Homeಮುಖಪುಟಮಂಡ್ಯದ ರೈತರ ಪರ ನಿಲ್ಲುತ್ತಿದ್ದವರು ಇಂದು ರಾಷ್ಟ್ರಧ್ವಜದ ವಿರುದ್ಧ ನಿಂತಿದ್ದಾರೆ: ಚೆಲುವರಾಯಸ್ವಾಮಿ ವಾಗ್ದಾಳಿ

ಮಂಡ್ಯದ ರೈತರ ಪರ ನಿಲ್ಲುತ್ತಿದ್ದವರು ಇಂದು ರಾಷ್ಟ್ರಧ್ವಜದ ವಿರುದ್ಧ ನಿಂತಿದ್ದಾರೆ: ಚೆಲುವರಾಯಸ್ವಾಮಿ ವಾಗ್ದಾಳಿ

- Advertisement -
- Advertisement -

‘ಸಂಪೂರ್ಣವಾಗಿ ಹಸಿರು ಶಾಲು ಧರಿಸಿ, ಮಂಡ್ಯದ ರೈತರ ಪರವಾಗಿ ನಿಲ್ಲುತ್ತಿದ್ದವರು ಇಂದು ಕೇಸರಿ ಶಾಲು ಧರಿಸಿ ರಾಷ್ಟ್ರಧ್ವಜದ ವಿರುದ್ಧ ನಿಂತಿದ್ದೀರ. ರಾಷ್ಟ್ರ ಧ್ವಜವನ್ನು ಕೆಳಗಿಳಿಸಬೇಕು ಎಂಬುದು ನಿಮ್ಮ ಬೇಡಿಕೆಯಾ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.

ಕೆರಗೋಡು ಗ್ರಾಮದ ಹನುಮಧ್ವಜ ತೆರವು ವಿರೋಧಿಸಿ ಬಿಜೆಪಿ-ಜೆಡಿಎಸ್ ಮುಖಂಡರು ನಿನ್ನೆ ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದ್ದರು. ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಮತ್ತು ಜಿಲ್ಲೆಯ ಜೆಡಿಎಸ್ ನಾಯಕರು ಕೇಸರಿ ಶಾಲು ಧರಿಸಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಧ್ವಜ ವಿವಾದದ ಬಗ್ಗೆ ಇಂದು ಸುದ್ದಿಗೋ‍ಷ್ಠಿ ನಡೆಸಿ ಮಾತನಾಡಿದ ಚೆಲುವರಾಯಸ್ವಾಮಿ, ಕಮಲ-ದಳ ನಾಯಕರ ವಿರುದ್ಧ ಕಿಡಿಕಾರಿದರು.

‘ಬಿ.ಎಂ. ಶ್ರೀಕಂಠಯ್ಯ, ಪು.ತಿ. ನರಸಿಂಹಾಚಾರ್, ಎಚ್.ಎಲ್. ನಾಗೇಗೌಡ, ಬೆಸಗರಹಳ್ಳಿ ರಾಮಣ್ಣ, ಎಚ್.ಎಲ್. ಕೇಶವಮೂರ್ತಿ ಸೇರಿದಂತೆ ಹಲವು ಸಾಹಿತಿಗಳು ಮಂಡ್ಯಕ್ಕೆ ಹೆಸರು ತಂದಿದ್ದಾರೆ. ರಾಷ್ಟ್ರಕವಿ ಕುವೆಂಪು ಮಾರ್ಗದರ್ಶನದಲ್ಲಿ ಅವರ ಆಶಯಗಳನ್ನು ಇಲ್ಲಿನ ಜನರು ಪಾಲಿಸುತ್ತಿದ್ದಾರೆ. ಸ್ವಾಭಿಮಾನ ಮತ್ತು ಗೌರವ ವಿಚಾರದಲ್ಲಿ ಮಂಡ್ಯ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ದಯವಿಟ್ಟು ಇಲ್ಲಿ ಶಾಂತಿ ಕದಡುವ ಕೆಲಸಕ್ಕೆ ಕೈ ಹಾಕಬೇಡಿ’ ಎಂದು ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡಿದರು.

