Homeಕರ್ನಾಟಕರಾಷ್ಟ್ರಧ್ವಜವನ್ನು ತಾಲಿಬಾನ್‌ ಧ್ವಜಕ್ಕೆ ಹೋಲಿಸಿದ ಬಿಜೆಪಿ ನಾಯಕ ಸಿ.ಟಿ ರವಿ!

ರಾಷ್ಟ್ರಧ್ವಜವನ್ನು ತಾಲಿಬಾನ್‌ ಧ್ವಜಕ್ಕೆ ಹೋಲಿಸಿದ ಬಿಜೆಪಿ ನಾಯಕ ಸಿ.ಟಿ ರವಿ!

- Advertisement -
- Advertisement -

ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಉಂಟಾಗಿರುವ ಧ್ವಜ ವಿವಾದದ ಕುರಿತು ಮಾತನಾಡುವಾಗ ಬಿಜೆಪಿ ನಾಯಕ ಸಿ.ಟಿ ರವಿ ‘ರಾಷ್ಟ್ರಧ್ವಜವನ್ನು ತಾಲಿಬಾನ್ ಧ್ವಜಕ್ಕೆ ಹೋಲಿಕೆ’ ಮಾಡಿದ್ದಾರೆ.

ಧ್ವಜ ವಿವಾದದ ಬಗ್ಗೆ ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಹಿಂದಿಯಲ್ಲಿ ಮಾತನಾಡಿದ ಸಿ.ಟಿ ರವಿ, “ಹನುಮ ಧ್ವಜವನ್ನು ಕೆಳಗಿಳಿಸಿ ತಾಲಿಬಾನ್‌ ಧ್ವಜವನ್ನು ಹಾರಿಸಿದ್ದಾರೆ” ಎಂದಿದ್ದಾರೆ. ಸಿ.ಟಿ ರವಿಯ ಈ ಹೇಳಿಕೆಯ ಸತ್ಯಾಸತ್ಯತೆ ಪರಿಶೀಲಿಸಿ ನೋಡಿದರೆ, ಅಧಿಕಾರಿಗಳು ಕೆರಗೋಡಿನಲ್ಲಿ ಹನುಮ ಧ್ವಜ ಇಳಿಸಿದ್ದು ನಿಜ, ಅದರ ಬದಲಾಗಿ ರಾಷ್ಟ್ರ ಧ್ವಜವನ್ನು ಹಾರಿಸಿದ್ದಾರೆ. ಸಿ.ಟಿ ರವಿ ಹೇಳಿದಂತೆ ತಾಲಿಬಾನ್ ಧ್ವಜ ಹಾರಿಸಿಲ್ಲ. ಹಾಗಾದರೆ, ಸಿ.ಟಿ ರವಿ ತಾಲಿಬಾನ್ ಧ್ವಜ ಎಂದು ಹೇಳಿದ್ದು ರಾಷ್ಟ್ರ ಧ್ವಜವನ್ನೇ ಎಂಬುವುದರಲ್ಲಿ ಅನುಮಾನವಿಲ್ಲ. ಈ ರೀತಿಯ ಹೇಳಿಕೆ ಕೊಡುವುದು ದೇಶದ್ರೋಹಕ್ಕೆ ಸಮವಲ್ಲವೇ? ಸಿ.ಟಿ ರವಿ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕಲ್ಲವೇ? ಎಂಬ ಪ್ರಶ್ನೆ ಮೂಡಿದೆ.

ರಾಜ್ಯ ಕಾಂಗ್ರೆಸ್‌ ಸಿ.ಟಿ ರವಿಯ ಹೇಳಿಕೆ ವಿರುದ್ದ ಕಿಡಿಕಾರಿದೆ. “ಪವಿತ್ರವಾದ ರಾಷ್ಟ್ರಧ್ವಜವನ್ನು ತಾಲಿಬಾನ್ ಧ್ವಜಕ್ಕೆ ಹೋಲಿಸಿದ ದೇಶದ್ರೋಹಿ ಬಿಜೆಪಿಯ ಸಿ.ಟಿ ರವಿ ಎನ್ನುವ ಕೋಮು ಕ್ರಿಮಿ ದೇಶದ ಘನತೆಯನ್ನು ಮಣ್ಣುಪಾಲು ಮಾಡುವ ಹೇಳಿಕೆ ನೀಡಿದ್ದಾರೆ. ತ್ರಿವರ್ಣ ಧ್ವಜ ಈಗ ಬಿಜೆಪಿ ಪ್ರಕಾರ ತಾಲಿಬಾನ್ ಧ್ವಜವಾಗಿದೆಯೇ?. ತ್ರಿವರ್ಣ ಧ್ವಜವನ್ನು ವಿರೋಧಿಸುವ ಆರ್‌.ಎಸ್‌.ಎಸ್‌ನ ಸಿದ್ಧಾಂತವನ್ನು ಬಿಜೆಪಿ ಚಾಚೂ ತಪ್ಪದೆ ಪಾಲಿಸುತ್ತಿದೆ” ಎಂದಿದೆ.

