್ಕಲಿಲ್ಲ. ಆ ಸಮಯದಲ್ಲಿ ಭಾಜಪದ ಯಡಿಯೂರಪ್ಪನವರು, ತಮ್ಮ ಪಕ್ಷಕ್ಕೆ ಬಹುಮತಕ್ಕಿಂತ 9 ಸ್ಥಾನಗಳು ಕಡಿಮೆ ದೊರೆತಿದ್ದರೂ, ಗೌರ್ನರ್ ಅವರನ್ನು ಸಂಧಿಸಿ ತಮಗೆ ಸರ್ಕಾರ ರಚಿಸಲು ಅವಕಾಶ ನೀಡಬೇಕೆಂದು ವಿನಂತಿಸಿಕೊಂಡರು. ಗೌರ್ನರ್ ಅವರು, ಅವರಿಗೆ ಬಹುಮತವಿದೆಯೇ ಎಂಬುದನ್ನು ವಿಚಾರಿಸದೆ ಯಡಿಯೂರಪ್ಪನವರ ಕೋರಿಕೆಗೆ ಅನುಮತಿ ಇತ್ತರು. ಅವರಿಗೆ ಮುಖ್ಯಮಂತ್ರಿ ಪದವಿಯ ಪ್ರತಿಜ್ಞಾವಿಧಿಗಳನ್ನು ಬೋಧಿಸಿದರು.

ಯಡಿಯೂರಪ್ಪನವರು ಬಹುಮತ ಸಂಪಾದಿಸಿಕೊಳ್ಳಲು ಶಾಸಕ ಶ್ರೀರಾಮುಲು ಅವರ ಸಹಕಾರ ಕೋರಿದರು. ಶ್ರೀರಾಮುಲು ಕಾಂಗ್ರೆಸ್ ಶಾಸಕರಲ್ಲಿ ಕೆಲವರನ್ನು ಹಣಕೊಟ್ಟೋ, ಮಂತ್ರಿ ಪದವಿಯ ಆಮಿಷ ಒಡ್ಡಿಯೋ ಶಾಸಕ ಸ್ಥಾನಕ್ಕೆ ಬೇರೆ ಪಕ್ಷದವರಿಂದ ರಾಜೀನಾಮೆ ಕೊಡಿಸಿ, ಆ ಮೂಲಕ ಯಡಿಯೂರಪ್ಪನವರಿಗೆ ಬಹುಮತ ದೊರೆಯುವಂತೆ ಮಾಡಿ, ಅವರನ್ನು ಖಾಯಂ ಆಗಿ ಮುಖ್ಯಮಂತ್ರಿ ಸ್ಥಾನದಲ್ಲಿ ಸ್ಥಾಪಿಸಲು ಭಾರಿ ಪ್ರಯತ್ನ ಮಾಡಿದರು. ಅದು ಆಗ ಫಲಿಸಲಿಲ್ಲ. ತಮಗೆ ಬಹುಮತ ಇಲ್ಲದ ಕಾರಣದಿಂದ ಯಡಿಯೂರಪ್ಪನವರು ಗೌರ್ನರಿಗೆ ರಾಜೀನಾಮೆ ಪತ್ರ ಇತ್ತು, ಮುಖ್ಯಮಂತ್ರಿ ಸ್ಥಾನವನ್ನು ಖಾಲಿ ಮಾಡಿದರು.