‘ನಿಮ್ಮ ಪಕ್ಷವನ್ನು ಜಯಪ್ರಕಾಶ್ ನಾರಾಯಣ್ ಸ್ಥಾಪಿಸಿದರು; ಕರ್ನಾಟಕದಲ್ಲಿ ನಿನ್ನೆಗೆ ಅದನ್ನು ನೀವು ಅಂತಿಮಗೊಳಿಸಿದ್ದೀರ. ಎಚ್.ಡಿ. ದೇವೇಗೌಡ, ಎಸ್‌.ಆರ್. ಬೊಮ್ಮಾಯಿ, ಜೆ.ಎಚ್. ಪಟೇಲ್ ಸೇರಿದಂತೆ ಸಾವಿರಾರು ಜನ ಪ್ರಾದೇಶಿಕ ಪಕ್ಷವನ್ನು ಉಳಿಸಿ ಬೆಳಿಸಿದ್ದರು. ಅಂತಿಮವಾಗಿ ನಿನ್ನೆ ನೀವು ಕೇಸರಿ ಶಾಲು ಧರಿಸುವ ಮೂಲಕ ಪ್ರಾದೇಶಿಕ ಪಕ್ಷಕ್ಕೆ ತಿಲಾಂಜಲಿ ಇಟ್ಟಿದ್ದೀರ’ ಎಂದು ವಾಗ್ದಾಳಿ ನಡೆಸಿದರು.

‘ನೀವು ನೇರವಾಗಿ ಬಿಜೆಪಿ ಸೇರಿದ್ದರೆ ಜನತಾ ಪರಿವಾರವನ್ನು ಕಟ್ಟಿದ್ದವರಿಗೆ ನೋವು ಆಗುತ್ತಿರಲಿಲ್ಲ. ಬೇರೆ ಯಾರಾದರೂ ಆ ಪಕ್ಷವನ್ನು ಮುನ್ನಡೆಸುತ್ತಿದ್ದರು; ಆಗ ಹಿರಿಯರ ಆತ್ಮಕ್ಕೆ ನೋವು ಆಗುತ್ತಿರಲಿಲ್ಲ. ಆದರೆ, ನಿಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ, ಜೆಪಿ ಅವರ ಹೋರಾಟವನ್ನು ನಿನ್ನೆ ಮಂಡ್ಯದಲ್ಲಿ ಮುಗಿಸಿದ್ದೀರ. ಇಲ್ಲೀವರೆಗೆ ಮಂಡ್ಯಲಲ್ಲಿ ಕಾಂಗ್ರೆಸ್-ಜೆಡಿಎಸ್ ಮಾತ್ರ ಇತ್ತು. ಸಂಪೂರ್ಣವಾಗಿ ಹಸಿರು ಶಾಲು ಧರಿಸುತ್ತಿದ್ದವರು, ದೇವೇಗೌಡರ ನೇತೃತ್ವದಲ್ಲಿ ರೈತರ ಪರವಾಗಿ ನಿಲ್ಲುತ್ತಿದ್ದವರು ಇಂದು ಕೇಸರಿ ಶಾಲು ಧರಿಸಿ, ರಾಷ್ಟ್ರಧ್ವಜದ ವಿರುದ್ಧ ನಿಂತಿದ್ದೀರ. ರಾಷ್ಟ್ರ ಧ್ವಜವನ್ನು ಕೆಳಗಿಳಿಸಬೇಕು ಎಂಬುದು ನಿಮ್ಮ ಬೇಡಿಕೆಯಾ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದರು.

‘ಸರ್ಕಾರ ಹಾಗೂ ಜಿಲ್ಲಾಡಳಿತ ಕೆರಗೋಡಿನಲ್ಲಿ ಕಾನೂನಿನ ಪ್ರಕಾರ ಏನು ಮಾಡಬೇಕೋ ಅದನ್ನು ಮಾಡಿದೆ. ನಿಮ್ಮ ಹೋರಾಟ ಯಾವುದರ ಪರವಾಗಿ? ನೀವು ಯಾವುದಕ್ಕಾಗಿ ಹೋರಾಟ ಮಾಡುತ್ತಿದ್ದೀರಾ ಹೇಳಿ. ನಿಮ್ಮ ಹೋರಾಟ ತ್ರಿವರ್ಣ ಧ್ವಜವನ್ನು ಕೆಳಗಿಳಿಸುವಂತೆ ಬೇಡಿಕೆ ಇಟ್ಟಂತೆ ಕಾಣುತ್ತಿದೆ’ ಎಂದು ತಿರುಗೇಟು ಕೊಟ್ಟರು.