ಬಿಜೆಪಿಗೆ INDIA ಮೇಲೂ ದ್ವೇಷ, ಬಿಜೆಪಿಗೆ ಭಾರತದ ಸಂವಿಧಾನದ ಮೇಲೂ ದ್ವೇಷ, ಬಿಜೆಪಿಗೆ ಭಾರತದ ತ್ರಿವರ್ಣ ಧ್ವಜದ ಮೇಲೂ ದ್ವೇಷ. ಇಂತಹ ಬಿಜೆಪಿ ದೇಶದ್ರೋಹಿಯಲ್ಲದೆ ಇನ್ನೇನು? ಎಂದು ಪ್ರಶ್ನಿಸಿದೆ. ಸಂವಿಧಾನದ ವಿಧಿ 51ಎ(ಎ) ಪ್ರಕಾರ ಇದು ಮಹಾ ಅಪರಾಧ ಎಂದು ಹೇಳಿದೆ.

ಕೆರಗೋಡಿನಲ್ಲಿ ನಿಜವಾಗಿಯೂ ನಡೆದಿದ್ದೇನು?

ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದ ರಂಗಮಂದಿರದ ಆವರಣದಲ್ಲಿ ನಿರ್ಮಿಸಿದ್ದ ಬೃಹತ್‌ ಧ್ವಜಸ್ಥಂಬದಲ್ಲಿ ರಾಷ್ಟ್ರಧ್ವಜ ಮತ್ತು ಕನ್ನಡ ಧ್ವಜ ಹಾರಿಸಲು ಅನುಮತಿ ಪಡೆದಿದ್ದ ಗ್ರಾಮದ ಶ್ರೀ ಗೌರಿ ಶಂಕರ ಸೇವಾ ಟ್ರಸ್ಟ್ ಪದಾಧಿಕಾರಿಗಳು ಹನುಮ ಧ್ವಜ (ಕೇಸರಿ ಧ್ವಜ) ಹಾರಿಸಿ ವಿವಾದ ಹುಟ್ಟು ಹಾಕಿದ್ದರು.

ಅನುಮತಿ ಮೀರಿ ಸಾರ್ವಜನಿಕ ಧ್ವಜಸ್ಥಂಬದಲ್ಲಿ ಹನುಮ ಧ್ವಜ ಹಾರಿಸಿದ್ದರಿಂದ ಸಹಜವಾಗಿ ಸ್ಥಳಿಯಾಡಳಿತ ಅಧಿಕಾರಿಗಳು ಅದನ್ನು ಕೆಳಗಿಳಿಸಿದ್ದರು. ಈ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ಮತ್ತು ಹಿಂದುತ್ವ ಸಂಘಟನೆಗಳ ಕಾರ್ಯಕರ್ತರು ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ.

ಜನವರಿ 28ರಂದು ಹಿಂದುತ್ವ ಸಂಘಟನೆ ನೇತೃತ್ವದಲ್ಲಿ ಧ್ವಜಸ್ಥಂಬದ ಬಳಿ ಜಮಾಯಿಸಿದ್ದ ಗ್ರಾಮದ ನೂರಾರು ಪುರುಷರು ಮತ್ತು ಮಹಿಳೆಯರು ಧ್ವಜಸ್ಥಂಬದಲ್ಲಿ ಹನುಮ ಧ್ವಜ ಮರುಸ್ಥಾಪನೆಗೆ ಪಟ್ಟು ಹಿಡಿದಿದ್ದರು. ಇದಕ್ಕೆ ಪೊಲೀಸರು ನಿರಾಕರಿಸಿದಾಗ, ಮಹಿಳೆಯರು ಏಣಿ ಇಟ್ಟು ಧ್ವಜಸ್ಥಂಬಕ್ಕೆ ಏರಿ ಕೇಸರಿ ಧ್ವಜ ಮತ್ತು ರಾಮನ ಫ್ಲೆಕ್ಸ್ ಕಟ್ಟಿದ್ದಾರೆ.