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವಲ್ಲಾ ಎಂದು ಬಿಜೆಪಿ ಪಕ್ಷದ ಹಿರಿಯ ನಾಯಕರು ಹಾಗೂ ಯಡಿಯೂರಪ್ಪನವರು ಅಧಿಕಾರ ಪಡೆಯುವ ದೃಷ್ಟಿಯಿಂದ ಅಂದಿನಿಂದ ಇಂದಿನವರೆಗೂ ಪ್ರಯತ್ನ ಪಡುತ್ತಲೇ ಇದ್ದಾರೆ. ವಿರೋಧ ಪಕ್ಷದ ಶಾಸಕರನ್ನು ತಮ್ಮ ಬಲೆಗೆ ಬೀಳಿಸಿ, ಅವರಿಂದ ಶಾಸನಸಭೆಗೆ ರಾಜೀನಾಮೆ ನೀಡಿಸಿ ಆ ಮೂಲಕ, ಭಾಜಪಕ್ಕೆ ಬಹುಮತ ದೊರಕಿಸಿಕೊಳ್ಳಲು ಅಹರ್ನಿಶಿ ದುಡಿಯುತ್ತಿದ್ದಾರೆ. ಈ ಸತ್ಯಸಂಗತಿ ರಮೇಶ್ ಕುಮಾರ್ ಅವರಿಗೆ ತಿಳಿಯದ್ದೇನು ಅಲ್ಲ. ಈ ಮಧ್ಯೆ ಕುಮಾರಸ್ವಾಮಿಯವರ ಮಂತ್ರಿಮಂಡಲದಲ್ಲಿ ಕೂಡಿಕೊಳ್ಳಲು ಕೆಲ ಶಾಸಕರು ಹರಸಾಹಸ ಮಾಡಿದರು. ಅವರಿಗೆ ಅದು ದೊರಕಲಿಲ್ಲ. ಅವರನ್ನು ಭಾಜಪದ ಯಡಿಯೂರಪ್ಪನವರು ಮತ್ತು ಇತರ ನಾಯಕರು ಬಳಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳಬೇಕೆಂದು ಚುನಾವಣೆ ಮಾಡಹತ್ತಿದರು. ಈ ಅತೃಪ್ತರು ಒಂದುಗೂಡಿದರು. ರೆಸಾರ್ಟ್ ರಾಜಕೀಯ ಮಾಡಲು ಪ್ರಾರಂಭಿಸಿದರು. ಅವರನ್ನು ಸಂತೃಪ್ತಿಗೊಳಿಸಲು ಕಾಂಗ್ರೆಸ್ ಪಕ್ಷ ಎಷ್ಟೇ ಪ್ರಯತ್ನಪಟ್ಟರೂ ಅತೃಪ್ತರು ಅದಕ್ಕೆ ಸೊಪ್ಪು ಹಾಕಲಿಲ್ಲ.

ಬಿಜೆಪಿಗೆ ಇದರಿಂದ ಹುರುಪು ಬಂತು. ಮುಖ್ಯಮಂತ್ರಿ ಗದ್ದುಗೆ ಮತ್ತು ತಮಗಾಗುವ ಕಾಲ ಸನ್ನಿಹಿತವಾಗಿದೆ ಎಂದು ತಿಳಿದು, ಅವರು ಆನಂದಪಟ್ಟರು. ಕಾಂಗ್ರೆಸ್ಸಿನಿಂದ ಈ ಅತೃಪ್ತರನ್ನು ಬೇರ್ಪಡಿಸುವ ಕೆಲಸಕ್ಕೆ ಕೈಹಾಕಿದರು. ಈ ತಿಂಗಳು ಬೊಂಬಾಯಿ ಹೋಟೆಲುಗಳಲ್ಲಿ ವಾಸ್ತವ್ಯ ಹೂಡಿದ ಭಿನ್ನಮತೀಯರ ಜೊತೆಗಿರಲು ಬಿಜೆಪಿ ಶಾಸಕರಾದ ಅಶ್ವತ್ಥನಾರಾಯಣ ಮತ್ತು ಅಶೋಕ್ ಧಾವಿಸಿದರು. ಭಿನ್ನಮತೀಯರ ಮನವೊಲಿಸಿ, ಅವರನ್ನು ರಾಜೀನಾಮೆ ನೀಡುವಂತೆ ಚಿತಾವಣೆ ಮಾಡಲು ಅವರು ಅಲ್ಲಿಗೆ ಹೋಗಿರಬಹುದು.
ಈ ಮಧ್ಯೆ ಒಂದು ಹೊಸ ಬೆಳವಣಿಗೆ ಕರ್ನಾಟಕದಲ್ಲಿ ಆಯಿತು. 2018ರ ಲೋಕಸಭಾ ಚುನಾವಣೆ ಘೋಷಿತವಾಯಿತು. ಚುನಾವಣೆಯಲ್ಲಿ ಭಾಜಪ ಕರ್ನಾಟಕದಲ್ಲಿ ಪ್ರಚಂಡ ಬಹುಮತ ಪಡೆಯಿತು. ಇದರಿಂದ ಭಿನ್ನಮತೀಯ ಸ್ವಾರ್ಥಿಗಳಿಗೆ ನಡುಕಬಂತು. ಕಾಂಗ್ರೆಸ್ಸಿನೊಳಗೆ ಇದ್ದರೆ ನಮಗೆ ಭವಿಷ್ಯವಿಲ್ಲ. ಆದ್ದರಿಂದ ನಾವು ನಮ್ಮ ಹಿತದೃಷ್ಟಿಯಿಂದ ಕಾಂಗ್ರೆಸ್ ತೊರೆದು ಭಾಜಪಗೆ ಸೇರುವುದು ಅನಿವಾರ್ಯ ಎಂದು ತಿಳಿದು, ರಾಜೀನಾಮೆ ಪ್ರಹಸನ ಆರಂಭಿಸಿದರು. ಮೊದಲು ಈ ಸಂಖ್ಯೆ ನಾಲ್ಕಾರು ಇದ್ದದ್ದು ಹನ್ನೆರಡಕ್ಕೇರಿತು.