‘ಒಬ್ಬ ಜವಾಬ್ದಾರಿಯುತ ಪ್ರತಿಪಕ್ಷ ನಾಯಕರಾಗಿ, ಈ ರಾಜ್ಯದ ಶ್ಯಾಡೋ ಮುಖ್ಯಮಂತ್ರಿಯಾಗಿ ಆರ್. ಅಶೋಕ್ ಇಂಥ ಹೋರಾಟಕ್ಕೆ ನಾಂದಿ ಹಾಡಿದ್ದಾರೆ. ಪ್ರಜಾಪ್ರಭುತ್ವ, ಸಂವಿಧಾನದ ವಿಚಾರದಲ್ಲಿ ಆಟವಾಡುವುದು ಸರಿಯಲ್ಲ. ನಮ್ಮ ಜಿಲ್ಲೆಯ ಜನರನ್ನು ಹಾಗೂ ಯುವಕರನ್ನು ಪ್ರಚೋದನೆ ಮಾಡಿದ್ದೀರಾ.. ಯುವಕರ ಬದುಕಿನಲ್ಲಿ ಆಟವಾಡುತ್ತಿದ್ದೀರಾ. ಸಿದ್ದರಾಮಯ್ಯ ಹಾಗೂ ನಮ್ಮ ಶಾಸಕ ಫ್ಲೆಕ್ಸ್‌ಗಳಿಗೆ ಕಲ್ಲು ಹೊಡೆದು ಕಿತ್ತು ಹಾಕಿದ್ದೀರ. ಕುರುಬರ ಹಾಸ್ಟೆಸ್‌ಗೆ ಕಲ್ಲು ಹೊಡೆದು, ಸರ್ಕಾರಿ ಬಸ್ಸಿಗೆ ಕಲ್ಲು ಹೊಡೆದಿದ್ದೀರಾ.. ಮಾಜಿ ಮುಖ್ಯಮಂತ್ರಿಗಳಾಗಿ ವ್ಯವಸ್ಥೆಗೆ ನೀವು ಗೌರವ ಕೊಡುವ ರೀತಿ ಇದಾ’ ಎಂದು ಸಚಿವರು ಬಿಜೆಪಿ-ಜೆಡಿಎಸ್ ನಾಯಕರ ವಿರುದ್ಧ ಕಿಡಿಕಾರಿದರು.

‘ನೀವು ಮಂಡ್ಯಕ್ಕೆ ಬಂದಿದ್ದರ ಉದ್ದೇಶ ಆದರೂ ಏನು? ನಾವೇನಾದರೂ ಐದು ವರ್ಷ ಸೋತಾಗ ನಿಮ್ಮ ರೀತಿ ಆಡಿದ್ದೆವಾ? ಈ ಜಿಲ್ಲೆಯಲ್ಲಿ ನಿಮ್ಮ ಶಾಸಕರು ಮಾಡಿದ ಕೆಲಸಗಳನ್ನು ಗಂಭೀರವಾಗಿ ನೋಡುಕೊಂಡು ಸುಮ್ಮನಿದ್ದೆವು. ನಾವು ಗೆದ್ದ ಎಂಟು ತಿಂಗಳಲ್ಲೇ ನಿಮ್ಮಿಂದ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.. ಇನ್ನು ಐದು ವರ್ಷ ನೀವು ಹೇಗೆ ಇರುತ್ತೀರಾ? ಐದು ವರ್ಷ ಮಂಡ್ಯಕ್ಕೆ ನಿಮ್ಮ ಕೊಡುಗೆ ಏನು? ರಾಷ್ಟ್ರೀಯ ಹೆದ್ದಾರಿ ಅವಾಂತರ, ನೀರಾವರಿ, ನಿರುದ್ಯೋಗ ಸೇರಿದಂತೆ ಯಾವ ವಿಚಾರದಲ್ಲೂ ನೀವು ಹೋರಾಡಲಿಲ್ಲ. ಆದರೆ, ರಾಷ್ಟ್ರ ಧ್ವಜ ಹಾಕಿದ್ದು ತಪ್ಪು ಎಂದು ಹೇಳಲು ನೀವು ಮಂಡ್ಯಕ್ಕೆ ಬಂದಿದ್ದೀರಾ. ಬಿಜೆಪಿ ನಾಯಕರ ಜತೆ ಸೇರಿ ಕುಮಾರಸ್ವಾಮಿಯವರು ರಾಷ್ಟ್ರಧ್ವಜನ ವಿರುದ್ಧ ನಿಂತಿದ್ದೀರಾ? ಜಿಲ್ಲೆಯ ಸ್ವಾಮರಸ್ಯ ಹಾಳು ಮಾಡಲು ಬಂದಿದ್ದೀರಾ… ದಯವಿಟ್ಟು ಬೇಡ ಕುಮಾರಣ್ಣ.. ನೀವು ಎರಡು ಭಾರಿ ಮುಖ್ಯಮಂತ್ರಿ ಆಗಲು ಮಂಡ್ಯ ಜಿಲ್ಲೆಯ ಜನರು ಕಾರಣ’ ಎಂದು ಚೆಲುವರಾಯಸ್ವಾಮಿ ಹೇಳಿದರು.