ಸ್ಪಷ್ಟನೆ ನೀಡಿದ ಸಿಎಂ:

ಕೆರಗೋಡು ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡ ಹಿನ್ನೆಲೆ ಜನವರಿ 28ರಂದು ಸಿಎಂ ಸಿದ್ದರಾಮಯ್ಯ ಈ ಕುರಿತು ಪ್ರತಿಕ್ರಿಯಿಸಿದ್ದರು. ಶ್ರೀ ಗೌರಿ ಶಂಕರ ಟ್ರಸ್ಟ್‌ನವರು ಕನ್ನಡ ಧ್ವಜ ಮತ್ತು ರಾಷ್ಟ್ರಧ್ವಜ ಹಾರಿಸಲು ಅನುಮತಿ ಪಡೆದು ಕೇಸರಿ ಧ್ವಜ ಹಾರಿಸಿದ್ದರು. ಅದನ್ನು ಅಧಿಕಾರಿಗಳು ತೆರವುಗೊಳಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದರು. ಕೆರಗೋಡು ಗ್ರಾಮ ಪಂಚಾಯತ್ ಕಾರ್ಯಾಲಯ ಯಾವ ಧ್ವಜ ಹಾರಿಸಲು ಗೌರಿ ಶಂಕರ ಟ್ರಸ್ಟ್‌ಗೆ ಅನುಮತಿ ನೀಡಿದೆ ಎಂಬ ಪತ್ರವನ್ನು ಸಿಎಂ ಹಂಚಿಕೊಂಡಿದ್ದರು.

ನಿನ್ನೆ( ಜ.30) ಧ್ವಜ ವಿವಾದ ರಾಜಕೀಯ ತಿರುವು ಪಡೆದುಕೊಂಡಿದೆ. ಬಿಜೆಪಿ ನಾಯಕ ಸಿ.ಟಿ ರವಿ, ಜೆಡಿಎಸ್ ನಾಯಕ ಕುಮಾರಸ್ವಾಮಿ ಸೇರಿದಂತೆ ಪ್ರಮುಖರು ಬೂದಿ ಮುಚ್ಚಿದ ಕೆಂಡದಂತಿದ್ದ ಗ್ರಾಮಕ್ಕೆ ತೆರಳಿ ಹಿಂದುತ್ವ ಕಾರ್ಯಕರ್ತರ ಜೊತೆ ಗ್ರಾಮದಿಂದ ಮಂಡ್ಯ ಜಿಲ್ಲಾಧಿಕಾರಿ ಕಚೇರಿಯವರೆಗೆ ಪಾದಯಾತ್ರೆ ಮಾಡಿದ್ದಾರೆ. ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಜಾತ್ಯಾತೀತ ಜನತಾದಳದ ನಾಯಕ ಕುಮಾರಸ್ವಾಮಿ ಕೇಸರಿ ಶಾಲು ಹಾಕಿಕೊಂಡು ಅಖಾಡಕ್ಕೆ ಇಳಿದಿದ್ದು ಗಮನಾರ್ಹವಾಗಿತ್ತು.

ಅತ್ತ ಬಿಜೆಪಿ, ಜೆಡಿಎಸ್‌ ನಾಯಕರು ಮತ್ತು ಸಂಘಪರಿವಾರದ ಕಾರ್ಯಕರ್ತರು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಪಾದಯಯಾತ್ರೆ ನಡೆಸುತ್ತಿದ್ದರೆ, ಇತ್ತ ಪೊಲೀಸರು ಮತ್ತು ಸ್ಥಳೀಯಾಡಳಿತದ ಅಧಿಕಾರಿಗಳು ವಿವಾದಿತ ಧ್ವಜಸ್ಥಂಬದಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಿಸಿದ್ದಾರೆ. ಈ ಮೂಲಕ ವಿವಾದ ಶಮನಗೊಳಿಸುವ ಪ್ರಯತ್ನ ಮಾಡಿದ್ದಾರೆ. ಸದ್ಯಕ್ಕೆ ಗ್ರಾಮದಲ್ಲಿ ಬಿಗಿ ಬಂದೋಬಸ್ತ್‌ ಕೈಗೊಳ್ಳಲಾಗಿದ್ದು, ಪರಿಸ್ಥಿತಿ ಪೊಲೀಸರ ನಿಯಂತ್ರಣದಲ್ಲಿದೆ.

ಇದನ್ನೂ ಓದಿ : ಹನುಮಧ್ವಜ ವಿವಾದ: ಪರಿಸ್ಥಿತಿ ಪ್ರಕ್ಷುಬ್ಧಗೊಳಿಸಿದ ಹಿಂದುತ್ವ ಕಾರ್ಯಕರ್ತರು; ಬಿಜೆಪಿ ವಿರುದ್ಧ ಸಿಎಂ ವಾಗ್ದಾಳಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. He is not fit for public administrative so public not given vote to him last election he is such a foolish fellow he is just talking with out knowledge keep on dring and run looti Ravi manuvadi

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...