ಸಂಸ್ಥೆಯ ನಿಷ್ಠೆ ಇಲ್ಲದವರು, ಆಸೆಬುರುಕರು, ಭ್ರಷ್ಟರು, ಅಧಿಕಾರಕ್ಕೆ ಅಂಟಿಕೊಳ್ಳುವ ಪ್ರವೃತ್ತಿಯುಳ್ಳವರು, ಸಮಯ ಸಾಧಕರು ತುಂಬಿರುವ ರಾಜಕೀಯ ಪಕ್ಷಗಳ ಭಾಗ್ಯವೇನು? ಈ ಪಕ್ಷಗಳಿಂದ ನೈಜ ಪ್ರಜಾಪ್ರಭುತ್ವ ಸ್ಥಾಪನೆ ಸಾಧ್ಯವಾದೀತೆಂದು ನಿರೀಕ್ಷಿಸಬಹುದೇ?
ಇನ್ನೊಂದು ಹೊಸ ಬೆಳವಣಿಗೆ ಈ ಅತೃಪ್ತರ ಕಡೆಯಿಂದ ಆಗುತ್ತಿದೆ. ಪಕ್ಷಾಂತರ ಕಾಯಿದೆ ಮೂಲಕ ಈ ಸ್ವಾರ್ಥಿ ಅತೃಪ್ತರನ್ನು ಹತೋಟಿಗೆ ತರುವ ಕೆಲಸವನ್ನು ಅಂದಿನ ಸರ್ಕಾರಗಳು ಮಾಡಿದವು. ಆದರೆ ಈ ಸಮಯ ಸಾಧಕರು, ಪಕ್ಷಾಂತರ ಕಾಯ್ದೆ ತಮಗೆ ಮುಳುವಾಗುವುದೆಂದು ತಿಳಿದು, ಶಾಸನಸಭೆಗೆ, ಮಂತ್ರಿಮಂಡಲಕ್ಕೆ ರಾಜೀನಾಮೆ ನೀಡುವ ಹೂಟ ಹೂಡಿದ್ದಾರೆ. ಇವರೆಲ್ಲ ‘ನಾವು ಸನ್ಯಾಸಿಗಳಲ್ಲ, ನಮಗೂ ಅಧಿಕಾರ ಬೇಕು’ ಎಂದು ಹೇಳುತ್ತಾ ಬಂದಿದ್ದಾರೆ. ಇಂತಹವರು ಕಾಂಗ್ರೆಸ್ ಪಕ್ಷವನ್ನು ತೊರೆದು ಅಧಿಕಾರ ದಾಹದಿಂದ ಮತ್ತೊಂದು ಲಾಭದಾಯಕ ಸಂಸ್ಥೆಗೆ ಸೇರುವವರಿದ್ದಾರೆ. ಇವರನ್ನು ಅನರ್ಹಗೊಳಿಸಬೇಕು. ಇಂದು ಆಮಿಷ, ಒತ್ತಡಗಳಿಗೆ ಮಣಿದು ಸ್ವಹಿತಸಾಧನೆಗಾಗಿ ಪಕ್ಷ ಬದಲಾಯಿಸಲು ಹೊರಟಿರುವ ಇವರು ಮತ ಹಾಕಿ ಗೆಲ್ಲಿಸಿದ ಮತದಾರರಿಗೆಲ್ಲ ದ್ರೋಹ ಬಗೆದಿದ್ದಾರೆಂದು ಧಾರಾಳವಾಗಿ ಹೇಳಬಹುದು. ಈ ಸ್ವಾರ್ಥಿ ಅತೃಪ್ತರು ಪಕ್ಷಾಂತರ ಕಾಯಿದೆಯ ಬುಡಕ್ಕೆ ಕೊಡಲಿಪೆಟ್ಟು ಕೊಟ್ಟು ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿರುವುದು ಅಕ್ಷಮ್ಯ ಅಪರಾಧ.

ಮುಂದೇನು?