‘ಸಿಟಿ ರವಿಯವರು ನಮ್ಮ ಸರ್ಕಾರ ಸುಟ್ಟು ಹೋಗುತ್ತೆ ಎಂದು ಹೇಳಿದ್ದಾರೆ. ಆದರೆ, ಸಂವಿಧಾನದ ವಿರುದ್ಧ ನಿಂತಿರುವ ಬಿಜೆಪಿ ಮತ್ತು ಜೆಡಿಎಸ್ ಆ ಸ್ಥಿತಿ ಎದುರಿಸಬೇಕಾಗುತ್ತದೆ. ನಿಮ್ಮ ರೀತಿ ಶಾಪ ಕೊಡಲು ನಾನು ಮುನಿಯೂ ಅಲ್ಲ, ದೇವರೂ ಅಲ್ಲ. ಆದರೆ, ನಮ್ಮ ಜಿಲ್ಲೆಯ ಜನರು ಯಾವ ಕಾರಣಕ್ಕೂ ನಿಮ್ಮನ್ನು ಸಹಿಸುವುದಿಲ್ಲ’ ಎಂದರು.

‘ಕುಮಾರಸ್ವಾಮಿಯವರೆ ನಿಮ್ಮ ಹಿನ್ನೆಲೆ ಸಾಧಾರಣ ಅಲ್ಲ; ನೀವು ಈ ದೇಶದ ಮಾಜಿ ಪ್ರಧಾನಿ ದೇವೇಗೌಡ ಮಗ. ಅವರ ಬಗ್ಗೆ ನನಗೆ ಬಹಳ ಗೌರವ ಇದೆ; ಅಂತವರ ಮಗ ನೀವು. ಈ ಜಿಲ್ಲೆಯಲ್ಲಿ ನೀವು ಈಗ ಮಾಡುತ್ತಿರುವುದು ನಿಮಗೆ ಶೋಭೆ ತರುವುದಿಲ್ಲ. ನೀವು ಈ ಹಿಂದೆ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಬಗ್ಗೆ ಮಾತನಾಡಿದಿರುವುದನ್ನು ನೆನಪಿಸಿಕೊಳ್ಳಿ. ಪೇಶ್ವೆ ಪಕ್ಷ ಎಂದು ಹೇಳಿದ್ದ ನೀವು ಈಗ ಪೇಶ್ವೆಗಳ ಶಾಲು ಧರಿಸಿದ್ದೀರ. ನಾನು ಹೇಳಿಕೆ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ರಿ. ಆರ್‌ಎಸ್‌ಎಸ್‌ ಕೆಲಸ ಮಾಡುವುದು ದೇಶ ಕಟ್ಟುವುದಕ್ಕಲ್ಲ, ಇತಿಹಾಸವನ್ನು ತಿರುಚಿ, ಮಕ್ಕಳ ಮನಸ್ಸನ್ನು ಕೆಡಿಸಿ, ಹೃದಯದಲ್ಲಿ ವಿಷ ಬೀಜ ಬಿತ್ತಲು ಎಂದು ಹೇಳಿದ್ದೀರ. ಯಾವುದೇ ಧರ್ಮಕ್ಕೆ ನಿಖರವಾದ ಧ್ವಜ ಇಲ್ಲ.. ಪಂಚಾಯಿತಿ ಷರತ್ತುಗಳಿಗೆ ಒಪ್ಪಿ ಅನುಮತಿ ಪಡೆದುಕೊಂಡಿದ್ದರು. ಷರತ್ತು ಮೀರಿದ್ದರಿಂದ ಟ್ರಸ್ಟ್ ಹಾಕಿದ್ದ ಧ್ವಜ ಇಳಿಸಿ, ಜನವರಿ 26ರಂದು ರಾಷ್ಟ್ರಧ್ವಜ ಹಾರಿಸಲಾಗಿದೆ. ಕಾನೂನು ಬಾಹಿರ ಚಟುವಟಿಕೆಳನ್ನು ಜಿಲ್ಲಾಡಳಿತ ಸಹಿಸುವುದಿಲ್ಲ’ ಎಂದು ಸಚಿವರು ಎಚ್ಚರಿಕೆ ನೀಡಿದರು.

