ಮೂಲ- ರಂಜನ್ ಮಿಶ್ರಾರವರ ಫೇಸ್‌ಬುಕ್ ವಾಲ್ ನಿಂದ
ಕನ್ನಡಕ್ಕೆ : ಮುತ್ತುರಾಜು
1. ಯಾರಿಗೆ ಆಗಲಿ ಒಂದಕ್ಕಿಂತ ಹೆಚ್ಚು ಬಾರಿ ಪದೇ ಪದೇ ಫೋನ್ ಮಾಡಬೇಡಿ. ಅವರು ನಿಮ್ಮ ಫೋನ್ ರಿಸೀವ್ ಮಾಡಿಲ್ಲ ಎಂದರೆ ಅದಕ್ಕಿಂತಲೂ ಬಹುಮುಖ್ಯ ಕೆಲಸದಲ್ಲಿದ್ದಾರೆ ಎಂದು ಭಾವಿಸಿ.
2. ಸಾಲ ಪಡೆದ ಹಣವನ್ನು ಅವರು ನೆನಪಿಸುವ ಮುನ್ನ ಅಥವಾ ಅವರು ಕೇಳುವ ಮುನ್ನವೇ ಹಿಂದಿರುಗಿಸಿಬಿಡಿ. ಇದು ನಿಮ್ಮ ಬದ್ಧತೆ ಮತ್ತು ವ್ಯಕ್ತಿತ್ವವನ್ನು ನಿರೂಪಿಸುತ್ತದೆ. ಇದು ಪೆನ್, ಕೊಡೆ, ಊಟದ ಡಬ್ಬಿ ಇತ್ಯಾದಿಗಳಿಗೂ ಅನ್ವಯಿಸುತ್ತದೆ.
3. ಇತರರು ನಿಮಗೆ ಊಟ ಕೊಡಿಸುವ ಸಂದರ್ಭದಲ್ಲಿ ದುಬಾರಿ ತಿನಿಸುಗಳನ್ನು ಆರ್ಡರ್ ಮಾಡಬೇಡಿ.
4. ಮುಜುಗರದ ಪ್ರಶ್ನೆಗಳನ್ನು ಎಂದಿಗೂ ಕೇಳಲೇಬೇಡಿ, ಉದಾಹರಣೆಗೆ: ನಿಮ್ಮಗಿನ್ನು ಮದುವೆಯಾಗಿಲ್ಲವೇ? ನಿಮಗೆ ಮಕ್ಕಳಾಗಿಲ್ಲವೇ? ನೀವು ಏಕೆ ಮನೆ ಖರೀದಿಸಿಲ್ಲ? ನೀವೇ ಏಕೆ ಕಾರು ತೆಗೆದುಕೊಂಡಿಲ್ಲ? ಇವು ಯಾವುವು ನಿಮ್ಮ ಸಮಸ್ಯೆಯಲ್ಲ ಎಂಬುದನ್ನು ಮರೆಯಬೇಡಿ.
5. ನಿಮ್ಮ ಹಿಂದೆ ಬರುವವರಿಗೆ ಯಾವಗಲೂ ಬಾಗಿಲು ತೆರೆದಿಡಿ. ಅವರು ಹುಡುಗ ಅಥವಾ ಹುಡುಗಿಯಾಗಿರಲಿ, ಜೂನಿಯರ್ ಅಥವಾ ಸೀನಿಯರ್ ಆಗಿರಲಿ. ಸಾರ್ವಜನಿಕವಾಗಿ ಮತ್ತೊಬ್ಬರನ್ನು ಸಮಾನವಾಗಿ ಗೌರವದಿಂದ ನಡೆಸಿಕೊಳ್ಳುವುದರಿಂದ ನೀವು ಚಿಕ್ಕವರೆನಿಸಿಕೊಳ್ಳುವುದಿಲ್ಲ.
6. ನಿಮ್ಮ ಸ್ನೇಹಿತರೊಂದಿಗೆ ಕ್ಯಾಬ್/ಆಟೋದಲ್ಲಿ ಹೋದಾಗ ಅವರು ಬಿಲ್ ಪೆ ಮಾಡಿದರೆ ಮುಂದಿನ ಬಾರಿ ನೀವು ಬಿಲ್ ಪೆ ಮಾಡಲು ಯತ್ನಿಸಿ
7. ಭಿನ್ನ ರೀತಿಯ ಅಭಿಪ್ರಾಯಗಳನ್ನು ಗೌರವಿಸಿ. ನೆನಪಿಡಿ ನಿಮಗೆ 6 ಎಂದು ಕಾಣುವುದು ನಿಮ್ಮ ಎದುರಿದ್ದವರಿಗೆ 9 ಎಂದು ಕಾಣಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಎರಡನೇ ಅಭಿಪ್ರಾಯ ಪಡೆಯುವುದು ಸೂಕ್ತ.