ವಿಧಾನಸಭೆ ಅಧಿವೇಶನ ಗುರುವಾರದಿಂದ ಆರಂಭವಾಯಿತು. ಸರ್ವೋಚ್ಚ ನ್ಯಾಯಾಲಯ ಸಭಾಧ್ಯಕ್ಷ ರಮೇಶ್ ಕುಮಾರ್‍ಗೆ ಯಾವ ಅಡಚಣೆಯೂ ಇಲ್ಲದೆ ಅಧಿವೇಶನ ನಡೆಸಲು ಸೂಚನೆ ನೀಡಿತು. ಈ ಮಧ್ಯೆ ವಿಧಾನಸಭಾ ಅಧಿವೇಶನ ನಡೆಯುತ್ತಿರುವಾಗ ರಾಜ್ಯಪಾಲರು ವಿಶ್ವಾಸಮತವನ್ನು ಒಂದು ಕಾಲಮಿತಿಯೊಳಗೆ ಪಡೆಯುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಪತ್ರ ಬರೆದಿದ್ದರು. ಕುಮಾರಸ್ವಾಮಿಯವರು ಈ ಒಂದು ವರ್ಷದಲ್ಲಿ ಆಗಿರುವ ರಾಜಕೀಯ ಬೆಳವಣಿಗೆ ಬಗೆಗೆ ಪ್ರಸ್ತಾಪ ಮಾಡಿದರು. ಸಿದ್ದರಾಮಯ್ಯನವರು ಅತೃಪ್ತ ಶಾಸಕರಿಗೆ ವಿಪ್ ಕೊಟ್ಟಿದ್ದು, ಅವರು ಅಧಿವೇಶನಕ್ಕೆ ಬರದೇ ಇರುವುದರಿಂದ ಸಭಾಧ್ಯಕ್ಷರು ಕ್ರಮ ತೆಗೆದುಕೊಳ್ಳಬೇಕೆಂದು ನಿಲುವಳಿ ಸೂಚನೆ ನೀಡಿದರು. ಇದರ ಬಗೆಗೆ ಸಭಾಧ್ಯಕ್ಷರು ರೂಲಿಂಗ್ ಕೊಡುವುದು ಬಾಕಿ ಇದೆ ಸೋಮವಾರಕ್ಕೆ ಮುಂದೂಡಲಾಗಿದ್ದು ಅಂದು ಸ್ಪೀಕರ್ ನಿರ್ಣಯ ಹೇಳುತ್ತಾರೆ.

ಆ ನಂತರ ಕುಮಾರಸ್ವಾಮಿಯವರು ಮಂಡಿಸಿರುವ ವಿಶ್ವಾಸಮತ ನಿರ್ಣಯವನ್ನು ಸಭೆಯ ಮುಂದಿಟ್ಟು ಫಲಿತಾಂಶವನ್ನು ಪ್ರಕಟಿಸಬಹುದು.
ವಿಶ್ವಾಸ ನಿರ್ಣಯಕ್ಕೆ ಸೋಲಾಗಲಿ, ಗೆಲುವಾಗಲೀ ಭಾಜಪ ಮತ್ತು ಮೈತ್ರಿ ಕೂಟದ ಶಾಸಕರು ಇನ್ನೂ ನಾಲ್ಕು ವರ್ಷ ನಾಯಿ, ಬೆಕ್ಕುಗಳಂತೆ ಜಗಳವಾಡುತ್ತಾರೆ ಎಂಬುದರಲ್ಲಿ ಅನುಮಾನವಿಲ್ಲ. ಪ್ರಜೆ ಈಗ ಮಳೆಯ ಅಭಾವ, ಡೆಂಗ್ಯು ಮೊದಲಾದ ರೋಗಗಳ ಕಾಟ, ಕುಡಿಯುವ ನೀರಿನ ಸಮಸ್ಯೆಗಳಿಂದ ಪರದಾಡುತ್ತಿದ್ದಾರೆ. ಇವರ ಕಚ್ಚಾಟದಲ್ಲಿ ಜನಸಾಮಾನ್ಯರ ಸಮಸ್ಯೆಗಳು ನೆನೆಗುದಿಗೆ ಬೀಳುತ್ತವೆ.
ಈಗಿನ ಪರಿಸ್ಥಿತಿಯನ್ನು ನೋಡಿದರೆ ಕೂಡಲೇ ಚುನಾವಣೆಯನ್ನು ನಡೆಸಿ ಸ್ಥಿರವಾದ ಸರ್ಕಾರವನ್ನು ರಚಿಸುವುದು ಹೆಚ್ಚು ಸಮಂಜಸವೆಂದು ನನಗಾದರೂ ಅನಿಸುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...