‘ಕುಮಾರಸ್ವಾಮಿಯವರೆ ನೀವು ಈಗ ಮುಖ್ಯಮಂತ್ರಿಯಾಗಿದ್ದರೆ ಏನು ಮಾಡುತ್ತಿದ್ರಿ? ಧ್ವಜವನ್ನುಅಧಿಕಾರಿಗಳು ತೆಗೆದು ತುಳಿದಿದ್ದಾರೆ ಎಂದು ಹೇಳಿದ್ದಾರೆ. ಆದರೆ, ಸ್ಥಳೀಯ ಯುವಕರು ಧ್ವಜ ಇಳಿಸಲು ಸಹಾಯ ಮಾಡಿದ್ದಾರೆ. ಆನಂತರ, ಜಿಲ್ಲಾಡಳಿತ ರಾಷ್ಟ್ರ ಧ್ವಜ ಹಾರಿದ್ದಾರೆ. ಬಿಜೆಪಿ ಮತ್ತು ಜನತಾದಳ ನಾಯಕರು ಪಂಚಾಯಿತಿಗೆ ಯಾವ ಅಧಿಕಾರ ಇದೆ ಎಂಬುದನ್ನು ನೋಡಬೇಕು. ಸರ್ಕಾರದ ಜಾಗದಲ್ಲಿ ಏನಾದರೂ ಮಾಡಬೇಕಾಗಿದ್ದರೆ ಸರ್ಕಾರದ ಅನುಮತಿ ಪಡೆಯಬೇಕು. ಪಿಡಿಒ ಶಿಫಾಸು ಮಾಡಲು ಮಾತ್ರ ಅವಕಾಶ ಇದೆ’ ಎಂದು ಅವರು ಹೇಳಿದರು.

ಇದನ್ನೂ ಓದಿ; ರಾಷ್ಟ್ರಧ್ವಜವನ್ನು ತಾಲಿಬಾನ್‌ ಧ್ವಜಕ್ಕೆ ಹೋಲಿಸಿದ ಬಿಜೆಪಿ ನಾಯಕ ಸಿ.ಟಿ ರವಿ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜೂನ್‌ ಅಂತ್ಯದೊಳಗೆ ಜಿಬಿಎ ವ್ಯಾಪ್ತಿಯ ಪಾಲಿಕೆಗಳಿಗೆ ಚುನಾವಣೆ : ಗಡುವು ವಿಧಿಸಿದ ಸುಪ್ರೀಂ ಕೋರ್ಟ್

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಜೂನ್ ಅಂತ್ಯದೊಳಗೆ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೋಮವಾರ (ಜ.12) ನಿರ್ದೇಶನ ನೀಡಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಸುಪ್ರೀಂ ಕೋರ್ಟ್ ನಲ್ಲಿ ಮಮತಾ ವಿರುದ್ಧ ಎಫ್‌ಐಆರ್ ದಾಖಲಿಸಲು ನಿರ್ದೇಶನ ಕೋರಿ ಅರ್ಜಿ ಸಲ್ಲಿಸಿದ ಇಡಿ

ನವದೆಹಲಿ: ಐ-ಪಿಎಸಿ ವಿರುದ್ಧದ ಬಹು-ರಾಜ್ಯ ಹಣ ವರ್ಗಾವಣೆ ಪ್ರಕರಣದಲ್ಲಿ ತನಿಖೆಗೆ ಅಡ್ಡಿಪಡಿಸಿದ, ಸಾಕ್ಷ್ಯಗಳನ್ನು ತಿರುಚಿದ ಮತ್ತು ನಾಶಪಡಿಸಿದ ಆರೋಪದ ಮೇಲೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಡಿಜಿಪಿ ಮತ್ತು ಕೋಲ್ಕತ್ತಾ ಪೊಲೀಸ್...