8. ಮತ್ತೊಬ್ಬರು ಮಾತನಾಡುವಾಗ ಮಧ್ಯದಲ್ಲಿ ಬಾಯಿ ಹಾಕಬೇಡಿ. ಅವರು ಪೂರ್ತಿ ಹೇಳಲು ಅವಕಾಶ ಮಾಡಿಕೊಡಿ. ಎಲ್ಲವನ್ನು ಕೇಳಿಸಿಕೊಳ್ಳಿ ಮತ್ತು ನಿಮಗೆ ಬೇಕಾದುದ್ದನ್ನು ಮಾತ್ರ ತೆಗೆದುಕೊಳ್ಳಿ
9. ನೀವು ಯಾರನ್ನಾದರೂ ರೇಗಿಸಿದಾಗ ಅವರು ಆಗ ಖುಷಿಪಡದಿದ್ದರೆ, ಅದನ್ನು ಅಲ್ಲಿಗೆ ನಿಲ್ಲಿಸಿ ಮತ್ತು ಮತ್ತೆ ಪುನಾರಾವರ್ತಿಸಬೇಡಿ. ಇದು ಮತ್ತೊಬ್ಬರು ಹಾಗೆ ಮಾಡದಂತೆ ತಡೆಯುತ್ತದೆ.
10. ಯಾರಾದರೂ ನಿಮಗೆ ಸಹಾಯ ಮಾಡಿದಾಗ ಥ್ಯಾಂಕ್ಯೂ ಎಂದು ಹೇಳಿ.
11. ಯಾರನ್ನಾದರೂ ಸಾರ್ವಜನಿಕವಾಗಿ ಹೊಗಳಿ ಆದರೆ ಟೀಕೆಗಳಿದ್ದರೆ ಅದನ್ನು ಅವರಿಗೆ ವಯಕ್ತಿಕವಾಗಿ ಹೇಳಿ
12. ಮತ್ತೊಬ್ಬರ ದೇಹ ತೂಕದ ಬಗ್ಗೆ ಮಾತನಾಡಲು ನಿಮಗೆ ಹಕ್ಕು ಇಲ್ಲ. ನೀವು ಚೆನ್ನಾಗಿ ಕಾಣುವಿರಿ ಎಂದಷ್ಟೆ ಹೇಳಿ. ಅವರು ತೂಕ ಇಳಿಸಲು ಬಯಸಿದರೆ ಅವರಾಗಿಯೇ ನಿಮ್ಮೊಡನೆ ಮಾತನಾಡುತ್ತಾರೆ. ನೀವಾಗಿಯೇ ಸಲಹೆ ಕೊಡಲು ಹೋಗಬೇಡಿ
13. ಯಾರಾದರೂ ತಮ್ಮ ಮೊಬೈಲ್‌ನಲ್ಲಿ ನಿಮ್ಮ ಫೋಟೊ ತೋರಿಸಿದರೆ ನೋಡಿ. ಆದರೆ ಆ ಕಡೆ, ಈ ಕಡೆ ಸ್ವೈಪ್ ಮಾಡಬೇಡಿ. ಅಲ್ಲಿ ಏನಿದೆ ಎಂಬುದು ನಿಮಗೆ ಗೊತ್ತಿರುವುದಿಲ್ಲ ಮತ್ತು ಗೊತ್ತು ಮಾಡಿಕೊಳ್ಳುವ ಅವಶ್ಯಕತೆ ಸಹ ನಿಮಗಿರುವುದಿಲ್ಲ.
14. ನನಗೆ ಡಾಕ್ಟರ್ ಅಪಾಯಿಂಟ್‌ಮೆಂಟ್ ಇದೆ ಎಂದು ನಿಮ್ಮ ಸಹೋದ್ಯೊಗಿ ಹೇಳಿದಾಗ ಏತಕ್ಕೆ ಎಂದು ಕೇಳಲೇಬೇಡಿ. ನೀವು ಚೆನ್ನಾಗಿ ಆಗುತ್ತಿರಿ ಎಂಬ ನಂಬಿಕೆಯಿದೆ ಎಂದು ಮಾತ್ರ ಹೇಳಿ. ಅವರ ಖಾಸಗಿ ಆನಾರೋಗ್ಯದ ಬಗ್ಗೆ ನೀವಾಗಿ ಕೇಳಬೇಡಿ. ಹೇಳಬೇಕು ಅನಿಸಿದರೆ ಅವರೆ ಹೇಳುತ್ತಾರೆ.
15. ನೀವು ಸಿಇಓಗೆ ಯಾವ ಗೌರವ ನೀಡುತ್ತಿರೋ ಅದೇ ಗೌರವ ಕಚೇರಿ ಸ್ವಚ್ಚಗೊಳಿಸುವವರಿಗೂ ನೀಡಿ. ನೀವು ನಿಮಗಿಂತ ಕೆಳಗಿನವರ ಜೊತೆ ಗೌರವದಿಂದ ನಡೆದುಕೊಂಡರೆ ಅದು ಇತರರಿಗೂ ಮಾದರಿಯಾಗುತ್ತದೆ.
16. ಯಾರಾದರೂ ನಿಮ್ಮನ್ನು ಉದ್ದೇಶಿಸಿ ಮಾತನಾಡುವಾಗ ನೀವು ಮೊಬೈಲ್ ನಲ್ಲಿ ನೋಡುತ್ತಿದ್ದರೆ ಅದು ಅನುಚಿತ ಎನಿಸಿಕೊಳ್ಳುತ್ತದೆ. ಹಾಗೆಯೇ ನೀವು ಮಾತನಾಡುವಾಗ ಸನ್ ಗ್ಲಾಸ್ ಧರಿಸಬೇಡಿ. ಕಣ್ಣು ಸಹ ಸಂವಹನದ ಪ್ರಮುಖ ಸಾಧನ ಎಂಬುದನ್ನು ಮರೆಯಬೇಡಿ.
17. ಯಾರಾದರೂ ಅವರಾಗಿಯೇ ಕೇಳುವ ಮುನ್ನ ಯಾವುದೇ ಸಲಹೆ ನೀಡಲು ಹೋಗಬೇಡಿ
18. ಬಹಳ ದಿನಗಳ ನಂತರ ನಿಮ್ಮ ಸ್ನೇಹಿತರು ಅಥವಾ ಯಾರನ್ನಾದರೂ ಭೇಟಿಯಾದಾಗ ಅವರ ವಯಸ್ಸು ಮತ್ತು ಸಂಬಳದ ಬಗ್ಗೆ ಕೇಳಬೇಡಿ. ಬೇಕಾದರೆ ಅವರಾಗಿಯೇ ಹೇಳುತ್ತಾರೆ.
19. ನಿಮಗೆ ಸಂಬಂಧವಿಲ್ಲದ ಕೆಲಸಗಳಲ್ಲಿ ತಲೆ ಹಾಕಬೇಡಿ. ನಿಮ್ಮನ್ನು ಅದು ಎಳೆದುಕೊಂಡಾಗ ಮಾತ್ರ ವ್ಯವಹರಿಸಿ.
20. ನಿಮ್ಮ ಶ್ರೀಮಂತಿಗೆ ಕುರಿತು ಮಾತನಾಡಬೇಡಿ, ವಿಶೇಷವಾಗಿ ಬಡವರ ನಡುವೆ. ಅದೇ ರೀತಿ ನಿಮ್ಮ ಮಕ್ಕಳ ಬಗ್ಗೆ ಮಾತನಾಡಬೇಡಿ, ವಿಶೇಷವಾಗಿ ಮಕ್ಕಳಿಲ್ಲದವರ ನಡುವೆ.
21. ನೀವು ಸ್ನೇಹಿತರೊಟ್ಟಿಗೆ ಇರುವಾಗ ಮನೆ ಕೆಲಸಗಳನ್ನು ಹಂಚಿಕೊಳ್ಳಿ, ಹಾಗೆಯೇ ಖರ್ಚುಗಳನ್ನು ಸಹ.
22. ಉತ್ತಮ ಸಂದೇಶ ಓದಿದ ಬಳಿಕೆ ಧನ್ಯವಾದ ಹೇಳಲು ಪ್ರಯತ್ನಿಸಿ.
ಇದನ್ನೂ ಓದಿ: ಅಂಬೇಡ್ಕರ್ ವಿಚಾರಧಾರೆಯೇ ಪ್ರೇರಣೆ: ಮೈಸೂರು ವಿವಿಯಲ್ಲಿ ಪಿಎಚ್.ಡಿ ಮಾಡುತ್ತಿರುವ ಟ್ರಾನ್ಸ್‌ಜೆಂಡರ್ ಮಹಿಳೆಯ ಮನದಾಳ



Thq for best advice it’s universal advice….