ಭಾರತಕ್ಕಿಂತ ಯಾವುದೇ ಪಾಲುದಾರ ದೇಶ ಮುಖ್ಯವಲ್ಲ, ವ್ಯಾಪಾರ ಮಾತುಕತೆ ಪುನರಾರಂಭ: ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್

"ವಾಷಿಂಗ್ಟನ್‌ಗೆ ಭಾರತಕ್ಕಿಂತ ಅಗತ್ಯವಾದ ದೇಶ ಇನ್ನೊಂದಿಲ್ಲ ಮತ್ತು ಎರಡೂ ಕಡೆಯವರು ವ್ಯಾಪಾರ ಒಪ್ಪಂದವನ್ನು ದೃಢೀಕರಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ" ಎಂದು ಅಮೆರಿಕದ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್ ಸೋಮವಾರ ಹೇಳಿದ್ದಾರೆ. ಅಮೆರಿಕ ರಾಯಭಾರ ಕಚೇರಿಯ ನೌಕರರು...

ಬಿಷಪ್ ಫ್ರಾಂಕೊ ಮುಲಕ್ಕಲ್ ಅತ್ಯಾಚಾರ ಪ್ರಕರಣ : ಒಂಬತ್ತು ವರ್ಷಗಳ ಬಳಿಕ ಮೌನ ಮುರಿದ ಸಂತ್ರಸ್ತೆ, ಕಾನೂನು ಹೋರಾಟ ಮುಂದುವರಿಸುವುದಾಗಿ ಹೇಳಿಕೆ

ಬಿಷಪ್ ಫ್ರಾಂಕೊ ಮುಲಕ್ಕಲ್ ವಿರುದ್ದದ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಕ್ರೈಸ್ತ ಸನ್ಯಾಸಿನಿ ಒಂಬತ್ತು ವರ್ಷಗಳ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿದ್ದು, ಫ್ರಾಂಕೊ ಮುಲಕ್ಕಲ್ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದ್ದಕ್ಕೆ ನಾನು ದಂಗಾಗಿದ್ದೇನೆ. ನ್ಯಾಯಕ್ಕಾಗಿ...

‘ವೆನೆಜುವೆಲಾದ ಹಂಗಾಮಿ ಅಧ್ಯಕ್ಷ’ ಎಂದು ಘೋಷಿಸಿಕೊಂಡ ಡೊನಾಲ್ಡ್ ಟ್ರಂಪ್ 

ಸೋಮವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ರುತ್ ಸೋಶಿಯಲ್‌ನಲ್ಲಿ ತಮ್ಮದೇ ಆದ ವಿಕಿಪೀಡಿಯಾ ಪುಟದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ, ಅದರಲ್ಲಿ "ವೆನೆಜುವೆಲಾದ ಹಂಗಾಮಿ ಅಧ್ಯಕ್ಷ" ಎಂಬ ಹುದ್ದೆಯನ್ನು ಹೊಂದಿರುವ ಅವರ ಚಿತ್ರವಿದೆ. ಪೋಸ್ಟ್‌ನಲ್ಲಿ ಟ್ರಂಪ್...

ಪೊಲೀಸ್ ತುರ್ತು ವಾಹನದ ಚಾಲಕ ಸೇರಿ ಐವರಿಂದ ಯುವತಿ ಮೇಲೆ ಅತ್ಯಾಚಾರ!

ಪೊಲೀಸ್ ತುರ್ತು ಸೇವೆ (112) ವಾಹನದ ಚಾಲಕ ಸೇರಿದಂತೆ ಐವರು ಪುರುಷರು 19 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಛತ್ತೀಸ್‌ಗಢದ ಕೋರ್ಬಾ ಜಿಲ್ಲೆಯ ಬಂಕಿಮೊಂಗ್ರ ಪ್ರದೇಶದಲ್ಲಿ ನಡೆದಿದೆ. ಜನವರಿ...

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...